ಕಿರುತೆರೆ ಕಲಾವಿದರ ಜೊತೆ ಮೈಚಳಿ ಬಿಟ್ಟು ರೊಮ್ಯಾನ್ಸ್ ಮಾಡಿದ ಮಹಾನಟಿಯರು: ಉಫ್​ ಎಂದ ಫ್ಯಾನ್ಸ್​

By Suchethana D  |  First Published Jun 13, 2024, 6:08 PM IST

 ಮಹಾನಟಿಯರು ರಿಯಾಲಿಟಿ ಷೋನ ಸಾಂಗ್​ಶೂಟ್​ ರೌಂಡ್​ನಲ್ಲಿ ಹತ್ತು ಮಹಾನಟಿಯರು ರೊಮ್ಯಾನ್ಸ್​ ಮಾಡಿದ್ದು, ಅದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ.
 


ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಮಹಾನಟಿ ಇದೀಗ,  songshoot roundಗೆ ಬಂದು ನಿಂತಿದೆ.

ಇದರಲ್ಲಿ 10 ಮಂದಿ ಆಯ್ಕೆಯಾಗಿರುವ ನಟಿಯರು ಕಿರುತೆರೆ ಕಲಾವಿದರ ಜೊತೆ ವಿವಿಧ ಫೇಮಸ್​ ಹಾಡುಗಳಿಗೆ ಭರ್ಜರಿ ರೊಮ್ಯಾನ್ಸ್​ ಮಾಡಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ಯಾವ ನಟಿಯರಿಗೂ ಕಡಿಮೆ ಇಲ್ಲದಂತೆ ಆಯ್ಕೆಯಾಗಿರುವ ಹತ್ತು ನಟಿಯರು ಪ್ರಯಣದಲ್ಲಿ ತೊಡಗಿಸಿಕೊಂಡಿದ್ದು ಪ್ರೇಕ್ಷಕರ ಮೈನವಿರೇಳಿಸುತ್ತಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಮಹಾನಟಿ ವೀಕ್ಷಕರಿಂದ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಮನಮೋಹಕ ಹಾಡುಗಳ ಮೂಲಕ ಬೆಳ್ಳಿತೆರೆಯ ದೃಶ್ಯ ವೈಭವ ಸೃಷ್ಟಿಸಿದ ನಟಿಯರು ಶೀರ್ಷಿಕೆಯಡಿಯಲ್ಲಿ ಇದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. 

Tap to resize

Latest Videos

ನಕಲಿ ರಮೇಶ್​, ಪ್ರೇಮಾ, ನಿಶ್ವಿಕಾರನ್ನು ನೋಡಿ ಅಸಲಿ ನಟರು ಸುಸ್ತೋ ಸುಸ್ತು- ನಕ್ಕು ನಲಿದಾಡಿದ ನೆಟ್ಟಿಗರು

ಇನ್ನು ಈ ಷೋ ಕುರಿತು ಹೇಳುವುದಾದರೆ, ಈ ರಿಯಾಲಿಟಿ ಷೋನಲ್ಲಿ ಚಿತ್ರನಟರಾದ ರಮೇಶ್​ ಅರವಿಂದ್​, ಪ್ರೇಮಾ ಮತ್ತು ನಿಶ್ವಿಕಾ ನಾಯ್ಡು ಹಾಗೂ ಖ್ಯಾತ ನಿರ್ದೇಶಕರಾಗಿರುವ ತರುಣ್​ ಸುಧೀರ್​ ಅವರು ತೀರ್ಪುಗಾರರಾಗಿದ್ದಾರೆ. ಕಳೆದ ವಾರವಷ್ಟೇ  ಮಹಾನಟಿ ಮತ್ತು ಕಾಮಿಡಿ ಕಿಲಾಡಿ ರಿಯಾಲಿಟಿ ಷೋಗಳ ಮಹಾಸಂಗಮ ನಡೆದಿತ್ತು. ಅದರಲ್ಲಿ ರಮೇಶ್​, ಪ್ರೇಮಾ, ನಿಶ್ಚಿಕಾ ಮತ್ತು ತರುಣ್​ ಈ ನಾಲ್ವರ ತದ್ರೂಪಿ ಕಲಾವಿದರನ್ನು ವೇದಿಕೆ ಮೇಲೆ ಕರೆತಂದು ಅವರಂತೆಯೇ ಡೈಲಾಗ್​ ಹೇಳಿಸಲಾಗಿತ್ತು. ಮಾತ್ರವಲ್ಲದೇ ಎಲ್ಲ ನಕಲಿ ಕಲಾವಿದರು ಸೇಮ್​ ಟು ಸೇಮ್​ ಅಸಲಿ ಕಲಾವಿದರಂತೆಯೇ ಆ್ಯಕ್ಟಿಂಗ್​ ಮಾಡಿದ್ದನ್ನು ನೋಡಿ ಪ್ರೇಕ್ಷಕರು ನಕ್ಕೂ ನಕ್ಕೂ ಸುಸ್ತಾಗಿದ್ದರು. ಇದೇ ವೇಳೆ ಆ್ಯಂಕರ್​ ಅನುಶ್ರೀ ಅವರನ್ನೂ ಅನುಸರಿಸಲಾಗಿತ್ತು. ಇದೀಗ ಮಹಾನಟಿ ಷೋನಲ್ಲಿ ನಟಿಯರು ಬಿಂದಾಸ್​ ಆಗಿ ರೊಮ್ಯಾನ್ಸ್​  ಮಾಡಿದ್ದಾರೆ. 

ಇದಾಗಲೇ ವಿವಿಧ ಊರುಗಳಿಂದ ನೂರಾರು ಯುವತಿಯರು ಈ ಷೋನಲ್ಲಿ ತಮ್ಮ ಅದೃಷ್ಟಕ್ಕಾಗಿ ಆಡಿಷನ್​ ಕೊಟ್ಟಿದ್ದರು. ಅವರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ಇದಾಗಲೇ ಹಲವಾರು ರೌಂಡ್​ಗಳು ಮುಗಿದಿವೆ. ಈ ರೌಂಡ್ಸ್​ಗಳಲ್ಲಿ ಕಲಾವಿದೆಯರು ಅದ್ಭುತ ಪ್ರತಿಭೆ ತೋರಿದ್ದಾರೆ. ತಮಗೆ ನೀಡಿರುವ ಹಲವಾರು ಟಾಸ್ಕ್​ಗಳನ್ನು ಮುಗಿಸಿದ್ದಾರೆ. ಕೊನೆಯದಾಗಿ ಹತ್ತು ಕಲಾವಿದೆಯರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಇವರಲ್ಲಿ ಯಾರು ಮಹಾನಟಿಯಾಗಿ ಮಿಂಚುತ್ತಾರೋ ಕಾದು ನೋಡಬೇಕಿದೆ.

ಅತ್ತೆ- ಸೊಸೆ ಜಗಳ ಪರಿಹಾರಕ್ಕೆ ಔಷಧವೇನು? ನಟ ಜಗ್ಗೇಶ್, ರಮೇಶ್​​ ಪರಿಹಾರ ವರ್ಕ್​ಔಟ್​ ಆಗತ್ತಾ?

 

click me!