ಸೀತಾರಾಮ ಸೀತಾ ವೈಷ್ಣವಿಯ ಅಮ್ಮ ವಕೀಲೆಯಾಗಿ ಒಂದು ವರ್ಷ! ಕುತೂಹಲದ ಮಾಹಿತಿ ಇಲ್ಲಿದೆ...

By Suchethana D  |  First Published Jun 13, 2024, 5:13 PM IST

ಅಮ್ಮನ ಜೊತೆ ಸೀತಾರಾಮ ಸೀತಾ ವೈಷ್ಣವಿ ಗೌಡ​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.  ವೈಷ್ಣವಿ ತಾಯಿಯ ಕುರಿತ ಕುತೂಹಲದ ಮಾಹಿತಿ ಇಲ್ಲಿದೆ...
 


ಸೀತಾ ಎಂದರೆ ಸಾಕು, ಕನ್ನಡ ಸೀರಿಯಲ್​ ಪ್ರಿಯರ ಗಮನಕ್ಕೆ ಮೊದಲು ಕಾಣುವುದೇ ಸೀತಾರಾಮ ಸೀರಿಯಲ್​ ಸೀತಾ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ನ ಸೀತಾ ಮತ್ತು ರಾಮ್​ ಪಾತ್ರಧಾರಿಗಳು ಸೀರಿಯಲ್​ ಪ್ರಿಯರ ಮನದಲ್ಲಿ ಅಷ್ಟರಮಟ್ಟಿಗೆ ಹಾಸುಹೊಕ್ಕಾಗಿದ್ದಾರೆ.  ಸೀತಾ ಪಾತ್ರಧಾರಿಯ ರಿಯಲ್​ ಹೆಸರು ವೈಷ್ಣವಿ ಗೌಡ. ಸೋಷಿಯಲ್​  ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರೋ ವೈಷ್ಣವಿ ಅವರು ಆಗಾಗ್ಗೆ ಹಲವಾರು ರೀಲ್ಸ್​, ವಿಡಿಯೋ, ಫೋಟೋಗಳನ್ನು ಶೇರ್​  ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರು ತಮ್ಮ ತಾಯಿಯ ಜೊತೆಗಿರುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಹಾರ್ಟ್​ ಇಮೋಜಿಗಳ ಸುರಿಮಳೆಯಾಗಿದೆ. 

ಅಂದಹಾಗೆ ವೈಷ್ಣವಿ ಅವರ ತಾಯಿಯ ಹೆಸರು ಭಾನು ರವಿಕುಮಾರ್​. ಅವರು ವೃತ್ತಿಯಲ್ಲಿ ವಕೀಲೆ. ಕುತೂಹಲದ ವಿಷಯ ಏನೆಂದರೆ, ಕಳೆದ ವರ್ಷವಷ್ಟೇ ಅಂದರೆ 2023ರ ಮೇ ತಿಂಗಳಿನಲ್ಲಿ ವೈಷ್ಣವಿ ಅವರ ತಾಯಿ ವಕೀಲೆಯಾಗಿದ್ದಾರೆ. ಈ ಕುರಿತು ಕಳೆದ ವರ್ಷ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ವೈಷ್ಣವಿ ಅವರು ಬರೆದುಕೊಂಡು ಅಮ್ಮನಿಗೆ ಶುಭಾಶಯ ಕೋರಿದ್ದರು. ಕಪ್ಪು ಕೋಟ್‌ ಧರಿಸಿದ್ದ ತಾಯಿಯ ಜೊತೆ  ಫೋಟೋ  ಶೇರ್​ ಮಾಡಿಕೊಂಡಿದ್ದ ನಟಿ,  ಮನೆಯಲ್ಲಿ ಈಗ ಅಡ್ವೊಕೇಟ್‌ ಇದ್ದಾರೆ. ವಯಸ್ಸು ಅನ್ನೋದು ಒಂದು ಸಂಖ್ಯೆ ಅಷ್ಟೇ ಅಂತ ನೀವು ನನಗೆ ಯಾವಾಗಲೂ ಹೇಳುತ್ತಿದ್ದೀರಿ. ಈ ವಯಸ್ಸಿನಲ್ಲಿ ನೀವು ಮಾಡಿದ ಈ ಸಾಧನೆ ನೋಡಿ ನನಗೆ ಹೆಮ್ಮೆ ಆಗುತ್ತಿದೆ. ನಮ್ಮೆಲ್ಲರಿಗೆ ಸ್ಪೂರ್ತಿಯಾಗಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದರು. ಇದೀಗ ಅಮ್ಮ ವಕೀಲೆಯಾಗಿ ವರ್ಷದ ಬಳಿಕ ಮತ್ತೊಮ್ಮೆ ಅಮ್ಮನ ಜೊತೆ ಚಿಕ್ಕ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬರುತ್ತಿವೆ.

Tap to resize

Latest Videos

ಪುಷ್ಪಾ-2 ಹಾಡಿಗೆ ಸೀತಾ-ರಾಮ ಭರ್ಜರಿ ರೀಲ್ಸ್: ಜೋಡಿಯ ನೋಡಿ ಪುನಃ ಮದ್ವೆ ವಿಷಯ ಕೆದಕಿದ ಫ್ಯಾನ್ಸ್​!
 
ತಾಯಿಯ ಕುರಿತು ವೈಷ್ಣವಿ ಅವರು ಕುತೂಹಲದ ವಿಷಯವೊಂದನ್ನು ಹೇಳಿಕೊಂಡಿದ್ದರು. ಅದೇನೆಂದರೆ, ವೈಷ್ಣವಿ ಅವರ ತಾಯಿ  ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ವಿಚಾರ ದೊಡ್ಡ ಸುದ್ದಿ ಆಗಿತ್ತು. ನನ್ನ ತಾಯಿ ಯೋಗ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಿದ್ದರು ವೈಷ್ಣವಿ. ನಮ್ಮ ತಾಯಿ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಾರೆ. ನಮಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ವೈಷ್ಣವಿ ಅವರು ಭಾನು ಅವರಿಗೆ ಹೇಳುತ್ತಿರುತ್ತಾರೆ. ಇದೀಗ ತಾವು ಕೂಡ ಯೋಗ, ಧ್ಯಾನ, ಮ್ಯಾನುಫೆಸ್ಟೇಷನ್​ ಇತ್ಯಾದಿಗಳ ಕುರಿತು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ನಟಿ ಹೇಳುತ್ತಿರುತ್ತಾರೆ. 
 
ಈ ಹಿಂದೆ ಬಿಗ್​ಬಾಸ್​ಗೆ ಹೋಗಿದ್ದಾಗ ವೈಷ್ಣವಿ ಅವರು ತಮ್ಮ ಅಮ್ಮನ ಬಗ್ಗೆ ಹೇಳಿಕೊಂಡಿದ್ದರು. ನನಗೆ  ಅಮ್ಮ ಎಂದ್ರೆ ತುಂಬಾ ಪ್ರೀತಿ. ಅಮ್ಮ ಮಕ್ಕಳಿಗೆ ಪ್ರೀತಿಯ ಜೊತೆಗೆ ತುಂಬಾ ಸ್ಟ್ರಿಕ್ಟ್ ಆಗಿ ಸಹ ಬೆಳೆಸಿದ್ದಾರೆ ಎಂದಿದ್ದರು. ನನ್ನ ಎಲ್ಲಾ ಕಾರ್ಯಗಳಿಗೂ ಅಮ್ಮ  ಸದಾ ಬೆಂಬಲವಾಗಿ ನಿಲ್ಲುತ್ತಾರೆ.  ಅಮ್ಮನ ಬೆಂಬಲ ಇದ್ರೆ ಏನು ಬೇಕಾದ್ರೂ ಮಾಡಬಹುದು ಎನ್ನುವುದು ವೈಷ್ಣವಿ ಅವರ ಮಾತು.  

ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್​ ಫಾಲೋ ಮಾಡಿ: ಸೀತಾರಾಮ ವೈಷ್ಣವಿ ಗೌಡ ಸಲಹೆ

click me!