ತೆಲುಗು ಕಿರುತೆರೆ ಲೋಕಕ್ಕೆ ಹಾರಿದ ಕನ್ನಡ ನಟ ತಾರಕ್ ಪೊನ್ನಪ್ಪ!

Suvarna News   | Asianet News
Published : Jun 03, 2021, 11:21 AM ISTUpdated : Jun 03, 2021, 11:45 AM IST
ತೆಲುಗು ಕಿರುತೆರೆ ಲೋಕಕ್ಕೆ ಹಾರಿದ ಕನ್ನಡ ನಟ ತಾರಕ್ ಪೊನ್ನಪ್ಪ!

ಸಾರಾಂಶ

'ರವೋಯಿ ಚಂದಮ್ಮ' ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಲೋಕಕ್ಕೆ ಕಾಲಿಟ್ಟ ತಾರಕ್. 

'ರಾಜ ರಾಣಿ' ಧಾರಾವಾಹಿ ನಟ ತಾರಕ್ ಪೊನ್ನಪ್ಪ ಇದೀಗ ತೆಲುಗು ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. 'ರವೋಯಿ ಚಂದಮ್ಮ'ದಲ್ಲಿ ತಾರಕ್ ಜೊತೆಗೆ ವಿನಯ್ ಗೌಡ ಮತ್ತು ಪ್ರೀತಿ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ. 

'ಧಾರಾವಾಹಿಯಲ್ಲಿ ವೀರಸ್ವಾಮಿ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ. ನಾನು ಒಂದು ಹುಡುಗಿಯನ್ನು ಇಷ್ಟ ಪಡುವೆ, ಆದರೆ ನನ್ನ ರಗಡ್ ಗುಣದಿಂದ ಆಕೆ ನನ್ನನು ಇಷ್ಟ ಪಡುವುದಿಲ್ಲ ಆದರೆ ನಾನು ಆಕೆಯೊಂದಿಗೆ ಮದುವೆ ಮಾಡಿಕೊಳ್ಳುವೆ. ನನ್ನಿಂದ ಮುಕ್ತಿ ಪಡೆಯಲು ಆಕೆ ಊರು ಬಿಟ್ಟು ಹೈದರಾಬಾದ್‌ಗೆ ಹೋಗುತ್ತಾಳೆ. ನಾನೂ ಹೈದಾರಾಬಾದ್‌ಗೆ ಹೋಗುವೆ. ಅಲ್ಲಿ ಸಿಗುವ ಟ್ವಿಸ್ಟ್‌ ನಿಜವಾದ ಕಥೆ,' ಎಂದು ತಾರಕ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಪ್ಯಾಮಿಲಿ ಜೊತೆ ನಟ ವಿನಯ್ ಗೌಡ ಜಾಲಿ ಟೈಂ! 

'ಆರಂಭದಲ್ಲಿ ತೆಲುಗು ಮಾತನಾಡಲು ಕಷ್ಟ ಪಡುತ್ತಿದ್ದೆ. ಆದರೆ 15 ದಿನಗಳ ಚಿತ್ರೀಕರಣ ಗಮನಿಸಿದರೆ, ಈಗ ಮಾತನಾಡುವ ಶೈಲಿ ಬದಲಾಗಿದೆ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ತಾರಕ್ ಮಾತನಾಡಿದ್ದಾರೆ. 'ಯುವರತ್ನ' ಚಿತ್ರದಲ್ಲಿ ಅಭಿನಯಿಸಿರುವ ತಾರಕ್ ಮುಂದಿನ ಚಿತ್ರ 'ಅಮೃತಾ ಅಪಾರ್ಟ್ಮೆಂಟ್' ರಿಲೀಸ್‌ಗೆ ಸಿದ್ಧವಾಗಿದೆ. ಲಾಕ್‌ಡೌನ್ ಸಡಿಲಿಕೆ ನಂತರ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ತಿಳಿಸುತ್ತಾರಂತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ