ಊಟಕ್ಕೇನು ಅಂತ ಕೇಳಿದ್ರೆ ರೌಡಿ rangeನಲ್ಲಿ ಮಚ್ಚು ತಗೊಳೋಸ್ಟು ಕೋಪ ಬರುತ್ತೆ: ಶಾಲಿನಿ ಸತ್ಯನಾರಾಯಣ್

By Suvarna NewsFirst Published Jun 3, 2021, 10:09 AM IST
Highlights

ಮನೆಯಲ್ಲಿ ಅಡುಗೆ ಮಾಡುವ ಹೆಣ್ಣು ಮಕ್ಕಳಿಗೆ ಹ್ಯಾಟ್ಸ್ ಆಫ್‌ ಎಂದು ಶಾಲಿನಿ. ಮನೆ ಕೆಲಸ ಮಾಡಿದ ನಂತರ ಹೇಗೆ ಕಾಣಿಸಬಹುದು ಗೊತ್ತಾ?

ಕನ್ನಡ ಕಿರುತೆರೆ ನಿರೂಪಕಿ, ನಟಿ ಶಾಲಿನಿ ಸತ್ಯಾನಾರಾಯಣ್ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡು ಆರೋಗ್ಯ ಹಾಗೂ ಕುಟುಂಬದ ಕಡೆ ಹೆಚ್ಚಿನ ಕಾಳಜಿ ಮತ್ತು ಗಮನ ಹರಿಸುತ್ತಿದ್ದಾರೆ. ಎಲ್ಲರೂ ಆರೋಗ್ಯವಾಗಿರಬೇಕೆಂದರೆ ಮನೆ ಅಡುಗೆ ಸೇವಿಸುವುದು ತುಂಬಾ ಮುಖ್ಯ. ಈ ವೇಳೆ ಮೂರು ಹೊತ್ತು ನಾನ್ ಸ್ಟಾಪ್ ಸರ್ವಿಸ್ ಮಾಡುವ ಅಮ್ಮ, ಅತ್ತೆ, ಅಜ್ಜಿ ಮತ್ತು ಕಿಚನ್ ಕುಮಾರಿಯರಿಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. 

'ಮೂರು ಹೊತ್ತು ಅಡುಗೆ ಮಾಡೋದು ಎಷ್ಟು ತಲೆನೋವು ಅಂತ ಈಗ ಗೊತ್ತಾಗಿದೆ. ಹ್ಯಾಟ್ಸ್ ಆಫ್‌ ಅಮ್ಮ, ಅತ್ತೆ, ಅಜ್ಜಿ ಹಾಗೂ ಕಿಚನ್ ಕುಮಾರಿಯರು. ಏನು ಮಾಡ್ಬೆಕು ಅಂತ ಡಿಸೈಡ್ ಮಾಡೋದು ಇದ್ಯಾಲ್ಲ ಯಪ್ಪಾ ಹಿಂದೆ. ದೋಸೆ, ಇಡ್ಲಿ, ಬ್ರಿಡ್, ಅನ್ನದಲ್ಲಿ ಮಾಡುವ ವೆರೈಟಿ. ಊಟಕ್ಕೆ ಏನು ಅಂತ ಕೇಳಿದ್ರೆ ರೌಡಿ ರೇಂಜ್‌ನಲ್ಲಿ ಮಚ್ಚು ತೆಗೆದುಕೊಳ್ಳುವಷ್ಟು ಕೋಪ ಬರುತ್ತೆ. ಸಾಮಾನ್ಯವಾಗಿ ಆಡುಗೆ ಮಾಡೋಕೆ ನೂರು ಗೋಳು. ಅದರಲ್ಲಿ ಸ್ಪೆಷಲ್ ರಿಕ್ವೆಸ್ಟ್ ಬೇರೆ ಇರುತ್ತೆ.  ಇರ್ಲಿ ಎಷ್ಟು ದಿನ ನಡೆಯುತ್ತೋ ನಡೆಯಲಿ, ಅಮೇಲೆ 'ನಮ್ಮ ಮಮ್ಮಿ ಪ್ರಾಮೀಸ್ ಹೇಳ್ತಿನಿ, ಹೀಗೆ ಅಡುಗೆ ಮಾಡೋದು ಹೀಗೆ?' ಎಂದು ಮುಂದುವರೆಯುತ್ತದೆ. ಯಾವ ಬದಲಾವಣೆಯೂ ಆಗುವುದಿಲ್ಲ.  ಹೋಗಿ ನಿಮ್ಮ ಮನೆಯಲ್ಲಿ ಯಾರು ಅಡುಗೆ ಮಾಡ್ತಾರೋ ಅವ್ರಿಗೆ ಅಪ್ಪುಗೆ ಮತ್ತೆ ಕಿಸ್ ಕೊಡಿ. ಯಾಕಂದ್ರೆ ಅವ್ರು ರೊಚ್ಚೆಗೆದ್ರೆ ನಿಮ್ಮ ಹೊಟ್ಟೆಗೆ ತಣ್ಣೀರು ಬೆಡ್‌ಶೀಟೇ ಗತಿ,' ಎಂದು ಶಾಲಿನಿ ಬರೆದುಕೊಂಡಿದ್ದಾರೆ. 

ಊಟ ಸೇರೋಲ್ಲ, ಉಸಿರಾಡಲು ಕಷ್ಟ, ವಿಪರೀತ ಅಳು ಬರುತ್ತಿತ್ತು: ಶಾಲಿನಿ ಸತ್ಯನಾರಾಯಣ್ 

'ಮನೆ ಕಸ ಗುಡ್ಸೋದು, ನೆಲ ಒರೆಸುವುದು, ಇನ್ನಿತರೆ ಮನೆ ಕೆಲಸ ಮಾಡಿದರೆ ಯಾರೂ ಗ್ಲಾಮರಸ್ ಆಗಿ ಕಾಣಿಸುವುದಿಲ್ಲ. ದಯವಿಟ್ಟು ಆದಷ್ಟು ನೈಜವಾಗಿ ಜನರಿಗೆ ತೋರಿಸುವ ಪ್ರಯತ್ನ ಮಾಡೋಣ. ಕೆಲವರು ಅಪ್ಲೋಡ್ ಮಾಡುವ ಫೋಟೋ ನೋಡಿದೆ, ಅವರು ಮಾಡುತ್ತಿರುವ ಕೆಲಸದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿದು ಬಿಡುತ್ತದೆ. ಪೊರಕೆ ಹಿಡಿದು ಪೋಸ್ ಕೊಡುತ್ತಾರೆ. ಆಮೇಲೆ ಮನೆ ಕೆಲಸ ಮಾಡುವವರು ಎಲ್ಲಾ ನೋಡಿಕೊಳ್ಳುತ್ತಾರೆ,' ಎಂದು ಬರೆದು ತಾವು ಮನೆ ಕೆಲಸ ಮಾಡಿದ ನಂತರ ಹೇಗೆ ಕಾಣಿಸುವೆ ಎಂದು ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.

 

click me!