ನೇರಪ್ರಸಾರದಲ್ಲಿ ನಟಿ ತಾರಾ ಮಾತು: ನಿವೇದಿತಾ-ಚಂದನ್​ ಡಿವೋರ್ಸ್​ ವಿಷಯ ಪ್ರಸ್ತಾಪ?

By Suchethana D  |  First Published Jun 10, 2024, 12:46 PM IST

ನೇರಪ್ರಸಾರದಲ್ಲಿ ಬಂದಿರುವ ನಟಿ ತಾರಾ ಅನುರಾಧ ಅವರು ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ದಾಂಪತ್ಯದ ಕುರಿತು ನಟಿ ಹೇಳಿದ್ದೇನು?
 


ಕನ್ನಡ, ತೆಲುಗು, ತಮಿಳು, ಮಲಯಾಳಂ ಹೀಗೆ ಬಹುಭಾಷಾ ನಟಿಯಾಗಿ ಮಿಂಚಿದ್ದ   ತಾರಾ ಅನುರಾಧ ಅವರು ಸದ್ಯ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ರಾಜಾ ರಾಣಿ ರೀಲೋಡೆಡ್​ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನೇರಪ್ರಸಾರದಲ್ಲಿ ವೀಕ್ಷಕರ ಜೊತೆ ಕೆಲ ಕಾಲ ಕಳೆದಿರುವ ನಟಿ, ಅಭಿಮಾನಿಗಳು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ತಾವು ತುಂಬಾ ಹಿಂದೆ ಎನ್ನುತ್ತಲೇ ಇದೇ ಮೊದಲ ಬಾರಿಗೆ ಇನ್​ಸ್ಟಾಗ್ರಾಮ್​ ನೇರಪ್ರಸಾರದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದ ನಟಿ, ತಮ್ಮ ಜರ್ನಿಯ ಕುರಿತೂ ಮಾತನಾಡಿದ್ದಾರೆ. ಅಷ್ಟಕ್ಕೂ ಅವರು ಈ ನೇರ ಪ್ರಸಾರದಲ್ಲಿ ಪಾಲ್ಗೊಳ್ಳಲು ಕಾರಣ, ಜೂನ್​ 8ರಿಂದ ಶುರುವಾಗಿರುವ ರಾಜಾ ರಾಣಿ ರೀಲೋಡೆಡ್​ ರಿಯಾಲಿಟಿ ಷೋಗೋಸ್ಕರ. ಈ ಷೋ ಅನ್ನು ಹೆಚ್ಚು ಹೆಚ್ಚು ಜನರು ನೋಡಿ ಪ್ರೋತ್ಸಾಹಿಸುವಂತೆ ನಟಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಜೀವನದ ಕುರಿತು ಜೊತೆಗೆ ಮೊದಲ ಬಾರಿಗೆ ರಿಯಾಲಿಟಿ ಷೋನ ತೀರ್ಪುಗಾರರಾಗಿರುವ ಕುರಿತು ನಟಿ ಹೇಳಿಕೊಂಡಿದ್ದಾರೆ. ಸ್ಪರ್ಧಿಗಳನ್ನು ಜಡ್ಜ್​ ಮಾಡೋದು ತುಂಬಾ ಕಷ್ಟದ ಕೆಲಸ. ಇದು ನನ್ನ ಮೊದಲ ಅನುಭವ ಎಂದು ನಟಿ ಹೇಳಿದ್ದಾರೆ. ಜೊತೆಗೆ ತಮ್ಮ ಮನೆಯವರು ತಮ್ಮ ಕೆಲಸಕ್ಕೆ ಹೇಗೆ ಸಪೋರ್ಟಿವ್​ ಆಗಿದ್ದಾರೆ ಎನ್ನುವ ಕುರಿತು ಮಾತನಾಡಿದ್ದಾರೆ. ಪತಿ ವೇಣು ಹಾಗೂ ಅವರ ಕುಟುಂಬದವರು ಸದಾ ತಮಗೆ ಬೆನ್ನೆಲುಬಾಗಿ ಇರುವುದಾಗಿ ಹೇಳಿದ ತಾರಾ, ಇದರಿಂದ ತಮಗೆ ತುಂಬಾ ನೆರವಾಗುತ್ತಿದೆ ಎಂದಿದ್ದಾರೆ. ಜೊತೆಗೆ, ತಮಿಳಿನ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ, ತಮಿಳು ಮಾತನಾಡುವುದಕ್ಕಾಗಿ ತಮ್ಮ ದೊಡ್ಡಮ್ಮ ಓರ್ವ ಟೀಚರ್​ ಅನ್ನೇ ನೇಮಕ ಮಾಡಿದ್ದ ಕುರಿತು ಹೇಳಿದ್ದಾರೆ.

Tap to resize

Latest Videos

ಡಿವೋರ್ಸ್​ ಬಳಿಕವೂ ನಿವೇದಿತಾ-ಚಂದನ್​ ಒಟ್ಟಿಗೇ ಇದ್ದಾರಾ? ಇನ್​ಸ್ಟಾಗ್ರಾಮ್​ ನೋಡಿ ಗುಸುಗುಸು ಶುರು!

ತಮಿಳು ಓದಬಲ್ಲೆ, ಮಾತನಾಡಬಲ್ಲೆ. ಮಾತೃಭಾಷೆ ತೆಲುಗು. ಆದರೆ ಅನ್ನ, ನೆಲ ಎಲ್ಲವನ್ನೂ ಕೊಡುತ್ತಿರುವುದು ಕರ್ನಾಟಕ. ಆದ್ದರಿಂದ ಕರ್ನಾಟಕದ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ ತಾರಾ. ಕೊನೆಯಲ್ಲಿ, ವೀಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ದಾಂಪತ್ಯದ ಬಗ್ಗೆ ನಟಿ ಹೇಳಿದ್ದಾರೆ. ಅಲ್ಲಿ ಬಂದಿರುವ ಪ್ರಶ್ನೆ ಏನು ಎಂದು ಹೇಳದ ತಾರಾ ಅವರು, ಈ ವಿಷಯ ತಮಗೆ ಸರಿಯಾಗಿ ಏನೂ ಗೊತ್ತಿಲ್ಲ ಎನ್ನುತ್ತಲೇ ದಾಂಪತ್ಯ ಎಂದರೆ ಏನು ಎಂಬ ಬಗ್ಗೆ ಹೇಳಿದ್ದಾರೆ. ಆದರೆ ಈ ಪ್ರಶ್ನೆ ನಿವೇದಿತಾ ಮತ್ತು ಚಂದನ್​ ಶೆಟ್ಟಿ ಡಿವೋರ್ಸ್​ದು ಎನ್ನುವುದು ನೆಟ್ಟಿಗರ ಅಭಿಮತ. 
 
'ಗಂಡ-ಹೆಂಡತಿ ಎನ್ನುವ ಸಂಬಂಧ ಬಹಳ ಅಮೂಲ್ಯವಾದದ್ದು. ಇದು ದೈವ ಕಟ್ಟಿದ ಸಂಬಂಧ. ಋಣಾನುಬಂಧದಿಂದ ಬಂದಿರುವಂಥದ್ದು. ಅದನ್ನು ಜೋಪಾನ ಮಾಡಿ ಕಾಪಾಡಿಕೊಂಡು ಹೋಗಬೇಕು. ಇದನ್ನೇ ನಾನು ಎಲ್ಲರಿಗೂ ಹೇಳುವುದು. ದೈವ ಕೊಟ್ಟ ಈ ಸಂಬಂಧಕ್ಕೆ ತಲೆಬಾಗಿ ನಡೆದುಕೊಳ್ಳಬೇಕು ಎನ್ನುವುದು ನನ್ನ ಆಸೆ' ಎಂದಷ್ಟೇ ತಾರಾ ಹೇಳಿದ್ದಾರೆ. 'ಎಲ್ಲಾ ಗಂಡ-ಹೆಂಡತಿ ಯಾವುದೇ ಸಮಸ್ಯೆ ಇಲ್ಲದೇ ಚೆನ್ನಾಗಿ ಇರಬೇಕು ಎನ್ನುವುದೇ ನನ್ನ ಆಸೆ, ಋಣಾನುಬಂಧದಿಂದ ಬಂದಿರುವ ಈ ಸಂಬಂಧವನ್ನು  ಉಳಿಸಿಕೊಂಡು ಹೋಗಬೇಕು ಎಂದು ಎಲ್ಲರಿಗೂ ನಾನು ಹಾರೈಸುತ್ತೇನೆ' ಎಂದಿದ್ದಾರೆ.  ಅಲ್ಲಿ ನೆಟ್ಟಿಗರು ಕೇಳಿರುವ ಪ್ರಶ್ನೆ ಏನು ಎಂಬ ಬಗ್ಗೆ ನಟಿ ನೇರವಾಗಿ ಹೇಳದಿದ್ದರೂ ಇದು ನಿವೇದಿತಾ ಮತ್ತು ಚಂದನ್​ ಶೆಟ್ಟಿ ಅವರ ವಿಚ್ಛೇದನದ ಕುರಿತಾಗಿಯೇ ಹೇಳಿರುವುದು ಎಂದು ಕಮೆಂಟ್​ ಮೂಲಕ ಹೇಳುತ್ತಿರುವ ನೆಟ್ಟಿಗರು, ದಾಂಪತ್ಯದ ಬಗ್ಗೆ ಚೆನ್ನಾಗಿ ಹೇಳಿದ್ದೀರಿ ತಾರಾ ಮೇಡಂ ಎನ್ನುತ್ತಿದ್ದಾರೆ. ಇದು ಎಲ್ಲರಿಗೂ ಅರ್ಥವಾಗಬೇಕಿದೆ. ಇಂದು ಮದುವೆ ಎನ್ನುವುದು ತಮಾಷೆಯ ವಸ್ತುವಾಗಿರುವುದು ಶೋಚನೀಯ ಎನ್ನುತ್ತಿದ್ದಾರೆ. 

ಇನ್ಮುಂದೆ ಯಾವ ಸಂಧಾನಕ್ಕೂ ಹೋಗಲ್ಲ... ಥೂ ನಮ್ಮ ಜನ್ಮಕ್ಕೆ... ಪ್ರಥಮ್​ ಕೆಂಡಾಮಂಡಲ ಆಗಿದ್ದೇಕೆ?

 

click me!