ಡ್ರೋನ್​ ಪ್ರತಾಪ್​ ರನ್ನರ್​ ಅಪ್​ ಆದ ಕುರಿತು ನಟಿ ತಾರಾ ಹೇಳಿದ್ದೇನು? ನೇರಪ್ರಸಾರದಲ್ಲಿ ಫ್ಯಾನ್ಸ್​ ಜೊತೆ ಮಾತು...

Published : Feb 05, 2024, 10:54 AM ISTUpdated : Feb 05, 2024, 10:57 AM IST
ಡ್ರೋನ್​ ಪ್ರತಾಪ್​ ರನ್ನರ್​ ಅಪ್​ ಆದ ಕುರಿತು ನಟಿ ತಾರಾ ಹೇಳಿದ್ದೇನು? ನೇರಪ್ರಸಾರದಲ್ಲಿ ಫ್ಯಾನ್ಸ್​ ಜೊತೆ ಮಾತು...

ಸಾರಾಂಶ

ನನ್ನಮ್ಮ ಸೂಪರ್​ಸ್ಟಾರ್​ ರಿಯಾಲಿಟಿ ಷೋ ಕುರಿತು ಮಾತನಾಡಲು ಲೈವ್​ಗೆ ಬಂದ ನಟಿ ತಾರಾ ಡ್ರೋನ್​ ಪ್ರತಾಪ್​  ಕುರಿತು ಹೇಳಿದ್ದೇನು?  

ಮಕ್ಕಳ ಮಾತು ಕೇಳಲು ಮುದ್ದು, ಅಮ್ಮನ ಬಗ್ಗೆ ಮಕ್ಕಳು ಮಾಡುವ ಕಂಪ್ಲೇಂಟ್ಸ್​ ನೋಡಿ ಆಶ್ಚರ್ಯ ಆಯ್ತು. ಎಷ್ಟೆಂದು ಮಕ್ಕಳ ಜೊತೆ ಹೆಚ್ಚು ಇರುವವರು ಅಮ್ಮನೇ ತಾನೆ? ಅದಕ್ಕೇ ಮಕ್ಕಳಿಗೆ ಅಮ್ಮನ ಮೇಲೆ ತುಸು ಕೋಪ ಜಾಸ್ತಿನೇ. ಆದ್ರೆ ಅವರು ಅಮ್ಮನನ್ನು ಅರ್ಥ ಮಾಡಿಕೊಂಡ ರೀತಿ, ಅಮ್ಮ ಮಕ್ಕಳ ಮೇಲೆ ಇಟ್ಟ ಪ್ರೀತಿ... ಎಲ್ಲವನ್ನೂ ನೋಡುವುದೇ ಖುಷಿಯೋ ಖುಷಿ. ಇಂಥ ಒಂದು ಅಪೂರ್ವ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಕಲರ್ಸ್​ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್​ಸ್ಟಾರ್​ ಒದಗಿಸಿಕೊಡುತ್ತಿದೆ...

ಹೀಗೆಂದು ಹೇಳಿದವರು ನನ್ನಮ್ಮ ಸೂಪರ್​ಸ್ಟಾರ್​ ರಿಯಾಲಿಟಿ ಷೋನ ಸೀಸನ್​-3 ನಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟಿ ತಾರಾ ಅನುರಾಧ. ಈ ಬಾರಿಯೂ ಮಕ್ಕಳಿಂದ ನಕ್ಕು ನಲಿಯುವುದಕ್ಕೆ, ಅಮ್ಮಂದಿರ ಪರ್ಫಾಮೆನ್ಸ್ ನೋಡುವುದಕ್ಕೆ ತಾರಾ ಅನುರಾಧ, ಸೃಜನ್ ಲೋಕೇಶ್, ಅನು ಪ್ರಭಾಕರ್ ಗೆಸ್ಟ್ ಆಗಿ ಬಂದಿದ್ದಾರೆ.  ನೇರಪ್ರಸಾರದಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ ನಟಿ ತಾರಾ ಅವರು, ವೀಕ್ಷಕರು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದರು. ಅರ್ಧ ಗಂಟೆ ಜನರ ಜೊತೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನೇರವಾದ ಮಾತುಕತೆ ನಡೆಸಿದ ಅವರು, ರಿಯಾಲಿಟಿ ಷೋ ಜೊತೆ, ಅಭಿಮಾನಿಗಳು ಕೇಳಿದ ವೈಯಕ್ತಿಕ ಪ್ರಶ್ನೆಗಳಿಗೆ, ಬಿಗ್​ಬಾಸ್​ ಬಗ್ಗೆ ಉತ್ತರಿಸಿದರು. 

ಡ್ರೋನ್​ ಪ್ರತಾಪ್​ಗೆ ಕೊನೆಗೂ ಅಮ್ಮನ ಕೈತುತ್ತು: ದೃಷ್ಟಿ ತೆಗೆದು ಬರಮಾಡಿಕೊಂಡ ವಿಡಿಯೋಗೆ ನೆಟ್ಟಿಗರು ಏನಂದ್ರು?

ಯಾರೇ ನೇರಪ್ರಸಾರದ ಕಾರ್ಯಕ್ರಮದಲ್ಲಿ ಯಾವುದೇ ವಿಷಯದ ಬಗ್ಗೆ ಪ್ರಶ್ನೋತ್ತರ ಮಾಲಿಕೆಯಲ್ಲಿ ಕಾಣಿಸಿಕೊಂಡರೂ, ಹಲವರ ಪ್ರಶ್ನೆ ಆ ವಿಷಯ ಬಿಟ್ಟು ಬಿಗ್​ಬಾಸ್​ ಬಗ್ಗೆ ಕೇಳುವುದು ಇದೆ.  ಬಿಗ್​ಬಾಸ್​ ಜನರನ್ನು ಆ ಪರಿಯಲ್ಲಿ ಆವರಿಸಿಕೊಂಡು ಬಿಟ್ಟಿದೆ. ಅದೇ ರೀತಿ ಇದೀಗ ತಾರಾ ಅವರಿಗೂ ಬಿಗ್​ಬಾಸ್​ ಬಗ್ಗೆ ಪ್ರಶ್ನೆ ಕೇಳಲಾಯಿತು. ಅಷ್ಟಕ್ಕೂ ತಾರಾ ಅವರು ಬಿಗ್​ಬಾಸ್​ನಲ್ಲಿ ಗೆಸ್ಟ್​ ಆಗಿ ಹೋಗಿದ್ದರು. ಆ ಸಂದರ್ಭದಲ್ಲಿ ಡೈಲಾಗ್​ಗಳಿಂದಲೇ ಎಲ್ಲರನ್ನೂ ಮರಳು ಮಾಡುವಲ್ಲಿ ನಿಸ್ಸೀಮರಾಗಿರುವ ಡ್ರೋನ್​ ಪ್ರತಾಪ್​ ತುಂಬಾ ಡಿಪ್ರೆಷನ್​ನಲ್ಲಿ ಇದ್ದರು. ಆಗ ಡ್ರೊನ್​ ಪ್ರತಾಪ್​ ಅವರಿಗೆ ತಾರಾ ಅವರು ಧೈರ್ಯ ತುಂಬಿದ್ದರು. ಆ ಬಗ್ಗೆ ತಾರಾ ಅವರಿಗೆ ನೇರಪ್ರಸಾರದಲ್ಲಿ ಪ್ರಶ್ನೆ ಕೇಳಲಾಗಿದೆ. ಅವರು ನಿಮಗೆ ಮೊದಲೇ ಗೊತ್ತಿತ್ತಾ ಎಂದು ಫ್ಯಾನ್​ ಒಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ತಾರಾ ಅವರು, ಇಲ್ಲ. ತುಂಬಾ ಮಂದಿ ಹಾಗೆ ಅಂದುಕೊಂಡಿದ್ದಾರೆ. ಡ್ರೋನ್​ ಪ್ರತಾಪ್​ ಒಮ್ಮೆ ವಿಮಾನದಲ್ಲಿ ಸಿಕ್ಕಿದ್ದು ಬಿಟ್ಟರೆ ಬಿಗ್​ಬಾಸ್​ನಲ್ಲಿಯೇ ನೋಡಿದ್ದು, ಮೊನ್ನೆ ಸೆಟ್​ಗೆ ಬಂದು ಒಂದು ಫೋಟೋ ತಗೊಂಡು ಹೋದ. ಅಷ್ಟು ಬಿಟ್ಟರೆ ಅವನ ಪರಿಚಯವೇ ನನಗೆ ಇಲ್ಲ. ನಾನು ಹೋದಾಗ ತುಂಬಾ ಬೇಸರದಲ್ಲಿ ಇದ್ದ ಎಂದು ಮಾತನಾಡಿಸಿದೆ ಅಷ್ಟೇ. ಅವನೊಬ್ಬನನ್ನೇ ಅಲ್ಲ, ಎಲ್ಲಾ ಸ್ಪರ್ಧಿಗಳನ್ನೂ ಮಾತನಾಡಿಸಿದ್ದೇನೆ ಎಂದರು. ಹಾಗೆನೇ ಡ್ರೋನ್​ ಪ್ರತಾಪ್​, ಫಿನಾಲೆಯವರೆಗೂ ಹೋಗಿದ್ದು, ಹಾಗೂ ರನ್ನರ್​ ಅಪ್​ ಆಗಿದ್ದು ಆಶ್ಚರ್ಯದ ಜೊತೆ ಖುಷಿಯೂ ತಂದಿದೆ ಎಂದರು. 

ಇದೇ ವೇಳೆ ಇನ್ನೊಬ್ಬರು ಈಗ ಇಷ್ಟೊಂದು ಸಿಂಪಲ್​  ಆಗಿದ್ದೀರಿ. ರಿಯಾಲಿಟಿ ಷೋನಲ್ಲಿ ಮೇಕಪ್​ ಜಾಸ್ತಿ ಮಾಡಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು. ಅದಕ್ಕೆ ತಾರಾ ನನಗೆ ಸಿಂಪಲ್​ ಆಗಿರುವುದು ಇಷ್ಟ. ಆದರೆ  ಪಾತ್ರಕ್ಕೆ ಬೇಕು ಅನ್ನಿಸಿದ್ದಾಗ ಮೇಕಪ್​ ಅನಿವಾರ್ಯ.  ರಿಯಾಲಿಟಿ ಷೋಗಳಲ್ಲಿ ನಮ್ಮನ್ನು ಪ್ರೆಸೆಂಟೇಷನ್​ ಮುಖ್ಯವಾಗಿರುತ್ತದೆ. ನಾವು ಹೇಗೆ ಕಾಣಿಸಬೇಕು ಎಂದು  ನಿರ್ದೇಶಕರು ಹೇಳುತ್ತಾರೆ.  ಅವರಂತೆಯೇ ನೋಡಿಕೊಳ್ಳಬೇಕಾಗುತ್ತದೆ ಎಂದರು. ರಿಯಾಲಿಟಿ ಷೋಗಳು ಜನರಿಗೆ ಯಾಕೆ ಹತ್ತಿರವಾಗುತ್ತದೆ ಎಂದರೆ, ನಾವು ಅಲ್ಲಿ ಒಂದು ಪಾತ್ರ ಆಗಿರುವುದಿಲ್ಲ, ಬದಲಿಗೆ ನಾನು ನಾವಾಗಿರುತ್ತೇವೆ. ಅದಕ್ಕಾಗಿ ಎಂದರು. ಇದೇ ವೇಳೆ ತಮ್ಮ ಮಗನ ಬಗ್ಗೆಯೂ ಮಾತನಾಡಿದ ತಾರಾ, ಮಗ ಶ್ರೀಕೃಷ್ಣ ದೇವರು ಕೊಟ್ಟ ಮಗ. ಆತ ಮುದ್ದು ಮಗ. ತುಂಬಾ ಕೇರಿಂಗ್​ ಮಗ. ತುಂಬಾ ಬುದ್ಧಿವಂತ. ಸ್ನೇಹಿತರು ಎಂದ್ರೆ ಅವನಿಗೆ ಇಷ್ಟ ಎಂದರು. ಹೀಗೆ ಹಲವರ ಪ್ರಶ್ನೆಗಳಿಗೆ ನಟಿ ಉತ್ತರಿಸಿದರು. 

ಬಿಗ್​ಬಾಸ್​ ಅಂದ್ರೆ ಪ್ರತಾಪ್​ಗೆ ಹೀಗಂತೆ! ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಡ್ರೋನ್​ ಹೇಳಿದ್ದೇನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!