Bhagyavantaru Serial: ಅಪ್ಪನ ಆಸೆಯಂತೆ ಶ್ರೀಮಂತ ಮನೆಗೆ ಸೊಸೆಯಾದ ಜನನಿ; ಅಲ್ಲೇ ಇರೋದು ಟ್ವಿಸ್ಟ್!

Published : Jul 02, 2026, 12:36 PM IST
bhagyavantaru serial

ಸಾರಾಂಶ

Bhagyavantaru Serial: ಸನ್‌ ಉದಯ ವಾಹಿನಿಯು ಹೊಸ ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದೆ. ಈಗ ‘ಭಾಗ್ಯವಂತರು’ ಎನ್ನುವ ಹೊಸ ಸೀರಿಯಲ್‌ ಪರಿಚಯಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Bhagyavantaru Serial In Sun Udaya: ಇತ್ತೀಚೆಗೆ ʻಮೂಗುತಿ ಮಲ್ಲಿʼ, ʻಮಹಾಲಕ್ಷ್ಮೀ ಮದುವೆʼಯಂತಹ ಹೊಸ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಈಗ ಈ ಸಾಲಿಗೆ ಹೊಸ ಸೀರಿಯಲ್‌ ಸೇರಿಕೊಳ್ಳಲಿದೆ. ಈಗ ʻಭಾಗ್ಯವಂತರುʼ ಎಂಬ ಮತ್ತೊಂದು ಧಾರಾವಾಹಿ ಇದೇ ಜುಲೈ 6 ರಿಂದ ಸೋಮವಾರದಿಂದ ಶನಿವಾರದವರಗೆ ರಾತ್ರಿ 7.30 ಕ್ಕೆ ಪ್ರಸಾರಕ್ಕೆ ರೆಡಿಯಾಗಿದೆ.

ಈ ಧಾರಾವಾಹಿ ಕತೆ ಏನು?

ಈ ಧಾರಾವಾಹಿ ಹೀರೋಯಿನ್ ಜನನಿ, ಅಪ್ಪನ ಮುದ್ದಿನ ಮಗಳು. ತನ್ನ ತಂದೆ ಶ್ಯಾಮಸುಂದರ್ ಕನಸನ್ನು ನನಸಾಗಿಸಲು ಶಿಕ್ಷಣವನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುವ ಜನನಿ, ಭವಿಷ್ಯದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗುವ ಕನಸು ಕಾಣುತ್ತಾಳೆ. ತಂದೆಯ ಆಶಯದಂತೆ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಒತ್ತು ನೀಡಿದ ಜನನಿಯನ್ನು, ಉತ್ತಮ ಭವಿಷ್ಯಕ್ಕಾಗಿ ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿ ನಾಯಕ್ ಅವರೊಂದಿಗೆ ಮದುವೆ ಮಾಡಲಾಗುತ್ತದೆ. ಶಕ್ತಿ, ಸಾಕಷ್ಟು ಸಂಪತ್ತನ್ನು ಗಳಿಸಿರುವ ಗುಣಶೇಖರ್ ನಾಯಕ್ ಅವರ ಕೊನೆಯ ಸಹೋದರ.

ಗುಣಶೇಖರನ ಮನೆಯಲ್ಲಿ ಈಗಾಗಲೇ ಮೂರು ಡಬಲ್ ಡಿಗ್ರಿ ಸೊಸೆಯಂದಿರಿದ್ದು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುತ್ತಾರೆ. ಇವರ ಜೊತೆಗೆ ನಾಲ್ಕನೇ ವಿದ್ಯಾವಂತ ಸೊಸೆಯಾಗಿ ಈ ಮನೆಗೆ ಕಾಲಿಡುತ್ತಾಳೆ ಜನನಿ. ಆದರೆ ಗಂಡನ ಮನೆ ಮತ್ತು ತಾನು ಮಾಡುವ ಕೆಲಸವನ್ನು ಸರಿಯಾಗಿ ಮುನ್ನಡೆಸುವುದು ಜನನಿಗೆ ಒಂದು ಸವಾಲ್. ಈ ಸವಾಲಿನಲ್ಲಿ ಜನನಿ ಯಾವ ರೀತಿ ಯಶಸ್ವಿಯಾಗುತ್ತಾಳೆ? ಎಂಬುದು ಈ ಸೀರಿಯಲ್‌ ಸ್ಟೋರಿ.

ತಾರಾಗಣದಲ್ಲಿ ಯಾರಿದ್ದಾರೆ?

ಹೀರೋಯಿನ್‌ ಪಾತ್ರದಲ್ಲಿ ತನ್ವಿ ರಾವ್, ಹೀರೋ ಪಾತ್ರದಲ್ಲಿ ವಿಕಾಸ್ ನಟಿಸುತ್ತಿದ್ದಾರೆ. ಸುಚೇಂದ್ರ ಪ್ರಸಾದ, ಆರ್.ಕೆ.ಚಂದನ್, ಶೋಭರಾಜ್, ಸುರೇಶ್ ರೈ, ಶಾಲಿನಿ, ಸಮೀಕ್ಷಾ, ಧನ್ಯಾ, ವರ್ಷಾ, ಶ್ರೀವಾಯು, ಮಧುಸಾಗರ, ಲಕ್ಷ್ಮೀ ಹೆಗಡೆ, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್, ಜಯಲಕ್ಷ್ಮೀ ಪಟೇಲ್ ನಟಿಸುತ್ತಿದ್ದಾರೆ.

ಎ. ಎಸ್. ಎಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ʻಭಾಗ್ಯವಂತರುʼ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನ ಮಾಡುತ್ತಿದ್ದಾರೆ. ರಮಣ ಬಂಗಾರು ನಿರ್ಮಾಪಕರಾಗಿ ಕೆಲಸ ಮಾಉಡತ್ತಿದ್ದಾರೆ. ಕಥೆ/ಚಿತ್ರಕಥೆ ಶುಭ್ರ ಪುತ್ರಕಳ, ಸಂಭಾಷಣೆ ಸುಮಾ ಶಿಂಗ್ನಳ್ಳಿ, ಛಾಯಾಗ್ರಾಹಕರಾಗಿ ಗೌತಮ್ ಕೃಷ್ಣನ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ

ʻಭಾಗ್ಯವಂತರುʼ ಪ್ರತಿಯೊಂದು ಕುಟುಂಬಕ್ಕೆ ಹತ್ತಿರವಾದ ಕಥೆ. ತಂದೆ ಮತ್ತು ಮಗಳ ಅನ್ಯೋನ್ಯ ಬಾಂಧವ್ಯವನ್ನು ತಿಳಿಸುವದರ ಜೊತೆಗೆ ಸಮಾಜದಲ್ಲಿ ವಿವಾಹಿತ ಮಹಿಳೆಯರ ಕನಸುಗಳ ಮಹತ್ವವನ್ನು ಪ್ರೇಕ್ಷಕರಿಗೆ ಹೊಸ ರೂಪದಲ್ಲಿ ನೀಡುವುದು ಸನ್ ಉದಯದ ಆಶಯ.

“ಭಾಗ್ಯವಂತರು” ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ಸನ್‌ ಉದಯದಲ್ಲಿ ಪ್ರಸಾರವಾಗಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗ್ರಾಮಾಯಣ ರಿಲೀಸ್‌, ಸಂಭ್ರಮಿಸೋಕೆ ಅವಳಿಲ್ಲವಲ್ಲಾ ಅಂತಾ ಅಪರ್ಣಾ ಅವರ ಕೊನೇ ದಿನಗಳ ಕರುಳು ಹಿಂಡುವ ಪೋಸ್ಟ್ ಹಾಕಿದ ಪತಿ!
ಅವನ ಜೊತೆ ಸಮುದ್ರ ಪಕ್ಕದಲ್ಲೇ ಮನೆ ಮಾಡುವ ಆಸೆ ನಮ್ರತಾ ಗೌಡಗೆ?