
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಈಗ ರೋಚಕ ಹಂತ ತಲುಪಿದೆ. ಗೌತಮ್‌ಗೆ ಎಲ್ಲಾ ವಿಷಯನೂ ಗೊತ್ತಾಗಿದೆ. ಇದೇ ಕಾರಣಕ್ಕೆ ದೀಪಿಕಾ ಎಂದು ಭೂಮಿಕಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಗೌತಮ್. ಮನೆಗೆ ಬರುತ್ತಿದ್ದಂತೆಯೇ, ಭೂಮಿಕಾ ಮತ್ತು ಗೌತಮ್ ಕ್ಲೋಸ್ ಆಗಿರೋದನ್ನು ನೋಡಿದ ಶಕುಂತಲಾಗೆ ತಲೆ ತಿರುಗಿದೆ. ಅದಕ್ಕೇ ಅವಳು, ನೀನು ಮೊದಲಿನ ಹಾಗೆ ಇಲ್ಲ. ಈಗ ಇಷ್ಟು ಕ್ಲೋಸ್ ಯಾಕೆ ಆಗ್ತಿದ್ದಿಯಾ ಎಂದು ಪ್ರಶ್ನಿಸಿದಾಗ, ದೀಪಿಕಾ ಆಗಿರೋ ಭೂಮಿಕಾ, ನೀವೇ ಹೇಳಿದ್ರಲ್ಲ, ಗೌತಮ್ ಜೊತೆ ಕ್ಲೋಸ್ ಆಗಿರು, ಇಲ್ಲಾಂದ್ರೆ ಡೌಟ್ ಬರುತ್ತೆ ಅಂತ. ಅದಕ್ಕಾಗಿಯೇ ಕ್ಲೋಸ್ ಆಗಿದ್ದೇನೆ ಎಂದಳು.
ಇದನ್ನು ಕೇಳಿದ ಶಕುಂತಲಾ, ಪರವಾಗಿಲ್ಲ, ನೀನು ತುಂಬಾ ಚೆನ್ನಾಗಿ ನಾಟಕವಾಡುತ್ತಿದ್ದಿ ಎಂದಾಗ, ಟಾಂಟ್ ಕೊಟ್ಟ ಭೂಮಿಕಾ, ನೀವು ನನಗಿಂತಲೂ ಚೆನ್ನಾಗಿ ಆ್ಯಕ್ಟ್ ಮಾಡುತ್ತೀರಿ ಎಂದು ಹೇಳಿ ಅಲ್ಲಿಂದ ಹೋಗಿದ್ದಾಳೆ. ಇದನ್ನು ಕೇಳಿ ಶಕುಂತಲಾಗೆ ತಲೆ ತಿರುಗಿದಂತಾಗಿದೆ. ಅದ್ಯಾವ ಕಾರಣಕ್ಕೂ ಶಕುಂತಲಾಗೆ ಇವಳೇ ಭೂಮಿಕಾ ಇರಬಹುದು ಎನ್ನುವ ಡೌಟ್ ಬಂದಿಲ್ಲ. ಆದರೆ ದೀಪಿಕಾಗೆ ಸತ್ಯ ತಿಳಿದು ನನಗೆ ಹೀಗೆಲ್ಲಾ ಹೇಳಿರಬಹುದಾ ಎಂದು ಡೌಟ್ ಬಂದಿದೆ.
ಈಗ ಬಂದಿದೆ ಸಕತ್ ಟ್ವಿಸ್ಟ್. ಭೂಮಿಕಾ ಮನೆಗೆ ಬಂದ ಮೇಲೆ ಇನ್ನು ಶಕುಂತಲಾ ಮತ್ತು ಜೈದೇವ್ ಆಟ ನಡೆಯಲ್ಲ. ಇಬ್ಬರಿಗೂ ಗೌತಮ್ ಮತ್ತು ಭೂಮಿಕಾ ಸೇರಿ ತಕ್ಕ ಶಾಸ್ತಿ ಮಾಡೋದು ಇದ್ದೇ ಇದೆ. ಅಮೃತಧಾರೆ ಸೀರಿಯಲ್ ಕೊನೆಯ ಹಂತದಲ್ಲಿ ಇದ್ದು, ಇನ್ನೇನು ಸ್ವಲ್ಪ ದಿನದಲ್ಲಿಯೇ ಭೂಮಿಕಾಮತ್ತು ಗೌತಮ್ ಅಸಲಿ ಆಟ ಶುರು ಮಾಡಿಕೊಳ್ಳುತ್ತಾರೆ.
ಅಲ್ಲಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದ್ದ ಅಮೃತಧಾರೆ ಸೀರಿಯಲ್ ಕೊನೆಯವರೆಗೂ ರೋಚಕತೆಯನ್ನು ಉಳಿಸಿಕೊಂಡಿರುವುದು ಕುತೂಹಲವಾಗಿದೆ. ಈಗಲೂ ಈ ಸೀರಿಯಲ್ಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಇನ್ನೇನು ಸೀರಿಯಲ್ ಮುಗಿಯತ್ತೆ ಎನ್ನುವಾಗಲೇ ಹಲವು ಬಾರಿ ಮತ್ತೆ ಟ್ವಿಸ್ಟ್ ಕೊಡಲಾಗಿದೆ. ಆದರೆ ಈ ಸಲ, ಬಹುಶಃ ಹಾಗೆ ಆಗಲಿಕ್ಕಿಲ್ಲ. ಸೀರಿಯಲ್ ಮುಗಿಯತ್ತೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಜೀ ಅವಾರ್ಡ್ಗೆ ಬಂದಿದ್ದ ಭೂಮಿಕಾ ಅರ್ಥಾತ್ ನಟಿ, ಛಾಯಾ ಸಿಂಗ್ ಅವರು ಕೂಡ ಈ ಬಗ್ಗೆ ಹಿಂಟ್ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.