ಲಕ್ಷ್ಮಿ ನಿವಾಸ: ಹೆಂಡ್ತಿ ಮೇಲಿನ ವ್ಯಾಮೋಹಕ್ಕೆ ಡಾಕ್ಟರ್ ಕೈಯನ್ನೇ ಮುರಿದ ಸೈಕೋ ಜಯಂತ್! ಈ ಮಾನಸಿಕ ಸಮಸ್ಯೆ ಬಹಳ ಮಂದಿಗಿರುತ್ತೆ!

Published : Apr 16, 2024, 06:18 PM IST
ಲಕ್ಷ್ಮಿ ನಿವಾಸ:  ಹೆಂಡ್ತಿ ಮೇಲಿನ ವ್ಯಾಮೋಹಕ್ಕೆ ಡಾಕ್ಟರ್ ಕೈಯನ್ನೇ ಮುರಿದ ಸೈಕೋ ಜಯಂತ್! ಈ ಮಾನಸಿಕ ಸಮಸ್ಯೆ ಬಹಳ ಮಂದಿಗಿರುತ್ತೆ!

ಸಾರಾಂಶ

ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಹೆಂಡ್ತಿ ಮೇಲೆ ಅತಿಯಾದ ವ್ಯಾಮೋಹಕ್ಕೆ ಅವಳನ್ನು ಟೆಸ್ಟ್ ಮಾಡ್ತಿರೋ ಡಾಕ್ಟರ್‌ ಕೈಯಲ್ಲೇ ಮುರಿದು ಹಾಕಿದ್ದಾನೆ ಜಯಂತ್. ಮುಂದೆ ಜಾನ್ವಿ ಕಥೆ ಹರೋಹರ ಅಂತಿದ್ದಾರೆ ವೀಕ್ಷಕರು. ಆದರೆ ಈ ಸಮಸ್ಯೆ ನಮ್ಮ ಸಮಾಜದಲ್ಲೂ ಬಹಳ ಮಂದಿಗೆ ಇದೆ.

ಲಕ್ಷ್ಮೀ ನಿವಾಸ ಅನ್ನೋ ಸೀರಿಯಲ್‌ನಲ್ಲಿ ಜಾನ್ವಿ ಎಂಬ ತುಂಬು ಕುಟುಂಬದ ಹುಡುಗಿ ಜಯಂತ್ ಎಂಬ ಶ್ರೀಮಂತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ. ಆದರೆ ಈ ಪುಣ್ಯಾತ್ಮನ ಪ್ರೀತಿಯೋ ದೇವರಿಗೇ ಪ್ರೀತಿ ಅನ್ನೋ ಹಾಗಿದೆ. ಸದ್ಯ ತನ್ನ ಗಂಡನ ಅತಿ ಪ್ರೀತಿಯನ್ನೂ ಜಾನ್ವಿ ಎನ್‌ಜಾಯ್ ಮಾಡ್ತಿದ್ದಾಳೆ. ಆದರೆ ಅದರ ಇನ್ನೊಂದು ಮುಖ ಅವಳ ಗಮನಕ್ಕೆ ಬರಬೇಕಷ್ಟೇ.

ಇನ್ನೊಂದೆಡೆ ಪತ್ನಿ ಜಾಹ್ನವಿ ಮೇಲಿನ ಪತಿ ಜಯಂತನ ಅತಿಯಾದ ಪ್ರೀತಿ, ಕಾಳಜಿ ವೀಕ್ಷಕರಿಗೆ ಅಸಹನೀಯ ಎನಿಸುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಈ ಮಟ್ಟಿಗಿನ ಪ್ರೀತಿ ಉರುಳಾಗುವ ಸಂಭವವೇ ಹೆಚ್ಚು ಎನ್ನುತ್ತಿದ್ದಾರೆ. ಈ ನಡುವೆ ಜಾಹ್ನವಿ ಮಾತ್ರ ಪತಿ ಜಯಂತನ ಪ್ರೀತಿಗೆ ಕರಗಿದ್ದಾಳೆ ನಿಜ. ಆದರೆ, ಈ ಪ್ರೀತಿಯ ವಿಚಾರದಲ್ಲಿ ಆಕೆಗೂ ಒಂದಷ್ಟು ಗೊಂದಲಗಳಿವೆ. ಮನದಲ್ಲಿ ಒಂದಷ್ಟು ಪ್ರಶ್ನೆಗಳೂ ಉದ್ಭವವಾಗಿವೆ.

ಪತ್ನಿಯನ್ನು ಯಾರೂ ಹೆಜ್ಜೆ ಇಡದ ಬಂಗಲೆಯಲ್ಲಿ ಅತಿಯಾದ ಪ್ರೀತಿ ಅನ್ನೋ ಕೀಲಿಕೈ ಹಾಕಿ ಬಂಧಿಸಿದ್ದಾನೆ ಜಯಂತ್.‌ ತಾನಿಲ್ಲಿ ಒಬ್ಬಂಟಿ ಎಂಬುದಷ್ಟೇ ಜಾಹ್ನವಿಗೆ ಗೊತ್ತಿರುವ ಸಂಗತಿ. ಅದರಾಚೆಗೆ ಪತಿ ತನ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾನೆ, ಮನೆ ಪ್ರವೇಶಕ್ಕೂ ಯಾರಿಗೂ ಅನುಮತಿ ಇಲ್ಲ ಎಂಬ ಸತ್ಯ ಜಾನ್ವಿಗೆ ಇನ್ನೂ ಗೊತ್ತಾಗಿಲ್ಲ. ಈ ನಡುವೆ, ಯುಗಾದಿ ಹಬ್ಬಕ್ಕೆಂದು ಮದುವೆ ಬಳಿಕ ಮೊದಲ ಸಲ ಅಳಿಯ ಜಯಂತ್‌, ಜಾಹ್ನವಿ ಜತೆಗೆ ಅವರ ತವರು ಮನೆಗೆ ತೆರಳಿದ್ದಾನೆ. ಎಣ್ಣೆ ಸ್ನಾನದ ಮಾಡಿ ಭರ್ಜರಿಯಾಗಿಯೇ ಹಬ್ಬ ಆಚರಿಸಿದ್ದಾರೆ.

ಮದುಮಗಳ ನಿರ್ಧಾರ ಮಾಡ್ತಿದ್ದಾರೆ ತಾತ, ಚಿಕ್ಕಮ್ಮ: ಅಡಕತ್ತರಿಯಲ್ಲಿ ಸಿಲುಕಿದ ಸೀತಾ-ರಾಮ್‌!

ಹೀಗೆ ಒಂದೇ ದಿನ ಹಬ್ಬ ಮಾಡಿ, ಮಾರನೇ ದಿನವೇ ಜಯಂತ್‌ ಜತೆಗೆ ಮರಳಿ ಗಂಡನ ಮನೆ ಸೇರಿದ ಜಾಹ್ನವಿ ಆರೋಗ್ಯದಲ್ಲಿ ಏರುಪೇರಾಗಿದೆ. ಗಂಟಲು ಕಟ್ಟಿದ ಅನುಭವ ಆಗಿದೆ. ಮೊದಲೇ ಪತ್ನಿ ಎಂದರೆ ಅತೀವ ಪ್ರೀತಿ ತೋರುವ ಜಯಂತ್‌, ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆ ತಂದಿದ್ದಾನೆ. ಪತ್ನಿ ಮೇಲೆ ಯಾರೇ ಕಣ್ಣು ಹಾಕಿದರೂ, ಅವರನ್ನು ಬೇರೆ ದೃಷ್ಟಿಯಲ್ಲಿಯೇ ನೋಡುವ ಜಯಂತ್‌ಗೆ ಆಸ್ಪತ್ರೆಯಲ್ಲೂ ಅಂಥದ್ದೇ ಸಂದರ್ಭ ಎದುರಾಗಿದೆ. ಜಾಹ್ನವಿಯನ್ನು ಪುರುಷ ವೈದ್ಯ ಟ್ರೀಟ್‌ ಮಾಡುತ್ತಿದ್ದಾನೆ. ವೈದ್ಯನ ವರ್ತನೆ ಕಂಡು ಸಿಟ್ಟಾಗಿದ್ದಾನೆ.‌

ಜಾಹ್ನವಿಗೆ ಏನಾಗಿದೆ ಎಂದು ತಿಳಿಯಲು ವೈದ್ಯ, ಸ್ಟೆತಾಸ್ಕೋಪ್‌ನಿಂದ ಪರೀಕ್ಷೆ ಮಾಡಿದ್ದಾನೆ. ಕಣ್ಣು, ನಾಲಿಗೆ ನೋಡಿದ್ದಾನೆ. ಕೈ ಮುಟ್ಟಿ ಪರೀಕ್ಷೆ ಮಾಡಿದ್ದಾನೆ. ನೀರು ಬದಲಾವಣೆಯಿಂದ ನಿಮಗೆ ಗಂಟಲು ಕಟ್ಟಿದೆ ಎಂದಿದ್ದಾನೆ. ಜತೆಗೆ ನಿಮ್ಮದು ಯಾವ ಊರು ಎಂದೂ ಕೇಳಿದ್ದಾನೆ. ನಮ್ಮದು ತುಮಕೂರು ಎಂದು ಜಾಹ್ನವಿ ಹೇಳುತ್ತಿದ್ದಂತೆ, ಅರೇ ನಮ್ಮದು ಅಲ್ಲೇ ಗುಬ್ಬಿ ಎಂದಿದ್ದಾನೆ. ಪತ್ನಿ ಜಾಹ್ನವಿ ಜತೆಗಿನ ವೈದ್ಯನ ಈ ಸಲುಗೆ ಪಕ್ಕದಲ್ಲೇ ನಿಂತಿದ್ದ ಜಯಂತನಿಗೆ ರೋಷ ಉಕ್ಕಿಸಿದೆ. ಅದಕ್ಕಾಗಿ ಆತ ತನ್ನ ರೂಪ ತೋರಿಸಿದ್ದಾನೆ.‌

ಭಾಗ್ಯಳಿಗೆ ಬುದ್ಧಿ ಕಲಿಸಲು ರೂಪಾಳನ್ನು ಕರೆತಂದ ತಾಂಡವ್​ಗೆ ಅವಳೇ ತಿರುಗುಮಂತ್ರವಾಗ್ತಾಳಾ? ಏನಿದು ಟ್ವಿಸ್ಟ್​?

ನೀವು ಹೊರಗಡೆ ಕೂತಿರಿ, ನಾನು ಒಳಗೆ ಹೋಗಿ ಡಾಕ್ಟರ್‌ ಹತ್ತಿರ ಮಾತ್ರೆ ತರ್ತಿನಿ ಎಂದಿದ್ದಾನೆ ಜಯಂತ್.‌ ಒಳಗಡೆ ಬಂದ ಜಯಂತ್‌, ನನ್ನ ಕಣ್ಣ ಮುಂದೆಯೇ ನನ್ನ ಪತ್ನಿಯ (wife) ಮೈ ಕೈ ಮುಟ್ಟೋವಷ್ಟು ಧೈರ್ಯನ ನಿನಗೆ ಎಂದು ಆತನ ಕೈ ತಿರುಗಿಸಿ ಎಚ್ಚರಿಕೆ ನೀಡಿದ್ದಾನೆ. ಅವಳು ನನ್ನ ಹೆಂಡತಿ, ಆಕೆಯನ್ನು ಮುಟ್ಟುವ ಅಧಿಕಾರಿ ನನಗಷ್ಟೇ ಇರೋದು ಎಂದು ಕೈ ಮುರಿದಿದ್ದಾನೆ. ಈ ಮೂಲಕ ಜಯಂತನ ಅಸಲಿ ಮುಖದ ಅನಾವರಣ ಮತ್ತೊಮ್ಮೆ ವೀಕ್ಷಕನ ಕಣ್ಣಿಗೆ ಬಿದ್ದಿದೆ.

ಹಾಗೆ ನೋಡಿದರೆ ನಮ್ಮ ಸೊಸೈಟಿಯಲ್ಲೂ ಇಂಥಾ ಮನಸ್ಥಿತಿಯರವರು ಒಂದಿಷ್ಟು ಜನ ಇದ್ದಾರೆ. ಇದಕ್ಕೆ ಮನಃಶಾಸ್ತ್ರದಲ್ಲಿ (psychology) ಒಬ್ಸೆಸ್ಸಿವ್ ಲವ್ ಡಿಸಾರ್ಡರ್  (Love disorder)ಎನ್ನುತ್ತಾರೆ.

 

ಈ ಸಮಸ್ಯೆ ಇರುವ ವ್ಯಕ್ತಿ ತಾನು ಪ್ರೀತಿಸುವವರನ್ನು ಅತಿಯಾಗಿ ಹಚ್ಚಿಕೊಳ್ಳುತ್ತಾನೆ, ಅವರ ಮೇಲೆ ಇತರರು ತೋರುವ ಕಾಳಜಿಯನ್ನು (caring) ಸಹಿಸೋದಿಲ್ಲ. ಎಲ್ಲಿ ತನ್ನ ಪ್ರೇಮಿ ಇತರರ ಜೊತೆಗೆ ಸಂಪರ್ಕಕ್ಕೆ ಬರುತ್ತಾರೋ ಎಂಬ ಅನುಮಾನ ಸದಾ ಅವರನ್ನು ಕಾಡುತ್ತದೆ. ಇದು ನಿಧಾನಕ್ಕೆ ಪ್ರೇಮಿಯಲ್ಲಿ ಅಪನಂಬಿಕೆ, ಹಿಂಸಾ ಪ್ರವೃತ್ತಿ ಎಲ್ಲವನ್ನೂ ಬೆಳೆಸುತ್ತದೆ. ಈ ಎಲ್ಲ ಅಂಶಗಳು ಮುಂದೆ ಜಯಂತ್ ಪಾತ್ರದ ಮೂಲಕ ಹೊರಬರುವ ಸಾಧ್ಯತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...