ಬೆಂಗಳೂರಲ್ಲಿ ಆಟೋ, ಕ್ಯಾಬ್​ ಏನೂ ಸಿಕ್ಕಲ್ವಾ? ಇದ್ಯಾಕೋ ಅತಿಯಾಯ್ತು ಅನ್ನಿಸ್ತಿಲ್ವಾ? ನೆಟ್ಟಿಗರ ಕ್ಲಾಸ್​

Published : Jul 05, 2024, 03:49 PM IST
ಬೆಂಗಳೂರಲ್ಲಿ ಆಟೋ, ಕ್ಯಾಬ್​ ಏನೂ ಸಿಕ್ಕಲ್ವಾ? ಇದ್ಯಾಕೋ ಅತಿಯಾಯ್ತು ಅನ್ನಿಸ್ತಿಲ್ವಾ? ನೆಟ್ಟಿಗರ ಕ್ಲಾಸ್​

ಸಾರಾಂಶ

ಮನೆ ಮಂದಿಯನ್ನೆಲ್ಲಾ ಯಾವುದರಲ್ಲಿ  ಕರೆದುಕೊಂಡು ಹೋಗುತ್ತಿ ಎಂದು ಭಾಗ್ಯಲಕ್ಷ್ಮಿಗೆ  ತಾಂಡವ್​ ತಮಾಷೆ ಮಾಡಿದ್ದರಿಂದ ನೆಟ್ಟಿಗರು ಏನೆಲ್ಲಾ ಹೇಳುತ್ತಿದ್ದಾರೆ ನೋಡಿ..  

ಕೆಲವೊಮ್ಮೆ ಸೀರಿಯಲ್​ಗಳಲ್ಲಿ ಏನೋ ಟ್ವಿಸ್ಟ್​ ಮಾಡಲು ಹೋಗಿ ವಾಸ್ತವಕ್ಕೆ ದೂರವಾದದ್ದು ಮಾಡುವುದು ಉಂಟು. ಅದೇನೂ ಹೊಸತಲ್ಲ. ಟಿಆರ್​ಪಿಗೋಸ್ಕರ ಒಂದಿಷ್ಟು ಮಾಡಲೇಬೇಕಾಗುತ್ತದೆ. ಹಾಗೆ ಮಾಡಿದಾಗಲೆಲ್ಲಾ ಸೋಷಿಯಲ್​ ಮೀಡಿಯಾಗಳಲ್ಲಿ ಟ್ರೋಲ್​  ಆಗುವುದೂ ಮಾಮೂಲು. ಒಂದಷ್ಟು ಜನ ಟ್ರೋಲ್​ ಮಾಡಿದರೆ, ಇನ್ನೊಂದಿಷ್ಟು ಮಂದಿಗೆ ಆ ವಿಷಯದ ಬಗ್ಗೆ ಗಮನ ಹೋಗುವುದಿಲ್ಲ, ಸೀರಿಯಲ್​ ಚೆನ್ನಾಗಿದೆ, ಅದರಿಂದ ಒಂದಿಷ್ಟು ಮೆಸೇಜ್​ ಪಾಸ್​  ಆಗ್ತಿದೆ ಎನ್ನೋದಷ್ಟೇ ಮುಖ್ಯವಾದದ್ದು. ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿಯೂ ಹಾಗೆಯೇ ಆಗಿದೆ. ಇಲ್ಲಿ ಭಾಗ್ಯಳನ್ನು ಸ್ವಲ್ಪ ಅತಿ ಎನ್ನಿಸುವಷ್ಟು ತೋರಿಸಲಾಗುತ್ತಿದೆ. ಅದಕ್ಕೆ ಕಾರಣ, ತಾಂಡವ್​ನಂಥ ಗಂಡಂದಿರಿಗೆ ಬುದ್ಧಿ ಬರಲಿ, ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನನ್ನಾದರೂ ಮಾಡಲು ಸಾಧ್ಯ ಎನ್ನುವುದಕ್ಕಾಗಿ. ಅದಕ್ಕಾಗಿಯೇ ವಾಸ್ತವಕ್ಕೆ ದೂರ ಎನಿಸುವ ಕೆಲವು ವಿಷಯಗಳನ್ನು ತುರುಕಲಾಗಿದೆ.

ಅಷ್ಟಕ್ಕೂ ಇದೀಗ ಭಾಗ್ಯ ಸನ್ಮಾನ ಪಡೆದುಕೊಂಡು ವಾಪಸಾಗುತ್ತಿದ್ದಾಳೆ. ತಾಂಡವ್​ ಕೂಡ ತನ್ನ ಕಾರಿನಲ್ಲಿ ಅಲ್ಲಿಗೆ ಬಂದಿದ್ದಾನೆ. ಭಾಗ್ಯಳ ಇಡೀ ಫ್ಯಾಮಿಲಿ ಬಂದಿದೆ. ಭಾಗ್ಯಳನ್ನು ಕಂಡರೆ ಸಾಧ್ಯವಾದಷ್ಟು ಕುಹಕವಾಡುತ್ತಲೇ ಖುಷಿ ಪಡುವವ ಗಂಡ ತಾಂಡವ್​. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂಥ ಕ್ಯಾರೆಕ್ಟರ್​ ಆತನದ್ದು. ಮನೆಗೆ ವಾಪಸಾಗುವ ಸಮಯದಲ್ಲಿ ಎಲ್ಲರೂ ಹೊರಗೆ ಬಂದಾಗ ಕಾರಿನ ಎದುರು ನಿಂತಿರುವ ತಾಂಡವ್​, ಭಾಗ್ಯಳಿಗೆ ತಮಾಷೆ  ಮಾಡುತ್ತಾನೆ. ಮೇಡಂ ಅವರು ಈಗ ಯಾವುದರಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ ಎಂದು ತಮಾಷೆ ಮಾಡುತ್ತಾನೆ. ತನ್ನ ಬಳಿ ಕಾರಿದೆ. ಅವಳ ಬಳಿ ಇಲ್ಲ ಎನ್ನುವುದು ಆತನ ಮಾತಿನ ಅರ್ಥ. ಅಷ್ಟೊತ್ತಿಗಾಗಲೇ ಭಾಗ್ಯಳಿಗಾಗಿ ಹೋಟೆಲ್​ ಕಾರು ಬರುತ್ತದೆ. ಇನ್ನು ಮುಂದೆ ಇದು ನಿಮ್ಮದೇ ಕಾರು ಎಂದು ಆಕೆಗೆ ಅದನ್ನು ಗಿಫ್ಟ್​ ಕೊಡಲಾಗುತ್ತದೆ. ಸ್ಟಾರ್​ ಹೋಟೆಲ್​ಗಳಲ್ಲಿ ಮೇನ್​  ಶೆಫ್​ಗಳಿಗೆ ಸಾಮಾನ್ಯವಾಗಿ ಇಂಥ ಸೌಲಭ್ಯ ಕೊಡುವುದು ಉಂಟು. ಅದನ್ನೇ ಇಲ್ಲಿ ಕೊಡಲಾಗಿದೆ.

ಜ್ವರದಲ್ಲೇ ಸೆಟ್​ಗೆ ಹೋಗಿದ್ದೆ- ಮೊದಲ ಬಾರಿ ಉಪೇಂದ್ರ ನೋಡಿ ಅವಳು ಬೇಕು ಅಂದ್ರು... ಪ್ರಿಯಾಂಕಾ ಮೆಲುಕು

ಆದರೆ, ಇಲ್ಲಿ ಟ್ರೋಲಾಗಿರುವುದು ಏನೆಂದರೆ, ತಾಂಡವ್​ ಯಾವುದರಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಯಾಕೆ ಹೋಗಲು ಕಾರೇ ಬೇಕಾ? ಬೆಂಗಳೂರಿನಲ್ಲಿ  ಆಟೋ-ಕ್ಯಾಬ್​ಗಳಿಗೆ ಕೊರತೆ ಇವೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಭಾಗ್ಯಳನ್ನು ಅತಿಯಾಗಿ ತೋರಿಸಲು ಹೋಗಿ ಇಂಥ ಕ್ಷುಲ್ಲಕ ವಿಷಯ ಯಾಕೆ ಮರೆಯುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತಷ್ಟು ಮಂದಿ ಭಾಗ್ಯಳಿಗಾಗಿ ಕಾರು ಬಂದದ್ದನ್ನು ನೋಡಿ, ಒತ್ತು ಶ್ಯಾವಿಗೆ ಕಲಿತರೆ ಕಾರೆಲ್ಲಾ ಸಿಗತ್ತಾ ಎಂದು ತಮಾಷೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಫೆಸಿಲಿಟಿ ಸಿಗುತ್ತದೆ ಎಂದರೆ ನಾನೂ ಒತ್ತು ಶ್ಯಾವಿಗೆ ಕಲಿಯುತ್ತಿದ್ದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಒಂದಿಷ್ಟು ಮಂದಿ ಕಾಲೆಳೆಯುವುದನ್ನೇ ಕಾಯುತ್ತಿರುತ್ತಾರೆ. 
 

 ಅಷ್ಟಕ್ಕೂ, ಈ ಸೀರಿಯಲ್​ ಕುರಿತು ಹೇಳುವುದಾದರೆ, ಎಲ್ಲಾ ಅಡೆತಡೆಗಳನ್ನು ಮೀರಿ ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಇಂಗ್ಲಿಷ್​ ಬರದಿದ್ದರೂ ಅಡುಗೆ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ನಿನ್ನಿಂದ ಐದು ಪೈಸೆಯೂ ದುಡಿಯಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿದ್ದ ಗಂಡ ತಾಂಡವ್​ಗೆ ತಿರುಗೇಟು ನೀಡುವ ರೀತಿಯಲ್ಲಿ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವಳನ್ನು ಅಭಿನಂದಿಸಲು ಶ್ರೀನಾಥ್​ ಅವರ ಎಂಟ್ರಿಯಾಗಿದೆ. ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಇದರಿಂದ ಸ್ಫೂರ್ತಿ ಪಡೆಯುವ ಅದೆಷ್ಟೋ ಜನರು ಇದ್ದಾರೆ. ಅದಕ್ಕೆ ಉದಾಹರಣೆಯಾಗಿ ಭಾಗ್ಯಳನ್ನು ನೋಡಿ ಕೆಲವು ಮಹಿಳೆಯರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಇದೀಗ ಮಹಿಳೆ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯ ಎನ್ನುವ ಭಾಗ್ಯ ಹಲವು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾಳೆ.
 

ಸೀತಾರಾಮರ ಮದ್ವೆ ಮೊದಲು ಮುಗಿಯತ್ತೋ, ಅಂಬಾನಿ ಜೋಡಿಯದ್ದೊ? ಹೀಗೊಂದು ಚಾಲೆಂಜ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?