ರೇಖಾ ನಾಯರ್ ಅವರು ರಾಮ್ ನಿಶಾಂತ್ ಜೊತೆಗೆ ಕಾದಲ್ ಕೊಟ್ಟೈ ಎಂಬ ಟಿವಿ ಸೀರಿಯಲ್ ಮೂಲಕ ಕಿರುತೆರೆಗೆ ಬಂದಿದ್ದರು. ಇತ್ತೀಚೆಗೆ ಅವರು ನೀಡಿರುವ ಹೇಳಿಕೆ ಸಾಕಷ್ಟು ಸದ್ದು ಮಾಡುತ್ತಿದೆ.
ಚೆನ್ನೈ (ಮೇ.25): ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಖ್ಯಾತ ನಟಿಯಾಗಿರುವ ರೇಖಾ ನಾಯರ್, ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ಗಳಿಂದಲೇ ಹೆಸರುವಾಸಿ. ಇತ್ತೀಚೆಗೆ ಟಿವಿ ಸೀರಿಯಲ್‌ಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ, ಹುಡುಗರು ಸೊಂಟದ ಮೇಲೆ ಕೈಹಾಕಿದರೆ, ಹುಡುಗಿಯರು ಎಂಜಾಯ್ ಮಾಡಬೇಕು ಎಂದು ಅವರು ಹೇಳಿದ್ದ ಮಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟೀಕರಣವನ್ನೂ ಅವರು ನೀಡಿದ್ದರು. ಯಾವುದೇ ವಿಚಾರವನ್ನಾಗಿ ಅತ್ಯಂತ ಮುಕ್ತವಾಗಿ ಮಾತನಾಡುವ ಕಾರಣಕ್ಕಾಗಿಯೇ ಅವರು ಸಖತ್ ಫೇಮಸ್ ಆಗಿದ್ದಾರೆ. ಸಾಮಾಜಿಕ ಸಮಸ್ಯೆಗಳಂಥ ವಿಚಾರಗಳ ಬಗ್ಗೆಯೂ ಅವರು ನೀಡುವ ಸ್ಟೇಟ್‌ಮೆಂಟ್‌ಗಳು ವೈರಲ್ ಆಗುತ್ತದೆ. ಇನ್ನು ವಿವಾದಿತ ವಿಚಾರಗಳ ಬಗ್ಗೆ ಅವರು ನೀಡುವ ಸಾಮಾನ್ಯ ಹೇಳಿಕೆ ಕೂಡ ನ್ಯೂಸ್ ಆಗುತ್ತದೆ.
ಇತ್ತೀಚೆಗೆ ರೇಖಾ ನಾಯರ್ ಕುರಿತಾಗಿ ಅಚ್ಚರಿ ಎನಿಸುವಂಥ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈಗಾಗಲೇ ಮದುವೆಯಾಗಿರುವ ಶಾಸಕರೊಬ್ಬರನ್ನು ರೇಖಾ ನಾಯರ್ ಮದುವೆಯಾಗಿದ್ದಾರೆ ಎನ್ನುವ ರೂಮರ್ ದೊಡ್ಡ ಮಟ್ಟದಲ್ಲಿ ಹರಿದಾಟಿತ್ತು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಮೇಲೆ ಇದು ಕ್ಷಣ ಮಾತ್ರದಲ್ಲಿ ವೈರಲ್ ಆಗಿತ್ತು. ಈಗ ವೈರಲ್ ರೂಮರ್ ಬಗ್ಗೆ ಮಾತನಾಡಿರುವ ರೇಖಾ ನಾಯರ್, 'ನೀವು ಮಾತನಾಡುತ್ತಿರುವ ಆ ಎಂಎಲ್‌ಎ ನನಗೆ ಆತ್ಮೀಯ ಸ್ನೇಹಿತ. ಕೆಲವೊಮ್ಮೆ ನಾವಿಬ್ಬರೂ ಬೆಳಗ್ಗೆ ಒಟ್ಟಿಗೆ ವಾಕಿಂಗ್ ಹೋಗುತ್ತೇವೆ. ಜೊತೆಯಾಗಿಯೇ ರನ್ನಿಂಗ್ ಕೂಡ ಮಾಡುತ್ತೇವೆ. ನಾವಿಬ್ಬರೂ ಒಂದೇ ಏರಿಯಾದಲ್ಲಿರುವ ಕಾರಣ, ಅವರ ಕುಟುಂಬದ ಸದಸ್ಯರು ಕೂಡ ನನಗೆ ಆತ್ಮೀಯರಾಗಿದ್ದಾರೆ. ನಾನು ಎಲ್ಲರೊಂದಿಗೂ ಉತ್ತಮ ಸಂಬಂಧವನ್ನೇ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಇಷ್ಟು ಮಾತ್ರಲ್ಲದೆ, ತಮಿಳುನಾಡಿನ ಹಲವು ಶಾಸಕರು ಹಾಗೂ ಸಚಿವರ ಜೊತೆ ನನಗೆ ಕ್ಲೋಸ್ ರಿಲೇಷನ್‌ಷಿಪ್ ಇದೆ ಎಂದೂ ತಿಳಿಸಿದ್ದಾರೆ. ಇನ್ನು ಮದುವೆಯ ರೂಮರ್ ಬಗ್ಗೆಯೇ ಪ್ರಶ್ನೆ ಮಾಡಿದಾಗ, ಈ ಪ್ರಶ್ನೆಯನ್ನ ನೀವು ನನಗೆ ಯಾಕೆ ಕೇಳುತ್ತಿದ್ದೀರಿ? ನೀವು ಶಾಸಕರಿಗೆ ಈ ಪ್ರಶ್ನೆಯನ್ನು ಕೇಳಿ ಎಂದು ಹೇಳಿದ್ದಾರೆ. ಆದರೆ ರೇಖಾ ನಾಯರ್ ಮದುವೆಯಾಗಿದ್ದಾರೆ ಎನ್ನಲಾಗಿರುವ ಶಾಸಕ ಯಾರು ಅನ್ನೋದು ಮಾತ್ರ ಈವರೆಗೂ ಗೊತ್ತಾಗಿಲ್ಲ.
ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್ ಕೊಡಬೇಡಿ, ಎಂಜಾಯ್ ಮಾಡಿ: ನಟಿ ರೇಖಾ ನಾಯರ್ ಮಾತು!
ರೇಖಾ ನಾಯರ್ ಅವರು ರಾಮ್ ನಿಶಾಂತ್ ಜೊತೆಗೆ ಕಾದಲ್ ಕೊಟ್ಟೈ ಎಂಬ ಟಿವಿ ಧಾರಾವಾಹಿಯ ಮೂಲಕ ಟಿವಿ ಲೋಕಕ್ಕೆ ಪಾದಾರ್ಪಣೆ ಮಾಡಿದರು. 2022 ರಲ್ಲಿ, ಅವರು ಪಾರ್ತಿಬನ್ ರಾಧಾಕೃಷ್ಣನ್ ನಿರ್ದೇಶನದ ಇರವಿನ್ ನಿಜಲ್ ಚಿತ್ರದಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಅವರು ಬ್ರಿಜಿಡಾ ಸಾಗಾ, ವರಲಕ್ಷ್ಮಿ ಶರತ್‌ಕುಮಾರ್, ರೋಬೋ ಶಂಕರ್, ಪ್ರವೀಣ್ ಕುಮಾರ್, ಆನಂದ ಕೃಷ್ಣನ್ ಮತ್ತು ಎಂ.ಜೆ.ಶ್ರೀರಾಮ್ ಅವರೊಂದಿಗೆ ನಟಿಸಿದ್ದಾರೆ.
undefined
'ಸೊಂಟದ ವಿಷ್ಯ' ಮಾತಿಗೆ ಫುಲ್ ಟ್ರೋಲ್, ಕವಿತೆ ಬರೆದು ಸೈಲೆಂಟ್ ಮಾಡಿದ ಬಿಗ್ ಬಾಸ್ ಸ್ಪರ್ಧಿ!
ರೇಖಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಪ್ರಸಿದ್ಧರಾಗಿದ್ದಾರೆ. ಕಳೆದ ವರ್ಷದ ಸಂದರ್ಶನವೊಂದರಲ್ಲಿ, ಅವರು ಮಹಿಳೆಯರ ಡ್ರೆಸ್ಸಿಂಗ್ ಶೈಲಿಯನ್ನು ಬಹಿರಂಗವಾಗಿ ಟೀಕಿಸಿದರು. ಅವರ ಸಮಸ್ಯೆಗಳಿಗೆ ಮಹಿಳೆಯರೇ ಮುಖ್ಯ ಕಾರಣ ಎಂದು ತಿಳಿಸಿದರು. ಪುರುಷರನ್ನು ಯಾವಾಗಲೂ ದೂಷಿಸಲಾಗುವುದಿಲ್ಲ ಎಂದು ಅವರು ಹೇಳಿದರು. ರೇಖಾ ಅವರು ಖ್ಯಾತ ನಟ ಬೈಲ್ವಾನ್ ರಂಗನಾಥನ್ ಅವರೊಂದಿಗೆ ಸಾರ್ವಜನಿಕವಾಗಿ ಜಗಳವಾಡಿದ್ದರು. ಹಿಂದಿನ ಸಂದರ್ಶನವೊಂದರಲ್ಲಿ, ನಟ ಸತ್ತರೆ ತಾನು ಸಂತೋಷಪಡುತ್ತೇನೆ ಎಂದು ಹೇಳಿದ್ದರು. ಆಕೆಯ ಕಾಮೆಂಟ್‌ಗಳಿಗೆ ನೆಟಿಜನ್‌ಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ವಿವಾದಗಳ ಹೊರತಾಗಿಯೂ, ರೇಖಾ ನಾಯರ್ ತಮಿಳು ಚಿತ್ರರಂಗದಲ್ಲಿ ಪ್ರಮುಖ ಫೇಸ್ ಆಗಿದ್ದಾರೆ. ಹಿಂದು-ಮುಂದು ನೋಡದೆ ಆಕೆ ಮಾತನಾಡುವ ಶೈಲಿ ಹಲವು ಬಾರಿ ವಿವಾದಕ್ಕೆ ಕಾರಣವಾಗಿದೆ. ಇನ್ನು ಆಕೆಯ ಅಭಿಮಾನಿಗಳು ಇದೇ ಕಾರಣಕ್ಕಾಗಿಯೇ ಅವರನ್ನು ಮೆಚ್ಚಿದ್ದಾರೆ.