20 ವರ್ಷ ಟಿವಿ- ಸಿನಿಮಾ ಜರ್ನಿ; ವಿಶೇಷ ಕೇಕ್ ಜೊತೆ ದ್ವೇಷಿಸುವವರಿಗೂ ಪತ್ರ ಬರೆದ ನಟಿ ಶ್ವೇತಾ ಚಂಗಪ್ಪ

Published : Jan 27, 2023, 05:19 PM IST
20 ವರ್ಷ ಟಿವಿ- ಸಿನಿಮಾ ಜರ್ನಿ; ವಿಶೇಷ ಕೇಕ್ ಜೊತೆ ದ್ವೇಷಿಸುವವರಿಗೂ ಪತ್ರ ಬರೆದ ನಟಿ ಶ್ವೇತಾ ಚಂಗಪ್ಪ

ಸಾರಾಂಶ

20 ವರ್ಷ ಬಣ್ಣದ ಜರ್ನಿಯಲ್ಲಿ ಸಪೋರ್ಟ್ ಆಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ ನಟಿ ಶ್ವೇತಾ ಚಂಗಪ್ಪ.....

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಶ್ವೇತಾ ಚಂಗಪ್ಪ ಇಂದು ಸಿನಿಮಾ ಮತ್ತು ಟಿವಿ ಜರ್ನಿ ಆರಂಭಿಸಿ 20 ವರ್ಷ ಪೂರೈಸಿದ್ದಾರೆ. ವಿಭಿನ್ನವಾಗಿರುವ ಸಕ್ಟಮ್ ಡಿಸೈಮ್ ಮಾಡಿರುವ ಕೇಕ್‌ ಕಟ್ ಮಾಡಿದ್ದಾರೆ ಹಾಗೂ ಇನ್‌ಸ್ಟಾಗ್ರಾಂನ ಮೂಲಕ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಪ್ರೀತಿ ಕೊಟ್ಟವರಿಗೆ ಮಾತ್ರವಲ್ಲ ದ್ವೇಷಿಸಿದವರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಶ್ವೇತಾ ಪತ್ರ:

'ಟಿವಿ ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿ 20 ವರ್ಷಗಳ ಜರ್ನಿ ಪೂರೈಸಿರುವೆ. ನಿನ್ನೆಯಷ್ಟೇ ನನ್ನ ಜರ್ನಿ ಆರಂಭವಾಗಿದ್ದು ಅನಿಸುತ್ತಿದೆ. ನಂಬಲು ಅಸಾಧ್ಯ. ನನ್ನ ಸೂಪರ್ ಹಿಟ್ ಟಿವಿ ಪ್ರಾಜೆಕ್ಟ್‌ಗಳು ಸಾವಿರಾರು ಸಂಚಿಕೆಗಳನ್ನು ಪೂರೈಸಿದೆ. ಸುಮತಿ, ಕಾದಂಬರಿ, ಸುಕನ್ಯಾ, ಅರುಂಧತಿ, ಸಂಗೀತಾ, ತಾಮನೆ (ಕೊಡವ). 

ಏನಮ್ಮಿ ಒಂದ್ ಮಗು ಇದ್ರೂ ಇಷ್ಟೊಂದು ಹಾಟ್‌ ಆಗಿದ್ಯಾ?; ಶ್ವೇತಾ ಚಂಗಪ್ಪ ಲುಕ್‌ ಮೆಚ್ಚಿದ ನೆಟ್ಟಿಗರು

ಸೂಪರ್ ಹಿಟ್ ಸಿನಿಮಾಗಳಾದ ವರ್ಷ, ತಂಗಿಗಾಗಿ, ವೇದ. ರಾಜ್ಯ ಪ್ರಶಸ್ತಿ ಪಡೆದಿರುವ ನನ್ನ ಪುಟ್ಟುನ ಮನ.  ಸೂಪರ್ ಹಿಟ್ ಕಂಡ ನಾನ್ ಫಿಕ್ಷನ್ ಪ್ರಾಜೆಕ್ಟ್‌ಗಳಾದ ಬಿಗ್ ಬಾಸ್ ಸೀಸನ್ 2,ಹಾಕು ಹೆಜ್ಜೆ ಹಾಕು, ಕುಣಿಯೋಣ ಬಾರಾ, ಡ್ಯಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್. ನಿರೂಪಕಿಯಾಗಿ ನನ್ನ ಕೈಯಲ್ಲಿದ್ದ ಸೂಪರ್ ಹಿಟ್‌ ಪ್ರಾಜೆಕ್ಟ್‌ಗಳಾದ ದೀ, ಯಾರಿಗುಂಟು ಯಾರಿಗಿಲ್ಲ,  ಡ್ಯಾನ್ಸ್‌ ಡ್ಯಾನ್ಸ್‌ ಜ್ಯೂನಿಯರ್ಸ್‌, ಜೋಡಿ ನಂಬರ್ 1, ಸೂಪರ್ ಸ್ವೀನ್. ಇಷ್ಟು ಮಾತ್ರವಲ್ಲದೆ ಹೋಸ್ಟ್‌ ಮಾಡಿರುವ ಉದಯ ಅವಾರ್ಡ್‌, ಕುಟುಂಬ ಅವಾರ್ಡ್‌, ಅನುಬಂಧ ಅವಾರ್ಡ್‌, ಪರಿವಾರ ಅವಾರ್ಡ್ಸ್‌...ಹೀಗೆ ಪಟ್ಟಿ ಮುಂದುವರೆಯುತ್ತಿರುತ್ತದೆ....

ನನ್ನನ್ನು ನಂಬಿ ಈ ಪ್ರಾಜೆಕ್ಟ್‌ಗಳನ್ನು ನೀಡಿದ್ದಕ್ಕೆ ಪ್ರತಿಯೊಂದು ವಾಹಿನಿಯ ಮುಖ್ಯಸ್ಥರಿಗೆ ಧನ್ಯವಾದಗಳನ್ನು ತಿಳಿಸುವೆ. ನಮ್ಮ ನಿರ್ಮಾಪಕರು, ನಿರ್ದೇಶಕರು, ನಿರ್ಮಾಣ ತಂಡ, ಎಡಿಟರ್, ಮಾರ್ಕೆಟಿಂಗ್ ಟೀಂ, ಕೋ-ಸ್ಟಾರ್, ಕೋ- ಆಂಕರ್, ನನ್ನ ಮೇಕಪ್ ಮತ್ತು ಹೇರ್‌ ಸ್ಟೈಲ್ ಮಾಡುವವರು, ನನ್ನ ಅಸಿಸ್ಟೆಂಟ್‌ಗಳು ಮತ್ತು ಡ್ರೈವರ್‌ಗಳಿಗೆ ಧನ್ಯವಾದಗಳನ್ನು ತಿಳಿಸುವೆ. ನೀವೇಲ್ಲರೂ ನನ್ನ ಈ 20 ವರ್ಷಗಳ ಜರ್ನಿ ಪೂರೈಸಲು ಕಾರಣ.  

ಪತಿಗಿಂತ ನಾನೇ ಜಾಸ್ತಿ ರೊಮ್ಯಾಂಟಿಕ್; ಶ್ವೇತಾ ಚಂಗಪ್ಪಗೆ ವೇದಿಕೆ ಮೇಲೆ ಪ್ರಪೋಸ್‌ ಮಾಡಿದ ಕಿರಣ್!

ನನ್ನ ತಾಯಿಗೆ ಸ್ಪೆಷಲ್ ಥ್ಯಾಂಕ್ಸ್‌ ಏಕೆಂದರೆ ರಾಕ್ ಪಿಲ್ಲರ್ ರೀತಿ ನನ್ನ ಜರ್ನಿ ಬ್ಯೂಟಿಫುಲ್ ಆಗಿರಲು ಜೊತೆ ನಿಂತರು. ನನ್ನ ಕೆಲಸದ ಬಗ್ಗೆ ನಂಬಿಕೆ ಇಟ್ಟ ತಂದೆ, ಜೀವನದಲ್ಲಿ ನಾನು ಇಷ್ಟೆಲ್ಲಾ ಸಾಧನೆ ಮಾಡಲು ಧಾರಿ ಮಾಡಿಕೊಟ್ಟು ನನ್ನ ಶಕ್ತಿಯಾಗಿ ನಿಂತಿರುವ ನನ್ನ ಪತಿ ಕಿರಣ್, ನನ್ನನ್ನು ಪುಟ್ಟ ಏಂಜಲ್ ರೀತಿ ನೋಡಿಕೊಂಡಿದ್ದಾರೆ. ನನ್ನ ಮಗ ಜಿಯಾನ್ ಇಷ್ಟು ಚಿಕ್ಕ ವಯಸ್ಸಿಗೆ ಅಮ್ಮನನ್ನು ಅರ್ಥ ಮಾಡಿಕೊಂಡು ಆಕೆ ಕೆಲಸಕ್ಕೆ ಸಪೋರ್ಟ್ ಮಾಡುತ್ತಾರೆ. ನನ್ನ ಜರ್ನಿ ಆರಂಭದಿಂದ ನನ್ನ ಕೊನೆ ಉಸಿರು ಇರುವವರೆಗೂ ಸ್ನೇಹಿತರು ಜೊತೆಗಿರುತ್ತಾರೆ. ನನ್ನನ್ನು ದ್ವೇಷಿಸುವವರು ಅನೇಕ ರೀತಿಯಲ್ಲಿ ಸಪೋರ್ಟ್ ಮಾಡಿದ್ದಾರೆ ಹೀಗಾಗಿ ಅವರಿಗೆ ಮುಖ್ಯವಾಗಿ ಧನ್ಯವಾದಗಳನ್ನು ಹೇಳುವೆ.  ನಾನು ಪುಣ್ಯ ಮಾಡಿರುವೆ. ನನಗೆ ತುಂಬಾ ಪ್ರೀತಿ ಕೊಟ್ಟವರು ವೀಕ್ಷಕರು, ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳು. ನನ್ನ ಮೊದಲ ದಿನ ಜರ್ನಿಯಿಂದ ಸಪೋರ್ಟ್ ಮಾಡಿ ಆಶೀರ್ವಾದ ಮಾಡಿರುವುದು ನಾನು ಸದಾ ಋಣಿ. ಕೊನೆಯದಾಗಿ ನನಗೆ ನಾನೇ ಥ್ಯಾಂಕ್ಸ್‌ ಹೇಳಿಕೊಳ್ಳಬೇಕು. ಏಕೆಂದರೆ ನನ್ನ ಮೇಲೆ ನಾನು ನಂಬಿಕೆ ಇಟ್ಟ ಕಾರಣ ಇಷ್ಟು ಸಾಧಿಸಲು ಸಾಧ್ಯವಾಗಿದ್ದು.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಮನೆಯಲ್ಲಿ ಬಯಲಾಯ್ತು ಸ್ಪರ್ಧಿಯ ಕರಾಳ ರಹಸ್ಯ! 12 ಬಾರಿ ಪ್ರೇಯಸಿಗೆ ವಂಚನೆ
ಬಿಗ್‌ ಬಾಸ್‌ಗೆ ಬಂದ ಅವಕಾಶವನ್ನು ಮೂರು ಬಾರಿ ತಿರಸ್ಕರಿಸಿದ್ದೆ: ಕೊನೆಗೂ ಕಾರಣ ತಿಳಿಸಿದ ಜ್ಯೋತಿ ರೈ!