
ಕನ್ನಡ ಕಿರುತೆರೆಯ ಇತಿಹಾಸದಲ್ಲಿ 'ಸ್ಟಾರ್ ಸುವರ್ಣ'ವು ಹೊಸತನದ ಛಾಪನ್ನು ಮೂಡಿಸುತ್ತಲೇ ಬರುತ್ತಿದೆ. ಪ್ರಸ್ತುತ ನಾಡಿನ ನಾರಿಮಣಿಯರಿಗಾಗಿ ಮೂಡಿ ಬರುತ್ತಿರುವ 'ಸುವರ್ಣ ಸೂಪರ್ ಸ್ಟಾರ್' ಕಾರ್ಯಕ್ರಮವು ಇದೀಗ 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಇದೇ ಶನಿವಾರ, 09 ಫೆಬ್ರವರಿ 2024ರಂದು, ಸಂಜೆ 4.00 ರಿಂದ ರಾತ್ರಿ 7.00 ಗಂಟೆಯವರೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ ಮೂರು ಗಂಟೆಗಳ ಮಹಾ ಸಂಭ್ರಮ!
2020ರಲ್ಲಿ ಕರ್ನಾಟಕದ ಮಹಿಳೆಯರಿಗಾಗಿ, ಅವರಲ್ಲಿರುವ ಪ್ರತಿಭೆ, ಸಾಹಸ, ನಾವು ಯಾರಿಗೂ ಕಮ್ಮಿಯಿಲ್ಲ ಎಂಬ ಛಲ ಹಾಗು ನೊಂದವರಿಗಾಗಿ ಸ್ಫೂರ್ತಿ ನೀಡಲು ಸಜ್ಜಾದ ಮಹಾ ವೇದಿಕೆ 'ಸುವರ್ಣ ಸೂಪರ್ ಸ್ಟಾರ್'. ದಿನದಿಂದ ದಿನಕ್ಕೆ ನೋಡುಗರ ಮನಗೆದ್ದು '2ನೇ ಸೀಸನ್'ನೊಂದಿಗೆ ಮುನ್ನುಗ್ಗುತ್ತಿದೆ. ಈ ಮಹೋನ್ನತ ಕಾರ್ಯಕ್ರಮದ ನಿರೂಪಕಿ ಪ್ರೇಕ್ಷಕರ ನೆಚ್ಚಿನ ನಟಿ ಶಾಲಿನಿ.
ಕರ್ನಾಟಕದ ಮೂಲೆ ಮೂಲೆಯಿಂದ ಬಂದ ಮಹಿಳೆಯರ ಜೊತೆ ತಾನು ಒಬ್ಬಳಂತಾಗಿ, ಅವರೊಂದಿಗೆ ಬೆರೆತು, ಬದುಕನ್ನು ಸಂಭ್ರಮಿಸುವುದರ ಜೊತೆ ಇಡೀ ಕರ್ನಾಟಕದ ಮನೆ ಮಂದಿಯ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾರೆ. ಇನ್ನು, ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಅಂದ್ರೆ ಪ್ರತಿ ದಿನವೂ ಶಾಲಿನಿ ಧರಿಸುವ ವಿಶಿಷ್ಟ ಹಾಗೂ ವಿಭಿನ್ನವಾಗಿ ಡಿಸೈನ್ ಮಾಡಿದ ಬ್ಲೌಸ್‌ಗಳಿಗೆ ಅಂತಲೇ ಒಂದಷ್ಟು ಅಭಿಮಾನಿ ವರ್ಗವಿದೆ.
ಶುರುವಾಗ್ತಿದೆ ಐಶ್ವರ್ಯ ಪಿಸ್ಸೆ-ನಾಗಾರ್ಜುನ ಜೋಡಿ 'ಕಸ್ತೂರಿ' ಕಲರವ; ಸೋಮವಾರದಿಂದ ನೋಡಿ ಸ್ಟಾರ್ ಸುವರ್ಣ!
ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾವಿರ ಸಂಚಿಕೆಗಳ ಸಂಭ್ರಮದ ಹಬ್ಬದಲ್ಲಿ ನಟಿಯರಾದ ಗಾನವಿ, ಮಾನ್ವಿತಾ ಕಾಮತ್ ಹಾಗು ಶ್ವೇತಾ ಶ್ರೀವಾಸ್ತವ್ ರವರು ಭಾಗಿಯಾಗಿದ್ದು ವೀಕ್ಷಕರಿಗಾಗಿ ಅದ್ಭುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.