ತೆರೆದ ಕಾರಲ್ಲಿ, ಬಿಗ್​ಬಾಸ್​ ಟ್ರೋಫಿ ಜೊತೆಯಲಿ ಫ್ಯಾನ್ಸ್​ಗೆ ದರ್ಶನ ಕೊಟ್ಟ ಕಾರ್ತಿಕ್​: ಹೀಗಿತ್ತು ಸ್ವಾಗತ...

Published : Feb 08, 2024, 03:33 PM IST
ತೆರೆದ ಕಾರಲ್ಲಿ, ಬಿಗ್​ಬಾಸ್​ ಟ್ರೋಫಿ ಜೊತೆಯಲಿ ಫ್ಯಾನ್ಸ್​ಗೆ ದರ್ಶನ ಕೊಟ್ಟ ಕಾರ್ತಿಕ್​: ಹೀಗಿತ್ತು ಸ್ವಾಗತ...

ಸಾರಾಂಶ

ತೆರೆದ ಕಾರಲ್ಲಿ, ಬಿಗ್​ಬಾಸ್​ ಟ್ರೋಫಿ ಜೊತೆಯಲಿ ಚಾಮುಂಡಿ ಬೆಟ್ಟಕ್ಕೆ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಭೇಟಿ ಕೊಟ್ಟಿದ್ದು, ಅಭಿಮಾನಿಗಳು ಸ್ವಾಗತಿಸಿದ್ದು ಹೀಗೆ ನೋಡಿ...  

ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ. ಬಿಗ್​ಬಾಸ್​ ಮನೆಯಲ್ಲಿ ನಡೆಯುವುದು ಒಂದಿಷ್ಟು ಪೂರ್ವ ನಿಯೋಜಿತವೇ ಎಂಬ ಆರೋಪ ಇದ್ದರೂ  ಅಲ್ಲಿ ನಡೆಯುವುದೆಲ್ಲವೂ, ಎಲ್ಲ ಸನ್ನಿವೇಶಗಳು  ನಿಜವೆಂದು ನಂಬಿ ನೋಡುವ ಬಹುದೊಡ್ಡ ವರ್ಗವೇ ಇದೆ. ಆದ್ದರಿಂದಲೇ ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.  ಕಾಂಟ್ರವರ್ಸಿ ಮಾಡಿಕೊಂಡು ಫೇಮಸ್​ ಆದವರೇ ಬಿಗ್​ಬಾಸ್​ ಮನೆಯೊಳಕ್ಕೆ ಹೋದರೂ ಹೊರಗೆ ಬಂದ ಮೇಲೆ ಅಭಿಮಾನಿಗಳ ಸಂಖ್ಯೆ ದಿಢೀರ್​ ಏರಿಕೆ ಆಗುವುದೂ ಇದೆ. ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ. ಬಿಗ್​ಬಾಸ್​ ವಿನ್​ ಆಗಿ ಹೊರಗೆ ಹೋದರೆ, ಯಾವುದೋ ಯುದ್ಧ ಗೆದ್ದು, ದೇಶವನ್ನು ಉಳಿಸಿದ ಯೋಧರಂತೆ ಅವರನ್ನು ಸ್ವಾಗತಿಸುವುದು ಇದೆ. ​ಕೆಲವೊಮ್ಮೆ ಯೋಧರಿಗೂ ಸಿಗದ ಮನ್ನಣೆಯೂ ಬಿಗ್​ಬಾಸ್​ ವಿಜೇತರಿಗೆ ಸಿಗುವುದು ಇದೆ. 

ಅವರು ನಿನ್ನೆ ಅಂದ್ರೆ ಫೆಬ್ರುವರಿ 7ರಂದು ಕಾರ್ತಿಕ್​ ಚಾಮುಂಡಿ  ಬೆಟ್ಟಕ್ಕೆ ಭೇಟಿ ನೀಡಿದ್ದರು.   ಬಿಗ್​ಬಾಸ್​ ಟ್ರೋಫಿ ಜೊತೆಗೆ ತೆರೆದ ಕಾರಿನಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.   ಯಾವುದೇ ಫೇಮಸ್​ ನಟರು ಬಂದರೆ ಅವರ ಅಭಿಮಾನಿಗಳು ಹೇಗೆಲ್ಲಾ ನಡೆದುಕೊಳ್ಳುತ್ತಾರೆಯೋ ಅದೇ ರೀತಿ ಅಭಿಮಾನಿಗಳು ಕಾರ್ತಿಕ್​ ಅವರಿಗೆ ಮುತ್ತಿಗೆ ಹಾಕಿದ್ದಾರೆ. ಎಲ್ಲರತ್ತ ಕೈಬೀಸಿ ಬಂದಿರುವ ಕಾರ್ತಿಕ್​ ಕಂಡು ಜೈಜೈಕಾರ ಮೊಳಗಿದೆ. ಅಭಿಮಾನಿಗಳು ಕಾರ್ತಿಕ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

ಅಂದಹಾಗೆ,  ಬಿಗ್​ಬಾಸ್​ ಸೀಸನ್​ 10 ವಿನ್ನರ್​ ಕಾರ್ತಿಕ್​ ಮಹೇಶ್​ ಅವರು ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಆರಂಭದಲ್ಲಿ ಬಿಗ್​ಬಾಸ್​ ಅನ್ನು ಒಪ್ಪಿಕೊಳ್ಳದೇ ಕೊನೆಕ್ಷಣದಲ್ಲಿ ಒಪ್ಪಿಕೊಂಡು ಹೋಗಿದ್ದ ಕಾರ್ತಿಕ್​ ಅವರಿಗೆ ಈ ಗೆಲುವು ವಿಶೇಷ ಅನುಭವವನ್ನೂ ನೀಡಿದೆ. ಬಿಗ್​ಬಾಸ್​ ಮನೆಯೊಳಕ್ಕೆ ಹಾಗೂ ವಿನ್​ ಆಗಿ ಮನೆಯ ಹೊರಗೆ ಬಂದ ಮೇಲೆ ಅವರ ಜೀವನದಲ್ಲಿ ಆಗಿರುವ ಹಲವು ಬದಲಾವಣೆಗಳ ಕುರಿತು ಕಾರ್ತಿಕ್​ ಕಲರ್ಸ್​ ಕನ್ನಡ ವಾಹಿನಿಯ ಜೊತೆ ಈಚೆಗೆ ಮಾತನಾಡಿದ್ದರು.  


ಬಿಗ್ ಬಾಸ್ ಪ್ರಿಯರಿಗೆ ತಿಳಿದಿರುವಂತೆ,  ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ್ದರು ಕಾರ್ತಿಕ್ (Karthik). ಆದರೆ ಇವರ ಕೊನೆ ಕ್ಷಣದಲ್ಲಿ ಬಿಗ್​ಬಾಸ್​ ಒಪ್ಪಿಕೊಂಡಿದ್ದರು. ಈ ಕುರಿತು ಮಾಹಿತಿ ನೀಡಿದ್ದ ಕಾರ್ತಿಕ್​ ಅವರು, ಬಿಗ್​ಬಾಸ್​ನಲ್ಲಿ ನನಗೆ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಜೀವನವೇ ಬೇರೆಯಾಗಿದೆ. ಈ ಮೊದಲು ನಾನು ಅವಕಾಶ ಹುಡುಕಿಕೊಂಡು ಹೋಗಬೇಕಿತ್ತು. ಆದರೆ ಇದೀಗ ಅವಕಾಶವೇ ನನ್ನನ್ನು ಹುಡುಕಿಕೊಂಡು ಬರುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಬೇಕಾದಷ್ಟು ಕಷ್ಟಪಟ್ಟಿದ್ದೇನೆ. ಅದಕ್ಕೆಲ್ಲವೂ ಬಿಗ್​ಬಾಸ್​ ನನಗೆ ನೆರವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.  ಒಂದು ವೇಳೆ ನಾನು ಬಿಗ್​ಬಾಸ್​ ಒಪ್ಪಿಕೊಂಡಿರದೇ ಇದ್ದರೆ ಅದು ನನ್ನ ಜೀವನದ ಅತಿ ದೊಡ್ಡ ಪ್ರಮಾದ ಆಗುತ್ತಿತ್ತು. ಕೊನೆಯ ಘಳಿಗೆಯಲ್ಲಿ ಒಪ್ಪಿಕೊಂಡು ಒಳ್ಳೆಯದ್ದನ್ನು ಮಾಡಿದೆ ಎಂದರು.

ಎದ್ದು ಕುಣಿರೋ, ಬಿದ್ದು ಕುಣಿರೋ ಹಾಡಿನ ಜೊತೆ ಪ್ರತಾಪ್​ಗೆ ಮಹಾದೇಶ್ವರ ಬೆಟ್ಟದಲ್ಲಿ ಭರ್ಜರಿ ಸ್ವಾಗತ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?