ಅಮೃತಧಾರೆಯ ಪಾರ್ಥನಿಗೆ ಭೂಮಿಕಾ ತಂಗಿ ಮೇಲೆ ಲವ್ ಆಗಿದ್ದು, ಪ್ರೀತಿ ಹೇಳಿಕೊಂಡೇ ಬಿಟ್ಟಿದ್ದಾನೆ. ಈ ಪ್ರೀತಿಯ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.
ಪ್ರೀತಿ ಹೇಳಿ ಕೇಳಿ ಬರಲ್ಲ, ಅದು ಕುರುಡು, ತಂತಾನೇ ಆಗತ್ತೆ ಅನ್ನೋ ಮಾತಿದೆ. ಹಾಗಂತ ಕೈಯಲ್ಲಿ ಇಬ್ಬರಿಗೂ ಕೆಲ್ಸ ಇಲ್ಲಾ, ಬದುಕಲು ದುಡಿಮೆಯ ದಾರಿನೂ ಇಲ್ಲ ಅಂದ್ರೆ ಲವ್ ಮಾಡಿ ಏನ್ ಪ್ರಯೋಜನ ಅಂತಾನೋ ಕೇಳೋರು ಇದ್ದಾರೆ. ಹಾಗಿದ್ರೆ ಕೈಯಲ್ಲಿ ಕೆಲ್ಸ ಇಲ್ಲ ಅಂದ ಮಾತ್ರಕ್ಕೆ ಲವ್ ಮಾಡೋದು ತಪ್ಪಾ ಅಂತ ಕೇಳಿದ್ರೆ, ಹಲವರ ಬಳಿ ಇದಕ್ಕೆ ಉತ್ತರವಿಲ್ಲ. ಇನ್ನು ಕೆಲವರು, ಲವ್ ಮಾಡುವವರು ಮಿಲೇನಿಯರ್ ಆಗಿದ್ರೆ, ಮನೆಯಲ್ಲಿಯೇ ಸುಖದ ಸುಪತ್ತಿಗೆ ಕೊಳಿತಾ ಬಿದ್ದಿರುವಾಗ ನೌಕರಿ ಮಾಡುವ ಅಗತ್ಯವೇನು ಅಂತ ಕೇಳ್ತಾರೆ... ಒಟ್ಟಿನಲ್ಲಿ ಈ ಲವ್ ಅನ್ನೋದು ಒಂದು ರೀತಿಯ ಮಾಯೆಯೇ ಸರಿ.
ಅಂದ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಈ ಡಿಸ್ಕಷನ್ ಶುರುವಾಗಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ಗಾಗಿ. ಇದರ ಪ್ರೊಮೋ ರಿಲೀಸ್ ಆಗಿದೆ. ಇದರಲ್ಲಿ ನಾಯಕ, ಕೋಟ್ಯಧಿಪತಿ ಗೌತಮ್ ಸಹೋದರ ಪಾರ್ಥ, ನಾಯಕಿ ಮಿಡ್ಲ್ಕ್ಲಾಸ್ ಫ್ಯಾಮಿಲಿಯ ಭೂಮಿಕಾ ತಂಗಿ ಜೊತೆ ಲವ್ ಶುರುವಿಟ್ಟುಕೊಂಡಿದ್ದಾನೆ. ಪ್ರೀತಿ ಹೇಳಿಕೊಂಡಾಯ್ತು ಪಾರ್ಥ! ಪ್ರೀತಿ ಹಕ್ಕಿಗಳ ಮನದಲ್ಲೀಗ ಮೊಹಬ್ಬತ್ ಎನ್ನುವ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ ಬಿಗ್ಬಾಸ್ನಿಂದ ಬೇಗ ಹೊರಬಂದದ್ದೇಕೆ? ಕೆಲವೇ ದಿನ ಇದ್ದ ಭಾಗ್ಯಶ್ರೀ ಹೇಳಿದ್ದೇನು?
ತನ್ನ ಅಂತಸ್ತಿಗೆ ತಕ್ಕಂತೆ ಪಾರ್ಥ ಒಲವಿನ ಉಡುಗೊರೆ ನೀಡುವ ಮೂಲಕ ಪ್ರೇಯಸಿಗೆ ಸರ್ಪ್ರೈಸ್ ಮಾಡಿದ್ದಾನೆ. ಮೊದಲೇ ಪಾರ್ಥನ ಮೇಲೆ ಮನಸ್ಸು ನೆಟ್ಟಿದ್ದ ಭೂಮಿಕಾ ತಂಗಿಗೂ ಇದೇ ಬೇಕು. ಇವರ ಲವ್ ಸ್ಟೋರಿ ಶುರುವಾಗಿದೆ. ಸಿನಿಮೀಯ ಶೈಲಿಯಲ್ಲಿ ಭಾರಿ ಉಡುಗೊರೆ ಜೊತೆ ಪಾರ್ಥ ಲವ್ ಹೇಳಿಕೊಂಡಿದ್ದಾನೆ. ಇದರ ಪ್ರೊಮೋ ನೋಡಿದವರು ಈಗ ಚರ್ಚೆ ಶುರುಮಾಡಿದ್ದಾರೆ.
ಪಾರ್ಥಂಗೂ ಕೆಲ್ಸ ಇಲ್ಲ, ಇವಳಿಗೂ ಕೆಲ್ಸ ಇಲ್ಲ. ಲವ್ ಅಂತೆ ಲವ್ ಅಂತ ಕೆಲವರು ಹೇಳುತ್ತಿದ್ದರೆ, ಕೋಟ್ಯಧಿಪತಿ ಮನೆಯ ಒಡೆಯನಿಗೆ ಕೆಲ್ಸ-ಗಿಲ್ಸ ಯಾಕೆ ಅಂತ ಕೆಲವರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ತಾನು ಸ್ವಂತ ದುಡಿಯದೇ ಕುಟುಂಬದ ದುಡ್ಡಿನ ಮೇಲೆ ಸಂಸಾರ ಮಾಡೋಕೆ ಆಗತ್ತಾ? ಅದು ಸರಿನಾ? ಅಣ್ಣ ದುಡಿದು ಸಂಪಾದಿಸಿದ ದುಡ್ಡನ್ನು ಈ ರೀತಿ ಕೆಲ್ಸ ಇಲ್ಲದೇ ಈತ ಉಡಾಯಿಸಬಹುದಾ ಎನ್ನುವುದು ಇನ್ನು ಕೆಲವರ ಪ್ರಶ್ನೆ. ಇಂಥ ದೊಡ್ಡ ಮನೆಯವರಿಗೆ ಕೆಲ್ಸದ ಅವಶ್ಯಕತೆಯೇ ಇಲ್ಲ ಎನ್ನುತ್ತಾರೆ ಮತ್ತೆ ಕೆಲವರು. ಹಾಗಿದ್ರೆ ಕೈಯಲ್ಲಿ ಕೆಲ್ಸ ಇಲ್ಲದವನಿಗೆ ಲವ್ ಯಾಕೆ ಅನ್ನೋದು ಸರಿನಾ ಅಥ್ವಾ ಇಂಥ ದೊಡ್ಮನೆ ಮಕ್ಕಳಿಗೆ ಕೆಲ್ಸ ಯಾಕೆ ಅನ್ನೋದು ಸರಿನಾ ಅನ್ನುವುದೇ ಈ ತರ್ಕಕ್ಕೆ ನಿಲುಕದ್ದು.
ಗಂಡ ಗುಟ್ಟಾಗಿ ಇನ್ನೊಂದು ಮದ್ವೆಯಾದ್ರೆ ಪತ್ನಿಯಾದವಳಿಗೆ ಮನೆ ಮರ್ಯಾದೆ ಮುಖ್ಯನಾ ಅಥ್ವಾ..?