ಸುಶ್ಮಿತಾ ಜಗಪ್ಪ ವಿಚಾರದಲ್ಲಿ ಯಾಕೆ ಹೀಗೆಲ್ಲಾ ಮಾತನಾಡ್ತಾರೆ ನೆಟ್ಟಿಗರು!

By Santosh Naik  |  First Published Aug 12, 2024, 1:48 PM IST

sushmitha jagappa Trolled ಮಜಾ ಭಾರತದದ ಮೂಲಕ ದೊಡ್ಡ ಮಟ್ಟದ ಹೆಸರು ಸಂಪಾದಿಸಿರುವ ಕಿರುತೆರೆ ನಟಿ ಸುಶ್ಮಿತಾ ಜಗ್ಗಪ್ಪ ಕಳೆದ ವರ್ಷ ನವೆಂಬರ್‌ 20 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.


ನ್ನಡದ ಟಿವಿ ಆರ್ಟಿಸ್ಟ್‌ಗಳಾದ ಸುಶ್ಮಿತಾ ಹಾಗೂ ಜಗಪ್ಪ ಸೆಲಬ್ರಿಟಿ ಜೋಡಿ. ಮಜಾಭಾರತದ ಮೂಲಕ ಪ್ರಸಿದ್ಧಿಗೆ ಬಂದ ಈ ಜೋಡಿ ಕಳೆದ ವರ್ಷದ ನವೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಾಕಷ್ಟು ಶೋಗಳಲ್ಲಿ ಜೊತೆಯಾಗಿಯೇ ಭಾಗವಹಿಸಿದ್ದ ಜೋಡಿ, ವೇದಿಕೆಯ ಮೇಲೆ ಸಾಕಷ್ಟು ಬಾರಿ ಗಂಡ-ಹೆಂಡತಿ ಪಾತ್ರದಲ್ಲಿಯೇ ನಟಿಸಿದ್ದರು. ಇಬ್ಬರ ನಡುವಿನ ಪ್ರೀತಿಯನ್ನು ತುಂಬಾ ಸೀಕ್ರೆಟ್‌ ಆಗಿಯೇ ಇಟ್ಟಿದ್ದರು. ಮದುವೆಯಾಗುವ ಕೆಲವು ತಿಂಗಳ ಹಿಂದೆ, ಖಾಸಗಿ ಚಾನೆಲ್‌ನ ಶೋ ಒಂದರಲ್ಲಿಯೇ ಸುಶ್ಮಿತಾ ನೇರವಾಗಿ ಜಗ್ಗಪ್ಪನಿಗೆ ಆನ್‌ ಏರ್‌ಅಲ್ಲೇ ರಿಂಗ್‌ ತೋರಿಸಿ ಪ್ರಪೋಸ್‌ ಮಾಡಿದ್ದರು. ಜಗ್ಗಪ್ಪ ಕೂಡ ಇದನ್ನು ಒಪ್ಪಿಕೊಂಡು ಮದುವೆಯಾಗಿದ್ದರು. ಅದಾದ ಬಳಿಕ ಜಗ್ಗಪ್ಪ ಭರ್ಜರಿ ಬ್ಯಾಚುಲರ್ಸ್‌ ಅನ್ನೋ ರಿಯಾಲಿಟಿ ಶೋನ ವಿನ್ನರ್‌ ಕೂಡ ಆಗಿದ್ದರು. ಇತ್ತೀಚೆಗೆ ಗಾಂಧಿ ಬಜಾರ್‌ನಲ್ಲಿ ಸುಶ್ಮಿತಾ ಜಗ್ಗಪ್ಪ ಶಾಪಿಂಗ್‌ಗಾಗಿ ಬಂದಿದ್ದಾರೆ. ಈ ವೇಳೆ ಅವರ ಲುಕ್‌ ಬಗ್ಗೆ ಟ್ರೋಲ್‌ ಮಾಡಲಾಗುತ್ತಿದೆ. ಸಖತ್‌ ಮಾಡರ್ನ್‌ ಡ್ರೆಸ್‌ನಲ್ಲಿ ಬಂದಿದ್ದ ಆಕೆ, ಕತ್ತಲ್ಲಿ ತಾಳಿ ಧರಿಸಿರಲಿಲ್ಲ. ಇದೇ ಕಾರಣಕ್ಕೆ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ. ಒಟ್ಟಿನಲ್ಲಿ ನೆಟ್ಟಿಗರಿಗೆ ಯಾರು ಹೇಗಿದ್ದರೂ, ತಪ್ಪೇ ಎನ್ನುವಂತೆ ಮಾಡುತ್ತಾರೆ. 

ಬಿಳಿ ಬಣ್ಣದ ಡ್ರೆಸ್‌ನಲ್ಲಿ ಬಂದಿದ್ದ ಸುಶ್ಮಿತಾ ಜಗ್ಗಪ್ಪ ಅವರ ಕುತ್ತಿಗೆಯಲ್ಲಿ ತಾಳಿ ಇದ್ದಿರಲಿಲ್ಲ.  ಇತ್ತೀಚೆಗೆ ವಿವಾಹವಾದ ಅಂಬಾನಿ ಸೊಸೆಯೇ ಕತ್ತಲ್ಲಿ ತಾಳಿ ಹಾಕಿಕೊಂಡು ತಿರುಗಾಡುವಾಗ ನಿಮಗೆಲ್ಲ ಏನಾಗಿದೆ ಎಂದು ಯೂಸರ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಆದಷ್ಟು ಬೇಗ ನಿಮ್ಮಿಬ್ಬರ ಡೈವರ್ಸ್‌ ಆಗಲಿ ಎಂದೂ ಅಪಶಕುನ ನುಡಿದಿದ್ದಾರೆ.  'ಇವರಿಗೆಲ್ಲ ಸ್ವಲ್ಪ ಬೆಳೆದರೆ ಸಾಕು ತಾಳಿ ಏನು ಬೇಕಿಲ್ಲ ಬರೀ ಶೋಕಿ ಅಷ್ಟೆ ಮದ್ವೆ ಅಂದ್ರೆ ಕಾಟಾಚಾರ..' ಎಂದು ಕಾಮೆಂಟ್‌ ಮಾಡಿದ್ದಾರೆ.

'ಅಂತ ಅಂಬಾನಿ ಸೊಸೆನೆ ಪ್ಯಾರಿಸ್‌ಗೆ ಹೋದಾಗ ತಾಳಿ ತೆಗೆದಿರಲಿಲ್ಲ. ಇನ್ನ ನೀವ್‌ಗಳು ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿಯೋರು. ನೀವೆಲ್ಲ ಹೆಣ್ಣು ಕುಲಕ್ಕೆ ಕಂಟಕ ನೀವುಗಳು..' ಎಂದು ಸುಶ್ಮಿತಾ ಲುಕ್‌ಗೆ ಕಿಡಿಕಾರಿದ್ದಾರೆ. 'ನಿಮ್ಮ ಕತ್ತಲ್ಲಿ ನಿಮ್ಮ ಗಂಡ ಕಟ್ಟಿದ ಕರಿಮಣಿಯೇ ಕಾಣ್ತಾ ಇಲ್ವಲ್ಲ..' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಅವಳು ಸಂಡೇ ಬಜಾರ್ ಅಲ್ಲಾದ್ರೂ ಹೋಗ್ಲಿ. ಗಾಂಧಿ ಬಜಾರಲ್ಲಾದರೂ ಹೋಗ್ಲಿ. ನಮಗೇನು. ಯಾಕೆ ಮನುಷ್ಯರು ಭೂಮಿ ಮೇಲೆ ಓಡಾಡೋದಿಲ್ವಾ. ನಿಮ್ಮ ಕಣ್ಣಿಗೆ ಬಡವರು ಯಾರು ಓಡಾಡೋದು ಕಾಣಿಸೋದಿಲ್ವಾ..' ಎಂದು ಅವರ ವಿಡಿಯೋ ಪೋಸ್ಟ್‌ ಮಾಡಿದ ಇನ್ಸ್‌ಟಾಗ್ರಾಮ್‌ ಅಕೌಂಟ್‌ಗೆ ಬೈದಿದ್ದಾರೆ.

Tap to resize

Latest Videos

'ತಾಳಿ ಕಾಲುಂಗುರ ಮನೆಯಲ್ಲಿ ಗಂಡನ ಕಾಳಜಿ, ಮಕ್ಕಳ ನೆಮ್ಮದಿ ಮಾಡುವ ತಾಯಂದಿರ ಸ್ವತ್ತು. ಟಿಆರ್‌ಪಿ ಹಿಂದೆ ಓಡುವ ಹೆಣ್ಣು ಕುದುರೆಗಳಿಗೆ ಅಲ್ಲಾ..' ಎಂದು ಯೂಸರ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ತಾಳಿ ಇಲ್ಲ ಕಾಲುಂಗರ ಇಲ್ಲ, ಏನಾಗಿದೆ ನಿಮಗೆಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. 'ಇಂತವರ ಇಂದಾನೆ ನಮ್ಮ ಸಂಸ್ಕೃತಿ ಹಾಳಾಗ್ತಾ ಇರೋದು. ತಾಳಿ ಮಹತ್ವ ಗೊತ್ತಿಲ್ಲದೆ ಇರೋ ನಿನಗೆ ಮದ್ವೆ ಯಾಕೆ ಬೇಕಿತ್ತು ತಾಯಿ ತೂ ನಿನ್ನ ಜನುಮಕ್ಕೆ..' ಎಂದು ಬೈದಿದ್ದಾರೆ.

ನಿರ್ದೇಶಕರು- ನಿರ್ಮಾಪಕರು ಕರೆಯುತ್ತಾರೆ, ಲಾಡ್ಜ್‌ ರೂಮ್‌ ನೋಡಿ ಹೆದರಿಬಿಟ್ಟಿ: ಗಿಚ್ಚಿ ಗಿಲಿಗಿಲಿ ಸುಶ್ಮಿತಾ

ಟಿವಿ ಶೋಗಳ ಮೂಲಕವೇ ಕನ್ನಡಿಗರ ಮನಗೆದ್ದಿರುವ ಸುಶ್ಮಿತಾ ಹಾಗೂ ಜಗಪ್ಪ ಇತ್ತೀಚೆಗೆ ಹೊಸ ಖಾರ್‌ ಕೂಡ ಖರೀದಿ ಮಾಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ರೀಲ್ಸ್‌ ಹಂಚಿಕೊಂಡಿರುವ  ಸುಶ್ಮಿತಾ ಹ್ಯುಂಡೈ ಕ್ರೆಟಾ ಕಾರ್‌ ಖರೀದಿ ಮಾಡಿದ ವಿಚಾರವನ್ನು ತಿಳಿಸಿದ್ದರು. ಭಾಗ್ಯಲಕ್ಷ್ಮಿ ಧಾರವಾಹಿಯ ಶೂಟಿಂಗ್‌ನಲ್ಲಿದ್ದ ಸುಶ್ಮಿತಾ, ಬ್ರೇಕ್‌ ಪಡೆದು ಹೊಸ ಕಾರ್‌ನ ಡೆಲಿವರಿ ಪಡೆದುಕೊಂಡಿದ್ದರು.

ಹೀಟ್‌ನಿಂದ 7 ಸಾರಿ ಅಬಾರ್ಷ್ ಆಗಿತ್ತು; ತಾಯಿ ಕಷ್ಟ ನೆನೆದು ಭಾವುಕಾರದ ಸುಶ್ಮಿತಾ

click me!