ಎಲ್ಲವೂ ಸರಿಯಾಗ್ತಿದೆ ಅನ್ನೋ ಹೊತ್ತಲ್ಲೇ ತುಳಸಿ-ಮಾಧವ್​ ನಡುವೆ ಬಿರುಕು! ಮನೆಬಿಟ್ಟು ಹೋಗೆ ಬಿಟ್ಟಳಲ್ಲಾ!

By Suchethana D  |  First Published Aug 12, 2024, 12:15 PM IST

ತುಳಸಿ ಮತ್ತು ಮಾಧವ್​ ನಡುವೆ ಮಕ್ಕಳ ವಿಷಯದಲ್ಲಿ ಬಿರುಕು ಬಿಟ್ಟಿದೆ. ತುಳಸಿ ಮನೆಬಿಟ್ಟು ಹೊರಟೇ ಬಿಟ್ಟಿದ್ದಾಳೆ. ಮುಂದೇನು?
 


ಇನ್ನೇನು ಸೀರಿಯಲ್​ ಒಂದು ಹಂತಕ್ಕೆ ಬಂದು, ಮುಗಿದೇ ಹೋಗತ್ತಾ ಎನ್ನುವಷ್ಟರಲ್ಲಿಯೇ ಅದಕ್ಕೊಂದು ಟ್ವಿಸ್ಟ್​ ಕೊಡುವುದು ಮಾಮೂಲು. ಇದೀಗ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿಯೂ ಇದೇ ರೀತಿ ಆಗಿದೆ.  ಇದೀಗ ತುಳಸಿ ಎಲ್ಲರಿಗೂ ಹತ್ತಿರವಾಗಿದ್ದಾಳೆ. ಹಿಂದೆ ಮದುವೆಯಾದ ಸಂದರ್ಭದಲ್ಲಿ ಮದುವೆಯನ್ನು ತಾವ್ಯಾರೂ  ನೋಡಿಲ್ಲ ಎನ್ನುವ ಕಾರಣ ನೀಡಿ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ.  ಅತ್ತ ಸಮರ್ಥ್​ ತಮ್ಮ ಅಮ್ಮನಿಗೆ ಧಾರೆ ಸೀರೆ ತಂದಿದ್ದರೆ, ಇತ್ತ ಅವಿ ಕೂಡ ಅಮ್ಮನಿಗೆ ಧಾರೆ ಸೀರೆ ತಂದಿದ್ದ. ಇಬ್ಬರ ಸೀರೆಯನ್ನು ಹೇಗೆ ಉಡುವುದು ಎಂದು ತಿಳಿಯದೇ ಪೇಚಿಗೆ ಸಿಲುಕಿದ್ದಳು ತುಳಸಿ. ಇದೀಗ ಇಬ್ಬರಿಗೂ ನ್ಯಾಯ ಒದಗಿಸಿದ್ದಾಳೆ ತುಳಸಿ, ಇಬ್ಬರೂ ಕೊಟ್ಟ ಸೀರೆಯಲ್ಲಿ ವಿಭಿನ್ನ ರೀತಿಯಲ್ಲಿ ಉಟ್ಟು ಬಂದಿದ್ದಾಳೆ. ಅತ್ತ ಮಾಧವ್​ನನ್ನು ಮದುಮಗನನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ ಸೀರಿಯಲ್​ನಲ್ಲಿ ಈಗ ಮಾಧವ್​ ಮತ್ತು ತುಳಸಿಯ ಮರುಮದುವೆ ವಿಜೃಂಭಣೆಯಿಂದ ನಡೆದಿದ್ದು, ತುಳಸಿಯನ್ನು ಮತ್ತೊಮ್ಮೆ ಮನೆ ತುಂಬಿಸಿಕೊಳ್ಳಲಾಗಿದೆ ಕೂಡ. 

ಅವಿ, ದೀಪಿಕಾ ಮತ್ತು ಶಾರ್ವರಿ ಹೊರತುಪಡಿಸಿದರೆ, ಉಳಿದವರೆಲ್ಲರೂ ತುಳಸಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದಾರೆ. ಅಮ್ಮನ ಮೇಲೆ ಮುನಿಸು ಮಾಡಿಕೊಂಡಿದ್ದ ಸಮರ್ಥ್​ ಕೂಡ ಅಮ್ಮನಿಗೆ ಹತ್ತಿರವಾಗಿದ್ದಾನೆ. ಅಭಿಯಂತೂ ತುಳಸಿಯಲ್ಲಿ ಅಮ್ಮನನ್ನೇ ನೋಡುತ್ತಿದ್ದಾನೆ. ಇನ್ನೇನು ಅವಿಯೊಬ್ಬ ಸರಿಯಾಗಿಬಿಟ್ಟರೆ ಇಡೀ ಸೀರಿಯಲ್​ ಮುಗಿದೇ ಹೋಗುತ್ತಿತ್ತು. ಹಾಗಂತ ಸೀರಿಯಲ್​ ಮುಗಿಸಲು ಆಗತ್ತಾ? ಅದಕ್ಕೇ ಇದೀಗ ಟ್ವಿಸ್ಟ್​ ಬಂದಿದೆ. ಅಷ್ಟಕ್ಕೂ ಅವಿಗೆ ಸ್ವಂತ ಬುದ್ಧಿ ಇಲ್ಲ. ಚಿಕ್ಕಮ್ಮ ಶಾರ್ವರಿ ಹಾಗೂ ಪತ್ನಿ ದೀಪಿಕಾ ಆತನ ತಲೆಯನ್ನು ಸುಲಭದಲ್ಲಿ ತಿರುಗಿಸಬಹುದು. ಇದಾಗಲೇ ಈ ಮನೆಯನ್ನು ಒಡೆಯುವುದಾಗಿ ದೀಪಿಕಾ ಪೂರ್ಣಿಯ ಎದುರು ಚಾಲೆಂಜ್​ ಮಾಡಿದ್ದಾಳೆ. ಅದರಂತೆಯೇ ಮನೆಯನ್ನು ಒಡೆಯಲು ಎಲ್ಲಾ ಸಿದ್ಧತೆ ನಡೆಸಿದ್ದು ಅದೀಗ ಫಲಪ್ರದವಾಗಿದೆ.

Tap to resize

Latest Videos

undefined

ದರ್ಶನ್​ ನೆನೆದು ಕಣ್ಣೀರಾದ ತರುಣ್​ ಸುಧೀರ್​: ಜೈಲಿಗೆ ಹೋಗ್ತೇವೆ ಎಂದ ಸೋನಲ್ ಹೇಳಿದ್ದೇನು?

ಅವಿ ಮತ್ತು ಅಭಿಯ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಜಗಳವನ್ನು ನಿಲ್ಲಿಸಲು ಬಂದ ಪೂರ್ಣಿಗೆ ಸಿಟ್ಟಿನಲ್ಲಿ ಅವಿ, ನಿಮಗೆ ಇದೇ ಕಾರಣಕ್ಕೆ ಮಕ್ಕಳಾಗುವುದಿಲ್ಲ ಎಂದುಬಿಟ್ಟಿದ್ದಾನೆ. ಇದರಿಂದ ಪೂರ್ಣಿ ಕಣ್ಣೀರು ಹಾಕಿದ್ದಾಳೆ. ಇದನ್ನು ಕೇಳಿ ಸಿಟ್ಟಿನಿಂದ ಮಾಧವ ಅವಿಯ ಕೆನ್ನೆಗೆ ಹೊಡೆದು ಮನೆಬಿಟ್ಟು ಹೋಗು ಎಂದಿದ್ದಾನೆ. ಆಗ ಮಧ್ಯೆ ಪ್ರವೇಶಿಸಿದ ತುಳಸಿ ಬುದ್ಧಿಮಾತು ಹೇಳಲು ಬಂದಿದ್ದಾಳೆ. ಆಗ ಮಾಧವ್​, ಇದು ನನ್ನ ಮತ್ತು ಮಕ್ಕಳ ನಡುವೆ ಇರುವ ವಿಷಯ. ಇದರ ಮಧ್ಯೆ ನೀವು ಬರಬೇಡಿ ಎಂದಿದ್ದಾನೆ. ಹೀಗೆ ಮಾತಿಗೆ ಮಾತು ಬೆಳೆದಿದೆ. ಅದೇ ಸಿಟ್ಟಿನ ಭರದಲ್ಲಿ ತುಳಸಿ ಅಭಿ ಮತ್ತು ಪೂರ್ಣಿಯನ್ನು ಕರೆದುಕೊಂಡು ಮನೆಬಿಟ್ಟು ಹೋಗಿಯೇ ಬಿಟ್ಟಿದ್ದಾಳೆ. ಮುಂದೇನು ಎನ್ನುವುದು ಈಗಿರುವ ಕುತೂಹಲ.

ಅಷ್ಟಕ್ಕೂ,ಇದಾಗಲೇ ಪೂರ್ಣಿಯ ಅಪ್ಪ- ಅಮ್ಮ ದೀಪಿಕಾಳ ಅಪ್ಪ-ಅಮ್ಮನೇ ಎನ್ನುವ ಸತ್ಯ ತುಳಸಿಗೆ ತಿಳಿದಿದೆ.  ಪೂರ್ಣಿಯನ್ನು ಅನಾಥಾಶ್ರಮದಲ್ಲಿ ಇಟ್ಟ ಸಂದರ್ಭದಲ್ಲಿ ಅವಳ ಅಮ್ಮ ಕುತ್ತಿಗೆಗೆ ಒಂದು ಸರ ಹಾಕಿದ್ದಳು. ತುಳಸಿ ದೀಪಿಕಾಳ ತವರು ಮನೆಗೆ ಹೋದಾಗ ಅಲ್ಲಿ ಪೂರ್ಣಿಯ ಬಾಲ್ಯದ ಫೋಟೋ ನೋಡುತ್ತಾಳೆ. ಅದರಲ್ಲಿ ಸರ ನೋಡುತ್ತಾಳೆ. ಆಗ ಅವಳಿಗೆ ಮಾತುಕತೆಯಲ್ಲಿ ಪೂರ್ಣಿಯೇ ಇವರ ಮಗಳು ಎಂದು ಗೊತ್ತಾಗುತ್ತದೆ. ಆದರೆ ಹಿಂದೆ ಇದೇ ವಿಷಯದಲ್ಲಿ ಮೋಸ ಹೋಗಿ ನೋವನ್ನುಂಡಿದ್ದಾಳೆ ಪೂರ್ಣಿ. ಮತ್ತೆ ತುಳಸಿ ವಿಷಯ ಹೇಳಲು ಮುಂದಾಗಿದ್ದಳು. ಆದರೆ ಮಾಧವ್​ ಅದನ್ನು ತಡೆದಿದ್ದಾನೆ. ಯಾಕೆ ಅವನು ಹೀಗೆ ಮಾಡಿದ್ದಾನೋ ಗೊತ್ತಿಲ್ಲ.ಒಟ್ಟಿನಲ್ಲಿ ಸೀರಿಯಲ್​ನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. 

ಬ್ರಹ್ಮಗಂಟು ದೀಪಾಳ ರೀಲ್ಸ್​ಗೆ ಫಿದಾ: ಅಕ್ಕ ಪ್ಲೀಸ್​ ಸುಂದರ ಮುಖ ಗಂಡಕ್ಕೆ ತೋರಿಸಿ ಅಂತಿರೋ ಫ್ಯಾನ್ಸ್​!


click me!