ಸೋಷಿಯಲ್ ಮೀಡಿಯಾ ಸ್ಟಾರ್, 'ಸುರಸುಂದ್ರ' ಖ್ಯಾತಿಯ ನಟ ಅವಿನಾಶ್, ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರವೇಶಿಸಲು ವಿಫಲರಾಗಿದ್ದಾರೆ. ಅಲ್ಲಿದ್ದ ವೀಕ್ಷಕರು ವೋಟಿಂಗ್‌ನಲ್ಲಿ ಅವರನ್ನು ಸೋಲಿಸಿ, ಬಿಗ್ ಬಾಸ್ ಮನಗೆ ಹೋಗುವ ಬದಲು ಈ ಸುಂದ್ರ ತಮ್ಮ ಮನೆಗೇ ವಾಪಸ್ ಹೋಗುವಂತೆ ಮಾಡಿದ್ದಾರೆ. ಆದರೆ, ಮುಂದೆ ಏನೋ ಇದೆ...
ಸೋಷಿಯಲ್ ಮೀಡಿಯಾ ಸ್ಟಾರ್, 'ಸುರಸುಂದ್ರ' ಖ್ಯಾತಿಯ ನಟ ಅವಿನಾಶ್, ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರವೇಶಿಸಲು ವಿಫಲರಾಗಿದ್ದಾರೆ. ಅಲ್ಲಿದ್ದ ವೀಕ್ಷಕರು ವೋಟಿಂಗ್‌ನಲ್ಲಿ ಅವರನ್ನು ಸೋಲಿಸಿ , ಬಿಗ್ ಬಾಸ್ ಮನಗೆ ಹೋಗುವ ಬದಲು ಈ ಸುಂದ್ರ ತಮ್ಮ ಮನೆಗೇ ವಾಪಸ್ ಹೋಗುವಂತೆ ಮಾಡಿದ್ದಾರೆ. 40% ವೋಟಿಂಗ್ ಗಳಿಸಲು ವಿಫಲರಾದ ಅವಿನಾಶ್ 'ಹೋಲ್ಡಿಂಗ್'ನಲ್ಲಿ ಕೂಡ ಸ್ಥಾನ ಸಿಗದೇ ವಾಸಪ್ ಆಗಿದ್ದು, ಈ 'ಸುಂದರ'ನ ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿದೆ.
ಆದರೆ, ಈ ಬಗ್ಗೆ ಸ್ವತಃ ಅವಿನಾಶ್ ಏನು ಹೇಳುತ್ತಾರೆ ಗೊತ್ತೇ? "ಸಮಾಧಾನ ಮಾಡ್ಕೊಳ್ಳಿ, ನಂಗೊತ್ತುನಿಮ್ಗೆ ನನ್ ಮೇಲೆ ಹೆವ್ವಿ ಲವ್ವು ಅಂತ.. ಜಸ್ಟ್ ಒನ್ ಡೇ ಮುಂಚೆ ಬಿಗ್ ಬಾಸ್ ಇಂದ ನನಗೆ ಕಾಲ್ ಬಂತು, ನಾಳೆ ಶೂಟ್ ಇದೆ, ಅಟೆಂಡ್ ಮಾಡ್ತೀರಾ Procedure ಹೀಗದೆ ಅಂತ. ನಾನು ಏನಪ್ಪಾ ಇದು ಬಿಗ್ ಬಾಸ್ ಅಂದ್ರೆ ಪ್ರಿಪರೇಶನ್ನಿಗೆ ಒಂದು ವಾರ ಮುಂಚೆ ಆದ್ರೂ ಹೇಳ್ಬೇಕಲ್ಲ ಅಂತ ಕನ್ಪ್ಯೂಸ್ ಆದೆ.. ಅಪ್ಪ-ಅಮ್ಮಂಗೂ ಗೊತ್ತಿಲ್ದೇ ಒಬ್ನೇ ಹೋದೆ.. ಸುದೀಪ್ ಸರ್‌ನ ಹತ್ತಿರದಿಂದ ನೋಡ್ದೆ, ಒಂದಷ್ಟು ಹರಟೆ ಹೊಡ್ದೆ, ಒಂದು ಹಗ್ ಕೊಟ್ಟು ಬಂದೆ. 'Something is better than Nothing'alva?
ನಂಗೆ ಪಬ್ಲಿಸಿಟಿ ಬೇಕು ಅಷ್ಟೇ, ಕೋಪ ಬಂದ್ರೆ ಬೀಪ್ *** ಪದಗಳು ಬರುತ್ತೆ: ರಕ್ಷಕ್ ಬುಲೆಟ್
ಬಟ್, ಏನೂ ಎಡಿಟ್ ಮಾಡ್ದೇ ಪೂರ್ತಿ Conversation ಹಾಕಿದ್ರೆ ಇನ್ನೂ ಮಜಾ ಇರ್ತಿತ್ತು.. Thanks for the Opportunity Big Boss.. & ಇನ್ನೊಂದು ವಿಷ್ಯ.. ಕೆಲವು ವಾರಗಳ ನಂತರ ಒಂದು ಸಣ್ಣ ಟ್ವಿಸ್ಟ್ ಎಕ್ಸ್ಪೆಕ್ಟ್ ಮಾಡ್ತೀರಿ.. " ಎಂದು ಸುರಸುಂದರ ಅವಿನಾಶ್ ತಮ್ಮ ಸೋಷಿಯಲ್ ಮೀಡಯಾ ಹಾಗೂ ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ. ಅಂದರೆ..., ಏನೋ ಇದೆ ಸೋಷಿಯಲ್ ಮೀಡಿಯಾ ಸ್ಟಾರ್ ಸುರಸುಂದ್ರ ಅವಿನಾಶ್ ಗುಟ್ಟು! ಆದಷ್ಟು ಬೇಗ ರಟ್ಟಾಗಲಿ..
ಬಿಗ್ಬಾಸ್ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್! ಉಫ್... ನಿಮ್ ಸಹವಾಸವೇ ಬೇಡ ಅಂದಳಾ ಚಾರ್ಲಿ?