ಲಕ್ಷ್ಮಿ ಬಾರಮ್ಮ ಖ್ಯಾತಿಯ ಸೀರಿಯಲ್ ತಾರಾ ಜೋಡಿ ಹರ್ಷಿತಾ ಮತ್ತು ಸುರೇಶ್ ರೈ ಅವರು ದಂಪತಿಯ ಕುರಿತು ರೀಲ್ಸ್ ಮಾಡಿದ್ದು, ನೆಟ್ಟಿಗರು ನಗೆಗಡಲಿನಲ್ಲಿ ತೇಲುತ್ತಿದ್ದಾರೆ.
ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್, ಮೀಮ್ಸ್ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್, ಮೀಮ್ಸ್ಗಳು ಸಕತ್ ವೈರಲ್ ಆಗುತ್ತವೆ. ಇದೀಗ ಗಂಡ-ಹೆಂಡತಿಯ ವಿಷಯವನ್ನೇ ಇಟ್ಟುಕೊಂಡು ಕಿರುತೆರೆಯ ಖ್ಯಾತ ಕಲಾವಿದೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ಗಂಗಾ ಮತ್ತು ಕೃಷ್ಣ ಅವರು ರೀಲ್ಸ್ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಲಕ್ಷ್ಮಿ ಬಾರಮ್ಮ ಸೀರಿಯಲ್ನಲ್ಲಿ ಗಂಗಾ ಪಾತ್ರಧಾರಿಯಾಗಿರುವವರು ಹರ್ಷಿತಾ ಹಾಗೂ ಕೃಷ್ಣನ ಪಾತ್ರಧಾರಿಯಾಗಿರುವವರು ಸುರೇಶ್ ರೈ.
ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಹರ್ಷಿತಾ, ಯಾವಾಗಲೂ ಒಂದಲ್ಲ ಒಂದು ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾರೆ. ಈಗಂತೂ ಹೆಚ್ಚಾಗಿ ತಮ್ಮ ಲಕ್ಷ್ಮೀ ಬಾರಮ್ಮ ತಂಡದ ಜೊತೆ ರೀಲ್ಸ್ ಮಾಡ್ತಾರೆ. ಭಾಗ್ಯಲಕ್ಷ್ಮೀ ಸೀರಿಯಲ್ ಅಲ್ಲದೇ ಹರ್ಷಿತಾ ಸುಂದರಿ ಸೀರಿಯಲ್ ನಲ್ಲೂ ಸಹ ನಟಿಸಿದ್ದರು. ಅದರಲ್ಲಿ ಮಾಡರ್ನ್ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದರು. ಅಲ್ಲದೇ ಹೂಮಳೆ, ಸಿರಿ ಕನ್ನಡದ ಸೀರಿಯಲ್ ನಲ್ಲಿ ಜೊತೆಗೆ ಜೋಗ್ 101 ಸಿನಿಮಾದಲ್ಲೂ ನಟಿಸಿದ್ದಾರೆ. ಇದೀಗ ಅವರು ಒಂದು ರೀಲ್ಸ್ ಮಾಡಿದ್ದಾರೆ. ಅದರಲ್ಲಿ ಹೆಂಡ್ತಿಯನ್ನು 'ಇವ್ಳೇ' ಅಂತ್ಲೂ, ಗಂಡನನ್ನ 'ರೀ..' ಅಂತ್ಲೂ ಕರೆಯೋದ್ಯಾಕೆ ಅನ್ನೋದು ಗೊತ್ತಾಗಿದೆ. ಈ ರೀಲ್ಸ್ನಲ್ಲಿರೋ ಧಾರಾವಾಹಿಯ ಪತಿ ಕೃಷ್ಣಂಗೆ (ಸುರೇಶ್) ಹರ್ಷಿತಾ ಅವರು ನನ್ನನ್ನು ನೀವು 'ಇವ್ಳೇ' ಅಂತ ಯಾಕೆ ಕರೀತಿರಾ ಎಂದು ಕೇಳ್ತಾರೆ. ಅದಕ್ಕೆ ಅವರು, ಕೆಲಸದವ್ಳೇ... ಅಂತ ದೊಡ್ಡದಾಗಿ ಕರೆಯಲು ಆಗಲ್ವಲ್ಲಾ, ಅದಕ್ಕೇ ಷಾರ್ಟ್ ಆಗಿ ಇವ್ಳೇ ಅಂತಾರೆ ಎನ್ನುತ್ತಾರೆ. ಕೊನೆಗೆ ನನ್ನನ್ನು ರೀ ಅಂತ ಕರೆಯೋದ್ಯಾಕೆ ಎಂದು ಸುರೇಶ್ ಅವ್ರು ಮರು ಪ್ರಶ್ನೆ ಕೇಳಿದಾಗ, ಹರ್ಷಿತಾ 'ಬಿಕಾರೀsssss' ಅಂತ ಉದ್ದಕ್ಕೆ ಹೇಳೋಕೆ ಆಗಲ್ವಲ್ಲಾ, ಅದಕ್ಕೇ short and sweet ಆಗಿ ರೀ ಅಂತೇನೆ ಎನ್ನುತ್ತಾರೆ! ಇದಕ್ಕೆ ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.
ನಿಮ್ ಬಣ್ಣ ಬಯಲಾಗೈತಿ, ಇಲ್ಲಿ ನಮ್ ತಲಿ ಕೆಡಿಸ್ಬ್ಯಾಡಿ: ಹಿಟ್ಲರ್ ಕಲ್ಯಾಣದ 'ಪ್ರಾರ್ಥನಾ'ಗೆ ಕ್ಲಾಸ್!
ಅಂದಹಾಗೆ ಹರ್ಷಿತಾ (Harshitha), ತುಮಕೂರು ಜಿಲ್ಲೆಯ ಮಧುಗಿರಿಯ ಹುಡುಗಿ. ಇವರು ಮಾಡರ್ನ್ ಡ್ರೆಸ್ ನಲ್ಲೂ, ಸಾಂಪ್ರದಾಯಿಕ ಡ್ರೆಸ್ ನಲ್ಲೂ ಅದ್ಭುತವಾಗಿ ಕಾಣಿಸ್ತಾರೆ. ನಟನೆ, ಪಾತ್ರ ಅಂದಮೇಲೆ ಯಾವ ಪಾತ್ರ ಮಾಡೋಕ್ಕು ಸೈ ಎನ್ನುತ್ತಾರೆ ಹರ್ಷಿತಾ. ಹರ್ಷಿತಾ ಅವರ ಪತಿ ಸಂದೀಪ್ ವಿ ಆಚಾರ್. ಇವರು ಸಹ ಕಿರುತೆರೆಯಲ್ಲಿ ಗುರುತಿಸಿಕೊಂಡರು. ಆದರೆ ತೆರೆಯ ಮೇಲಲ್ಲ, ತೆರೆಯ ಹಿಂದೆ. ಹಲವಾರು ಕಾಮಿಡಿ ಶೋಗಳಲ್ಲಿ ಸ್ಕಿಟ್ ಗಳಿಗೆ ಸ್ಕ್ರಿಪ್ಟ್ ಬರೆದು, ಅತ್ಯುತ್ತಮವಾಗಿ ಮೂಡಿ ಬರುವಂತೆ ಮಾಡಿರುವವರು ಹರ್ಷಿತಾ ಪತಿ ಸಂದೀಪ್.
ಇನ್ನು ಲಕ್ಷ್ಮಿಬಾರಮ್ಮ ಸೀರಿಯಲ್ ಹಾಗೂ ಗಂಗಾ ಪಾತ್ರಧಾರಿ ಹರ್ಷಿತಾ ಕುರಿತು ಹೇಳುವುದಾದರೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ Lakshmi Baramma ಸೀರಿಯಲ್ ಸದ್ಯ ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಸೀರಿಯಲ್ ನಲ್ಲಿ ಗಂಗಾ ಪಾತ್ರದಲ್ಲಿ ನಟಿಸುತ್ತಿರುವ ಹರ್ಷಿತಾ ಜನರಿಗೆ ತುಂಬಾ ಇಷ್ಟವಾಗಿದ್ದಾರೆ. ಇಯರ್ ಫೋನ್ ಹಾಕ್ಕೊಂಡು ಅಡುಗೆ ಮಾಡುವ ಗಂಗಾ, ತನ್ನ ಮಾತಿನ ಮೂಲಕ ಎಲ್ಲರನ್ನೂ ನಗಿಸುವಂತೆ ಮಾಡುವುದರ ಜೊತೆಗೆ, ಲಕ್ಷ್ಮೀ ಮತ್ತು ವೈಷ್ಣವ್ ಜೊತೆಯಾಗಿರಲು ಸಹ ಸಹಾಯ ಮಾಡ್ತಾರೆ. ವೈಷ್ಣವ್ ಮತ್ತು ಲಕ್ಷ್ಮೀ ಮನೆಯವರ ಬಲವಂತಕ್ಕೆ ಮದುವೆಯಾಗಿದ್ದು. ಇಬ್ಬರ ನಡುವೆ ಸ್ನೇಹ, ಲಕ್ಷ್ಮೀ ಮನಸಲ್ಲಿ ವೈಷ್ಣವ್ ಮೇಲೆ ಪ್ರೀತಿ ಬೆಳೆಯಲು ಕಾರಣ ಅಂದರೆ ಅದು ಗಂಗಾಕ್ಕಾ ಮಾತುಗಳು. ಆಕೆ ಇವರಿಬ್ಬರು ಜೊತೆ ಸೇರಲು ಮುಖ್ಯ ಕಾರಣವೇ ಗಂಗಾ. ಇವರ ಈ ಆ್ಯಕ್ಟಿಂಗ್ಗೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ 2023 (Anubanda Awards 2023) ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ವಿದೂಷಕರ ಅವಾರ್ಡ್ ಬಂದಿದೆ.
ಮದುಮಗಳಾದ ಅನುಶ್ರೀ: ವಿಡಿಯೋ ನೋಡಿ ಅಮರಶಿಲ್ಪಿ ಜಕ್ಕಣ್ಣ ಬೆರಗಾದನಂತೆ, ರವಿವರ್ಮ ಮೈ ಮರೆತನಂತೆ!