ಸಂಬಳ ಎಷ್ಟು? ವಯಸ್ಸು ಎಷ್ಟು? ಗಂಡು ಯಾರು? ಹೀಗೆ ಗೂಗಲ್‌ನಲ್ಲಿ ನಿವೇದಿತಾ ಗೌಡ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಿರುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ನಿವಿ ಎಲ್ಲಿ ಸಿಕ್ಕರೂ ನಿಮ್ಮ ವಯಸ್ಸು ಎಷ್ಟು? ನಿಮ್ಮ ಗಂಡ ಹೆಸರು ಏನು? ಯಾವಾಗ ಮದುವೆ ಆಗಿದ್ದು? ಪ್ರಗ್ನೆಂಟ್ ಆಗಿದ್ದೀರಾ? ಎಂದು ಪದೇ ಪದೇ ಪ್ರಶ್ನೆ ಕೇಳುತ್ತಾರೆ. ಹೀಗಾಗಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಫೇಮಸ್ ಅಗಿದ್ದು ಹೇಗೆ?
ಇದೊಂದು ಟ್ರಿಕಿ ಪ್ರಶ್ನೆ ಏಕೆಂದರೆ ನಾನು ಕಾಲೇಜ್‌ನಲ್ಲಿದ್ದಾಗ ತುಂಬಾ ಡಬ್‌ಸ್ಮ್ಯಾಶ್ ಮಾಡುತ್ತಿದ್ದೆ. ಟೈಂ ಪಾಸ್‌ಗೆ ಮಾಡುತ್ತಿದ್ದೆ ಆದರೆ ಅದರಿಂದ ನನಗೆ ಬಿಗ್ ಬಾಸ್‌ಗೆ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಫೇಮ್ ಬೆಳೆಯುತ್ತಿದೆ.
ನಿವೇದಿತಾ ಏನ್ ಕೆಲಸ ಮಾಡ್ತಾರೆ?
ನಾನು ಮೊದಲು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸ ಬಿಟ್ಟ ನಂತರ ಅನೇಕು ಯಾಕೆ ಬಿಟ್ಟೆ ಎಂದು ಪ್ರಶ್ನೆ ಕೇಳಲು ಆರಂಭಿಸಿದ್ದರು. ಸಣ್ಣ ಬ್ರೇಕ್ ನಂತರ ರಿಯಾಲಿಟಿ ಶೋ ಆರಂಭಿಸಿದೆ.
ನಿವೇದಿತಾ ಸಂಭಾವನೆ ಎಷ್ಟು?
ಸರಿಯಾಗಿ ಸಂಬಳ ಹೇಳಲು ಆಗುವುದಿಲ್ಲ ಏಕೆಂದರೆ ಒಂದು ಸಲ ಜಾಸ್ತಿ ಇರುತ್ತೆ ಒಂದು ಸಲ ಕಡಿಮೆ ಇರುತ್ತೆ.
ಹೊಸ ಮನೆಗೋಗಿ ಒಂದುವರೆ ವರ್ಷ ಆದ್ರೂ 1 ಸಿಲೆಂಡರ್ ಖಾಲಿ ಆಗಿಲ್ಲ: ನಿವೇದಿತಾ ಗೌಡ
ನಿವಿ ವಯಸ್ಸು ಎಷ್ಟು?
ಹೆಣ್ಣು ಮಕ್ಕಳು ವಯಸ್ಸು ಹೇಳಬಾರದು ಗಂಡು ಮಕ್ಕಳ ಅವರ ಸಂಬಳ ಹೇಳಬಾರದು ಎನ್ನುವ ಮಾತಿಗೆ ಅದಿಕ್ಕೆ ನಾನು ರಿವೀಲ್ ಮಾಡಿಲ್ಲ.
ನಿವೇದಿತಾ ಹೈಟ್ ಎಷ್ಟು?
ನಾನು ತುಂಬಾ ಶಾರ್ಟ್ ಇರುವುದು...5' 2" ಅಥವಾ 5' 3" ಇರುವುದು. ಕ್ಯಾಮೆರಾದಲ್ಲಿ ನಾನು ತುಂಬಾ ಉದ್ದ ಕಾಣಿಸುತ್ತೀನಿ ಆದರೆ ಅಷ್ಟು ಉದ್ದ ಇಲ್ಲ. ಪಬ್ಲಿಕ್‌ನಲ್ಲಿ ಜನರು ನನ್ನನ್ನು ನೋಡಿದರೆ ಟಿವಿಯಲ್ಲಿ ಅಷ್ಟು ಉದ್ದ ಇದ್ದೀರಾ ಎದುರು ಇಷ್ಟು ಪುಟ್ಟ ಇದ್ದೀರಾ ಎಂದು ಕೇಳುತ್ತಾರೆ.
ನಿವಿ ಪ್ರಗ್ನೆಂಟ್?
ನಾನು ಪ್ರಗ್ನೆಂಟ್ ಅಲ್ಲ. ವರ್ಷದಲ್ಲಿ ಕನಿಷ್ಠ ಎರಡು ಮೂರು ಸಲ ಈ ಗಾಳಿ ಮಾತುಗಳು ಕೇಳಿ ಬರುತ್ತೆ. ನಿಜಕ್ಕೂ ನಾನು ಪ್ರಗ್ನೆಂಟ್ ಅದಾಗ ಯಾರೂ ನಂಬಲ್ಲ ಅನ್ಸುತ್ತೆ. ನಾನು ಪ್ರೆಗ್ನೆಂಟ್ ಆದಾಗ ನಾನೇ ಅನೌನ್ಸ್ ಮಾಡ್ತೀನಿ.
ನಿವೇದಿತಾ ಶ್ರೀಮಂತೆ?
ನಾನು ಒಂದು ರೀತಿ ಶ್ರೀಮಂತೆ ಒಂದು ರೀತಿ ಬಡವಿ.
ಹೆಂಡ್ತಿ ಹಾಕೋ ಬಟ್ಟೆನ ನೀಟಾಗಿ ನೋಡಿ; ಚಂದನ್ ಜೊತೆ ಜಗಳ ಮಾಡ್ಕೊಂಡು ಗಿಫ್ಟ್ ತೆಗೆಸಿಕೊಂಡ ನಿವೇದಿತಾ ಗೌಡ
ನೆಗೆಟಿವ್ ಕಾಮೆಂಟ್‌ಗೆಳಿಗೆ ಉತ್ತರ:
'ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ ಆದರೆ ಇದೆಲ್ಲಾ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ. ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದ್ದರೆ ತಪ್ಪಲ್ಲ ಆದರೆ ಹುಡುಗಿ ಪ್ರವಾಸ ಮಾಡಿದ್ದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ? ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವೆ ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್ ಮಾಡುತ್ತಿರುವೆ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್ ಸೆಟ್ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ' ಎಂದು ನಿವೇದಿತಾ ಹೇಳಿದ್ದಾರೆ.