ಹಲವು ವರ್ಷಗಳ ಬಳಿಕ ಮತ್ತೆ ಜೊತೆಯಾಗಿ ನಟಿಸ್ತಿದ್ದಾರೆ ಸುಚಿತ್ರ , ರೇಖಾ ಕೃಷ್ಣಪ್ಪ

Published : Mar 02, 2025, 06:27 PM ISTUpdated : Mar 03, 2025, 10:11 AM IST
ಹಲವು ವರ್ಷಗಳ ಬಳಿಕ ಮತ್ತೆ ಜೊತೆಯಾಗಿ ನಟಿಸ್ತಿದ್ದಾರೆ ಸುಚಿತ್ರ , ರೇಖಾ ಕೃಷ್ಣಪ್ಪ

ಸಾರಾಂಶ

ನಟಿ ಸುಚಿತ್ರಾ ಕೆ.ಎಸ್, ಮಾಂಗಲ್ಯ ಧಾರಾವಾಹಿಯಿಂದ ಜನಪ್ರಿಯರಾದರು. ಅವರು ಕನ್ನಡ, ತಮಿಳು, ತೆಲುಗು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಉದಯ ಟಿವಿಯ ಸಿಂಧು ಭೈರವಿ ಧಾರಾವಾಹಿಯ ಮೂಲಕ ಕನ್ನಡಕ್ಕೆ ಮರಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ರೇಖಾ ಕೃಷ್ಣಪ್ಪ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಇಬ್ಬರೂ ಈಶ್ವರಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು.

ಇತ್ತೀಚೆಗಷ್ಟೇ ನಾವು ಕನ್ನದ ಕಿರುತೆರೆ ನಟಿ ಸುಚಿತ್ರಾ ಕೆಎಸ್ (Suchithra KS) ಕುರಿತು ಲೇಖನದ ಮೂಲಕ ಮಾಹಿತಿ ನೀಡಿದ್ದೆವು. ಸುಚಿತ್ರಾ ಮಾಂಗಲ್ಯ ಧಾರಾವಾಹಿಯಲ್ಲಿ ಮಿಂಚಿದ ನಟಿ. ಈ ಮಾಂಗಲ್ಯ ಸೀರಿಯಲ್ , ಸುಮಾರು 7-8 ವರ್ಷಗಳ ಕಾಲ ಪ್ರಸಾರವಾಗುವ ಮೂಲಕ ಜನಮನ ಗೆದ್ದಿತ್ತು. ಆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಸುಚಿತ್ರಾ ನಟಿಸಿದ್ದರು. ಹಲವು ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ನಟಿಯ ಕನ್ನಡದ ಜನಪ್ರಿಯ ಧಾರಾವಾಹಿಗಳು ಅಂದ್ರೆ, ಮಾಂಗಲ್ಯ ಮತ್ತು ಈಶ್ವರಿ. ಇವರು ಕನ್ನಡ ಮಾತ್ರವಲ್ಲ ತಮಿಳು ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ, ಟಿವಿ ಶೋ, ಕ್ವಿಜ್ ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ನಟಿ ತಮಿಳು ಕಿರುತೆರೆಯಲ್ಲಿ(Tamil Serial) ಬ್ಯುಸಿಯಾಗಿದ್ದಾರೆ.  ತಮಿಳಿನ ಭಾಕ್ಯಲಕ್ಷ್ಮಿ ಧಾರಾವಾಹಿಯಲ್ಲಿ ಸುಚಿತ್ರಾ ನಟಿಸುತ್ತಿದ್ದಾರೆ. ಇದೇ ಕಥೆಯೇ ನಮ್ಮ ಕನ್ನಡದ ಭಾಗ್ಯಲಕ್ಷ್ಮಿಯಲ್ಲಿರೋದು. 

ರಂಭಾ ಜೊತೆ ಇರೋ ಈ ನಟಿ ನೆನಪಿದ್ದಾರೆಯೇ? ಮಾಂಗಲ್ಯ ಸೀರಿಯಲ್ ನೋಡಿರೋರಿಗೆ ಖಂಡಿತಾ ಗೊತ್ತಿರತ್ತೆ!

ಕಳೆದ ಹಲವು ವರ್ಷಗಳಿಂದ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದ ಸುಚಿತ್ರಾ ಅವರು, ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಸಿಂಧೂ ಭೈರವಿ (Sindhu Bhairavi) ಧಾರಾವಾಹಿ ಮೂಲಕ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಕುರಿತು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದೀಗ ಹಲವು ದಶಕಗಳಿಂದ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಂತಹ ಮತ್ತೋರ್ವ ನಟಿ ಕೂಡ ಸಿಂಧು ಭೈರವಿಯಲ್ಲಿ ಸುಚಿತ್ರಾ ಜೊತೆ ನಟಿಸುತ್ತಿದ್ದಾರೆ. ಆ ನಟಿ ಬೇರಾರು ಅಲ್ಲ ರೇಖಾ ಕೃಷ್ಣಪ್ಪ. 

25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಕಿರುತೆರೆ ಜೋಡಿ ರೇಖಾ - ವಸಂತ್

ಹೌದು! 10 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಎಸ್.ನಾರಾಯಣ್ ರವರ ನಿರ್ದೇಶನಲ್ಲಿ ಈಶ್ವರಿ ಎಂಬ ಧಾರವಾಹಿ ಪ್ರಸಾರವಾಗುತ್ತಿತ್ತು. ನಿಮ್ಮಲ್ಲೂ ಸಾಕಷ್ಟು ಜನ ಈ ಸೀರಿಯಲ್ ನೋಡಿರಬಹುದು. ಈ ಧಾರವಾಹಿಯ ನಾಯಕಿಯರಾಗಿ ರೇಖಾ ಕೃಷ್ಣಪ್ಪ (Rekha Krishnappa) ಮತ್ತು ಸುಚಿತ್ರ ರವರು ಜೊತೆಯಾಗಿ ಬಣ್ಣಹಚ್ಚಿದ್ದರು. ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನು ಸಹ ತಂದು ಕೊಟ್ಟಿತ್ತು. ಈಗ ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಉದಯ ಟಿವಿಯ ಸಿಂಧುಭೈರವಿ ಧಾರವಾಹಿಯ ಮೂಲಕ ಒಟ್ಟಿಗೆ ಬಣ್ಣಹಚ್ಚುತ್ತಿದ್ದಾರೆ. ಈ ಧಾರಾವಾಹಿಯು ನ್ಯಾಯಕ್ಕಾಗಿ ಹೋರಾಡುವ ಸಿಂಧು, ಭೈರವಿಯಾಗುವ ಕಥೆ. ರೇಖಾ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೇಖಾ ಕನ್ನಡ, ತಮಿಳು ಸೇರಿ 50 ಕ್ಕೂ ಅಧಿಕ ಧಾರಾವಾಹಿಗಳಲ್ಲಿ, ಹಾಗೂ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಳು ಬೆಳಗಿತು ಧಾರಾವಾಹಿ ಮೂಲಕ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟವರು ರೇಖಾ. ಇವರು ಶಕ್ತಿ, ಈಶ್ವರಿ, ಮಾಯಾಮೃಗದಂತಹ ಹಿಟ್ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇದಾದ ನಂತರ ತಮಿಳು, ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳ ಮೂಲಕವೂ ರೇಖಾ ಗಂಡನ ಜೊತೆ ಸ್ಪರ್ಧೆ ಮಾಡಿದ್ದರು. ಇದೀಗ ಹಲವು ವರ್ಷಗಳ ಬಳಿಕ ರೇಖಾ ಹಾಗೂ ಸುಚಿತ್ರಾ ಒಂದೇ ಸೀರಿಯಲ್ ನಲ್ಲಿ ಬಣ್ಣ ಹಚ್ಚೋದಕ್ಕೆ ರೆಡಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!