ಕೋಟಿ ಕೋಟಿ ಬೆಲೆಬಾಳೋ ಕಾರು, ಹೋಗ್ತಾ ಬರ್ತಾ ಡ್ರೈವರ್​ ಸೆಲ್ಯೂಟ್​...ಅಬ್ಬಾ...ನಮ್ಗೆ ಇವೆಲ್ಲಾ ಹಿಂಸೆನಪ್ಪಾ...

By Suvarna News  |  First Published Apr 7, 2024, 12:48 PM IST

ಆಗರ್ಭ ಶ್ರೀಮಂತಿಕೆ ಎನ್ನುವುದು ಕೆಲವರಿಗೆ ಅಲರ್ಜಿಯೂ ಹೌದು. ಅದರಲ್ಲಿಯೂ ಮಿಡಲ್​ ಕ್ಲಾಸ್​ನಲ್ಲಿ ಹುಟ್ಟಿದವರಿಗೆ ಇದು  ಹಿಂಸೆ ಎನ್ನುವ ಮಾತಿಗೆ ನೆಟ್ಟಿಗರು ಏನು ಹೇಳಿದ್ರು ನೋಡಿ...
 


ಆಗರ್ಭ ಶ್ರೀಮಂತರಾಗಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಕೈಗೊಂದು- ಕಾಲಿಗೊಂದು ಆಳು. ಮನೆಯಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳು, ಹೋದಾಗ- ಬಂದಾಗ ಸೆಲ್ಯೂಟ್​ ಹೊಡೆಯುವವರು, ಕೂತು ತಿಂದರೂ ನಾಲ್ಕೈದು ಪೀಳಿಗೆಗೆ ಸಾಕಾಗದಷ್ಟು ಆಸ್ತಿ... ಹೀಗೆ ಏನೇನೋ ಕನಸು ಕಾಣುವವರು ಅದೆಷ್ಟೋ ಮಂದಿ. ಆದರೆ ಎಲ್ಲರೂ ಹೀಗಲ್ಲ. ಈ ಆಗರ್ಭ ಸಿರಿವಂತಿಕೆಯೆಂದರೆ ಏನೋ ಹಿಂಸೆ. ಮಿಡ್ಲ್​ಕ್ಲಾಸ್​ ಜೀವನವೇ ಅವರಿಗೆ ಇಷ್ಟ. ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ, ಇರುವುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ಯಾರನ್ನೂ ತಮ್ಮ ಸೇವಕರಂತೆ ಕಾಣದೇ ಎಲ್ಲರನ್ನೂ ಕುಟುಂಬಸ್ಥರಂತೆಯೇ  ನೋಡಿಕೊಂಡು ಬಾಳ್ವೆ ಮಾಡುವುದು ಅವರಿಗೆ ಇಷ್ಟ. ಇನ್ನು ಕೆಲವು ಮಧ್ಯಮ ವರ್ಗದವರಿಗೆ ದಿಢೀರನೆ ಶ್ರೀಮಂತಿಕೆ ಬಂದು ಅಲ್ಲಿಯ ಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟ ಕಷ್ಟ... ಇಂಥವರಲ್ಲಿ ಒಬ್ಬಾಕೆ ಅಮೃತಧಾರೆ ಸೀರಿಯಲ್​ ಭೂಮಿಕಾ.

ಮಧ್ಯಮ ಕುಟುಂಬದ ಮನಸ್ಥಿತಿ ಹಾಗೂ ಆಗರ್ಭ ಶ್ರೀಮಂತಿಕೆ ಎಂದರೆ ಏನೋ ಅಲರ್ಜಿ ಎನ್ನುವ ಮನಸ್ಥಿತಿಗೆ ಉದಾಹರಣೆ ಈ ಭೂಮಿಕಾ. ಹಿಂದೆ ಕೂಡ ಪತಿ ಗೌತಮ್​ 10 ಕೋಟಿ ರೂಪಾಯಿಗಳನ್ನು ಭೂಮಿಕಾ ಅಕೌಂಟ್​ಗೆ ಹಾಕಿದಾಗ, ರಾತ್ರಿ ಕೂಡ ನಿದ್ದೆ ಮಾಡಲಾಗದೇ ಒದ್ದಾಡಿದ್ದಳು ಭೂಮಿಕಾ. ಇಷ್ಟೊಂದು ಹಣವನ್ನು ಬ್ಯಾಂಕ್​ನಲ್ಲಿ ಇಟ್ಟುಕೊಂಡು ಈ ಕೋಟ್ಯಧೀಶ್ವರರು ಅದ್ಹೇಗೆ ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ, ಇಷ್ಟೆಲ್ಲಾ ಹಣ ಸಂಪಾದನೆ ಯಾಕೆ ಮಾಡಬೇಕು ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿಕೊಂಡಿದ್ದಳು ಭೂಮಿಕಾ. ಇದೀಗ ಮತ್ತದೇ ಸ್ಥಿತಿ ಭೂಮಿಕಾಗೆ ಬಂದಿದೆ. ಅಷ್ಟಕ್ಕೂ ಇದೀಗ ಗೌತಮ್​, ಭೂಮಿಕಾ ಮೇಲೆ ಸಿಕ್ಕಾಪಟ್ಟೆ ಕನ್​ಸರ್ನ್​ ತೋರಿಸುತ್ತಿದ್ದಾನೆ. ಇದಕ್ಕೆ ಕಾರಣ, ನಕಲಿ ಜ್ಯೋತಿಷಿ ಹೇಳಿದ ಮಾತುಗಳು.

Tap to resize

Latest Videos

ಜ್ಯೋತಿಷಿಯಿಂದ ಹಳ್ಳ ಹಿಡಿಯತ್ತಾ ಅಮೃತಧಾರೆ? ಮತ್ತದೇ ಕಥೆ ಯಾಕೆ... ಫ್ಯಾನ್ಸ್​ ತೀವ್ರ ಬೇಸರ!

ಹೌದು. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್​ ಆದಂತೆ ನಟಿಸಿದ್ದಾಳೆ. ಆದರೆ ಈತ ನಕಲಿ ಜ್ಯೋತಿಷಿ, ಈತನನ್ನು ಕರೆಸಿರುವುದು ಶಕುಂತಲಾನೇ.  ಗಂಡ-ಹೆಂಡತಿ ಹತ್ತಿರ ಆಗುತ್ತಿರುವುದನ್ನು ಸಹಿಸದ ಆಕೆ,  ಇಬ್ಬರೂ ದೂರ ದೂರವಾಗಲು ತಂತ್ರ ರೂಪಿಸುತ್ತಲೇ ಇದ್ದಾಳೆ. ಆದರೆ ಎಷ್ಟು ದಿನ ಹೀಗೆ ತಂತ್ರ ರೂಪಿಸುವುದು ಎಂದುಕೊಂಡು ಇದೀಗ ಜ್ಯೋತಿಷಿ ಕರೆಸಿದ್ದಾಳೆ.   ಗೌತಮ್​ಗಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ. ನೀವಿಬ್ಬರೂ ಮದುವೆಯಾಗಿರುವುದರಿಂದ ಭೂಮಿಕಾ ಜೀವಕ್ಕೆ ಅಪಾಯ ಎಂದಿದ್ದಾನೆ ನಕಲಿ ಜ್ಯೋತಿಷಿ. ಇದರಿಂದ ಗೌತಮ್​ ಕುಗ್ಗಿ ಹೋಗಿದ್ದಾನೆ. ಯಾರೊಂದಿಗೂ ನೋವು ಹೇಳಿಕೊಳ್ಳಲಾಗದ ಸಂಕಟ ಆತನಿಗೆ. ಇದೇ ಕಾರಣಕ್ಕೆ ಭೂಮಿಕಾಳನ್ನು ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾನೆ.

ಭೂಮಿಕಾ ಹೊರಗಡೆ ಹೋಗುವುದಾಗಿ ಹೇಳಿದಾಗ, ಕಾರಲ್ಲಿ ಹೋಗಿ ಎಂದು ಗೌತಮ್​ ಹೇಳುತ್ತಾನೆ. ಆದರೆ ಆತನ ಕಾಳಜಿ ಭೂಮಿಕಾಗೆ ಅರ್ಥವಾಗ್ತಿಲ್ಲ. ಕೋಟಿ ಬೆಲೆಬಾಳುವ ಕಾರು, ಇಳಿದಾಗ, ಕುಳಿತಾಗ, ಬಂದಾಗ ಡ್ರೈವರ್​ ಸೆಲ್ಯೂಟ್​ ಹೊಡೆಯುವುದು ಇವೆಲ್ಲಾ ನನ್ನಂಥ ಮಿಡ್ಲ್​ ಕ್ಲಾಸ್​ ಹುಡುಗಿಗೆ ಹಿಂಸೆ ಅನ್ನಿಸುತ್ತದೆ. ಕಾರು-ಗೀರು ಬೇಡ ಎನ್ನುತ್ತಾಳೆ. ಮೇಡ್​ ಇನ್​ ಮಿಡಲ್​ ಕ್ಲಾಸ್​ಗೆ ಇವೆಲ್ಲಾ ಹಿಂಸೆನಪ್ಪಾ ಎನ್ನುತ್ತಾಳೆ. ಆಗ ಗೌತಮ್​ ನೀವೀಗ ಗೌತಮ್​ ದಿವಾನ್​ ಪತ್ನಿ, ಇದಕ್ಕೆ ಅಡ್ಜಸ್ಟ್​ ಆಗ್ಬೇಕು ಎಂದಾಗ ಭೂಮಿಕಾ ಮೊದಲು ನಾನು ಸದಾಶಿವ ಅವ್ರ ಮಗಳು. ಹುಟ್ಟುಗುಣ ಸುಟ್ಟರೂ ಹೋಗಲ್ಲಾ ಅಂತಾರಲ್ಲ ಹಾಗೆ ಎಂದಾಗ ಗೌತಮ್​ಗೆ ಏನು ಹೇಳಬೇಕೋ ತಿಳಿಯುವುದಿಲ್ಲ. ಇದೆಷ್ಟು ನಿಜ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಆಗರ್ಭ ಶ್ರೀಮಂತಿಕೆ ಎನ್ನುವುದು ನಿಜಕ್ಕೂ ಮಿಡ್ಲ್​  ಕ್ಲಾಸ್​ ಮಂದಿಗೆ ಹಿಂಸೆ ಆಗುವುದು ನಿಜವೇ, ಒಬ್ಬ ಮನುಷ್ಯನಿಗೆ ಇಷ್ಟೊಂದು ಅನಿವಾರ್ಯನಾ ಎನಿಸುವುದೂ ಉಂಟು, ಶ್ರೀಮಂತಿಕೆ ಎನ್ನುವುದು ತೋರಿಕೆಯ ವಸ್ತು ಎನಿಸುತ್ತದೆ ಎಂದಿರುವ ನೆಟ್ಟಿಗರು ಭೂಮಿಕಾ ಮಾತಿಗೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ. 

ಅನಾಥಾಶ್ರಮದಲ್ಲಿ ಬೆಳೆದ ಪೂರ್ಣಿ, ದೀಪಿಕಾಳ ಸ್ವಂತ ಅಕ್ಕನಾ? ಏನಿದು ಶ್ರೀರಸ್ತು-ಶುಭಮಸ್ತು ಟ್ವಿಸ್ಟ್​?

click me!