ಕಿರುತೆರೆ ನಟಿಯರಿಗೆ ಸೀಮಂತ ಮಾಡಿದ ಶಾಲಿನಿ; ಹೆಣ್ಣಾದರೆ ಕಲಾ ಸರಸ್ವತಿ, ಗಂಡಾದರೆ ಸೈನಿಕನಾಗಲಿ ಎಂದ ನಯನಾ!

Published : Sep 25, 2023, 01:01 PM ISTUpdated : Sep 25, 2023, 01:08 PM IST
ಕಿರುತೆರೆ ನಟಿಯರಿಗೆ ಸೀಮಂತ ಮಾಡಿದ ಶಾಲಿನಿ; ಹೆಣ್ಣಾದರೆ ಕಲಾ ಸರಸ್ವತಿ, ಗಂಡಾದರೆ ಸೈನಿಕನಾಗಲಿ ಎಂದ ನಯನಾ!

ಸಾರಾಂಶ

ಸುವರ್ಣ ಸೂಪರ್ ಸ್ಟಾರ್ ವೇದಿಯಲ್ಲಿ ಮಿಂಚಿದ ಗರ್ಭಿಣಿಯರು. ಸೀಮಂತ ಮಾಡಿದ ಶಾಲಿನಿ. ಅಕೆ ಆಸೆಗಳನ್ನು ಕೇಳಿ.... 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶಾಲಿನಿ ಸತ್ಯನಾರಾಯಣ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಸುವರ್ಣ ಸೂಪರ್‌ ಸ್ಟಾರ್ ಕಾರ್ಯಕ್ರಮದಲ್ಲಿ ಕಿರುತೆರೆ ರಿಯಾಲಿಟಿ ಶೋ ಸ್ಪರ್ಧಿ ರಾಗಶ್ರೀ, ಕಾಮಿಡಿ ಕಿಲಾಡಿಗಳು ನಯನಾ ಮತ್ತು ನಟಿ ರಚನಾ ಆಗಮಿಸಿದ್ದರು. ಗರ್ಭಿಣಿಯರ ಬಯಕೆಗಳು ಜರ್ನಿಗಳನ್ನು ಜನರ ಜೊತೆ ಹಂಚಿಕೊಂಡಿದ್ದಾರೆ. ಸರಳವಾಗಿ ಸೀಮಂತ ಮಾಡಿದ್ದಾರೆ.  

'8 ತಿಂಗಳು ನಡೆಯುತ್ತಿದೆ. ನಮ್ಮ ಫ್ಯಾಮಿಲಿಗೆ ಹೊಸ ವ್ಯಕ್ತಿ ಬರಲಿದ್ದಾರೆ. ನಮ್ಮ ಯಜಮಾನರಿಗೆ ಹೆಣ್ಣು ಮಕ್ಕಳು ತುಂಬಾನೇ ಇಷ್ಟ ಹೀಗಾಗಿ ಮೊದಲು ಮನೆಗೆ ಲಕ್ಷ್ಮಿ ಸರಸ್ವತಿ ಬರಲಿ ಎನ್ನುತ್ತಿದ್ದಾರೆ. ಹೆಣ್ಣು ಮಗು ಹುಟ್ಟರೆ ಕಲಾ ಸರಸ್ವತಿ ಬರಲಿ ಗಂಡು ಹುಟ್ಟಿದರೆ ದೇಶಕ್ಕೊಬ್ಬ ಸೈನಿಕ ಬರಲಿ. ಪ್ರೆಗ್ನೆನ್ಸಿ ಸಮಯದಲ್ಲಿ ಹಾಡುಗಳು ಮತ್ತು ಕವನಗಳ ಮೇಲೆ ಒಲವು ಹೆಚ್ಚಾಗಿದೆ.ಅಚ್ಯುತಮ್ ಕೇಶವಂ ಕೃಷ್ಣ ದಾಮೋದರಂ ಹಾಡು ಹೇಳಿ ಮಗುವನ್ನು ಮಲಗಿಸಬೇಕು ಅಂದುಕೊಂಡಿರುವೆ' ಕಾಮಿಡಿ ಕಿಲಾಡಿಗಳು ನಯನಾ ಹೇಳಿದ್ದಾರೆ. 

ಅಯ್ಯೋ ಯಾಕಿಷ್ಟು ಸಣ್ಣ ?; ಗರ್ಭಿಣಿಯಾಗಿದ್ದರೂ ತೂಕ ಕಳೆದುಕೊಂಡ ಕಿರುತೆರೆ ನಟಿ ಮಾನಸ

'ನಾನು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವೆ. ಅನೇಕರು ಹೇಳುತ್ತಾರೆ ಮೊದಲ ಮಗುವಿನ ಪ್ರೆಗ್ನೆನ್ಸಿ ಟೈಮ್‌ಗೂ ಎರಡನೇ ಪ್ರೆಗ್ನೆನ್ಸಿಗೂ ತುಂಬಾ ವ್ಯತ್ಯಾಸವಿರುತ್ತದೆ ಎಂದು. ಹಾಗೆ ನನಗೂ ಅನುಭವ ಆಗುತ್ತಿದೆ. ರಾಶಿ ನಕ್ಷತ್ರ ನೋಡಿಕೊಂಡು ಹೆಸರಬಲುದ ಪ್ರಕಾರ ಈ ಸಲ ಮಗುವಿಗೆ ನಾಮಕರಣ ಮಾಡುವೆ' ಎಂದಿದ್ದಾರೆ ರಾಗಶ್ರೀ. 

'ಒಳ್ಳೆ ಆರೋಗ್ಯ ಇರುವ ಮಗುವಿಗೆ ಜನ್ಮ ನೀಡಬೇಕು ಎಂದು ಭಯಸುತ್ತಿರುವೆ. ದೇವರ ಆಶೀರ್ವಾದಿಂದ ಒಳ್ಳೆಯದಾಗುತ್ತಿದೆ. ಗಂಡು ಮಗುವಿಗೆ ಜನ್ಮ ನೀಡಿದರೆ ಶಿವ ಹೆಸರುಗಳಲ್ಲಿ ನಾಮಕರಣ ಮಾಡುತ್ತೀನಿ. ಹೆಣ್ಣು ಮಗು ಹುಟ್ಟಿದ್ದರೆ ದುರ್ಗಾ ಪರಮೇಶ್ವರಿ ದೇವಿ ಹೆಸರುಗಳನ್ನು ಲಿಸ್ಟ್ ಮಾಡಿಕೊಂಡಿರುವೆ' ರಚನಾ ಮಾತನಾಡಿದ್ದಾರೆ. 

ನಟಿ ಶುತಿ ಹರಿಹರನ್ ಮತ್ತೆ ಪ್ರೆಗ್ನೆಂಟ್?; ಸರೋಗೆಸಿ ಬಗ್ಗೆ ನಟಿ ಹೇಳಿಕೆ ವೈರಲ್

ಸೀಮಂತ ನಂತರ ನನ್ನಿಂದ ಏನಾದರೂ ಸಲಹೆ ಬೇಕಾ ಎಂದು ಶಾಲಿನಿ ಕೇಳಿದಾಗ ಬಾಣಂತನದಲ್ಲಿ ಏನೆಲ್ಲಾ ಐಟಂಗಳನ್ನು ಕೊಡುತ್ತಾರೆ ಎಂದು ಪ್ರಶ್ನಿಸಿತ್ತಾರೆ. 'ಬಾಣಂತಿ ಸಮಯದಲ್ಲಿ ಹಸಿವು ಎಂದು ತುಂಬಾ ಅಳುತ್ತಿದ್ದೆ ಅಂತ ನನ್ನ ತಾಯಿ ತುಂಬಾ ಸಣ್ಣಗಿರುವ ಮೆಂತ್ಯ ದೋಸೆ ಕೊಡುತ್ತಿದ್ದರು. ಐಟಂಸ್ ಕೊಡುತ್ತಿರಲಿಲ್ಲ ಐಟಂ ಕೊಡುತ್ತಿದ್ದರು.  ಬರೀ ಉಪ್ಪು ಹಾಕಿರುವ ನೆರಳೆಕಾಯಿ ಉಪ್ಪಿನಕಾಯಿ ಕೊಡುತ್ತಿದ್ದರು. ಮಧ್ಯಾಹ್ನ ಸ್ವಲ್ಪ ಅನ್ನ ತಟ್ಟೆ ತುಂಬಾ ಸಾರು ತುಪ್ಪದಲ್ಲಿ ಫ್ರೈ ಮಾಡಿರುವ ಬೆಳ್ಳುಳ್ಳಿ' ಎಂದು ಶಾಲಿನಿ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?