ಬೈಕ್‌ನಲ್ಲಿ ಕವಿತಾ ಗೌಡ ಹಿಂದೆ ಕುಳಿತು ಚಂದನ್ ಹೋಗಿದ್ದೆಲ್ಲಿ?

Published : Sep 24, 2023, 07:15 PM ISTUpdated : Sep 24, 2023, 07:37 PM IST
ಬೈಕ್‌ನಲ್ಲಿ ಕವಿತಾ ಗೌಡ ಹಿಂದೆ ಕುಳಿತು ಚಂದನ್ ಹೋಗಿದ್ದೆಲ್ಲಿ?

ಸಾರಾಂಶ

'ಚಂದನ್-ಕವಿತಾ ಜೋಡಿಗೆ ಎಲ್ಲಿಗಾದರೂ ಹೋಗಲಿ, ದಂಪತಿಗಳು ಚೆನ್ನಾಗಿರಲಿ. ಲವ್ ಮ್ಯಾರೇಜ್ ಮಾಡಿಕೊಂಡಿರುವ ಈ ಜೋಡಿ ಹಲವರ ಕಣ್ಣು ಕುಕ್ಕುವಂತೆ ಓಡಾಡುತ್ತಿದ್ದಾರೆ. ಅದು ಹಾಗೆ ಇರಬೇಕು' ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರ ಅಭಿಪ್ರಾಯ. 

ಕಿರುತೆರೆಯ ಬಹುಬೇಡಿಕೆ ನಟ ಚಂದನ್ ಕುಮಾರ್ (Chandan Kuamr) ಇತ್ತೀಚೆಗೆ ತಮ್ಮ ಪತ್ನಿ ಕವಿತಾ ಗೌಡ (Kavitha Gowda) ಜತೆ ಟೂ ವ್ಹೀಲರ್ ರೈಡಿಂಗ್ ಹೋಗಿದ್ದಾರೆ. ಬೈಕ್‌ನಲ್ಲಿ ಹೋಗಿದ್ದು ಮಾತ್ರವಲ್ಲ, ಪತ್ನಿ ಹಿಂದೆ ಕುಳಿತು ತಮ್ಮದೇ ಕ್ಯಾಮರಾಗೆ ಫೋಸ್ ಕೊಡುತ್ತ ಚಂದನ್, ರೈಡಿಂಗ್ ಎಂಜಾಯ್ ಮಾಡಿದ್ದಾರೆ. ಚಂದನ್ ಜತೆ ಕವಿತಾ ಕೂಡ ರೈಡಿಂಗ್ ಮಾಡುತ್ತ ಎಂಜಾಯ್ ಮಾಡಿದ್ದು ಕ್ಯಾಮರಾ ಕಣ್ಭಲ್ಲಿ ಸೆರೆಯಾಗಿದೆ. ಅವರಿಬ್ಬರೂ ಕೇರಳದ 'ಕಡಮಕ್ಕುಡಿ ಐಲ್ಯಾಂಡ್ಸ್'ಗೆ ಹೋಗಿದ್ದಾರಂತೆ.  ಈ ಕ್ಯೂಟ್ ಕಪಲ್ ನೋಡಿ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. 

ಹಾಗಿದ್ದರೆ ಈ ಚೆಂದದ ತಾರಾ ಜೋಡಿ ಹೋಗಿದ್ದಾದರೂ ಎಲ್ಲಿಗೆ? ಕೇರಳದ ಸುಂದರ ದ್ವೀಪ 'ಕಡಮಕ್ಕುಡಿ ಐಲ್ಯಾಂಡ್‌' ಗೆ ಹೋಗಿದ್ದರಂತೆ. ಟೂ ವ್ಹೀಲರ್ ಮೂಲಕ ಹೋಗಿದ್ದ ಈ ಜೋಡಿಯನ್ನು ನೋಡಿ ಹಲವರು ಹುಬ್ಬೇರಿಸಿದ್ದಾರೆ. ಕಾರಿನಲ್ಲಿ ಹೋಗುವ ಬದಲು ದ್ವಿ ಚಕ್ರ ವಾಹನದಲ್ಲಿ ಹೋಗಿದ್ದಾದರೂ ಏಕಿರಬಹುದು ಎಂಬುದು ಕೆಲವರ ಪ್ರಶ್ನೆ. 'ಡಿಫ್ರೆಂಟ್ ಆಗಿರಲಿ' ಎಂಬುದು ಹಲವರ ಉತ್ತರ!

ಖುಷಿಯಲ್ಲಿ ಸಮಂತಾ ಜೊತೆ ಸ್ಕ್ರೀನ್ ಹಂಚಿಕೊಂಡ ದೇವರಕೊಂಡನಿಗೆ ಏನಾದ್ರೂ ರೋಗನಾ?

ರಾಧಾ ಕಲ್ಯಾಣ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟ ಚಂದನ್, ಬಳಿಕ ತೆಲುಗು ಸೇರಿದಂತೆ ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 'ಕಟ್ಟೆ, ಎರಡೊಂದ್ಲ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023, ಪರಿಣಯ, ಪ್ರೇಮ ಬರಹ ಮುಂತಾದ ಕನ್ನಡ ಚಿತ್ರಗಳಲ್ಲಿ ಸಹ ನಟ ಚಂದನ್ ನಟಿಸಿದ್ದಾರೆ. ನಟಿ ಕವಿತಾ ಗೌಡ ಲಕ್ಸ್ಮೀ ಬಾರಮ್ಮ ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ್ದು, 'ಗೋವಿಂದ ಗೋವಿಂದ' ಹಾಗೂ ದ್ವಿ ಮುಖ' ಚಿತ್ರದಲ್ಲಿ ನಟಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಶೋಗೆ ದಿನಗಣನೆ; ಸ್ಪರ್ಧಿಗಳ ಪಟ್ಟಿ ಅಂತಿಮವಾಯ್ತಾ? 

'ಅದೇನೆ ಇರಲಿ, 'ಚಂದನ್-ಕವಿತಾ ಜೋಡಿಗೆ ಎಲ್ಲಿಗಾದರೂ ಹೋಗಲಿ, ದಂಪತಿಗಳು ಚೆನ್ನಾಗಿರಲಿ. ಲವ್ ಮ್ಯಾರೇಜ್ ಮಾಡಿಕೊಂಡಿರುವ ಈ ಜೋಡಿ ಹಲವರ ಕಣ್ಣು ಕುಕ್ಕುವಂತೆ ಓಡಾಡುತ್ತಿದ್ದಾರೆ. ಅದು ಹಾಗೆ ಇರಬೇಕು' ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರ ಅಭಿಪ್ರಾಯ. ಒಟ್ಟಿನಲ್ಲಿ ಶೂಟಿಂಗ್ ಬ್ರೇಕ್ ತೆಗೆದುಕೊಂಡು ಇಬ್ಬರೂ ಹಾಯಾಗಿ 'ಕಡಮಕ್ಕುಡಿ ಐಲ್ಯಾಂಡ್ಸ್'ನ ನೀರಿನಲ್ಲಿ, ಸುತ್ತಲೂ ಬೀಸುತ್ತಿದ್ದ ತಂಪಾದ ಗಾಳಿಯಲ್ಲಿ ಎಂಜಾಯ್ ಮಾಡಿಕೊಂಡು ಬಂದು 'ರೀ-ಫ್ರೆಶ್' ಆಗಿದ್ದಾರೆ. ಮುಂದಿನ ಪ್ರಾಜೆಕ್ಟ್‌ಗೆ ರೆಡಿಯಾಗಲಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...