ಹೊಸ ಕಾರ್ಯಕ್ರಮಗಳ ದೀವಿಗೆ;ಸ್ಟಾರ್ ಸುವರ್ಣ ಬದಲಾವಣೆಯ ಬೆಳಕು

Kannadaprabha News   | Asianet News
Published : Nov 23, 2020, 09:19 AM IST
ಹೊಸ ಕಾರ್ಯಕ್ರಮಗಳ ದೀವಿಗೆ;ಸ್ಟಾರ್ ಸುವರ್ಣ ಬದಲಾವಣೆಯ ಬೆಳಕು

ಸಾರಾಂಶ

ಬದಲಾವಣೆ... ಎಲ್ಲರೂ ಬಯಸುವ, ಎಲ್ಲರಿಗೂ ಬೇಕಾಗಿರುವ ಸಂಗತಿ. ಬದಲಾವಣೆಯಿಂದಷ್ಟೇ ಹೊಸ ಆಶಯ, ಹೊಸ ಆಕಾಂಕ್ಷೆ ಮತ್ತು ಹೊಸ ಆಲೋಚನೆ ಹುಟ್ಟಲು ಸಾಧ್ಯ. ಕಿರುತೆರೆಯಲ್ಲಿ ಅಗ್ರಸ್ಥಾನದ ಕಡೆಗೆ ದೃಢವಾದ ಹೆಜ್ಜೆಯಿಟ್ಟಿರುವ ಸ್ಟಾರ್‌ ಸುವರ್ಣ ವಾಹಿನಿ, ಈ ಬದಲಾವಣೆಯ ಅವಶ್ಯಕತೆಯನ್ನು ತಿಳಿಯುವುದರಲ್ಲೂ ಮೊದಲಿದೆ. 

ನಾ ಬದಲಾದರೆ, ಸಮಾಜ ಬದಲಾಗುತ್ತದೆ ಅನ್ನೋ ನಂಬಿಕೆಯಂತೆ, ಒಂದೊಂದೇ ಪ್ರಗತಿಪರ ಕಥೆಗಳ ಮೂಲಕ ದೃಷ್ಟಿಕೋನ ಮತ್ತು ಅಭಿರುಚಿಯಲ್ಲೂ ಬದಲಾವಣೆಯ ಬೆಳಕು ಮೂಡಿಸಲು ಮುಂದಾಗಿದೆ. ಹೌದು, ನಿನ್ನೆಯಷ್ಟೆಈ ಬದಲಾವಣೆಯ ಬೆಳಕಿಗೆ ಅದ್ದೂರಿ ಶುಭಾರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌, ನಟಿಯರಾದ ರಚಿತಾ ರಾಮ್‌ ಮತ್ತು ಹರಿಪ್ರಿಯ ಸೇರಿದಂತೆ ಸ್ಟಾರ್‌ ಸುವರ್ಣ ವಾಹಿನಿಯ ಕಲಾವಿದರು ಬದಲಾವಣೆಯ ಬೆಳಕು ಹಚ್ಚಿದ್ದಾರೆ.

'ಲಕ್ಷ್ಮಿ ಬಾರಮ್ಮ' ಚಿನ್ನು ಈಗ 'ಮನಸೆಲ್ಲಾ ನೀನೇ' ಅಂತಿದ್ದಾರೆ; ಯಾರಿಗೆ ಗೊತ್ತಾ? 

ಪುನೀತ್‌ ರಾಜ್‌ಕುಮಾರ್‌ ಸ್ಟಾರ್‌ ಸುವರ್ಣ ವಾಹಿನಿಯ ಹೊಸ ಲೋಗೋ ಲಾಂಚ್‌ ಮಾಡುವ ಮೂಲಕ ಬದಲಾವಣೆಯ ಬೆಳಕು ಎಲ್ಲೆಡೆ ಪ್ರಕಾಶಮಾನವಾಗಿ ಹರಡಲು ಮುನ್ನುಡಿ ಬರೆದಿದ್ದಾರೆ.

 

ಬದಲಾವಣೆಯ ಬೆಳಕು ಹರಿಸಲಿವೆ ಸಾಲು ಸಾಲು ಹೊಸ ಕಾರ್ಯಕ್ರಮಗಳು

ನವೆಂಬರ್‌ 11ರಿಂದ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಸು, ಕರ್ನಾಟಕದ ಸಾವಿರಾರು ಮಹಿಳೆಯರ ಕನಸುಗಳ ಪ್ರತೀಕವಾಗಿದ್ದಾಳೆ. ಇದರೊಂದಿಗೆ ಹೊಸ ಆಲೋಚನೆಯ ‘ಮನಸೆಲ್ಲಾ ನೀನೆ’ ಮತ್ತು ‘ರುಕ್ಕು’ ಧಾರಾವಾಹಿಗಳು ಸಹ ಶೀಘ್ರದಲ್ಲೇ ಕಿರುತೆರೆ ವೀಕ್ಷಕರನ್ನು ರಂಜಿಸಲು ಸಿದ್ಧವಾಗಿವೆ. ಮುಖ್ಯಮಂತ್ರಿಗಳಿಂದ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯ ಟೀಸರ್‌ ಲಾಂಚ್‌ ಜಗದೋದ್ಧಾರಕ್ಕಾಗಿ ಕರುನಾಡಲ್ಲಿ ಅವತರಿಸಿದ ದೈವಾಂಶ ಸಂಭೂತ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯ ಟೀಸರ್‌ ಲೋಕಾರ್ಪಣೆ ಮಾಡಿದ್ದಾರೆ ಸಿಎಂ ಯಡಿಯೂರಪ್ಪ. ಕೆಲವೇ ದಿನಗಳಲ್ಲಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿ ಆಧ್ಯಾತ್ಮದ ಬೆಳಕು ಹರಿಸಲಿದೆ.

ಸ್ಟಾರ್‌ ಸುವರ್ಣದಲ್ಲಿ ಸುವರ್ಣ ಸಂಕಲ್ಪ ಮತ್ತು ಬೊಂಬಾಟ್‌ ಭೋಜನ

ಇಂದಿನಿಂದ ಸುವರ್ಣ ಸೂಪರ್‌ ಸ್ಟಾರ್‌

ನ.23ರಿಂದ ಸೋಮವಾರದಿಂದ ಶನಿವಾರ ಸಂಜೆ 5ಗಂಟೆಗೆ, ಸಾಮಾನ್ಯ ಮಹಿಳೆಯರ ಅಸಾಮಾನ್ಯ ಸಾಧನೆಯನ್ನು ಸಂಭ್ರಮಿಸುವ ಸೂಪರ್‌ ಶೋ ‘ಸುವರ್ಣ ಸೂಪರ್‌ ಸ್ಟಾರ್‌’ ಪ್ರಸಾರವಾಗಲಿದೆ. ಎಲೆ ಮರೆಯ ಕಾಯಿಯಂತೆ, ತಮ್ಮ ಕುಟುಂಬದ ಸಂತೋಷಕ್ಕಾಗಿ ಪ್ರತಿ ನಿಮಿಷ ನಿಸ್ವಾರ್ಥವಾಗಿ ನೆರವಾಗುವ ಲಕ್ಷಾಂತರ ಹೆಣ್ಣುಮಕ್ಕಳೇ ಈ ಕಾರ್ಯಕ್ರಮದ ಹೈಲೈಟ್‌. ಇಂಥಾ ಸೂಪರ್‌ ಸ್ಟಾರ್‌ಗಳನ್ನ ಕರ್ನಾಟಕದ ಮೂಲೆ ಮೂಲೆಯಿಂದ ಹುಡುಕಿ ತಂದಿದೆ ಸ್ಟಾರ್‌ ಸುವರ್ಣ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಮಹಿಳೆಯರು ಮುಖದ ತುಂಬ ನಗು, ಕೈ ತುಂಬ ಬಹುಮಾನ ಗೆದ್ದು ಮನೆಗೆ ಹೋಗೋದು ಗ್ಯಾರೆಂಟಿ. ಮನೆ ಮನೆಯ ಸೂಪರ್‌ ಸ್ಟಾರ್‌ಗಳಿಗೆ ತಮ್ಮ ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಪ್ರೀತಿಯ ಸನ್ಮಾನ ಮಾಡಲು ಸಿದ್ಧವಾಗಿದ್ದಾರೆ ನಿರೂಪಕಿ ಶಾಲಿನಿ.

 

ಬದಲಾವಣೆಯ ಈ ಹೊಸ ಹಾದಿಯಲ್ಲಿ ಸ್ಟಾರ್‌ ಸುವರ್ಣ ವಾಹಿನಿಯ ಯಶಸ್ಸಿಗೆ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದವೂ ಸಿಕ್ಕಿದೆ. ಕನ್ನಡ ಕಿರುತೆರೆ ವೀಕ್ಷಕರ ಹಾರೈಕೆಯೊಂದಿಗೆ, ಇನ್ನು ಮುಂದೆ ಕರ್ನಾಟಕದ ಮನೆ ಮನಗಳಲ್ಲೂ ಪ್ರಜ್ವಲಿಸಲಿದೆ ಸ್ಟಾರ್‌ ಸುವರ್ಣ ವಾಹಿನಿಯ ‘ಬದಲಾವಣೆಯ ಬೆಳಕು’.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!