
ವಿರಾಜ್ ಕನ್ನಡಿಗ
ಮೊದಲೆಲ್ಲಾ ಯಾರೊ ಒಬ್ಬರು ಸಂಗೀತ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಸಂಗೀತ ಕಲಿಯಬೇಕಿತ್ತು. ಅನಂತರ ಸಂಗೀತ ಕಂಪೋಸ್ ಮಾಡಿ ಆಲ್ಬಮ್ ಸಿದ್ಧಗೊಳಿಸಿ ಯಾವುದೋ ಆಡಿಯೋ ಕಂಪನಿಗೆ ಎಡತಾಕಿ ಅವರು ಒಪ್ಪಿದರೆ ಕ್ಯಾಸೆಟ್ ತಂದು ಆ ಕ್ಯಾಸೆಟ್ ಜನರಿಗೆ ತಲುಪಿಸಲು ದೊಡ್ಡ ಸಾಹಸ ಮಾಡಬೇಕಿತ್ತು. ಆದರೆ ಈಗ ಹಾಗೇನಿಲ್ಲ. ಯೂಟ್ಯೂಬ್‌ಗಿಂತ ದೊಡ್ಡ ಗುರು ಮತ್ತೊಂದಿಲ್ಲ.
ನಿಮಗೆ ಏನು ಕಲಿಯಬೇಕು ಎಂಬ ಸ್ಪಷ್ಟತೆ ಇದ್ದರೆ ಯೂಟ್ಯೂಬ್‌ನಲ್ಲಿ ಬೇಕಾದಷ್ಟು ವಿಡಿಯೋಗಳು ಸಿಗುತ್ತವೆ. ನನಗೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಅದೇ ವೇಳೆ ಸಂಗೀತ ಅಂದರೆ ಇಷ್ಟವಿತ್ತು. ಹಾಗಂತ ಅದರ ಹಿಂದೆ ಹೋಗಿ ಕಲಿಯುವ ಅವಕಾಶ ಇರಲಿಲ್ಲ. ಕೆಲಸವೂ ಮಾಡಬೇಕಿತ್ತು. ಅದರ ಜತೆಗೆ ಪ್ರವೃತ್ತಿಯ ಕಡೆಗೆ ಗಮನ ಹರಿಸುವುದು ನನ್ನ ಖುಷಿಗೆ ಬೇಕಾಗಿತ್ತು. ಅದಕ್ಕಾಗಿ ಯೂಟ್ಯೂಬ್‌ನಲ್ಲಿ ಟ್ಯುಟೋರಿಯಲ್ ನೋಡಿಕೊಂಡು ಕಲಿತೆ. ಅದನ್ನು ನಾನೇ ಎಡಿಟ್ ಮಾಡಿ, ಒಂದು ಕಾರ್ಯಕ್ರಮವನ್ನಾಗಿ ರೂಪಿಸಿಕೊಂಡು ಮತ್ತೆ ಅದೇ ಯೂಟ್ಯೂಬ್‌ನಲ್ಲಿ ಒಂದು ಚಾನಲ್ ತೆರೆದು ಕಾರ್ಯಕ್ರಮ ಪೋಸ್‌ಟ್ ಮಾಡಿದೆ.
ತಂತ್ರಜ್ಞಾನ ಬಳಸಿಕೊಳ್ಳುವುದು ಕಲಿಯಿರಿ: ರಘು ಗೌಡ
ಈಗ ಜನರನ್ನು ತಲುಪಲು ಜಾಸ್ತಿ ಶ್ರಮ ಪಡಬೇಕಿಲ್ಲ. ಯೂಟ್ಯೂಬ್‌ನಲ್ಲಿ ಪ್ರಕಟಿಸಿದರೆ ಸಾಕು. ಜನ ಇಷ್ಟಪಟ್ಟರೆ ಒಂದೇ ದಿನದಲ್ಲಿ ಸ್ಟಾರ್ ಆಗಬಹುದು. ನಾನು ನನ್ನ ಕಿರಿಯರಿಗೆ ಹೇಳುವುದಿಷ್ಟೇ- ನಿಮಗೆ ಕಲಿಯಬೇಕು ಎಂದರೆ ಯೂಟ್ಯೂಬ್ ನೋಡಿ ಕಲಿಯಿರಿ ಮತ್ತು ಬೆಳೆಯಿರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.