'ಸರಸು' ಧಾರಾವಾಹಿ ಅಂತ್ಯವಾಗುತ್ತಿರುವುದಕ್ಕೆ ಶಾಕ್ ಆದ ನಟ ಸ್ಕಂದ ಅಶೋಕ್!

By Suvarna News  |  First Published Sep 5, 2021, 12:07 PM IST

ಇದ್ದಕ್ಕಿದ್ದಂತೆ ಧಾರಾವಾಹಿ ಮುಕ್ತಾಯವಾಗುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ ನಟ ಸ್ಕಂದ ಅಶೋಕ್.


ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಸು ಧಾರಾವಾಹಿ ಇದ್ದಕ್ಕಿದ್ದಂತೆ ಅಂತ್ಯ ಕಾಣುತ್ತಿದೆ. ನಟ ಸ್ಕಂದ ಅಶೋಕ್ ಶಿಕ್ಷಣ ತಜ್ಞ ಅರವಿಂದ್ ಪಾತ್ರದಲ್ಲಿ ಕಾಣಿಸಿಕೊಂಡರೆ , ನಟಿ ಸುಪ್ರೀತಾ ಗೌಡ ವಿದ್ಯಾರ್ಥಿನಿ ಪಾತ್ರದಲ್ಲಿ ಮಿಂಚಿದ್ದಾರೆ. ಸುಮಾರು 200 ಸಂಚಿಕೆ ಪೂರೈಸಿರುವ ಧಾರಾವಾಹಿ ಅಂತ್ಯವಾಗುತ್ತಿರುವುದಕ್ಕೆ ನಟ ಸ್ಕಂದ ಬೇಸರ ವ್ಯಕ್ತ ಪಡಿಸಿದ್ದಾರೆ. 

'ಧಾರಾವಾಹಿಯಲ್ಲಿ ಈಗೀಗ ಒಂದೊಂದೇ ಕುತೂಹಲ ಹೆಚ್ಚಿಸುವ ಅಂಶಗಳು ಆ್ಯಡ್ ಆಗುತ್ತಿದ್ದವು. ನನ್ನ ಪಾತ್ರ ಅರವಿಂದ್‌ಗೆ ತಾಯಿ ಬಗ್ಗೆ ಈಗ ಮಾಹಿತಿ ಸಿಗಲು ಶುರುವಾಗಿತ್ತು ಇದೇ ಸಮಯಕ್ಕೆ ಅವನ ಜೀವನದಲ್ಲಿ ಒಂದೊಳ್ಳೆ ಲವ್ ಸ್ಟೋರಿಯೂ ಶುರುವಾಗಿತ್ತು. ನನಗೂ ಸ್ಪಷ್ಟವಾಗಿ ಗೊತ್ತಿಲ್ಲ ಯಾಕೆ ಧಾರಾವಾಹಿ ಅಂತ್ಯವಾಗುತ್ತಿದೆ ಎಂದು. ನಾನು ಇಡೀ ತಂಡ ಜೊತೆ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳುವೆ. ಇದರ ಜೊತೆಗೆ ಅರವಿಂದ್ ಪಾತ್ರಕ್ಕೆ ಜನರು ತೋರಿಸಿದ ಪ್ರೀತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುವೆ,' ಎಂದು ಸ್ಕಂದ ಅಶೋಕ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.

ಹೆಣ್ಣು ಮಕ್ಕಳ ದನಿಯಾಗಲು ಬರ್ತಿದ್ದಾಳೆ 'ಸರಸು'..!

Tap to resize

Latest Videos

ರಾಧಾ ರಮಣ ಧಾರಾವಾಹಿ ನಂತರ ಸರಸು ಮೂಲಕ ಕಮ್ ಬ್ಯಾಕ್ ಮಾಡಿದ ಸ್ಕಂದ ಅವರನ್ನು ಆನ್‌ ಸ್ಕ್ರೀನ್ ಮೇಲೆ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತೇವೆ, ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಸ್ಕಂದ ಕೈಯಲ್ಲಿ ಕೆಲವೊಂದು ಧಾರಾವಾಹಿಗಳು ಹಾಗೂ ಸಿನಿಮಾ ಪ್ರಾಜೆಕ್ಟ್‌ಗಳಿದ್ದು, ಸದ್ಯದ ಮಟ್ಟಕ್ಕೆ ಸಣ್ಣ ಬ್ರೇಕ್ ತೆಗೆದುಕೊಂಡು ತಮ್ಮ ಹುಟ್ಟೂರು ಚಿಕ್ಕಮಗಳೂರಿನಲ್ಲಿ ಕೃಷಿಯಲ್ಲಿ ಬ್ಯುಸಿಯಾಗಲಿದ್ದಾರೆ. ಕೆಲವು ದಿನಗಳ ಹಿಂದೆ ಜೀ ಕನ್ನಡ ಸತ್ಯ ಧಾರಾವಾಹಿಯಲ್ಲಿ ಗೆಸ್ಟ್ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು.

click me!