ಯಾರಿಗೂ ಹೇಳದೇ ಒಂದು ಹೆಣ್ಣು ಮಗುವಿಗೆ ಆಧಾರ ಸ್ತಂಭವಾಗಿ ನಿಂತ ನಟಿ ನೇಹಾ ಗೌಡ. ಇದೀಗ ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆದು ಕೊಳ್ಳಲು ಮುಂದಾಗಿದ್ದಾರೆ.
'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಗೊಂಬೆ ಅಲಿಯಾಸ್ ನೇಹಾ ಗೌಡ ಕನ್ನಡ ಹಾಗೂ ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಿರುತೆರೆ ನಟಿಯಾಗಿ ಬ್ಯಾಕ್ ಟು ಬ್ಯಾಕ್ ಜನ ಮೆಚ್ಚಿದ ನಟಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇದೀಗ ನೇಹಾ ಹಾಗೂ ಅವರ ಪತಿ ಚಂದನ್, ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ನೇಹಾ ಮಗು ದತ್ತು ಪಡೆದುಕೊಳ್ಳುವ ಆಸೆ ಬಗ್ಗೆ ಹಂಚಿಕೊಂಡಿದ್ದಾರೆ.
'ನನಗೆ ಎಂದಿಗೂ ಪ್ರಾಮುಖ್ಯತೆ ನನ್ನ ಕುಟುಂಬ ಹಾಗೂ ಅ ಸಂಬಂಧವನ್ನು ಉಳಿಸಿಕೊಂಡು ಕಾಪಾಡಿಕೊಂಡು ಹೋಗುವುದು. ಹೆಣ್ಣು ಮಗು ದತ್ತು ಪಡೆದುಕೊಳ್ಳುವ ಆಲೋಚನೆ ಹಲವು ವರ್ಷಗಳಿಂದ ನನ್ನ ತಲೆಯಲ್ಲಿತ್ತು. ನನ್ನ ಕುಟುಂಬದ ಜೊತೆಗೂ ನಾನು ಹಂಚಿ ಕೊಂಡಿರಲಿಲ್ಲ. ರಾಜಾ ರಾಣಿ ವೇದಿಕೆ ಮೇಲೆ ನಾನು ಇದನ್ನು ಹಂಚಿಕೊಂಡಾಗ ಚಂದನ್‌ಗೆ ಆಶ್ಚರ್ಯ ಆಯ್ತು. ಚಂದನ್ ಸದಾ ನನ್ನ ಆಯ್ಕೆಗಳನ್ನು ಒಪ್ಪಿಕೊಳ್ಳುವ ವ್ಯಕ್ತಿ,' ಎಂದು ನೇಹಾ ಹೇಳಿದ್ದಾರೆ.
ಮಜ್ಜಿಗೆ ಹುಳಿ ಕಲರ್ ಎನು?; ಚಂದನ್ ಶೆಟ್ಟಿ- ನಿವೇದಿತಾ ಅಡುಗೆ ಸರ್ಕಸ್ ನೋಡಿ..ಹಲವು ವರ್ಷಗಳಿಂದ ನೇಹಾ ಒಂದು ಹೆಣ್ಣಿಗೆ ಪರೋಕ್ಷವಾಗಿ ಕುಟುಂಬದ ಪ್ರೀತಿ ತೋರಿಸುತ್ತಿದ್ದಾರೆ. ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 'ಈಗ ನನಗೆ ಅದರ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಏಕೆಂದರೆ ಈಗಾಗಲೇ ಆಕೆ ಇಂಡಿಪೆಂಡೆಂಟ್ ಆಗಿದ್ದಾಳೆ. ತನ್ನದೇ ಕ್ಷೇತ್ರದಲ್ಲಿ ಒಳ್ಳೇಯ ಕೆಲಸ ಮಾಡುತ್ತಿದ್ದಾಳೆ. ನನ್ನ ಕೈಲಾಗುವಷ್ಟು ನಾನು ಸಹಾಯ ಮಾಡಿದೆ. ಆಕೆ ಶ್ರಮದಿಂದ ಜೀವನ ನಡೆಸುತ್ತಿದ್ದಾಳೆ. ನಾನು ಇಂಡಸ್ಟ್ರಿ ಹಾಗೂ ಅದರ ಹೊರತು ಅನೇಕ ಹೆಣ್ಣು ಮಕ್ಕಳನ್ನು ನೋಡಿದ್ದೇನೆ. ಎಷ್ಟು ಕಷ್ಟ ಪಡುತ್ತಾರೆ. ನಾನು ಅದೃಷ್ಟ ಮಾಡಿದ್ದೆ, ನನ್ನ ಕುಟುಂಬ ಸದಾ ನನ್ನ ಪರವಾಗಿತ್ತು. ಇದೇ ಪ್ರೀತಿ ಹಾಗೂ ವಾತ್ಸಲ್ಯವನ್ನು ನಾನು ಬೇರೆ ಹೆಣ್ಣು ಮಕ್ಕಳಿಗೆ ನೀಡಬೇಕು. ಅವರೂ ಅಪ್ಪ ಅಮ್ಮನ ಪ್ರೀತಿ ಏನೆಂದು ತಿಳಿದುಕೊಳ್ಳಬೇಕು,' ಎಂದು ನೇಹಾ ಮಾತನಾಡಿದ್ದಾರೆ.