'ಮತ್ತೆ ವಸಂತ' ಧಾರಾವಾಹಿಯಿಂದ ನಟ ವಿವೇಕ್ ಸಿಂಹ ಹೊರ ಬಂದಿದ್ದಾರೆ. ಕಾರಣ ತಿಳಿಯದ ಅಭಿಮಾನಿಗಳು ನಿರಾಶರಾಗಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ 'ಮತ್ತೆ ವಸಂತ' ಧಾರಾವಾಹಿಯಿಂದ ನಾಯಕ ವಿವೇಕ್ ಸಿಂಹ ಹೊರ ಬಂದಿದ್ದಾರೆ. ಕಾರಣ ತಿಳಿಯದ ಅಭಿಮಾನಿಗಳು ಬೇಸರ ವ್ತಕ್ತ ಪಡಿಸುತ್ತಿದ್ದರು. ಕೂಡಲೇ ವಿವೇಕ್ ಈ ವಿಚಾರದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ.
'ಗಟ್ಟಿಮೇಳ'ದಲ್ಲಿ ವೇದಾಂತ್ ಮಿಸ್ಸಿಂಗ್; ಅನುಮಾನದ ಪ್ರಶ್ನೆಗಳು ಹೆಚ್ಚಾಯ್ತು?
'ಮಹಾದೇವಿ', 'ಸೌಭಾಗ್ಯವತಿ' ಧಾರಾವಾಹಿಯಲ್ಲಿ ನಟಿಸಿರುವ ವಿವೇಕ್ 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಶೋ ತೀರ್ಪುಗಾರ್ತಿ ನಟಿ ರಕ್ಷಿತಾ ಅವರ ಫೇವರೆಟ್ ಡ್ಯಾನ್ಸರ್ ಆಗಿದ್ದರು.
ಸ್ಟಾರ್ ಸುವರ್ಣದಲ್ಲಿ ಶುರುವಾಗಲಿದೆ 'ಮತ್ತೆ ವಸಂತ'!
ಇನ್ಸ್ಟಾ ಪೋಸ್ಟ್:
'ಹಾಯ್ ಇನ್ಸ್ಟಾ ಹಾಗೂ ಎಫ್‌ಬಿ ಫ್ಯಾಮಿಲಿ, ನಾನು ಅಧಿಕೃತವಾಗಿ 'ಮತ್ತೆ ವಸಂತ' ಧಾರಾವಾಹಿಯಿಂದ ಹೊರ ಬಂದಿರುವೆ. ನಾನು ನನ್ನ ಸಹ ಕಲಾವಿದರನ್ನು ಮಿಸ್ ಮಾಡಿಕೊಳ್ಳುವೆ. ದೇಶಪಾಂಡೆ, ಕಿರಣ್ ಕುಮಾರ್, ಕೃಷ್ಣರಾಜ್‌ಶೆಟ್ಟಿ, ಮೋಹನ್, ಸ್ಪಂದನಾ ಹಾಗೂ ಎಲ್ಲಾ ತಂತ್ರಜ್ಞನರನ್ನು. ಲೈಟ್ ಬಾಯ್ ಮತ್ತು ಮೇಕಪ್ ಆರ್ಟಿಸ್ಟ್ ತಂಡದವರಿಗೂ ನನ್ನ ಧನ್ಯವಾದಗಳು. ನಮ್ಮ ನಿರ್ಮಾಪಕರು ಹಾಗೂ ಸ್ಟಾರ್ ಸುವರ್ಣದವರು ನನಗೆ ಈ ಅವಕಾಶ ನೀಡಿದ್ದಕ್ಕೆ ಚಿರಋಣಿ,' ಎಂದು ಬರೆದುಕೊಂಡಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಯಾವುದೇ ಹೊಸ ಎಪಿಸೋಡ್ ಪ್ರಸಾರವಾಗುತ್ತಿರಲಿಲ್ಲ.ಮತ್ತೆ ಮೊದಲಿನಿಂದ ಧಾರಾವಾಹಿಯನ್ನು ಪ್ರಾರಂಭಿಸಿದ್ದರು, ಇತ್ತೀಚಿನ ದಿನಗಳಲ್ಲಿ ಹೊಸ ಎಪಿಸೋಡ್ ಬರುತ್ತಿದ್ದು, ವಿವೇಕ್ ಹೊರ ಬಂದ ನಂತರವೂ ಧಾರಾವಾಹಿಯನ್ನು ತಪ್ಪದೇ ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ವಿಭಿನ್ನವಾದ ರೀತಿಯಲ್ಲಿ ನಿಮ್ಮನ್ನು ಮನೋರಂಜಿಸಲು ರೆಡಿಯಾಗುವೆ ಎಂದು ಭರವಸೆ ನೀಡಿದ್ದಾರೆ.