ಉದಯ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಹೆಸರು ‘ಕಾವ್ಯಾಂಜಲಿ’.
ಆಗಸ್ಟ್ ತಿಂಗಳ 3 ರಿಂದ ಈ ಧಾರಾವಾಹಿ ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೂ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಒಂದಿಷ್ಟುಜನಪ್ರಿಯತೆ ಪಡೆದುಕೊಂಡಿರುವ ಧಾರಾವಾಹಿಗಳ ಸಾಲಿಗೆ ಈ ಹೊಸ ಧಾರಾವಾಹಿ ತೂಡ ಸೇರ್ಪಡೆಗೊಳ್ಳಲಿದೆ ಎನ್ನುವ ನಂಬಿಕೆಯ ವಾಹಿನಿಯದ್ದು.
ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!ಮನರಂಜನೆಯ ಜತೆಗೆ ಪ್ರೀತಿ- ಪ್ರೇಮ ಕತೆಯನ್ನು ಹೇಳುವ ಧಾರಾವಾಹಿ ‘ಕಾವ್ಯಾಂಜಲಿ’. ಹೊಸ ಕಲ್ಪನೆಯ ತ್ರಿಕೋನ ಪ್ರೇಮಕತೆ ಇದಾಗಿದ್ದು, ಮೆಲೋಡಿ ಸಂಗೀತಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಅಕ್ಕ ತಂಗಿ ಬಾಂಧವ್ಯದ ನೆರಳಿನಲ್ಲಿ ಕತೆ ಸಾಗುತ್ತದೆ. ಶಂಕರ್ ವೆಂಕಟರಾಮನ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಆದಶ್‌ರ್ ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ರುದ್ರಮುನಿ ಬೆಳೆಗೆರೆ ಛಾಯಾಗ್ರಾಹಣ ಮಾಡುತ್ತಿದ್ದಾರೆ.
'ನಾನು ನನ್ನ ಕನಸು' ಸೀರಿಯಲ್ ನಟಿ ನಿಶಿತಾ ರಿಯಲ್ ಲೈಫ್, ಕುಟುಂಬ ಹೀಗಿದೆ!
ಅದ್ದೂರಿ ಮೇಕಿಂಗ್, ಹೊಸತನದ ಕತೆಯೊಂದಿಗೆ ಬರುತ್ತಿರುವ ‘ಕಾವ್ಯಾಂಜಲಿ’ ಧಾರಾವಾಹಿಯಲ್ಲಿ ಸುಸ್ಮಿತ, ವಿದ್ಯಾಶ್ರೀ ಜಯರಾಂಕಾವ್ಯ, ಪವನ್‌ರವೀಂದ್ರ, ಮಿಥುನ್ ತೇಜಸ್ವಿ, ರವಿ ಭಟ್, ಮಹಾಲಕ್ಷ್ಮಿ, ಮರಿನಾತಾರ, ರಾಮಸ್ವಾಮಿ, ನಿಸರ್ಗ, ಸಿಂಚನಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶಂಕರ್ ಅಶ್ವಥ್ ಅವರು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.