ವಿಶ್ವದ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬೆಂಗಳೂರಿಗೆ ಬಂದರೆ ಬಂಧಿಸಿ ಜೀಪಲ್ಲಿಟ್ಟ ಪೊಲೀಸರು!

Published : Sep 06, 2024, 09:03 PM ISTUpdated : Sep 06, 2024, 09:19 PM IST
ವಿಶ್ವದ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬೆಂಗಳೂರಿಗೆ ಬಂದರೆ ಬಂಧಿಸಿ ಜೀಪಲ್ಲಿಟ್ಟ ಪೊಲೀಸರು!

ಸಾರಾಂಶ

ಜರ್ಮನ್ ಸೋಶಿಯಲ್ ಮೀಡಿಯಾ ತಾರೆ ಯೂನೀಸ್ ಝರೂರಾ ಬೆಂಗಳೂರಿನಲ್ಲಿ ಅಭಿಮಾನಿಗಳಿಗೆ ಐಫೋನ್‌ಗಳನ್ನು ಉಡುಗೊರೆ ನೀಡುವ ವೇಳೆ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದು ಕೂರಿಸಿದ್ದಾರೆ.

ಬೆಂಗಳೂರು (ಸೆ.06): ವಿಶ್ವದ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಯೂನೀಸ್ ಝರೂರಾ (German Social media influencer Younes Zarou) ಅವರು 14 ಮಿಲಿಯನ್‌ಗಿಂತಲೂ ಅಧಿಕ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದು, ವಾರ್ಷಿಕ ಮಿಲಿಯನ್‌ಗಟ್ಟಲೆ ಹಣ ಸಂಪಾದಿಸುತ್ತಾರೆ. ಇವರು ಜಗತ್ತಿನ ವಿವಿಧ ದೇಶಗಳಿಗೆ ಪ್ರವಾಸಕ್ಕೆ ತೆರಳಿ ಕೆಲವು ಸರಳ ಪ್ರಶ್ನೆ ಕೇಳಿ ಐಫೋನ್ ಗಿಫ್ಟ್ (iPhone Gift) ಕೊಡುತ್ತಾರೆ. ಇವರು ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದು, ಬೆಂಗಳೂರಿನಲ್ಲಿ ಬಂದು ಪ್ರಶ್ನೆಗಳನ್ನು ಕೇಳುತ್ತಾ ವಿಡಿಯೋ ಮಾಡುತ್ತಿದ್ದರೆ ಅವರನ್ನು ಬಂದು ಪೊಲೀಸರು ಬಂಧಿಸಿ ಜೀಪಿನಲ್ಲಿ ಕೂರಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಜರ್ಮನಿಯ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಯೂನೀಸ್ ಝರೂರಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ 14 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ. ಅವರು ವಾರ್ಷಿಕ ಕೋಟ್ಯಾಂತರ ರೂ. ಆದಾಯವನ್ನೂ ಗಳಿಸುತ್ತಿದ್ದು, ಅವರು ವಿಶ್ವದ ಹಲವು ದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ಕೆಲವು ಸರಳ ಪ್ರಶ್ನೆಗಳನ್ನು ಕೇಳಿ, ಉತ್ತರಿಸಿದವರಿಗೆ ದುಬಾರಿ ಬೆಲೆಯ ಐಫೋನ್ ಗಿಫ್ಟ್ ನೋಡುತ್ತಾರೆ. ಅಂಥದ್ದರಲ್ಲಿ ಅವರು ನಮ್ಮ ದೇಶಕ್ಕೆ, ನಮ್ಮ ನಗರಕ್ಕೆ ಬರಲಿ ಎಂದು ಬೇಡಿಕೊಳ್ಳುವ ಕೋಟ್ಯಾಂತರ ಜನರಿದ್ದಾರೆ. ವಿಶ್ವದ ಪ್ರಮುಖ ನಗರಗಳನ್ನು ಸುತ್ತಾಡಿದ ಜರ್ಮನಿಯ ಯೂನೀಸ್ ಝರೂರಾ ಬೆಂಗಳೂರಿಗೆ ಬಂದಿಳಿದಿದ್ದಾರೆ. ಆದರೆ, ಹೀಗೆ ಬೆಂಗಳೂರಿಗೆ ಬಂದ ಯೂನೀಸ್ ಝರೂರಾ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ಹೊಯ್ಸಳ ಜೀಪಿನಲ್ಲಿ ಕೂರಿಸಿ, ನಂತರ ಠಾಣೆಗೆ ಕರೆದೊಯ್ದು ಕೂರಿಸಿದ್ದಾರೆ. ಇದರಿಂದ ತೀವ್ರ ನೊಂದುಕೊಂಡ ಯೂನೀಸ್ ಝರೂರಾ ಈಗ ನಾನು ಪೊಲೀಸ್ ಠಾಣೆಯಲ್ಲಿದ್ದೇನೆ, ಕ್ಷಮಿಸಿ ಇಂಡಿಯಾ ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್ ನೋಡಿ ಅಮೇರಿಕಾಕ್ಕಿಂತಲೂ ಸೂಪರ್ ಆಗಿದೆ ಎಂದ ಯುಎಸ್ ಖ್ಯಾತ ಯ್ಯೂಟೂಬರ್!

ವಿಶ್ವದ ಬೇರೆ ಬೇರೆ ದೇಶಗಳಿಗ ತೆರಳಿ ಸರ್ಪೈಸ್ ಗಿಫ್ಟ್ ಗಳನ್ನ ಕೊಡ್ತಿದ್ದ ಯೂನೀಸ್ ಬೆಂಗಳೂರಿನ ಎಂ.ಜಿ. ರಸ್ತೆಗೂ ಬಂದಿದ್ದಾನೆ. ಎಂ.ಜಿ. ರಸ್ತೆಯಲ್ಲಿ ಸಂಚರಿಸುತ್ತಾ ತಾನು ಕೇಳುತ್ತಿದ್ದ ಕೆಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ಐಫೋನ್ ಗಿಫ್ಟ್ ಕೊಡುತ್ತಿದ್ದನು. ಇದೇ ವೇಳೆ ಎಂಜಿ ರಸ್ತೆಯಲ್ಲಿ ಕನ್ನಡ ಖ್ಯಾತ ಚಿತ್ರನಟ ದಿ.ಪುನೀತ್ ರಾಜ್ ಕುಮಾರ್ ಅವರ ಫೋಟೋ ಅನಾವರಣ ಮಾಡಿದ್ದನು. ಇನ್ನು ಈತ ಬೆಂಗಳೂರಿಗೆ ಬಂದ  ವಿಚಾರ ತಿಳಿಯುತ್ತಿದ್ದಂತೆ, ಆತನ ಫಾಲೋವರ್ಸ್‌ಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಅವರು ಇಷ್ಟೊಂದು ಜನರು ತನಗೆ ಬೆಂಬಲ ನೀಡಿದ್ದನ್ನು ಭಾರಿ ಸಂತಸಪಟ್ಟಿದ್ದಾರೆ. ಆದರೆ, ಈ ಸಂತಸವನ್ನು ಕೆಲವೇ ಕ್ಷಣಗಳಲ್ಲಿ ಬೆಂಗಳೂರು ಪೊಲೀಸರು ಕಸಿದುಕೊಂಡಿದ್ದಾರೆ.

ಬೆಂಗಳೂರಿನ ಅತ್ಯಂತ ಜನನಿಬಿಡ ರಸ್ತೆಯಾಗಿರುವ ಎಂ.ಜಿ. ರಸ್ತೆಯಲ್ಲಿ ಯಾವುದೇ ಸುಳಿವು ಅಥವಾ ಪೊಲೀಸರ ಅನುಮತಿಯನ್ನೂ ಪಡೆಯದೇ ಬಂದ ಯೂನೀಸ್ ಝರೂರಾ ನೋಡಿದ ನೂರಾರು ಜನರು ಏಕಾಏಕಿ ಗುಂಪು ಸೇರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನಗಳಿಗೂ ಅಡಚಣೆ ಉಂಟಾಗಿದೆ. ಇದರಿಂದ ಬೆಂಗಳೂರು ಅಶೋಕ ನಗರ ಠಾಣೆಯ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದು ಹೊಯ್ಸಳ ಜೀಪಿನಲ್ಲಿ ಕೂರಿಸಿದ್ದಾರೆ. ಆದರೆ, ಹೊಯ್ಸಳ ವಾಹನದ ಒಳಗೆ ಕುಳಿತಿದ್ದ ವೇಳೆ ತನಗೇದಾರೂ ಮಾಡಿಬಿಡುತ್ತಾರೆ ಎಂಬ ಭಯದಿಂದ ಆತ ವಿಡೀಯೋ ಮಾಡಿದ್ದಾನೆ. ನಂತರ ಪೊಲೀಸ್ ಠಾಣೆಯಲ್ಲಿ ಕೂರಿಸಿದಾಗಲೂ ನಾನು ಸಮಸ್ಯೆಯಲ್ಲಿದ್ದೀನಿ ಎಂದು ಮೆಸೇಜ್ ಹಾಕಿದ್ದಾನೆ. ಆದರೆ, ಈತನ ಪೂರ್ವಾಪರ ತಿಳಿದುಕೊಂಡ ಪೊಲೀಸರು ನಂತರ ಹೀಗೆ ಅನುಮತಿ ಪಡೆಯದೇ ಏಕಾಏಕಿ ಗುಂಪು ಸೇರಿಸುವುದರಿಂದ ಉಂಟಾಗುವ ಸಮಸ್ಯೆಯ ಬಗ್ಗೆ ತಿಳಿಸಿ ಹೇಳಿ, ಎಚ್ಚರಿಕೆ ಕೊಟ್ಟು ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ: ನನ್ನಪ್ಪ ನಂಗೆ HMT Watch ಕಟ್ಟಿದ್ರು, ನೀವೂ ಕಟ್ಕೊಳಿ ಎಂದ ನಿಖಿಲ್ ಕುಮಾರಸ್ವಾಮಿ!

ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆಂದು ಬರೆದುಕೊಂಡ ಯೂನೀಸ್ ಝರೂರಾ: ಯೂನೀಸ್ ಝರೂರಾ ಅವರು (younes zarou) ನನ್ನಿಂದ ಒಂದು ದೊಡ್ಡ ತಪ್ಪಾಗಿದೆ ಕ್ಷಮಿಸಿ ಹುಡುಗರೇ! ನಾನು ಬೆಂಗಳೂರಿನಲ್ಲಿ ವೀಡಿಯೊವನ್ನು ಶೂಟ್ ಮಾಡಲು ಬಯಸಿದ್ದೆ ಮತ್ತು ಅದು ಇಷ್ಟೊಂದು ಪ್ರಮಾಣದಲ್ಲಿ ಸರ್ಕ್ಯೂಲೇಟ್ ಆಗಿ ಜನರು ಸೇರುತ್ತಾರೆ ಎಂದು ತಿಳಿದಿರಲಿಲ್ಲ. ನನ್ನನ್ನು ರಕ್ಷಿಸಿದ ಪೊಲೀಸರಿಗೆ ಧನ್ಯವಾದಗಳು, ನಾನು ಪ್ರಸ್ತುತ ಪೊಲೀಸ್ ಠಾಣೆಯಲ್ಲಿ ಮತ್ತೆ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡ ಮೆಸೇಜ್ ವಿಶ್ವದಾದ್ಯಂತ ಅತಿಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಇದರಿಂದ ಬೆಂಗಳೂರಿಗೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬರುವವರ ಸಂಖ್ಯೆ ಕಡಿಮೆ ಆಗುತ್ತದೆಯೇ ಎಂಬ ಆತಂಕವೂ ಸೋಶಿಯಲ್ ಮಿಡಿಯಾ ಪ್ರೇಮಿಗಳಿಗೆ ಉಂಟಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?