ಇನ್ಮುಂದೆ 'ಜೇನುಗೂಡು' ಸೀರಿಯಲ್ ಬರಲ್ಲ; ಯಾಕೆ ?

Published : Sep 30, 2023, 04:06 PM IST
ಇನ್ಮುಂದೆ 'ಜೇನುಗೂಡು' ಸೀರಿಯಲ್ ಬರಲ್ಲ; ಯಾಕೆ ?

ಸಾರಾಂಶ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜೇನುಗೂಡು ಪ್ರಸಾರವಾಗುವುದಿಲ್ಲ. ಶಶಾಂಕ್ ದಿಯಾ ನೋಡದೆ ದಿನ ಸಾಗುವುದಿಲ್ಲ ಎಂದ ನೆಟ್ಟಿಗರು...

ಕನ್ನಡ ಜನಪ್ರಿಯ ಧಾರಾವಾಹಿಗಳು ಮುಕ್ತಾಯವಾಗುತ್ತಿದೆ. ಇಷ್ಟು ದಿನ ಸುಂದರಿ, ಗಿಣಿರಾಮ, ಜೊತೆ ಜೊತೆಯಲಿ, ನಾಗಿಣಿ 2, ಕನ್ನಡತಿ ಹೀಗೆ ಹಲವು ಸೀರಿಯಲ್ ಪ್ರಸಾರ ನಿಲ್ಲಿಸುತ್ತಿದೆ ಎಂದು ಕೇಳಿ ವೀಕ್ಷಕರು ಬೇಸರ ಮಾಡಿಕೊಂಡರು. ಈಗ ಈ ಲಿಸ್ಟ್‌ಗೆ ಸ್ಟಾರ್ ಸುವರ್ಣ ವಾಹಿನಿಯ ಜೇನುಗೂಡ ಸೇರಿಕೊಳ್ಳುತ್ತಿದೆ. ಈಗಾಗಲೆ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಣ ಮಾಡಿ ಶೂಟಿಂಗ್ ಪ್ಯಾಕಪ್ ಮಾಡಿದ್ದಾರಂತೆ. ಧಾರಾವಾಹಿ ಕೊನೆಯ ಸಂಚಿಕೆ ಸೆಪ್ಟೆಂಬರ್ 30ರಂದು ಪ್ರಸಾರವಾಗಲಿದೆ. 

ಶಶಾಂಕ್ ಮತ್ತು ದಿಯಾ ಸುತ್ತ ನಡೆಯುವ ಸುಂದರ ಕಥೆಯೇ ಜೇನುಗೂಡು. ಫ್ಯಾಮಿಲಿ ಒತ್ತಾಯದಿಂದ ಶಶಾಂಕ್ ಮತ್ತು ದಿಯಾ ಮದುವೆ ಮಾಡಿಕೊಳ್ಳುತ್ತಾರೆ. ಇಬ್ಬರು ದೂರವಾಗಬೇಕು ಅಂದುಕೊಳ್ಳುತ್ತಿದ್ದರೂ ಹಣೆ ಬರಹ ಹತ್ತಿರ ಮಾಡುತ್ತಿರುತ್ತದೆ. ದೊಡ್ಡ ಕುಟುಂಬ ಜಾಯಿಂಟ್ ಫ್ಯಾಮಿಲಿ ಹೇಗಿರುತ್ತದೆ ಎಂದು ಜನರಿಗೆ ಈ ಸೀರಿಯಲ್ ತೋರಿಸಿಕೊಟ್ಟಿದೆ. ಉತ್ತರ ಕರ್ನಾಟಕ ಭಾಷೆ ಹೊಂದಿದ್ದು ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದೆ. ಕಿರುತೆರೆಯಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿದ್ದ ಧಾರಾವಾಹಿಗಳಲ್ಲಿ ಇದೂ ಒಂದು. 

ಬಟ್ಟೆ ಹಾಕದೇ ಕೇಲವ ಆಭರಣದಿಂದ ಮೈ ಮುಚ್ಚಿಕೊಂಡ ನಟಿ ಜಾನಕಿ; ಹಿಗ್ಗಾಮುಗ್ಗಾ ಟ್ರೋಲ್!

ಕೆಲವೊಂದು ಕಾರಣಗಳಿಂದ ನಿತ್ಯಾ ಗೌಡ ಧಾರಾವಾಹಿಯನ್ನು ನಡುವಲ್ಲಿ ಬಿಟ್ಟು ಹೋದರು. ಹೀಗಾಗಿ ನಿತ್ಯಾ ಜಾಗಕ್ಕೆ ಅಮೃತಾ ಮೂರ್ತಿ ಆಗಮಿಸಿದ್ದರು. 'ಕೇವಲ ಮೂರು ತಿಂಗಳುಗಳಲ್ಲಿ ಎಲ್ಲ ನಡೆದು ಹೋಗಿತ್ತು. ಜೊತೆ ಜೊತೆಯಲಿ ಮುಗಿದ ಮೇಲೆ ನಾನು ಮತ್ತೊಂದು ದೊಡ್ಡ ಪ್ರಾಜೆಕ್ಟ್‌ ಕೈ ಹಿಡಿಯುವುದಕ್ಕೆ ಪುಣ್ಯ ಮಾಡಿದೆ. ನನ್ನ ವೃತ್ತಿ ಜೀವನದಲ್ಲಿ ಒಳ್ಳೆ ಒಳ್ಳೆ ಅವಕಾಶಗಳನ್ನು ಪಡೆಯುತ್ತಿರುವುದಕ್ಕೆ ಖುಷಿ ಇದೆ. ದಿಯಾ ಪಾತ್ರ ಮಾಡಲು ಸಖತ್ ಖುಷಿ ಇದೆ' ಎಂದು ಜೇನುಗೂಡು ತಂಡ ಸೇರಿಕೊಂಡಾಗ ಅಮೃತಾ ಹೀಗೆ ಹೇಳಿದ್ದರು. 

ಹೊಸ ಬ್ಯುಸಿಸೆನ್ ಆರಂಭಿಸಿದ ದಿವ್ಯಾ ಉರುಡುಗ- ಅರವಿಂದ್; ಗ್ರ್ಯಾಂಡ್ ಓಪನಿಂಗ್ ಫೋಟೋ ವೈರಲ್!

ಯಾವ ಕಾರಣ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂದು ತಂಡದಿಂದ ಯಾರೂ ತಿಳಿಸಿಲ್ಲ. ಆದರೆ ಪ್ರಸಾರ ನಿಲ್ಲಿಸುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಶುರುವಾಗಿ ಕೇವಲ ಒಂದು ವರ್ಷವಾಗಿ ಅಷ್ಟರಲ್ಲಿ ಯಾಕೆ ನಿಲ್ಲಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?