ಅಭಯಾರಣ್ಯದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ ಕಲಾವಿದರು ಫುಲ್‌ ಎಂಜಾಯ್‌: ಫೋಟೋ ವೈರಲ್‌

By Suvarna News  |  First Published Sep 30, 2023, 1:55 PM IST

ಟೈಟ್‌ ಷೆಡ್ಯೂಲ್‌ ಮಧ್ಯೆಯೇ ಭಾಗ್ಯಲಕ್ಷ್ಮಿ ಸೀರಿಯಲ್‌ ತಂಡ ಅಭಯಾರಣ್ಯಕ್ಕೆ ಭೇಟಿ ನೀಡಿದ್ದು, ಫೋಟೋಗಳು ವೈರಲ್‌ ಆಗಿವೆ.
 


ದಿನನಿತ್ಯದ ಬಿಜಿ ಷೆಡ್ಯೂಲ್‌ನಲ್ಲಿ ಸ್ವಲ್ಪ ಟೈಂ ಮಾಡಿಕೊಂಡು ಸ್ನೇಹಿತರು, ಸಹೊದ್ಯೋಗಿಗಳ ಜೊತೆ ಟ್ರಿಪ್‌ ಎಂಜಾಯ್‌ ಮಾಡುವಲ್ಲಿ ಇರುವ ಖುಷಿ ಮತ್ತೊಂದಿಲ್ಲ. ಇದೇ ರೀತಿ ಇದೀಗ ಭಾಗ್ಯಲಕ್ಷ್ಮಿ ತಂಡದ ಸದಸ್ಯರು ಟ್ರಿಪ್‌ ಎಂಜಾಯ್‌ ಮಾಡಿದ್ದು, ಅದರ ಫೋಟೋಗಳು ವೈರಲ್‌ ಆಗಿವೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ, ಎಲ್ಲರ ಮನ ಗೆದ್ದಿರೋ ಭಾಗ್ಯಲಕ್ಷ್ಮಿ ತಂಡದ ಸದಸ್ಯರು ಒಂದು ದಿನದ ಟ್ರಿಪ್‌ ಎಂಜಾಯ್‌ ಮಾಡಿದ್ದಾರೆ. ಇವರು ಅಭಯಾರಣ್ಯಕ್ಕೆ ಭೇಟಿ ನೀಡಿದ್ದು, ಅದರ ಫೋಟೋಗಳನ್ನು ಧಾರಾವಾಹಿಯಲ್ಲಿ ಗುಂಡಣ್ಣ ಪಾತ್ರದಲ್ಲಿ ನಟಿಸುತ್ತಿರುವ ನಿಹಾರ್‌ ಪಿ ಗೌಡ ಶೇರ್‌ ಮಾಡಿಕೊಂಡಿದ್ದಾರೆ. 

ಅಷ್ಟಕ್ಕೂ ಈ ಅಭಯಾರಣ್ಯವು ಹಿರಿಯ ನಟಿ ಪದ್ಮಜಾ ರಾವ್‌ ಅವರ ಪುತ್ರ ಸಂಜೀವ್‌ ಅವರದ್ದಾಗಿದೆ.  ಈ ಅಭಯಾರಣ್ಯಕ್ಕೆ ಧಾರಾವಾಹಿಯ ಪಾತ್ರಧಾರಿಗಳಾದ ಕುಸುಮಾ, ಭಾಗ್ಯ, ಧರ್ಮರಾಜ್‌, ತನ್ವಿ, ತಾಂಡವ್‌, ಗುಂಡಣ್ಣ ಸೇರಿದಂತೆ ಇತರರು ಭೇಟಿ ನೀಡಿದ್ದಾರೆ. ಅಂದಹಾಗೆ ಇವರ ಅಸಲಿ ಹೆಸರು ಸುದರ್ಶನ್‌ ರಂಗಪ್ರಸಾದ್‌, ಸುಷ್ಮಾ ರಾವ್‌, ಬಾಲನಟಿ ಅಮೃತಾ ಗೌಡ, ನಿಹಾರ್‌ ಗೌಡ.  ಪ್ರಾಣಿಗಳನ್ನು ನೋಡಿ, ಎತ್ತಿಕೊಂಡು ಸಂಭ್ರಮಿಸಿದ್ದಾರೆ. ಪ್ರಾಣಿಗಳ ಮಾಹಿತಿ ಪಡೆದುಕೊಂಡಿದ್ದಾರೆ. 

Tap to resize

Latest Videos

ಬಾಲಿವುಡ್‌ ಮಲೈಕಾಗೂ, ಹಿಟ್ಲರ್‌ ಕಲ್ಯಾಣದ ಎಡವಟ್ಟು ಲೀಲಾ ಮಲೈಕಾಗೂ ಇದೆಯಂತೆ ಭಾರಿ ನಂಟು!

 
ವರ್ಷಗಟ್ಟಲೆ ನಡೆಯುವ ಧಾರಾವಾಹಿಗಳು ಎಂದರೆ, ಬಿಡುವು ಸಿಗುವುದು ಬಹಳ ಕಷ್ಟವೇ. ದಿನಪೂರ್ತಿ ಶೂಟಿಂಗ್‌ ಇರುತ್ತದೆ. ಅವುಗಳ ನಡುವೆಯೇ ಕಿರುತೆರೆ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವುದು ಇದೆ. ಇರುವ ಹೆವ್ವಿ ಷೆಡ್ಯೂಲ್‌ನಲ್ಲಿಯೇ ಬಿಡುವು ಮಾಡಿಕೊಂಡು ಟೂರ್‌ ಎಂಜಾಯ್‌ ಮಾಡುವುದು ಇದೆ. ಅದೇ ರೀತಿ ಭಾಗ್ಯಲಕ್ಷ್ಮಿ ತಂಡವೂ ಟೂರ್‌ ಎಂಜಾಯ್‌ ಮಾಡುವುದನ್ನು ನೋಡಬಹುದು. ಟ್ರಿಪ್‌ ಬಳಿಕ ಎಲ್ಲರೂ ಪದ್ಮಜಾ ರಾವ್‌ ಮನೆಗೆ ಭೇಟಿ ನೀಡಿದ್ದಾರೆ.

ಅಂದಹಾಗೆ ಭಾಗ್ಯಲಕ್ಷ್ಮಿ ಸೀರಿಯಲ್‌ ಕೂಡ ಈಗ ಕುತೂಹಲದ ಘಟ್ಟ ತಲುಪಿದೆ. ಭಾಗ್ಯಲಕ್ಷ್ಮಿ ಹಾಗೂ ಆಕೆಯ ಕುಟುಂಬಸ್ಥರಿಗೆ ತಾಂಡವ್‌ನ ಮತ್ತೊಂದು ಅಫೇರ್‌ ಬಗ್ಗೆ ಸಂದೇಹ ಬರಲು ಶುರುವಾಗಿದೆ. ಇದರಿಂದ ತಾಂಡವ್‌ ಪೇಚಿಗೆ ಸಿಲುಕಿದ್ದಾನೆ. ಇದೇ ವೇಳೆ, ತಾಂಡವ್‌ ತಾನು ಮಾಡಿದ ಮೋಸದ ಸುಳಿಗೆ ಸಿಲುಕಿದ್ದಾನೆ.   ತಂದೆ ತಾಯಿಯಂತೆ ಡ್ರಾಮಾ ಮಾಡಲು ಬಂದ ಮಹೇಶ್‌ ಹಾಗೂ ಸುಂದರಿ ತಾಂಡವ್‌ಗೆ ಬ್ಲಾಕ್‌ ಮಾಡುತ್ತಿದ್ದಾರೆ.  ಸುಂದರಿ, ತಾಂಡವ್‌ ಮನೆಯ ಬೆಳ್ಳಿ ಸಾಮಗ್ರಿಗಳನ್ನು ಕದ್ದಿದ್ದು, ಅದೀಗ ಪೊಲೀಸ್‌ ಠಾಣೆವರೆಗೆ ಹೋಗಿದೆ. ಇಷ್ಟು ದಿನ ಹೇಗೋ ಮೆಂಟೇನ್‌ ಮಾಡುತ್ತಿದ್ದ ತಾಂಡವ್‌ನ ಬಣ್ಣ ಬಯಲಾಗಲಿದೆಯೇ ಎಂದು ಕಾದು ನೋಡಬೇಕಿದೆ. 

ಪರಿಣಿತಿ-ರಾಘವ್​ ಮದ್ವೆಯ ರೋಚಕ ವಿಡಿಯೋ ವೈರಲ್​: ಹನಿಮೂನ್​ ಕ್ಯಾನ್ಸಲ್​!
 

click me!