ಸೋಶಿಯಲ್ ಮೀಡಿಯಾದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಗುರುತಿಸಿಕೊಂಡಿರುವ ಸೋನು ವೇಣುಗೋಪಾಲ್, ಹೊಸ ಕಂಟೆಂಟ್ ಕ್ರಿಯೇಟರ್ಸ್ ಗೆ ಒಂದಿಷ್ಟು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಜೀವನದ ಅನುಭವಗಳಿಂದ ಕಲಿಯುವುದರ ಜೊತೆಗೆ ವೀಕ್ಷಕರನ್ನು ಗೌರವಿಸುವಂತೆ ಅವರು ಹೇಳಿದ್ದಾರೆ.
ಕಂಟೆಂಟ್ ಕ್ರಿಯೇಟರ್ಸ್ (Content creator) ಸದ್ಯ ಸಾಕಷ್ಟು ಪೀಕ್ ನಲ್ಲಿರುವ ವರ್ಕ್. ಹೊಸ ಶೈಲಿಯ ಕಂಟೆಂಟ್ ಕ್ರಿಯೇಟ್ ಮಾಡಿ ಜನರು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಇನ್ಸ್ಟಾಗ್ರಾಮ್ ರೀಲ್ಸ್ (Instagram Reels), ಯುಟ್ಯೂಬ್, ಎಕ್ಸ್ ಹೀಗೆ ನಾನಾ ಸೋಶಿಯಲ್ ಮೀಡಿಯಾ (Social Media) ದಲ್ಲಿ ಕಂಟೆಂಟ್ ಕ್ರಿಯೇಟರ್ ಗೆ ಸಾಕಷ್ಟ ಬೇಡಿಕೆ ಇದೆ. ಜನರು ಯಾವ ಕಂಟೆಂಟ್ ಗೆ ನಿಲ್ತಾರೆ ಅನ್ನೋದು ಕಷ್ಟ. ಅವರನ್ನು ಹಿಡಿದಿಟ್ಟುಕೊಳ್ಳೋದು ಸವಾಲಿನ ಕೆಲಸ.
ಸೋಶಿಯಲ್ ಮೀಡಿಯಾದಲ್ಲಿ ಈಗ ಸಾಕಷ್ಟು ಕಂಟೆಂಟ್ ಕ್ರಿಯೇಟರ್ಸ್ ಇದ್ದಾರೆ. ಅದೇ ನೀವು ಕಂಟೆಂಟ್ ಕ್ರಿಯೇಟರ್ ಸ್ಟ್ಯಾಂಡಪ್ ಕಾಮಿಡಿಯನ್ಸ್ (Standup comedians) ಅಂದಾಗ ಕನ್ನಡಿಗರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಅದ್ರಲ್ಲಿ ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಇದೆ. ಕನ್ನಡ ಸ್ಟ್ಯಾಂಡಪ್ ಕಾಮಿಡಿಯನ್ಸ್ ಅಂದಾಗ ನಮಗೆ ನೆನಪಾಗೋದು ಸೌಮ್ಯ ವೇಣುಗೋಪಾಲ್. ರ್ಯಾಪಿಡ್ ರಶ್ಮಿ (Rapid Rashmi) ಶೋಗೆ ಬಂದಿದ್ದ ಸೋನು ವೇಣುಗೋಪಾಲ್ (Sonu Venugopal), ಕಂಟೆಂಟ್ ಕ್ರಿಯೇಟರ್ಸ್ ಗೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಕಂಟೆಂಟ್ ಕ್ರಿಯೇಟರ್ಸ್ ಗೆ ಸೋನು ಕಿವಿ ಮಾತು : ರ್ಯಾಪಿಡ್ ರಶ್ಮಿ ಶೋನಲ್ಲಿ ಮಾತನಾಡ್ತಲೆ ಸೋನು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈಗಾಗಲೇ ಕಂಟೆಂಟ್ ಕ್ರಿಯೇಟ್ ಮಾಡ್ತಿರೋ ಹಾಗೆ ಇನ್ಮುಂದೆ ಮಾಡ್ಬೇಕು ಅಂದ್ಕೊಂಡಿರೋರಿಗೆ ಇವರ ಮಾತುಗಳು ಇಂಪಾರ್ಟೆಂಟ್ ಆಗುತ್ವೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಮಿಲಿಯನ್ಸ್ ವೀವ್ಸ್ ಪಡೆದ್ರೆ ಮತ್ತೊಂದಿಷ್ಟು ಸಾವಿರ ದಾಟಿರೋದಿಲ್ಲ. ಅಂತವರು ಸೋನು ಏನ್ ಹೇಳ್ತಾರೆ ಅನ್ನೋದನ್ನು ಕೇಳಿಸ್ಕೊಳ್ಳಿ.
ಎಫ್ ಎಂನಲ್ಲಿ ಕೆಲಸ ಮಾಡಿ ಅನುಭವ ಇರುವ ಸೋನು, ಕಂಟೆಂಟ್ ಕ್ರಿಯೇಟರ್ ಜೊತೆಗೆ ಸ್ಟ್ಯಾಂಡಪ್ ಕಾಮಿಡಿಯನ್. ಅವರ ಪ್ರಕಾರ, ಜೀವನದ ಪ್ರತಿಯೊಂದು ಅನುಭವದಲ್ಲಿ ಕಲಿಯೋದು ಸಾಕಷ್ಟಿರುತ್ತೆ. ಕಂಟೆಂಟ್ ವಿಷ್ಯಕ್ಕೆ ಬಂದಾಗ ವೀಕ್ಷಕರನ್ನು ಅಗೌರವಿಸಬೇಡಿ ಎನ್ನುತ್ತಾರೆ ಸೋನು.
ಆಡಿಯನ್ಸ್ ಗೆ ಅರ್ಥ ಆಗಲ್ಲ ಈ ಸಬ್ಜೆಕ್ಟ್ ಬಿಡೋಣ ಎನ್ನುವ ತಪ್ಪು ಮಾಡ್ಲೇಬೇಡಿ. ಹೊಸದನ್ನು ವೀಕ್ಷಕರು ಒಪ್ಪಿಕೊಳ್ತಾರಾ ಅಂತಾ ಚಿಂತೆ ಮಾಡೋ ಬದಲು ಕೊಟ್ನೋಡಿ ಎಂಬುದು ಸೋನು ಅಭಿಪ್ರಾಯ. ಯಾವಾಗ್ಲೂ ನಿಮ್ಮ ಕಣ್ಣು, ಕಿವಿ, ತಲೆ ಎಲ್ಲವನ್ನು ತೆರೆದಿಟ್ಕೊಳ್ಳಿ ಎನ್ನುವ ಸೋನು, ಕೇಳಿದ ತಕ್ಷಣ ಅದನ್ನು ವೀಕ್ಷಕರಿಗೆ ಕೊಡ್ಬೇಕು ಅನ್ನೋ ಆತುರಬೇಡ. ಅಗತ್ಯ ಇದ್ದಾಗ ಅದನ್ನು ನಿಮ್ಮ ತಲೆಯಿಂದ ತೆಗೆದು ವೀಕ್ಷಕರಿಗೆ ನೀಡಿದ್ರೆ ಬೆಸ್ಟ್ ಎನ್ನುತ್ತಾರೆ.
ಹೊಸದನ್ನು ಜನರು ಒಪ್ಪಿಕೊಳ್ಳೋದು ಕಷ್ಟ, ಆದ್ರೆ ದಿನ ಕಳೆದಂತೆ ಅದನ್ನು ಒಪ್ಪಿಕೊಳ್ತಾ ಹೋಗ್ತಾರೆ ಎನ್ನುತ್ತಾರೆ ಸೋನು, ಯಶಸ್ವಿಯಾಗ್ಬೇಕು ಅಂದ್ರೆ ಒಂದೇ ದಾರಿಯಲ್ಲಿ ಹೋಗ್ಬೇಡಿ. ನಿಮ್ಮ ದಾರಿ ಬದಲಿಸ್ತಾ ಇರಿ. ಜೊತೆಗೆ ವೀಕ್ಷಕರನ್ನು ಇನ್ವಾಲ್ ಮಾಡ್ಕೊಳ್ಳಿ ಎಂದಿದ್ದಾರೆ. ಕೆಲಸದಲ್ಲಿ ಎಕ್ಸ್ಪಿರಿಮೆಂಟ್ ಬಹಳ ಮುಖ್ಯ ಎನ್ನುವ ಅವರು, ಸುರಕ್ಷಿತ ದಾರಿಯಲ್ಲಿ ಹೋಗುವ ಬದಲು ಸ್ವಲ್ಪ ಕಠಿಣ ದಾರಿ ಆಯ್ಕೆ ಮಾಡಿಕೊಳ್ಳಿ ಎನ್ನುತ್ತಾರೆ. ನಮ್ ಕಂಟೆಂಟ್ ಗೆ ನಾವೇ ಮೊದಲ ವೀಕ್ಷಕರಾಗಿರೋ ಕಾರಣ ಮೊದಲು ನಾವು ಮಾಡಿದ್ದು ನಮಗೆ ಲೈಕ್ ಆಗ್ಬೇಕು ಎನ್ನುವ ಅವರು, ಹೊಸದಾಗಿ ಬರುವ ಕಂಟೆಂಟ್ ಕ್ರಿಯೇಟರ್ಸ್ ಗೆ ಸಂಬಳದ ಬಗ್ಗೆಯೂ ಕ್ಲಾರಿಟಿ ನೀಡಿದ್ದಾರೆ.
ಹಿಂದೆ ಇನ್ನೊಂದು ಯುಟ್ಯೂಬ್ ನಲ್ಲಿ ಮಾತನಾಡಿದ್ದ ಸೋನು ವೇಣುಗೋಪಾಲ್, ಕಂಟೆಂಟ್ ಕ್ರಿಯೇಟರ್ ಕೆಲಸವನ್ನು ಪ್ರೋಪೋಶನ್ (Proposition) ಆಗಿ ತೆಗೆದುಕೊಂಡ್ರೆ ಆಗ ಒಳ್ಳೆ ಸಂಪಾದನೆ ಮಾಡ್ಬಹುದು ಎಂದಿದ್ದಾರೆ. ಇದ್ರಲ್ಲಿ ತಾಳ್ಮೆ ಇರ್ಬೇಕು. ಒಂದು ತಿಂಗಳ ತುಂಬಾ ಬರ್ಬಹುದು, ಇನ್ನೊಂದು ತಿಂಗಳು ಕೈ ಖಾಲಿ ಇರ್ಬಹುದು. ನಿಮ್ ಕೆಲಸ ಮಾಡ್ತಾ ಹೋದ್ರೆ ಫೇಮ್ ಜೊತೆ ಮನಿ ಕೂಡ ಬಂದೇ ಬರುತ್ತೆ ಎನ್ನುತ್ತಾರೆ ಸೋನು.