
ನಟಿ, ಯಕ್ಷಗಾನ ಕಲಾವಿದೆ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿ ಮಠದ ಗುರುಗಳ ಜೊತೆಗೆ ಒಂದು ಗಂಟೆಗಳ ಕಾಲ ಮಾತನಾಡಿದ್ದಾರೆ ಎನ್ನುವುದು ಶಿರಸಿಯ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಣೆಯಾಗಿದೆ. ಈ ಬಗ್ಗೆ ಶೃಂಗೇರಿ ಮಠವು ಸ್ಪಷ್ಟನೆ ಕೇಳಿದೆ.
ಪ್ರತಿನಿತ್ಯ ಶೃಂಗೇರಿ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಬಂದು ಶ್ರೀ ಶಾರದಾಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದು ಧನ್ಯತಾ ಭಾವದಿಂದ ಹಿಂತಿರುಗುತ್ತಿದ್ದಾರೆ. ಪ್ರಸ್ತುತ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರೇ ಭಕ್ತಾದಿಗಳಿಗೆ ದರ್ಶನವನ್ನು ನೀಡುತ್ತಿದ್ದು, ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಲೋಕಕಲ್ಯಾಣಕ್ಕಾಗಿ ಪ್ರತಿದಿನ ರಾತ್ರಿಯ ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು ತಾವೇ ನೆರವೇರಿಸಿ, ನಂತರ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ. ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ವಿಜಯಯಾತ್ರೆಯನ್ನು ಕೈಗೊಂಡ ಸಂದರ್ಭದಲ್ಲಿ ಮಾತ್ರವೇ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಭಕ್ತಾದಿಗಳಿಗೆ ಮಧ್ಯಾಹ್ನ ಅಲ್ಪ ಸಮಯದಲ್ಲಿ ಮತ್ತು ರಾತ್ರಿಯ ಪೂಜೆಯ ನಂತರ ದರ್ಶನ ನೀಡಿ ಅನುಗ್ರಹಿಸುತ್ತಿದ್ದಾರೆ.
ದಿನಾಂಕ 20-12-2025ನೇ ಶನಿವಾರದಂದು ಲೋಕ ಧ್ವನಿ ಎಂಬ ಇ-ಪತ್ರಿಕೆಯಲ್ಲಿ ಪಲ್ಲವಿ ಮತ್ತಿಘಟ್ಟ ಎಂಬ ಕಿರುತೆರೆ ಖ್ಯಾತ ನಟಿ ಶೃಂಗೇರಿಗೆ ಬಂದು ಶ್ರೀ ಶಾರದಾಮ್ಮನವರ ಹಾಗೂ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ದರ್ಶನವನ್ನು ಪಡೆದಿರುತ್ತಾರೆ ಹಾಗೆಯೇ ಅವರು ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಬಳಿಯಲ್ಲಿ ಸುಮಾರು 1 ಘಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ವಿಶೇಷ ಎಂಬುದಾಗಿ ಪ್ರಕಟಿಸಿರುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಇತ್ತೀಚಿನ ಕೆಲವು ವರ್ಷಗಳಿಂದ ಭಕ್ತ ಜನರಿಗೆ ಕೇವಲ ದರ್ಶನವನ್ನು ನೀಡಿ ಅನುಗ್ರಹಿಸುತ್ತಿದ್ದಾರೆಯೇ ಹೊರತು ಯಾರ ಬಳಿಯಲ್ಲೂ ದೀರ್ಘವಾಗಿ ಮಾತುಕತೆ ನಡೆಸಿರುವುದಿಲ್ಲ. ಪಲ್ಲವಿ ಮತ್ತಿಘಟ್ಟರವರು ಎಲ್ಲಾ ಭಕ್ತಾದಿಗಳಂತೆ ಶ್ರೀ ಶಾರದಾಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದಿರಬಹುದೇ ವಿನಃ ಮೇಲ್ಕಂಡ ಇ-ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಒಂದು ಘಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಷಯವು ಅಪ್ಪಟ ಸುಳ್ಳಾಗಿರುತ್ತದೆ ಎಂಬುದಾಗಿ ಈ ಮೂಲಕ ಸ್ಪಷ್ಟನೆಯನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶ್ರೀಮಠದ ಹಾಗೂ ಜಗದ್ಗುರುಗಳ ಕುರಿತಂತೆ ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದಲ್ಲಿ ಕಾನೂನಿನ ಮೊರೆ ಹೋಗುವುದು ನಮಗೆ ಅನಿವಾರ್ಯವಾಗಿರುತ್ತದೆ.
ಮೊದಲನೆಯದಾಗಿ ನಾನು ಎಲ್ಲಿ ಬೇಕಾದರೂ ಓಡಾಡುವ ಸ್ವತಂತ್ರವನ್ನು ಹೊಂದಿದ್ದೇನೆ.. ಯಾಕೆಂದರೆ ನಾನು ಯಾವುದೇ ಅಪರಾಧ ಎಸಗಿ ಬಂಧಿಯಾಗಿರುವ ಖೈದಿಯಲ್ಲ. ಇನ್ನು ಎರಡನೆಯದಾಗಿ ನನ್ನನ್ನು ಖ್ಯಾತ ಕಿರುತೆರೆಯ ನಟಿ ಎಂದು ಉಲ್ಲೆಖಿಸಿ ಬರೆದಿದ್ದಾರೆ.. ನಾನು ಕಿರುತೆರೆಯಿಂದ ದೂರಾಗಿ ನಾಲ್ಕಾರು ವರ್ಷಗಳೇ ಕಳೆದು ಹೋಗಿವೆ. ಈ ವಿಚಾರವನ್ನೂ ತಿಳಿಯದ ಅಲ್ಪಮತಿಗಳು ಒದಗಿಸುವ ಮಹತ್ವವಲ್ಲದ ಸುದ್ದಿಗಳನ್ನೂ ಪ್ರಕಟಿಸುವ ದೌರ್ಭಾಗ್ಯ ಅಥವಾ ಅನಿವಾರ್ಯತೆ ಇಂತಹ ದೊಡ್ಡ ಪತ್ರಿಕೆಗಿದೆ ಎನ್ನುವುದೇ ಬಹಳ ಬೇಸರದ ವಿಚಾರ.
ಸ್ವಲ್ಪ ದಿನಗಳ ಹಿಂದೆ ಕುಟುಂಬ ಹಾಗೂ ಹಿತೈಷಿಗಳ ಜೊತೆಗೂಡಿ ಶೃಂಗೇರಿಯೂ ಸೇರಿದಂತೆ ಹೊರನಾಡು, ಕೊಲ್ಲೂರು, ಕಟೀಲು, ಕುಕ್ಕೆ, ಧರ್ಮಸ್ಥಳ, ಪೊಳಲಿ, ಕಮಲಶಿಲೆ, ಸೌತಡ್ಕ, ಮಾರಣಕಟ್ಟೆ, ಹಟ್ಟಿಯಂಗಡಿ, ಆನೆಗುಡ್ಡ ಇನ್ನೂ ಮೊದಲಾದ 20 ಕ್ಕೂ ಅಧಿಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಹಿಂದಿರುಗಿದ್ದು ಸತ್ಯವಾದ ವಿಚಾರ. ಪವಿತ್ರ ಹಿಂದೂ ಧರ್ಮದಲ್ಲಿ ಹುಟ್ಟಿರುವ ನಾನು ತಾಯಿ ಶಾರದಾಂಬೆಯ ದರ್ಶನಕ್ಕಾಗಿ ಶೃಂಗೇರಿಗೆ ಹೋಗಿದ್ದೆನೆ ಹೊರತು ಬೇರೆ ಇನ್ಯಾವ ವಿಶೇಷ ಕಾರಣಗಳಿಲ್ಲ. ಆದರೆ ಪತ್ರಿಕೆ ಉಲ್ಲೆಖಿಸಿದಂತೆ ಶೃಂಗೇರಿಯಲ್ಲಿ ಗಂಟೆಗಳ ಕಾಲ ಶ್ರೀಗಳ ಜೊತೆ ಚರ್ಚಿಸಿದ್ದೆನೆ ಎನ್ನುವ ಮಾತು ಸತ್ಯಕ್ಕೆ ದೂರವಾದ ಮಾತು...
ಜಗದ್ಗುರುಗಳ ದರ್ಶನವೇ ಮಹಾಭಾಗ್ಯ ಎಂದು ಭಾವಿಸಿ ಎಷ್ಟೋ ಜನರು ಕಾಯುತ್ತಿರುವಾಗ, ನಾನು ಅವರೊಡನೆ ಗಂಟೆಗಳ ಕಾಲ ಚರ್ಚಿಸಿದ್ದೆನೆ ಎಂಬ ಪತ್ರಿಕೆಯ ಮಾತು ಶುದ್ಧ ಸುಳ್ಳು. ಆದರೂ ಅವರ ಈ ಸುಳ್ಳು ಮಾತೇ ಸತ್ಯವಾಗಿ ಮುಂದೊಂದು ದಿನ ಆ ಭಾಗ್ಯ ನನಗೆ ಲಭಿಸಿದರೆ ಖಂಡಿತವಾಗಿಯೂ ನಾ ಧನ್ಯಳು. ಹಾಗೆ ಹೋದ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ತೆಗೆದ ಭಾವಚಿತ್ರಗಳನ್ನು ನನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದೇನೆ ಕೂಡ. ಆದರೆ ಶೃಂಗೇರಿ ಯಲ್ಲಿ ತೆಗೆದ ಫೋಟೋವನ್ನು ಮಾತ್ರ ನನ್ನ ವಾಟ್ಸಾಪ್ ಸ್ಟೇಟಸನಿಂದ ಕದ್ದು, ಅದಕ್ಕೇ ವಿಶೇಷ ಮಹತ್ವ ನೀಡಿ, ತಮಗೆ ಬೇಕಾದಂತೆ ಕಲ್ಪಿಸಿಕೊಂಡು ಮನಸಿಗೆ ಬಂದಂತೆ ಬರೆದವರ.. ಹಾಗೂ ಅದಕ್ಕೆ ತಮ್ಮದೇ ದೃಷ್ಟಿಕೋನದಲ್ಲಿ ಬಣ್ಣ ಬಳಿದು ಕಮೆಂಟಿಸಿ ಅನಗತ್ಯ ಪ್ರಚಾರ ಮಾಡಿದ ಬಾಲಿಶ ಮನಸ್ಥಿತಿ ಗಳ ಬಗ್ಗೆ ವಿಷಾದಿಸುತ್ತೇನೆ.
ಈ ಘಟನೆ ಬಗ್ಗೆ ಪಲ್ಲವಿ ಮತ್ತಿಘಟ್ಟ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಲ್ಲವಿ ಮತ್ತಿಘಟ್ಟ ಅವರು ಯಕ್ಷಗಾನ ಕಲಾವಿದೆಯಾಗಿದ್ದು, ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪಲ್ಲವಿ ಮತ್ತಿಘಟ್ಟ ಅವರು ಆಕಾಶದೀಪ ಮಹಾಭಾರತ, ಮಿಸ್ಟರ್ & ಮಿಸ್‌ಸ್ ರಂಗೇಗೌಡ,ಮದುಮಗಳು, ಮಹಾದೇವಿ, ಬ್ರಹ್ಮಾಸ್ತ್ರ, ನೇತ್ರಾವತಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಉಪೇಂದ್ರ ಅವರ ‘ಸೂಪರ್ ರಂಗ’, ವಿ ರವಿಚಂದ್ರನ್ ಅವರ ‘ಪರಮಶಿವ’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.