Halli Power Kannada Grand Finale: ಹಳ್ಳಿ ಪವರ್‌ ಶೋ ಗ್ರ್ಯಾಂಡ್‌ ಫಿನಾಲೆಯಲ್ಲಿ ಗೆಲ್ಲೋರು ಯಾರು?

Published : Dec 26, 2025, 08:40 AM IST
halli power kannada grand finale winner

ಸಾರಾಂಶ

Halli Power Show: ಸಿಟಿ ಲೈಫ್‌ ಬಿಟ್ಟು, ಹಳ್ಳಿಯಲ್ಲಿ ಜೀವನ ಮಾಡುವ ಕಥೆಯೇ ‘ಹಳ್ಳಿ ಪವರ್’ ರಿಯಾಲಿಟಿ ಶೋನ ತಿರುಳು. ಈಗ ಈ ಶೋ ಗ್ರ್ಯಾಂಡ್‌ ಫಿನಾಲೆ ಸಮಯ ಹತ್ತಿರ ಬಂದಿದೆ. ಹಾಗಾದರೆ ಯಾರು ವಿನ್ನರ್‌ ಆಗ್ತಾರೆ? 

ಹೊಸ ಚಾನೆಲ್ ಜೀ ಪವರ್ ಫಿಕ್ಷನ್ ಶೋಗಳು ಹಾಗು 'ಹಳ್ಳಿ ಪವರ್' ಎಂಬ ನಾನ್-ಫಿಕ್ಷನ್ ಶೋನಿಂದ ಈಗಾಗಲೇ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿ ಆಗಿದೆ. ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ 'ಹಳ್ಳಿ ಪವರ್' ಈಗ ಅಂತಿಮ ಘಟ್ಟವನ್ನು ತಲುಪಿದೆ. ಡಿಸೆಂಬರ್ 27 ಮತ್ತು ಡಿಸೆಂಬರ್ 28 ರಂದು ಬಹುನಿರೀಕ್ಷಿತ ಫಿನಾಲೆ ಎಪಿಸೋಡ್‌ಗಳು ರಾತ್ರಿ 8.30 ರಿಂದ 10.30ರವರೆಗೆ ಜೀ ಪವರ್‌ನಲ್ಲಿ ಪ್ರಸಾರವಾಗಲಿದೆ. ಆ ನಂತರ 'ಹಳ್ಳಿ ಪವರ್' ಸೀಸನ್ 1ರ ವಿಜೇತೆ ಯಾರು ಎಂಬ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಗಲಿದೆ.

ಹಳ್ಳಿ ಪವರ್ ತಿರುಳು ಏನು?

ಹಳ್ಳಿ ಪವರ್ ಒಂದು ವಿಭಿನ್ನ ಶೋ ಆಗಿದ್ದು ಇಲ್ಲಿ ಸಿಟಿಯಲ್ಲಿ ಬೆಳೆದ ಯುವತಿಯರು ತಮ್ಮ ಸಿಟಿ ಲೈಫ್ ಕಂಫರ್ಟ್ ತ್ಯಜಿಸಿ ಹಳ್ಳಿಗೆ ಬಂದು ಹಳ್ಳಿ ಜೀವನವನ್ನು ಸಾಗಿಸಬೇಕಿದೆ. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದರ ಜೊತೆಗೆ ಫಿಸಿಕಲ್ ಟಾಸ್ಕ್ಸ್ ಈ ಶೋನ ಮತ್ತೊಂದು ಹೈಲೈಟ್. ವ್ಯವಸಾಯ, ಜಾನುವಾರುಗಳ ಪೋಷಣೆ, ಪಾಲನೆ, ಹೀಗೆ ಹಳ್ಳಿ ಜನರು ಮಾಡುವ ಪ್ರತಿಯೊಂದು ಕೆಲಸವನ್ನು ಟಾಸ್ಕ್ ರೂಪದಲ್ಲಿ 'ಹಳ್ಳಿ ಪವರ್' ಸ್ಪರ್ಧಿಗಳಿಗೆ ನೀಡಲಾಗಿತ್ತು. ಇನ್ನು ಈ ರಿಯಾಲಿಟಿ ಶೋ ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ನಡೆದಿದೆ. ಹಳ್ಳಿ ಸೊಗಡು, ಅಕುಲ್ ಬಾಲಾಜಿ ಅವರ ನಿರೂಪಣೆ, ಸ್ಪರ್ಧಿಗಳ ಛಲ ಇವೆಲ್ಲವೂ 'ಹಳ್ಳಿ ಪವರ್' ಶೋ ಯಶಸ್ವಿ ಆಗಲು ಕಾರಣವಾಯ್ತು.

ಈ ರಿಯಾಲಿಟಿ ಶೋನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಹಾಗೂ ಮಣ್ಣಿನ ಮಗಳು ಫರೀನ್ ಫಿನಾಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರ ಶ್ರಮ, ಸಾಧನೆ ಮತ್ತು ದೃಢತೆ ಇವರನ್ನು ಫಿನಾಲೆಯ ಹಂತಕ್ಕೆ ತಲುಪಿಸಿದ್ದು, ಸೀಸನ್ 1ರ ಕಿರೀಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಉತ್ತರ ಇದೆ ಶನಿವಾರ ಮತ್ತು ಭಾನುವಾರ ದೊರೆಯಲಿದೆ.

'ಹಳ್ಳಿ ಪವರ್' ಶೋ ಹಳ್ಳಿ ಸೊಗಡನ್ನು ಜನರಿಗೆ ನೀಡುವಲ್ಲಿ ಯಶಸ್ವೀ ಆಗಿದೆ. ಇನ್ನು ಫಿನಾಲೆ ಎಪಿಸೋಡ್ ಗಳು ಭಾವನಾತ್ಮಕ, ರೋಚಕ ಕ್ಷಣಗಳನ್ನು ಹೊಂದಿದ್ದು ವೀಕ್ಷಕರಿಗೆ ಸಕ್ಕತ್ ಮನರಂಜನೆ ನೀಡುವುದರಲ್ಲಿ ಎರಡನೇ ಮಾತಿಲ್ಲ. 'ಹಳ್ಳಿ ಪವರ್' ಸೀಸನ್ 1 ರ ಕಿರೀಟ ಯಾರ ಮುಡಿಗೆ ಎಂಬುದನ್ನು ತಿಳ್ಕೊಳೋಕೆ ವೀಕ್ಷಿಸಿ ಡಿಸೆಂಬರ್ 27 ಮತ್ತು 28ರಂದು ಸಂಜೆ 8:30ರಿಂದ ರಾತ್ರಿ 10:30ರವರೆಗೆ ಜೀ ಪವರ್‌.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗದ್ಗುರುಗಳ ಜೊತೆ ಕನ್ನಡ ನಟಿ Pallavi Mattighatta 1 ಗಂಟೆ ಮಾತುಕತೆ ಸುಳ್ಳು: ಶೃಂಗೇರಿ ಪೀಠ ಸ್ಪಷ್ಟನೆ
Bigg Boss Kannada 12: ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?