
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಸಂಭ್ರಮ ಕಳೆಕಟ್ಟಿದೆ. ಅದಕ್ಕೆ ಕಾರಣ ಫ್ಯಾಮಿಲಿ ವೀಕ್. ಸ್ಪರ್ಧಿಗಳ ಕುಟುಂಬದವರು ಈ ವಾರ ಮನೆಗೆ ಹೊಕ್ಕು ಅವರನ್ನು ಭೇಟಿಯಾಗಿ ಮಾತನಾಡಿಸುವ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ರಾಶಿಕಾ ಶೆಟ್ಟಿ, ಸೂರಜ್, ಧನುಷ್, ಅಶ್ವಿನಿ ಗೌಡ, ರಕ್ಷಿತಾ ಹಾಗೂ ಗಿಲ್ಲಿ ನಟ ಅವರ ಕುಟುಂಬ ಮನೆಗೆ ಭೇಟಿ ಮಾಡಿ ತಮ್ಮ ಮಕ್ಕಳನ್ನು ಮಾತನಾಡಿಸಿ ಬಂದಿದ್ದಾರೆ. ಇದರ ನಡುವೆ ಬಿಗ್‌ಬಾಸ್, ಪಾಸ್-ಪ್ಲೇ-ರಿವೈಂಡ್ ಗೇಮ್‌ಗಳನ್ನು ಆಡುತ್ತಾ ಖುಷಿಖುಷಿಯಾಗಿ ದಿನ ಕಳೆಯುತ್ತಿದ್ದಾರೆ. ಹಾಗಾಗಿ ಈ ಬಾರಿಯ ಕ್ಯಾಪ್ಟನ್ ಆಗಿರುವ ಕಾವ್ಯಾಗೂ ಹೆಚ್ಚಿನ ಕೆಲಸವಿಲ್ಲ. ಎಲ್ಲವನ್ನೂ ಬಿಗ್‌ಬಾಸ್ ಸ್ವತಃ ನೋಡಿಕೊಂಡು ಹೋಗುತ್ತಿರುವ ಕಾರಣ, ಕಾವ್ಯಾ ಈ ಬಾರಿ ತೋರಿಕೆಯ ಕ್ಯಾಪ್ಟನ್ ಮಾತ್ರ ಆಗಿದ್ದಾರೆ.
ಇದರ ನಡುವೆ ಇಂದು ಬಿಗ್‌ಬಾಸ್‌ಮನೆಗೆ ಕಾವ್ಯಾ ಅವರ ಕುಟುಂಬ ಆಗಮಿಸಿದೆ. ಕಾವ್ಯಾಳ ಸಹೋದರ ಕಾರ್ತಿಕ್ ಹಾಗೂ ತಾಯಿ ಸಾವಿತ್ರಿ ಮನೆಗೆ ಆಗಮಿಸಿ ಕಾವ್ಯಾರನ್ನು ಮಾತನಾಡಿಸಿದ್ದಾರೆ. ಆದರೆ, ಈ ಹಂತದಲ್ಲಿ ಅವರ ಕುಟುಂಬ ಬಿಗ್‌ಬಾಸ್‌ನ ಮೂಲ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಅವರನ್ನು ಬಿಗ್‌ಬಾಸ್ ಹೊರ ಕಳಿಸುವ ಅದೇಶ ನೀಡಿದ್ದಾರೆ. ಆದರೆ, ಬಿಗ್‌ಬಾಸ್ ಆದೇಶದ ಬೆನ್ನಲ್ಲಿಯೇ ಅವರ ಕುಟುಂಬ ಮನೆಯಿಂದ ಆಚೆ ಬಂದ್ರಾ, ಇಲ್ವಾ? ಅನ್ನೋದು ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.
ಮೊದಲಿಗೆ ಕಾವ್ಯಾ ಅವರ ತಾಯಿ ಮನೆಗೆ ಆಗಮಿಸಿದರೆ, ನಂತರ ಕಾವ್ಯಾ ಸಹೋದರ ಕಾರ್ತಿಕ್ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಗಿಲ್ಲಿ ಜೊತೆ ಕಾರ್ತಿಕ್ ಕೂಡ ತಮಾಷೆಯಾಗಿ ಕೆಲ ಹೊತ್ತು ಕಳೆದಿದ್ದಾರೆ. ಅದಾದ ಬಳಿಕ,'ಸೋಶಿಯಲ್ ಮೀಡಿಯಾ ನೀನೇ ಹ್ಯಾಂಡಲ್ ಮಾಡ್ತಿದ್ಯಾ?' ಎಂದು ಕಾವ್ಯಾ, ಕಾರ್ತಿಕ್‌ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕಾರ್ತಿಕ್, 'ಎಲ್ಲಾ ಚೆನ್ನಾಗಿ ಹೋಗ್ತಿದೆ. ಏನೂ ತಲೆಕೆಡಿಸಿಕೊಳ್ಳಬೇಡ. ನಿಂದು, ಗಿಲ್ಲಿದು ಫ್ರೆಂಡ್ ನೆಕ್ಸ್ಟ್ ಲೆವಲ್ ಇದೆ. ಆದ್ರೆ ನಾಮಿನೇಷನ್‌ನಲ್ಲಿ ಅವನ ಹೆಸರು ತಗೋತೀಯಾ ಯಾಕೆ? ಗಿಲ್ಲಿಯಿಂದ ಕಾವ್ಯಾ, ಗಿಲ್ಲಿಯಿಂದ ಕಾವ್ಯಾ ಅಂತಾ ಹೇಳ್ತಿರೋದು ಯಾರು? ಎಂದು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಾವ್ಯಾ ಅವರ ತಾಯಿ 'ನಿನಗೆ ಆಗ್ದೆ ಇರೋರು' ಎನ್ನುತ್ತಾರೆ. ಅದಕ್ಕೆ ಕಾರ್ತಿಕ್, 'ಇರೇ ಒಂದ್ನಿಮಿಷ' ಎಂದು ಗದರಿಸಿದ್ದಾರೆ.
ಇದರ ಬೆನ್ನಲ್ಲಿಯೇ ಬಿಗ್‌ಬಾಸ್ ಘೋಷಣೆ ಆಗಮಿಸಿದ್ದು, ಈ ಮನೆಯ ಮೂಲ ನಿಯಮದ ಉಲ್ಲಂಘನೆಯಾಗಿದೆ. ಕಾರ್ತಿಕ್ ಹಾಗೂ ಸಾವಿತ್ರಿ ಈ ಕೂಡಲೇ ಮುಖ್ಯದ್ವಾರದ ಮೂಲಕ ಮನೆಯಿಂದ ಹೊರಬರಬೇಕು ಎಂದು ಅದೇಶ ನೀಡಿದ್ದಾರೆ. ಇದರ ನಡುವೆ ಕಾವ್ಯಾ ಸಾರಿ ಎಂದು ಕೇಳಿದ್ದರೂ, ಬಿಗ್‌ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಗಿರುವುದು ಕಂಡಿದೆ. ಈ ವೇಳೆ ಕಾವ್ಯಾ ಕಣ್ಣೀರಿಟ್ಟಿದ್ದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.
ಪ್ರೋಮೋ ಬೆನ್ನಲ್ಲಿಯೇ ಬಿಗ್‌ಬಾಸ್ ಅಭಿಮಾನಿಗಳು ಕಾರ್ತಿಕ್‌ರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್‌ಗಳು ಹಾಗೂ ಆಟದ ಸ್ಟ್ರಾಟರ್ಜಿಗಳನ್ನು ಚರ್ಚೆ ಮಾಡುವಂತಿಲ್ಲ ಅನ್ನೋದು ಮೂಲ ನಿಯಮ. ಅದನ್ನೇ ಈತ ಉಲ್ಲಂಘೆನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಇನ್ನೂ ಕೆಲವರು ಈ ವರ್ಷದ ಬಿಗ್‌ಬಾಸ್‌ನ ಪ್ರೋಮೋಗಳನ್ನು ನೋಡಿದರೆ, ಇದೂ ಕೂಡ ಪ್ರ್ಯಾಂಕ್ ರೀತಿ ಕಾಣ್ತಿದೆ. ಬಿಗ್‌ಬಾಸ್‌ಮನೆಗೆ ಹೋಗುವ ಮುನ್ನವೇ ಕುಟುಂಬದವರಿಗೆ ಇದರ ಬಗ್ಗೆ ಮಾಹಿತಿ ತಿಳಿಸಲಾಗಿರುತ್ತದೆ. ಹಾಗಿದ್ದರೂ, ಈ ರೀತಿಯ ಚರ್ಚೆ ಆಗಿದೆ ಎಂದರೆ ಅದು ಬಿಗ್‌ಬಾಸ್ ಮಾಡಿರುವ ಪ್ರ್ಯಾಂಕ್ ಇರಬಹುದು ಎಂದು ಅಂದಾಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.