
Pinky Fame Prathi Shetty: ಕಳೆದ ಕೆಲವು ವಾರಗಳಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿಯ ಎಲ್ಲಾ ಪಾತ್ರಗಳು ಜನಪ್ರಿಯವಾಗಿದ್ದು, ಜನರು ಕಲಾವಿದರನ್ನು ಅವರ ಪಾತ್ರಗಳಿಂದಲೇ ಗುರುತಿಸಲಾಗುತ್ತದೆ. ಈ ಧಾರಾವಾಹಿಯಲ್ಲಿ ಪಿಂಕಿಯಾಗಿ ನಟಿಸುತ್ತಿರುವ ಬಾಲ ಕಲಾವಿದೆ ಪ್ರತಿಶೆಟ್ಟಿ ಎಲ್ಲರ ಗಮನವನ್ನು ಸಳೆದಿದ್ದಾಳೆ. ಮಾಡೆಲ್ ಮತ್ತು ಬಾಲಕಲಾವಿದೆಯಾಗಿ ಗುರುತಿಸಿಕೊಂಡಿರುವ ಪ್ರತಿಶೆಟ್ಟಿ ಕೇವಲ 40 ದಿನಗಳಲ್ಲಿ 5 ಕೆಜಿ ತೂಕ ಇಳಿಸಿದ್ದಾಳೆ. ದೊಡ್ಡವರಂತೆ ಜಿಮ್‌ನಲ್ಲಿ ಬೆವರು ಹರಿಸಿರುವ ಪಿಂಕಿ, ಬಿಗ್ ಬಜೆಟ್ ಸಿನಿಮಾಗಾಗಿ ತೂಕ ಇಳಿಸಿಕೊಂಡಿದ್ದಾಳೆ. ಪ್ರತಿಶೆಟ್ಟಿಗೆ ತೂಕ ಇಳಿಸಿಕೊಳ್ಳುವ ಮಾರ್ಗದಲ್ಲಿ ಸಹಾಯ ಮಾಡಿರುವ ಜಿಮ್ ಟ್ರೈನರ್ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಇಷ್ಟು ಚಿಕ್ಕ ಮಕ್ಕಳನ್ನು ಜಿಮ್‌ಗೆ ಕಳುಹಿಸೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾ? ಕೆಟ್ಟದಾ ಎಂಬುದರ ಕುರಿತು ಚರ್ಚೆಗಳು ಆರಂಭಗೊಂಡಿವೆ.
ಪಿಂಕಿ ತೂಕ ಇಳಿಸಿದ್ಯಾಕೆ?
ಮೂರು ವರ್ಷಗಳ ಹಿಂದೆ ಪಿಂಕಿ, ಮೂರು ವರ್ಷಗಳ ಹಿಂದೆ ಬಿಗ್ ಬಜೆಟ್ ಸಿನಿಮಾಗೆ ಆಯ್ಕೆಯಾಗಿರುತ್ತಾಳೆ. ಆದ್ರೆ ಕಾರಣಾಂತರಗಳಿಂದ ಚಿತ್ರದ ಶೂಟಿಂಗ್ ವಿಳಂಬವಾಗಿತ್ತು. ಈ ಮೂರು ವರ್ಷದ ಅವಧಿಯಲ್ಲಿ ಪ್ರತಿಶೆಟ್ಟಿ ಸ್ವಲ್ಪ ದಪ್ಪವಾಗಿದ್ದಾಳೆ. ಶೂಟಿಂಗ್ ಆರಂಭವಾದ ವೇಳೆ ಪ್ರತಿಶೆಟ್ಟಿಯನ್ನು ನೋಡಿದ ನಿರ್ದೇಶಕರು, ಈಗ ನಮ್ಮ ಪಾತ್ರಕ್ಕೆ ಪಿಂಕಿ ಸರಿಯಾಗಲ್ಲ ಅಂತ ಹೇಳಿದ್ದಾರೆ. ಕೊನೆಗೆ ಪಿಂಕಿ ಪೋಷಕರು ಸಿನಿಮಾ ತಂಡದ ಬಳಿ 40 ದಿನ ಸಮಯ ತೆಗೆದುಕೊಂಡು ಮಗಳ ತೂಕ ಇಳಿಕೆಗಾಗಿ ಆಕೆಯನ್ನು ಜಿಮ್ ಟ್ರೈನರ್ ಬಳಿ ಕರೆದುಕೊಂಡು ಬಂದಿದ್ದಾರೆ.
40 ದಿನ ಜಿಮ್ ಟ್ರೈನರ್ ಮಾರ್ಗದರ್ಶನದಲ್ಲಿ ಪಿಂಕಿ 5 ಕೆಜಿ ತೂಕ ಇಳಿಸಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಕ್ಕಳ ತೂಕ ಇಳಿಸೋದು ತುಂಬಾ ಕಷ್ಟ. ಅವರಿಗೆ ಯಾವುದೇ ಉಪಕರಣಗಳು ಇರಲ್ಲ. ಆದ್ರೂ ಪಿಂಕಿಯ ತೂಕ ಕಡಿಮೆಯಾಗಿದೆ ಎಂದು ಜಿಮ್ ಟ್ರೈನರ್ ಹೇಳುತ್ತಾರೆ. ಕೆಲವರು ಮಕ್ಕಳು ಜಿಮ್ ಮಾಡಿದ್ರೆ ಎತ್ತರ ಆಗಲ್ಲ ಎಂದು ಹೇಳುತ್ತಾರೆ. ಆದ್ರೆ ಈ ಮಾತು ಸುಳ್ಳು. ಎತ್ತರ ಅನುವಂಶೀಯತೆ ಮೇಲೆ ನಿರ್ಧಾರವಾಗುತ್ತದೆ. ಜಿಮ್ ಮಾಡೋದರಿಂದ ಮಕ್ಕಳ ಎತ್ತರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಜಿಮ್ ಟ್ರೈನರ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಮನಸ್ಸಲ್ಲಿರೋದು ನೀವೇ ಮೇಡಂ! ಸುಬ್ಬು, ಶ್ರಾವಣಿಗೆ ಹೇಳಿರುವ ಈ ಮಾತು ಯಾಕೋ ಮಿಸ್ ಹೊಡೀತಿದ್ಯಲ್ಲಾ!
ಪಿಂಕಿಯಾಗಿ ಫೇಮಸ್ ಆಗಿರುವ ಬಾಲನಟಿ
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಸುರೇಂದ್ರ ಮತ್ತು ವಂದನಾಳ ಮಗಳು ಪಿಂಕಿ ಪಾತ್ರದಲ್ಲಿ ಪ್ರತಿಶೆಟ್ಟಿ ನಟಿಸುತ್ತಿದ್ದಾಳೆ. ಶ್ರಾವಣಿಗೆ ಪಿಂಕಿ ಅಚ್ಚುಮೆಚ್ಚಿನ ಗೆಳತಿಯಾಗಿದ್ದಳು. ಶ್ರಾವಣಿ ಮದುವೆಯಾಗಿ ಸುಬ್ಬು ಮನೆ ಸೇರಿದ ಬಳಿಕ ಪಿಂಕಿ ಪಾತ್ರಕ್ಕೆ ಕತ್ತರಿ ಬಿದ್ದಂತಾಗಿದೆ. ಸದಾ ಶ್ರಾವಣಿ ಜೊತೆಯಲ್ಲಿಯೇ ಪಿಂಕಿ ಕಾಣಿಸಿಕೊಳ್ಳುತ್ತಿದ್ದಳು. ಸದ್ಯ ಧಾರಾವಾಹಿಯಲ್ಲಿ ಪಿಂಕಿಯನ್ನು ಸಮ್ಮರ್ ಕ್ಯಾಂಪ್‌ಗೆ ಕಳುಹಿಸಲಾಗಿದೆ.
ವಂದನಾ ಮುಂದೆ ವಿಜಯಾಂಬಿಕೆ ಸತ್ಯ ಬಯಲು
ವಂದನಾ ಮುಂದೆ ವಿಜಯಾಂಬಿಕೆ ಸತ್ಯ ಬಯಲಾಗಿದೆ. ವಿಜಯಾಂಬಿಕೆ ಫೋನ್‌ನಲ್ಲಿ ಮಾತನಾಡುತ್ತಿರೋದನ್ನು ವಂದನಾ ಕೇಳಿಸಿಕೊಂಡಿದ್ದಳು. ಅನುಮಾನಗೊಂಡು ವಿಜಯಾಂಬಿಕೆ ರೂಮ್ ಚೆಕ್ ಮಾಡಿದಾಗ ವಂದನಾ ಅಲ್ಲಿರುವ ಗನ್ ನೋಡಿದ್ದಳು. ಗಂಡ ಸುರೇಂದ್ರನಿಗೆ ಈ ವಿಷಯ ತಿಳಿಸುವಷ್ಟರಲ್ಲಿ ವಿಜಯಾಂಬಿಕೆ ಗನ್ ಅಲ್ಲಿಂದ ಬದಲಿಸಿ, ಆಟಿಕೆ ಗನ್ ಇರಿಸಿದ್ದಳು. ತನ್ನ ರಹಸ್ಯಗಳನ್ನು ತಿಳಿದುಕೊಳ್ಳಲು ಮುಂದಾದ್ರೆ ನಿನ್ನ ಗಂಡ ಸುರೇಂದ್ರ, ಮಗಳು ಪಿಂಕಿ ಮತ್ತು ನಿನ್ನ ತಂದೆ-ತಾಯಿಯನ್ನು ಮುಗಿಸುತ್ತೇನೆ ಎಂದು ವಂದನಾಗೆ ವಿಜಯಾಂಬಿಕೆ ಎಚ್ಚರಿಕೆ ನೀಡಿದ್ದಾಳೆ. ಆದ್ರೆ ಇದಕ್ಕೆ ಹೆದರದ ವಂದನಾ ಪ್ರತಿ ಸವಾಲು ಹಾಕಿದ್ದಾಳೆ.
ಇದನ್ನೂ ಓದಿ: ಶ್ರಾವಣಿ ಸುಬ್ರಮಣ್ಯ ಸಿನಿಮಾ ಸ್ಟೈಲಲ್ಲಿ ಸೇಡು: ಯುವಕನಿಗೆ ಬರೋಬರಿ ದಂಡ ವಿಧಿಸಿದ ಕೋರ್ಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.