
ಬೆಂಗಳೂರು (ಏ.30): ಕನ್ನಡ ಕಿರುತೆರೆಯ ಪ್ರಸಿದ್ಧ ಕನ್ನಡ ನಟಿ ಲಾಸ್ಯ ನಾಗರಾಜ್ ಅವರ ತಾಯಿ ಡಾ.ಸುಧಾ ನಾಗರಾಜ್ ಅವರ ಮೇಲೆ ಅವರ ತಂಗಿ ಮಂಗಳ ಶಶಿಧರ್ ಮತ್ತು ಮಂಗಳ ಅವರ ಪತಿ ಶಶಿಧರ್ ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ಇಂದು ಬೆಳಗ್ಗೆ ನಡೆದಿದೆ. ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಅಕ್ಕ ಸುಧಾ ನಾಗರಾಜ್ ಮೊದಲ ಮಹಡಿಯಲ್ಲಿ ಮತ್ತು ತಂಗಿ ಮಂಗಳ ಶಶಿಧರ್ ಕೆಳ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಆದರೆ, ಇಂದು ಮನೆಯ ಮುಂದಿನ ಜಾಗದ ವಿಚಾರವಾಗಿ ತಂಗಿ ಹಾಗೂ ತಂಗಿಯ ಗಂಡ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ಸುಧಾ ನಾಗರಾಜ್ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ಚೇತರಿಕೆ ನಂತರ ಹಲ್ಲೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಡಾನ್ಸ್ ಕ್ಲಾಸ್ ಜಾಗಕ್ಕಾಗಿ ಎರಡೂ ಮನೆಯವರ ಜಗಳ: ಡಾ. ಸುಧಾ ನಾಗರಾಜ್ ಅವರು ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು, ಹಲವು ವರ್ಷಗಳಿಂದ ತಮ್ಮ ಮನೆಯ ಪಾರ್ಕಿಂಗ್ ಜಾಗದಲ್ಲೇ ಡಾನ್ಸ್ ಕ್ಲಾಸ್ ನಡೆಸುತ್ತಾ ಬಂದಿದ್ದಾರೆ. ಈ ವಿಷಯವನ್ನು ತಂಗಿ ಮಂಗಳ ಶಶಿಧರ್ ವಿರೋಧಿಸುತ್ತಾ ಪದೇಪದೇ ಕಿರಿಕ್ ಮಾಡುತ್ತಿದ್ದರೆಂದು ತಿಳಿದುಬಂದಿದೆ.ಇಂದು ಇಂತಹದೇ ವಿವಾದ ತೀವ್ರಗೊಂಡು ಮಂಗಳ ಅವರು ತಮ್ಮ ಪತಿಯೊಂದಿಗೆ ಸೇರಿ ಡಾ. ಸುಧಾ ನಾಗರಾಜ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.
ಲಾಸ್ಯ ನಾಗರಾಜ್ ಪ್ರತಿಕ್ರಿಯೆ: ಈ ಸಮಯದಲ್ಲಿ ನಟಿ ಲಾಸ್ಯ ನಾಗರಾಜ್ ಅವರು ಕೆನಡಾದಲ್ಲಿ ಇದ್ದರೂ ತಾಯಿಯ ಮೇಲೆ ಆಗಿರುವ ಹಲ್ಲೆ ವಿಚಾರವನ್ನು ತಿಳಿದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪೊಲೀಸರು ಈ ಬಗ್ಗೆ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಘಟನೆಯ ಹಿಂದೆ ಇರುವ ಆಂತರಿಕ ಕೌಂಟುಂಬಿಕ ಬಿಕ್ಕಟ್ಟು, ಡಾನ್ಸ್ ಕ್ಲಾಸ್ ಕುರಿತ ಜಗಳದ ಬಗ್ಗೆ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.