ಅನುಪಮಾಗೆ ಮುತ್ತಿಟ್ಟ ಕೃಷಿ ತಾಪಂಡ, ನನ್ನ ಲೋಕ ನೀನೆಂದ ನಿರೂಪಕಿ

By Roopa Hegde  |  First Published Nov 8, 2024, 12:35 PM IST

ಸ್ಯಾಂಡಲ್ವುಡ್ ನಟಿ ಕೃಷಿ ತಾ ಪಂಡ ಹಾಗೂ ಅನುಪಮ ಗೌಡರ ಮುದ್ದಾದ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಜೀವದ ಗೆಳತಿ ಜೊತೆಗಿರುವ ವಿಡಿಯೋ ಹಂಚಿಕೊಂಡ ಅನುಪಮ, ನನ್ನ ಲೋಕ ನೀನು ಎಂದಿದ್ದಾರೆ. 
 


ಖ್ಯಾತ ನಿರೂಪಕಿ ಹಾಗೂ ನಟಿ ಅನುಪಮಾ ಗೌಡ (Famous anchor and actress Anupama Gowda), ಸುಂದರ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅನುಪಮಾ ಗೌಡ ಆಪ್ತ ಗೆಳತಿ ಹಾಗೂ ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (sandalwood actress Krishi Thapanda) ಅವರನ್ನು ಕಾಣ್ಬಹುದು. ಇಬ್ಬರು ಸೀರೆಯುಟ್ಟು ಮಿಂಚಿದ್ದಾರೆ. ಮುಖದಲ್ಲಿ ನೆಮ್ಮದಿಯ ನಗುವಿದೆ. ನನ್ನ ಲೋಕ ನೀನು ಎಂದು ಅನುಪಮ ಈ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ. ಸೀರೆಯಲ್ಲಿ ನಟಿಯರು ಮುದ್ದಾಗಿ ಕಾಣ್ತಿದ್ದಾರೆ. ಅನುಪಮಾಗೆ, ಕೃಷಿ ತಾಪಾಂಡ ಮುತ್ತಿಡುವ ಮೂಲಕ ತಮ್ಮ ಪ್ರೀತಿ (love)ಯನ್ನು ವ್ಯಕ್ತಪಡಿಸಿದ್ದಾರೆ.

ಕೃಷಿ ತಾ ಪಂಡ ಕೂಡ ವಿಡಿಯೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡು, ಗೆಳತಿ ಎನ್ನುವ ಶೀರ್ಷಿಕೆ ಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಕಮೆಂಟ್ ಬಂದಿದೆ. ನಿಶ್ಕಲ್ಮಶ ಪ್ರೀತಿ ಇವರದ್ದು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. 

Tap to resize

Latest Videos

undefined

ಮದುವೆ ಉಡುಗೆಯಲ್ಲೇ ರೀಲ್ಸ್ ಮಾಡಿದ ನಟಿ, ಫ್ಯಾನ್ಸ್ ಗೆ ಮಹತ್ವದ ಸಂದೇಶ

ಅಕ್ಕ ಧಾರಾವಾಹಿ ಮೂಲಕ ಹೆಚ್ಚು ಮನೆಮಾತಾದ ಅನುಪಮ ಈಗ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಅವರು ಸಕ್ರಿಯವಾಗಿದ್ದಾರೆ. ಟ್ರಾವೆಲ್, ಬ್ಯೂಟಿ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರಿಗೆ ಅನುಪಮ ಮಾಹಿತಿ ನೀಡ್ತಿರುತ್ತಾರೆ. ಅನುಪಮಾ ಸ್ನೇಹ ಜೀವಿ. ಕೃಷಿ ತಾ ಪಂಡ ಹಾಗೂ ಶ್ರುತಿ ಇವರ ಆಪ್ತ ಸ್ನೇಹಿತೆಯರು. ಫ್ರೆಂಡ್ ದೊಡ್ಡ ಗ್ಯಾಂಗ್ ಹೊಂದಿರುವ ಅನುಪಮಾ, ಅವರ ಜೊತೆ ಸಮಯ ಕಳೆಯೋದನ್ನು ಎಂಜಾಯ್ ಮಾಡ್ತಾರೆ. 

ಬಾಲ್ಯದಿಂದಲೂ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದ ಅನುಪಮಾ ಅವರಿಗೆ ಪ್ರೀತಿಯಲ್ಲಿ ನೋವಾಗಿದೆ. ಪ್ರೀತಿ ಕಳೆದುಕೊಂಡು ನೋವಿನಲ್ಲಿದ್ದ ಗೆಳತಿಗೆ ಆಸರೆಯಾಗಿದ್ದು ಕೃಷಿ ತಾ ಪಂಡ. ವೇದಿಕೆಯೊಂದರಲ್ಲಿ ಕೃಷಿ ತಾ ಪಂಡ, ಅನುಪಮಾ ಬಗ್ಗೆ ಹೇಳಿಕೊಂಡಿದ್ದರು. ನಮ್ಮಿಬ್ಬರ ಮಧ್ಯೆ ಸ್ನೇಹಕ್ಕಿಂತ ಮಿಗಿಲಾದ ಬಾಂಧವ್ಯವಿದೆ. ಅನುಪಮಾಗಾಗಿ ನಾನು ಏನು ಮಾಡಲೂ ಸಿದ್ಧ. ಎಷ್ಟೇ ದೂರದಲ್ಲಿ ಇದ್ರೂ, ಅವರು ಕರೆದ್ರೆ ಓಡಿ ಬರ್ತೇನೆ. ಅನುಪಮಾ ಜೊತೆಯಲ್ಲಿದ್ರೆ ಇಡೀ ಪ್ರಪಂಚ ಎದುರಿಸಲೂ ನಾನು ಸಿದ್ಧ ಎಂದು ಕೃಷಿ ತಾ ಪಂಡ ಹೇಳಿದ್ದರು. ಅವರ ಮಾತು ಕೇಳಿ ಅನುಪಮಾ ಭಾವುಕರಾಗಿದ್ದರು. 

ಈ ಒಂದು ಹಾಡಿಗೆ ಚಿರಂಜೀವಿ ರಾಧಿಕಾ ಜೋಡಿಯೇ ಕೊರಿಯೋಗ್ರಫಿ ಮಾಡಿ, ಅರ್ಧ ದಿನದಲ್ಲಿ ಶೂಟಿಂಗ್ ಮುಗಿಸಿದ್ರಂತೆ!

ಅನುಪಮಾ ಹಾಗೂ ಕೃಷಿ ತಾಪಂಡ ತಮ್ಮಿಬ್ಬರ ಸ್ನೇಹದ ಬಗ್ಗೆ ಆಗಾಗ ಮಾತನಾಡ್ತಿರುತ್ತಾರೆ. ಅಂತರಾಷ್ಟ್ರೀಯ ಫ್ರೆಂಡ್ಶಿಪ್ ಡೇ ದಿನ, ಕೃಷಿತಾ ಪಂಡ ಹಾಗೂ ನನ್ನ ಸ್ನೇಹ ಹೇಗೆ ಶುರುವಾಯ್ತು ಎಂಬುದನ್ನು ಅನುಪಮ ಹೇಳಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಅನುಪಮಾ ಮೊದಲು ಕೃಷಿ ತಾಪಂಡಗೆ ಡಿಎಂ ಮಾಡಿದ್ದರಂತೆ. ನಂತ್ರ ರಿಯಾಲಿಟಿ ಶೋನಲ್ಲಿ ಇಬ್ಬರ ಮೊದಲ ಭೇಟಿಯಾಗಿತ್ತು. ರಿಯಾಲಿಟಿ ಶೋ ಮುಗಿದ ಮೇಲೆ ಹೆಚ್ಚು ಆಪ್ತರಾದ ಅವರು ಬೆಸ್ಟ್ ಫ್ರೆಂಡ್ ಫಾರೆವರ್ ಆದ್ರು. ಕೃಷಿ ತಾ ಪಂಡ ಹಾಗೂ ಅನುಪಮ, ಪರಸ್ಪರ ಕಷ್ಟದ ಸಮಯದಲ್ಲಿ ನೆರವಾಗಿದ್ದಾರೆ. ಅವರು ನನಗೆ ಸ್ನೇಹಕ್ಕಿಂತ ಮಿಗಿಲು ಎನ್ನುತ್ತಾರೆ ಅನುಪಮ. ಐದು ವರ್ಷಗಳ ಅವರ ಸ್ನೇಹ ಸಾಕಷ್ಟು ಬಲಪಡೆದಿದೆ. 

ಇಬ್ಬರೂ ತಮ್ಮ ವೃತ್ತಿಯಲ್ಲಿ ಯಶಸ್ಸು ಕಾಣ್ತಿದ್ದು, ಅನುಪಮಾ ಗೌಡ ಬೆಂಗಳೂರಿನಲ್ಲಿ ಹಾಗೂ ಕೃಷಿ ತಾ ಪಂಡ ಮೈಸೂರಿನಲ್ಲಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಮಿಳು ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟಿರುವ ಕೃಷಿ ತಾ ಪಂಡ ಕನ್ನಡದ ಮೊದಲ ಚಿತ್ರ ಅಕಿರ. ಭರಾಟೆ, ಕನ್ನಡಕ್ಕೆ ಒಂದನ್ನು ಒತ್ತಿ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿರುವ ಕೃಷಿ ತಾ ಪಂಡ, ಬಿಗ್ ಬಾಸ್ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. 

click me!