ಹಸೆಮಣೆ ಏರಲು ಸಜ್ಜಾರಿಗೋ ಲಕ್ಷ್ಮೀ ನಿವಾಸ ಚಿನ್ನುಮರಿ ಭರ್ಜರಿ ರೀಲ್ಸ್​! ಚಿಂದಿ ಉಡಾಯಿಸಿದ ನಟಿ...

By Suchethana D  |  First Published Nov 8, 2024, 12:56 PM IST

ಇದೇ 28ರಂದು ರಿಯಲ್​ ಲೈಫ್​ನಲ್ಲಿ​ ಮದುವೆಗೆ ಸಜ್ಜಾಗಿರೋ ಲಕ್ಷ್ಮೀ ನಿವಾಸ ಚಿನ್ನುಮರಿ ಉರ್ಫ್​ ಚಂದನಾ ಅವರ ಭರ್ಜರಿ ಡಾನ್ಸ್​ ವೈರಲ್​ ಆಗುತ್ತಿದೆ. ಹೀಗಿದೆ ನೋಡಿ ಅವರ ಡಾನ್ಸ್​
 


ಚಿನ್ನುಮರಿ ಎಂದರೆ ಸಾಕು... ಸೀರಿಯಲ್​ ಪ್ರಿಯರ ಕಣ್ಮುಂದೆ ಬರುವುದು ಸೈಕೋ ಜಯಂತ್​ ಪತ್ನಿ ಜಾಹ್ನವಿ. ಗಂಡ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಹುಚ್ಚನಂತೆ ಪ್ರೀತಿಸುತ್ತಾನೆ ಎಂದು ತಿಳಿದುಕೊಂಡಿರೋ ಜಾಹ್ನವಿಗೆ ಈಗ ತಾನೇ ತನ್ನ ಗಂಡನ ನಿಜವಾದ ಮುಖ ಗೊತ್ತಾಗುತ್ತಿದೆ. ತನ್ನನ್ನು ಪ್ರೀತಿಸಲು ಆತ ಯಾವ ಮಟ್ಟಿಗೆ ಇಳಿಯುತ್ತಿದ್ದಾನೆ ಎನ್ನುವ ವಿಷಯ ಈಗಷ್ಟೇ ಈ ಪೆದ್ದು ಪತ್ನಿಗೆ ಗೊತ್ತಾಗುತ್ತಿದೆ. ತಾನು ಊಟ ಕೊಟ್ಟೆ ಎನ್ನುವ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್​ ಅನ್ನು ಥಳಿಸಿರುವುದರಿಂದ ಹಿಡಿದು, ತನ್ನ ಪ್ರೀತಿಯ ಮೊಲವನ್ನು ಬಿಟ್ಟು ಬಂದಿದ್ದು ಅಷ್ಟೇ ಅಲ್ಲದೇ ತಮ್ಮ ಸ್ವಂತ ಮನೆಯವರ ಮೇಲೂ ಕಾಳಜಿ ಮಾಡಿದರೆ ಗಂಡನಿಗೆ ವಿಪರೀತ ಕೋಪ ಬರುತ್ತದೆ ಎಂಬೆಲ್ಲಾ ವಿಷಯ ಈಗ ಅರಿವಿಗೆ ಬರುತ್ತಿದೆ. ಸೀರಿಯಲ್​ ಟ್ವಿಸ್ಟ್​ ಪಡೆದುಕೊಳ್ಳುತ್ತಿರುವ ನಡುವೆಯೇ ನಿಜ ಜೀವನದಲ್ಲಿ ಹಸೆಮಣೆ ಏರಲು ಸಜ್ಜಾಗಿ ನಿಂತಿದ್ದಾಳೆ ಚಿನ್ನುಮರಿ!

ಅಂದಹಾಗೆ ಜಾಹ್ನವಿ ಅವರ ನಿಜವಾದ ಹೆಸರು ಚಂದನಾ ಅನಂತಕೃಷ್ಣ. ಇವರ ಮದುವೆ ಫಿಕ್ಸ್ ಆಗಿದ್ದು, ಇದೇ 28ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.  ಉದ್ಯಮಿ ಆಗಿರುವ ಪ್ರತ್ಯಕ್ಷ್ ಅವರ ಜೊತೆ ಚಂದನಾ ಮದುವೆ ನಡೆಯಲಿದೆ. ಇದೀಗ ಮದುವೆಯ ಬೆನ್ನಲ್ಲೇ ಇವರ ಹಳೆಯ ರೀಲ್ಸ್​ ಒಂದು ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಖುರ್ಚಿ ಮದತಪೆಟ್ಟಿ (Kurchi Madathapetti) ಸಿನಿಮಾದ ಹಾಡಿಗೆ ಸ್ನೇಹಿತೆ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಚಿನ್ನುಮರಿಯ ಕ್ಯಾರೆಕ್ಟರ್​ಗೂ ಈ ಡಾನ್ಸ್​ಗೂ ಅಜಗಜಾಂತರ ವ್ಯತ್ಯಾಸ ಇದೆ. ನಿಜಕ್ಕೂ ಇವರು ಅವರೇನಾ ಎನ್ನುವ ರೀತಿಯಲ್ಲಿ ಚಿಂದಿ ಉಡಾಯಿಸಿದ್ದಾರೆ ನಟಿ. ಇದನ್ನು ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ನಿನ್ನ ಮುದ್ದು ಗಂಡ ಜಯಂತ್​ ಇದನ್ನು ನೋಡಿದ್ದಾನಾ? ನೋಡಿದ್ರೆ ಏನು ಕಥೆ ಎಂದು ಕೆಲವರು ಕೇಳುತ್ತಿದ್ದರೆ, ನಿನ್ನ ಸ್ನೇಹಿತೆಯನ್ನು ಮುಗಿಸಿ ಬಿಡ್ತಾನೆ ಹುಷಾರ್​ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. 

Tap to resize

Latest Videos

undefined

ಬಿಗ್​ಬಾಸ್​ನಲ್ಲಿ ಸಿಕ್ಕ ಪೇಮೆಂಟ್​ ಎಷ್ಟು? ಮಾಧ್ಯಮದ ಮುಂದೆ ಅಸಮಾಧಾನ ತೋಡಿಕೊಂಡ ಮಾನಸಾ!

ಇನ್ನು ಚಂದನಾ ಅವರು ಮದುವೆಯಾಗುತ್ತಿರುವ ಪ್ರತ್ಯಕ್ಷ್​ ಅವರು ಉದ್ಯಮಿಯಾಗಿದ್ದು, ಚಿತ್ರನಟ  ದಿವಂಗತ  ಉದಯ್ ಹುತ್ತಿನಗದ್ದೆ - ನಟಿ ಲಲಿತಾಂಜಲಿ ದಂಪತಿಯ ಮಗನಾಗಿದ್ದಾರೆ. ನಟಿ ಚಂದನಾ ಅವರು ಚಿನ್ನುಮರಿ ಆಗುವ ಮುನ್ನ,  ರಾಜಾ ರಾಣಿ  ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರ ಫೇಮಸ್​ ಆಗಿದ್ದು,   ಬಿಗ್ ಬಾಸ್   ಮನೆಗೆ ಹೋಗಿ ಬಂದ ಮೇಲೆ.  ಬಿಗ್ ಬಾಸ್ ಕನ್ನಡ 7  ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ಇವರು ಸ್ಪರ್ಧಿಸಿದ್ದರು.  ಹೂಮಳೆ  ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ  ಲಕ್ಷ್ಮೀ ನಿವಾಸ  ಸೀರಿಯಲ್‌ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.  

ಇನ್ನು ಪ್ರತ್ಯಕ್ಷ್​ ಕುರಿತು ಹೇಳುವುದಾದರೆ,  ಮೂಲತಃ ಚಿಕ್ಕಮಗಳೂರಿನವರು. ಇವರ ತಂದೆ ಉಯದ್​ ಅವರು, ಕೆಲ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು. 1987ರಲ್ಲಿ ತೆರೆ ಕಂಡಿದ್ದ  ಆರಂಭ  ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದವರು.   ಅಗ್ನಿಪರ್ವ ,  ಶುಭ ಮಿಲನ ,  ಜಯಭೇರಿ ,  ಉದ್ಭವ ,  ಅಮೃತ ಬಿಂದು ,  ಶಿವಯೋಗಿ ಅಕ್ಕಮಹಾದೇವಿ ,  ಉಂಡು ಹೋದ ಕೊಂಡು ಹೋದ ,  ಕ್ರಮ  ಮುಂತಾದ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ.  ಬಳಿಕ ಅವರು,  ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮುಂದುವರೆಸಿದರು.  ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ.  2022ರಲ್ಲಿ ಅವರು ನಿಧನರಾಗಿದ್ದು, ಪ್ರತ್ಯಕ್ಷ್​ ಅವರೂ ಕಾಫಿ ಎಸ್ಟೇಟ್​ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ

click me!