Latest Videos

ಕಿರುತೆರೆ ನಟಿಯರು ಕೈಕೈ ಹಿಡಿದು ಕುಣಿದರು, ಕೇಕೆ ಹಾಕಿ ನಕ್ಕರು; ಯಾಕೆ ಹೀಗೆ ಗುರೂ!

By Shriram BhatFirst Published Jun 19, 2024, 10:03 PM IST
Highlights

ತಮ್ಮ ನಡುವೆಯೇ ಬಾಳಿ ಬದುಕುತ್ತಿದ್ದ ಸಮಾನ ವಯಸ್ಕರು, ಹಲವು ಹಿರಿಕಿರಿಯ ನಟಿಯರು ಆತ್ಮಹತ್ಯೆ ಮಾಡಿಕೊಂಡಿರುವುದು, ಅಪಘಾತವಾಗಿ ತೀರಿಕೊಂಡಿರುವುದು, ಡಿವೋರ್ಸ್, ಎರಡನೇ ಮದುವೆ, ಮೂರನೇ ಮದುವೆ, ವಿದೇಶಗಳಲ್ಲಿ ಸೆಟ್ಲ್ ಆಗಿರುವವರು..

ಒಂದಾನೊಂದು ಕಾಲದಲ್ಲಿ ಸಿನಿಮಾರಂಗದಲ್ಲಿ ಮಿಂಚಿ ಅಲ್ಲಿ ಮರೆಯಾಗಿರುವ ಕನ್ನಡದ ಕೆಲವು ನಟಿಯರು, ಅಲ್ಲೂ ಮಿಂಚುತ್ತ ಕಿರುತೆರೆಯಲ್ಲಿಯೂ ಸಕ್ರಿಯರಾಗಿರುವ ಹಲವರು ಒಂದೆಡೆ ಸೇರಿದ್ದರು. ಗೆಟ್ ಟುಗೆದರ್ ಎಂಬ ಮಾಡರ್ನ್‌ ಹೆಸರಿನಲ್ಲಿ ಒಂದು ಮನೆಯಲ್ಲಿ ಭೇಟಿಯಾಗಿದ್ದರು. ಅವರೆಲ್ಲರೂ ತಮ್ಮ ಹಳೆಯ ನೆನಪುಗಳನ್ನು ಕೆದಕಿದರು, ಸವಿನೆನಪುಗಳನ್ನು ಹಂಚಿಕೊಂಡು ಖುಷಿಯಾದರು. ಕಹಿನೆನಪುಗಳನ್ನು ಹಂಚಿಕೊಂಡು ಕಣ್ಣೀರಾದರು. ಒಟ್ಟಿನಲ್ಲಿ ಬಹುಕಾಲದ ಬಳಿಕ ಹಲವರು ಒಂದು ಕಡೆ ಭೇಟಿಯಾದರು. 

ಹೌದು, ಎಂಬತ್ತು-ತೊಂಬತ್ತರ ದಶಕಗಳ ನಟಿಯರು, ಅದಕ್ಕೂ ಸ್ವಲ್ಪ ಹಿಂದಿನ ಹಾಗೂ ಮುಂದಿನ ತಲೆಮಾರಿನಲ್ಲಿ ಕ್ಯಾಮೆರಾ ಮುಂದೆ ತಮ್ಮ ಪ್ರತಿಭೆ ಮೆರೆದವರು. ಅವರಲ್ಲಿ ಕೆಲವರು ಒಂದೇ ಸ್ಕ್ರೀನ್ ಹಂಚಿಕೊಂಡವರು ಇದ್ದಾರೆ, ಕೆಲವರು ಒಂದೇ ತೆರೆಯಲ್ಲಿ ಅಕ್ಕತಂಗಿಯರಾಗಿ ನಟಿಸಿದ್ದಾರೆ. ಕೆಲವರು ಸ್ನೇಹಿತೆಯರಾಗಿದ್ದರೆ ಕೆಲವರು ಸಿನಿಮಾಗಳಲ್ಲಿ ವಿರೋಧಿಗಳ ಪಾತ್ರದಲ್ಲೂ ನಟಿಸಿದವರಿದ್ದಾರೆ. ಕೆಲವರು ಈಗ ಕಿರುತೆರೆಯಲ್ಲಿ ಒಟ್ಟಿಗೇ ನಟಿಸುತ್ತಿದ್ದಾರೆ. ಕೆಲವರು ನಿರ್ಮಾಪಕಿಯರಾಗಿದ್ದಾರೆ, ಹಲವರು ನಿರ್ದೇಶಕಿಯರಾಗಿದ್ದಾರೆ. 

ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಿದಾಗ ಕೊಟ್ಟ ಗಿಫ್ಟ್ ಏನು? ಸೇತುಕುಳಿ ಅದನ್ನ ಕೊಟ್ಟಿದ್ನ?

ಹೀಗೆ ಗೆಟ್ ಟುಗೇದರ್ ಸಮಯದಲ್ಲಿ ಅವರ ಮಧ್ಯೆ ಹಲವು ಮಾತುಕಥೆಗಳು ಖಂಡಿತವಾಗಿಯೂ ನಡೆದಿರುತ್ತವೆ. ತಮ್ಮ ನಡುವೆಯೇ ಬಾಳಿ ಬದುಕುತ್ತಿದ್ದ ಸಮಾನ ವಯಸ್ಕರು, ಹಲವು ಹಿರಿಕಿರಿಯ ನಟಿಯರು ಆತ್ಮಹತ್ಯೆ ಮಾಡಿಕೊಂಡಿರುವುದು, ಅಪಘಾತವಾಗಿ ತೀರಿಕೊಂಡಿರುವುದು, ಡಿವೋರ್ಸ್, ಎರಡನೇ ಮದುವೆ, ಮೂರನೇ ಮದುವೆ, ವಿದೇಶಗಳಲ್ಲಿ ಸೆಟ್ಲ್ ಆಗಿರುವವರು, ದುರಂತ ಬದುಕು ಸಾಗಿಸುತ್ತಿರುವವರು ಹೀಗೆ ಹತ್ತು ಹಲವು ಸಂಗತಿಗಳನ್ನು ಮಾತನಾಡಿಕೊಂಡು ಮನಸ್ಸು ಹಗುರ ಮಾಡಿಕೊಂಡರು. 

ನಾವೇನು ನೋಡುತ್ತೇವೋ ಹುಡುಕುತ್ತೇವೋ ಅದನ್ನೇ ಪಡೆಯುತ್ತೇವೆ; ಕೆಜಿಎಫ್ ಸ್ಟಾರ್ ಯಶ್!

ಜತೆಗೆ, ಆ ನಟಿಯರ ಮಕ್ಕಳಲ್ಲಿ ಕೆಲವರು ಈಗ ಸಿನಿಮಾ ಅಥವಾ ಕಿರುತೆರೆ ರಂಗದಲ್ಲಿ ಹೆಸರು ಮಾಡಿದ್ದಾರೆ. ಕೆಲವರು ಉನ್ನತ ಹುದ್ದೆಯಲ್ಲಿ, ವಿದೇಶಗಳಲ್ಲಿ ವಿದ್ಯಾಭ್ಯಾಸ ಅಥವಾ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ನಟಿಯರ ಗಂಡಂದಿರು ನಿಧನರಾಗಿರಬಹುದು. ಅವರಲ್ಲಿ ಕೆಲವರು ಅನಾರೋಗ್ಯಕ್ಕೆ ಒಳಗಾಗಿ ಬದುಕುತ್ತಿರಬಹುದು. ಅದೇನೇ ಸಂಗತಿಗಳಿದ್ದರೂ ಪರಸ್ಪರ ಒಂದೆಡೆ ಸೇರಿ, ಕೈ ಕೈ ಹಿಡಿದು ನಗುತ್ತ ನಲಿಯುತ್ತ ಕೇಕೆ ಹಾಕಿದ್ದಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕಿ ನಕ್ಕಿದ್ದಾರೆ, ಅತ್ತಿದ್ದಾರೆ. 

ರಮ್ಯಾ-ರಕ್ಷಿತಾ ಸಿನಿಮಾ ಬಗ್ಗೆ ನಿರ್ಮಾಪಕರು ಹೇಳಿದ್ದೇನು; ಸಕ್ಸಸ್‌ಗೆ ಯಾವ ಫಾರ್ಮುಲಾ ಬಳಸಿದ್ರು?

ಒಂದೇ ಎರಡೇ, ಅವರ ಬಹುದಿನಗಳ ಕನಸು ಎಂಬಂತೆ ಹಲವರು ಒಟ್ಟಿಗೇ ಸರಿ ಡಾನ್ಸ್ ಮಾಡಿದ್ದಾರೆ. ತಮ್ಮ ಸೀರೆ, ಒಡವೆಗಳನ್ನು ಪ್ರದರ್ಶಿಸಿದ್ದಾರೆ, ಮನೆಯಲ್ಲಿರುವ ಕಲೆಕ್ಷನ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಣ್ಣಬಣ್ಣದ ಬಟ್ಟೆ ತೊಟ್ಟಿದ್ದ ಹಿರಿಯ ಕಲಾವಿದೆಯರು ಹೂಬನದಲ್ಲಿರುವ ಪಾತರಗಿತ್ತಿಗಳಂತೆ ಕಂಗೊಳಿಸಿದ್ದಾರೆ. ಒಟ್ಟಿನಲ್ಲಿ, ಕ್ಯಾಮೆರಾ ಮುಂದೆ ಪೋಸ್ ಕೊಟ್ಟು ಕುಣಿದಾಡಿದ್ದಾರೆ, ಕೈ ಕೈ ಹಿಡಿದು ನಾವೆಲ್ಲರೂ ಒಂದು ಹಿಂಡು, ಕಲಾವಿದರ ದಂಡು ಎಂಬಂತೆ ಮನರಂಜನೆ ಕೊಟ್ಟಿದ್ದಾರೆ, ಮನರಂಜನೆ ಪಟ್ಟಿದ್ದಾರೆ. 

ರೋಬೋಟ್ ತರ ಕೆಲಸ ಮಾಡಬೇಡಿ, ಫ್ಯಾಷನ್ ಇರಲಿ; ಪ್ರಿಯಾಂಕಾ ಚೋಪ್ರಾ ಕಿವಿ ಮಾತು!

 

 

click me!