ಅರೆರೆ.. ಇದೇನು ಹೊಸ ಟ್ವಿಸ್ಟ್​? ಗೌತಮ್​- ಭೂಮಿಕಾ ಮನೆಯಲ್ಲಿ ಸೀತಾ-ಸಿಹಿ!

By Suchethana D  |  First Published Jun 19, 2024, 9:29 PM IST

ಸೀತಾ ಮತ್ತು ಸಿಹಿ ಭೂಮಿಕಾ  ಮತ್ತು ಗೌತಮ್​  ಮನೆಗೆ ಬಂದಿದ್ದಾರೆ. ಎರಡೂ ಸೀರಿಯಲ್​ಗಳಲ್ಲಿ ಇದೇನಿದು ಟ್ವಿಸ್ಟ್​?
 


ಸೀತಾರಾಮ ಕಲ್ಯಾಣಕ್ಕೆ ವೀಕ್ಷಕರು ಬಹಳ ಕಾತರದಿಂದ ಕಾಯ್ತಿರೋ ಕಾಲ ಕೂಡಿ ಬರುವ ಘಳಿಗೆ ಇದು. ಹಲವು ಅಡೆತಡೆಗಳನ್ನು ಎದುರಿಸಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ. ಮದುವೆಗೆ ಅಡ್ಡಗಾಲು ಹಾಕಲು ನೋಡಿದ್ದ ಭಾರ್ಗವಿಯ ಕುತಂತ್ರ ಫಲಿಸಲಿಲ್ಲ. ಈಗ ಮದುವೆಯ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ. ಆದರೆ ಇದೇ ಹೊತ್ತಲ್ಲಿ ಸೀತಾಳ ಬಾಳಿನಲ್ಲಿ ಮತ್ತೊಂದು ಬರಸಿಡಿಲು ಬಡಿಯುವ ಹಂತದಲ್ಲಿದೆ. ಆದರೆ ಅದು ಸದ್ಯ ತಣ್ಣಗಾಗಿದೆ. ಅದೇ ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್​ ಒಂದಾಗಿದ್ದಾರೆ. ದಂಪತಿ ಲವ್​ ಮೂಡ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಇತ್ತ ಸೀತಾಳ ಮದುವೆಯ ಸಂಭ್ರಮ ಜೋರಾಗಿದ್ದರೆ, ಅತ್ತ ಗೌತಮ್​-ಭೂಮಿಕಾ ಯಾವಾಗ ಗುಡ್​ ನ್ಯೂಸ್ ಕೊಡ್ತಾರೋ ಎಂದು ವೀಕ್ಷಕರು ಕಾಯುತ್ತಿದ್ದಾರೆ.

ಇದೀಗ ಈ ಎರಡೂ ಸೀರಿಯಲ್​ಗಳಿಗೆ ಟ್ವಿಸ್ಟ್​ ಬಂದಿದೆ. ಅದೇನೆಂದರೆ ಸೀತಾ ಮತ್ತು ಸಿಹಿ ಗೌತಮ್​ ಮನೆಗೆ ಬಂದಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ಇದರಲ್ಲಿ ಸೀತಾ ಮತ್ತು ಭೂಮಿಕಾ ಮಾತುಕತೆಯಲ್ಲಿ ತೊಡಗಿದ್ದರೆ ಅತ್ತ ಸಿಹಿ ಮತ್ತು ಗೌತಮ್​ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಎರಡು ಸೀರಿಯಲ್​ಗಳನ್ನು ಒಂದು ಮಾಡಿ ಮೆಗಾ ಎಪಿಸೋಡ್​ ಮಾಡುವುದು ಹೊಸ ವಿಷಯವಲ್ಲ. ಇದೀಗ ಇಲ್ಲೂ ಹಾಗೆಯೇ ಆಗಿದೆ. ಸೀತಾ  ಮತ್ತು ಸಿಹಿ ಗೌತಮ್​ ಮತ್ತು ಭೂಮಿಕಾರನ್ನು ತಮ್ಮ ಮದುವೆಗೆ ಆಹ್ವಾನಿಸಲು ಬಂದಿದ್ದಾರೆ. ಇವರಿಬ್ಬರೂ ತುಂಬಾ ಕ್ಲೋಸ್​ ಆಗಿದ್ದು, ಫ್ರೆಂಡ್​ ಆಗಿರುವಂತೆ ತೋರಿಸಲಾಗಿದೆ.

Latest Videos

undefined

ರಾಮ ಕರಿಮಣಿ ಕಟ್ಟಾಗೋಯ್ತು! ಆದರೂ ಸೀತೆಯ ಬದುಕಲ್ಲಿ ಮತ್ತೆ ಬರ ಸಿಡಿಲು- ಯಾರೀ ಹೊಸ ಲೇಡಿ?

ಎಲ್ಲರೂ ಮದುವೆಗೆ ಖಂಡಿತಾ ಬರಬೇಕು ಎಂದು ಸೀತಾ ಇಬ್ಬರಿಗೂ ಆಹ್ವಾನ ಇತ್ತಿದ್ದಾಳೆ. ಅದೇ ಇನ್ನೊಂದೆಡೆ ಗುಡ್​ನ್ಯೂಸ್​ ಯಾವಾಗ ಎಂದು ಕೇಳಿದ್ದಾಳೆ. ಭೂಮಿಕಾ ನಾಚಿ ನೀರಾಗಿದ್ದಾಳೆ. ಅದೇ ಇನ್ನೊಂದೆಡೆ ಸಿಹಿ ನನಗೊಂದು ತಮ್ಮನೋ, ತಂಗಿನೋ ಬೇಕು ಎಂದಾಗ ಗೌತಮ್​ ಶೀಘ್ರದಲ್ಲಿಯೇ ಬರುತ್ತೆ ಎಂದಾಗ ಸೀತಾ ಭೂಮಿಕಾ ಹತ್ತಿರ ಸನ್ನೆ ಮಾಡುತ್ತಾಳೆ.  ಆಗ ಭೂಮಿಕಾ, ತನ್ನ ಓರೆಗಿತ್ತಿ ಗರ್ಭಿಣಿಯಾಗಿದ್ದು, ಅವಳಿಗೆ ಮಗು ಬರುತ್ತಿದೆ ಎನ್ನುತ್ತಾಳೆ. ಹೀಗೆ ತಮಾಷೆಯ ಎಪಿಸೋಡ್​ ಮಾಡಲಾಗಿದೆ. ಗೆಳೆತಿಯರಿಬ್ಬರ ನಡುವೆ ನಡೆಯುವ ಸಂಭಾಷಣೆ ಇದರಲ್ಲಿ ನೋಡಬಹುದು. 

ಆದರೆ ಸಿಹಿಯ ಗುಟ್ಟು ಮಾತ್ರ ಇನ್ನೂ  ಗುಟ್ಟಾಗಿ ಇಡಲಾಗಿದೆ. ಸಿಹಿಯ ಅಪ್ಪ ಯಾರು? ನಿಜಕ್ಕೂ ಸಿಹಿ ಸೀತಾಳ ಮಗಳೇನಾ? ಹಾಗೊಂದು ವೇಳೆ ಹೌದಾಗಿದ್ದರೆ ಸೀತಾಳ ಗಂಡ ಯಾರು? ಅವನು ಬದುಕಿದ್ದಾನಾ? ಡಿವೋರ್ಸ್​ ಆಗಿದ್ಯಾ? ಸತ್ತು ಹೋಗಿದ್ದಾನಾ ಯಾವುದಕ್ಕೂ ಇದುವರೆಗೆ ಸೀರಿಯಲ್​ನಲ್ಲಿ ಉತ್ತರ ಸಿಗಲಿಲ್ಲ. ಸಿಹಿಯ ಹುಟ್ಟಿನ ರಹಸ್ಯ ಇನ್ನುಮುಂದೆ ತನ್ನಿಂದ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ಹಲವು ಬಾರಿ ಸೀತಾ ಅಂದುಕೊಂಡು ರಾಮ್​ಗೆ ವಿಷಯ ತಿಳಿಸಲು ಹೋಗಿದ್ದಳು. ಆದರೆ ನಿನ್ನ ಇತಿಹಾಸ ನನಗೆ ಬೇಡ, ಸಿಹಿಯ ಬಗ್ಗೆ ತಿಳಿದುಕೊಂಡು ನನಗೆ ಏನೂ ಆಗುವುದು ಇಲ್ಲ, ಅವಳು ಎಂದಿಗೂ ನನ್ನ ಮಗಳೇ ಎಂದಿದ್ದಾನೆ ರಾಮ್​. ಇದರ ನಡುವೆಯೇ ಆ ಯುವತಿಯನ್ನು ನೋಡಿ ಸೀತಾ ಗಾಬರಿಯಾಗಿದ್ದು ಯಾಕೆ, ಅವಳು ಯಾರು, ಮತ್ತೊಮ್ಮೆ ಏನಿದು ಬರಸಿಡಿಲು ಎನ್ನುವುದು ವೀಕ್ಷಕರ ಮುಂದಿರುವ ಪ್ರಶ್ನೆ. 

ಅಮ್ಮನ ಕೈಯಲ್ಲಿ ಸಿಕ್ಕಿಬಿದ್ದ ಸೀತಾಗೆ ಈ ಶಿಕ್ಷೆ! ನಿಂಗಿದು ಬೇಕಿತ್ತಾ ಮಗಳೇ ಎಂದ ಫ್ಯಾನ್ಸ್​...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!