ನವರಾತ್ರಿಯ ಹಬ್ಬಕ್ಕೆ ರೇಷ್ಮೆ ಸೀರೆಯುಟ್ಟು ಮದುಮಗಳಂತೆ ಕಂಗೊಳಿಸುತ್ತಿದ್ದಾರೆ ಪುಟ್ಟಕ್ಕನ ಮಗಳು ಸ್ನೇಹಾ ಉರ್ಫ್ ಸಂಜನಾ ಬುರ್ಲಿ. ನೆಟ್ಟಿಗರು ಕೇಳ್ತಿರೋದೇನು?
ಈಗ ಎಲ್ಲೆಲ್ಲೂ ನವರಾತ್ರಿ ಸಂಭ್ರಮ, ಸಡಗರ. ಇನ್ನು ಸೆಲೆಬ್ರಿಟಿಗಳು ಎಂದ ಮೇಲೆ ಕೇಳಬೇಕೆ? ಭರ್ಜರಿಯಾಗಿ ಸೀರೆಯುಟ್ಟ ಕಂಗೊಳಿಸುತ್ತಾರೆ. ಇದೀಗ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಕೂಡ ರೇಷ್ಮೆ ಸೀರೆಯುಟ್ಟ ವಧುವಿನಂತೆ ಕಾಣಿಸುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಥೇಟ್ ಮದುಮಗಳಂತೆಯೇ ಕಾಣಿಸುತ್ತಿದ್ದೀರಿ. ಮದುಮಗಳು ಆಗೋದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ.
ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್ ಜೋಡಿ ಅದೆಷ್ಟು ಫೇಮಸ್ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್!
undefined
ಅಮಿತಾಭ್ @82: ಜಯಾ ಜೊತೆ ಮದುವೆಗೆ ಅಡ್ಡಿ ಬಂದಿತ್ತು ಜಾತಿ! ಹುಟ್ಟುಹಬ್ಬದಂದು ಕುತೂಹಲದ ವಿಷ್ಯ ರಿವೀಲ್
ಇದೀಗ ಸೀರಿಯಲ್ನಲ್ಲಿ ಸ್ನೇಹಾ ಜಿಲ್ಲಾಧಿಕಾರಿ ಆಗಿದ್ದಾಳೆ. ಬಡತನದಲ್ಲಿಯೇ ಹುಟ್ಟಿರೋ ಹೆಣ್ಣುಮಗಳು ಕೂಡ ಉನ್ನತ ಸ್ಥಾನಕ್ಕೆ ಏರಬಹುದು ಎನ್ನುವ ಉದ್ದೇಶದೊಂದಿಗಿನ ಸ್ನೇಹಾ ಪಾರ್ಟ್ ಜನರಿಗೆ ಇಷ್ಟವಾಗಿದೆ. ಇಂದು ಎಷ್ಟೋ ಹೆಣ್ಣುಮಕ್ಕಳು ಅದೆಷ್ಟೋ ಕೋಟೆ ಕೊತ್ತಲೆಗಳನ್ನು ದಾಟಿ, ಜೀವನದಲ್ಲಿ ದುಃಖವನ್ನೇ ಉಂಡು ಉನ್ನತ ಸ್ಥಾನಕ್ಕೆ ಏರಿದವರಿದ್ದಾರೆ. ಇಂಥ ಅದೆಷ್ಟೋ ಮಹಿಳೆಯರು ಒಂಟಿಯಾಗಿ ನಿಂತು ತಮ್ಮ ಹೆಣ್ಣುಮಗಳನ್ನು ಇಂಥ ಸ್ಥಾನಕ್ಕೆ ಏರಿಸಿದ್ದಾರೆ. ಅವರೆಲ್ಲರ ದ್ಯೋತಕವಾಗಿ ನಿಲ್ಲುತ್ತಾರೆ ಪುಟ್ಟಕ್ಕ ಮತ್ತು ಸ್ನೇಹಾ. ಸದ್ಯ ಸೀರಿಯಲ್ನಲ್ಲಿ ಸ್ನೇಹಾ ತನ್ನ ನಕಲಿ ಅತ್ತೆಯ ಮೋಸವನ್ನು ಬಯಲಿಗೆ ಎಳೆಯುವ ಕಾಲ ಬಂದಿದೆ. ಕಾನೂನು ಎಂದು ನಿಂತರೆ ಸಂಬಂಧವನ್ನೂ ನೋಡದವಳು ಸ್ನೇಹಾ. ಇಂಥ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾಳೆ.
ಪುಟ್ಟಕ್ಕನ ಮಕ್ಕಳ ಧಾರಾವಾಹಿ ಕುರಿತು ಈ ಹಿಂದೆ ಮಾತನಾಡಿದ್ದ ಸಂಜನಾ ಅವರು, ಹಳ್ಳಿ ಹುಡುಗಿ ರೀತಿ ಕಾಣಿಸಬೇಕು, ಎಂದು ನಾನು ಲುಕ್ ಬದಲಾಯಿಸಿಕೊಂಡೆ. ಆ್ಯಕ್ಟಿಂಗ್ ಕ್ಲಾಸ್‌ನಲ್ಲಿ (Acting Class) ಭಾಗಿಯಾಗಿ ಪಾತ್ರಕ್ಕೆ ರೆಡಿಯಾದೆ. ಉಮಾಶ್ರೀ ಅಮ್ಮ ಅವರ ಜತೆ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಸಂತೋಷವಾಗುತ್ತದೆ. ಮೊದಲ ದಿನದ ಚಿತ್ರೀಕರಣ ವೇಳೆ ಅಮ್ಮ ಅವರು ನನಗೆ ಹಾಯ್ ಹೇಳಿದ ಕ್ಷಣ ನಾನು ಮರೆಯುವುದಿಲ್ಲ. ಒಂದು ದಿನ ದೊಡ್ಡ ಸನ್ನಿವೇಶ ಚಿತ್ರೀಕರಣ ಮಾಡಬೇಕಿತ್ತು. ಆಗ ಸೆಟ್‌ನಲ್ಲಿ ಒಂದು ಸಣ್ಣ ಶಬ್ದವೂ ಇರಲಿಲ್ಲ. ಪಿನ್ ಡ್ರಾಪ್ ಸೈಲೆನ್ಸ್ (Pin-Drop silence) ಇತ್ತು. ನಾನು ನಟಿಸಿದ ನಂತರ ಉಮಾಶ್ರೀ ಅಮ್ಮ ಅವರು ಎದ್ದು ಚಪ್ಪಾಳೆ ತಟ್ಟಿ ಹೊಗಳಿದರು. ಆ ಕ್ಷಣ ಅವರು ಹೇಳಿದ ಮಾತು ನನಗೆ ಸ್ಫೂರ್ತಿಯಾಗಿತ್ತು,' ಎಂದಿದ್ದಾರೆ ಸಂಜನಾ.
ಪುಟ್ಟಕ್ಕನ ಮಕ್ಕಳು ಸ್ನೇಹಾ ಭರ್ಜರಿ ರೀಲ್ಸ್: ದೂರು ದಾಖಲಿಸಲು ಮುಂದಾದ ನೆಟ್ಟಿಗರು!