ಮೋದಿ ಬ್ರೇಕಪ್‌ ಸಾಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌, 'ಇನ್ಸ್‌ಟಾಗ್ರಾಮ್‌ ಬ್ಯಾನ್‌ ಆಗ್ಬಹುದು' ಎಂದ ನೆಟ್ಟಿಗರು!

By Santosh NaikFirst Published Oct 4, 2023, 5:39 PM IST
Highlights

ಸೋಶಿಯಲ್‌ ಮೀಡಿಯಾದಲ್ಲಿ ಹೊಸ ಟ್ರೆಂಡ್‌ ಶುರುವಾಗಿದೆ. ಅದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ. ಮೋದಿ ಬ್ರೇಕಪ್‌ ಸಾಂಗ್‌ ಹೆಸರಲ್ಲಿ ಕನ್ನಡದ ಸಾಕಷ್ಟು ಬ್ರೇಕಪ್‌ ಸಾಂಗ್‌ಗಳನ್ನು ಮೋದಿ ಅವರ ಧ್ವನಿಯಲ್ಲಿ ಮಾಡಲಾಗುತ್ತಿದೆ. ಅದರ ನಡುವೆ ನೆಟ್ಟಿಗರು ಮತ್ತೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
 

ಬೆಂಗಳೂರು (ಅ.4): ನೀ..ರಾಜ್‌ ಕುಮಾರಿ...., ಅನುರಾಗದ ಈ ನೋವಿಗೆ ಏನ್‌ ಹೆಸರಿಡಲಿ... ನನ್ನ ಕನಸಿನಲ್ಲಿ... ಹೀಗೆ ಇನ್ಸ್‌ಟಾಗ್ರಾಮ್‌ ತೆರೆದರೆ ಇಂಥದ್ದೊಂದು ವಿಡಿಯೋಗಳು ಇತ್ತೀಚೆಗೆ ವೈರಲ್‌ ಆಗುತ್ತಿವೆ. ಹಾಗಂತ ಇದು ಮೂಲ ಹಾಡಲ್ಲ. ಪ್ರಧಾನಿ ಮೋದಿ ಅವರ ರೀತಿಯಂಥ ಧ್ವನಿಯಲ್ಲಿ ಇಂಥ ಹಾಡುಗಳು ವೈರಲ್‌ ಆಗುತ್ತಿದೆ. ಅದಕ್ಕೆ ಕೆಲವೊಂದಿಷ್ಟು ಪೋಟೋಗಳನ್ನು ಹಾಕಿ ಮೋದಿ ಬ್ರೇಕಪ್‌ ಸಾಂಗ್‌ ಎಂದು ವೈರಲ್‌ ಮಾಡುತ್ತಿದ್ದಾರೆ. ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಇರುವ ಟ್ರೋಲ್‌ಗಳು ಹಾಗೂ ತಮಾಷೆಯ ವಿಡಿಯೋಗಳ ಬಗ್ಗ ಅದರ ಕ್ರಿಯೇಟಿವಿಟಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಹೊಸ ಹೊಸ ಟ್ರೆಂಡ್‌ಗಳ ಬಗ್ಗೆ ತಾವು ಇದರಿಂದಲೇ ಅಪ್‌ಡೇಟ್‌ ಪಡೆಯೋದಾಗಿ ತಿಳಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ. ಜಿ20 ಶೃಂಗಸಭೆಗೆ ಇಟಲಿಯ ಪ್ರಧಾನಿ ಜಿಯಾರ್ಜಿಯೋ ಮೆಲೋನಿ ಬಂದಿದ್ದರು. ಈ ವೇಳೆ ಬಂದಂಥ ಕೆಲ ಚಿತ್ರಗಳನ್ನು ಕೊಲಾಜ್‌ ಮಾಡಿಸಿ, ಅದಕ್ಕೆ ಬ್ರೇಕಪ್‌ ಸಾಂಗ್‌ ಮಾಡಿ ಪೋಸ್ಟ್‌ ಮಾಡುತ್ತಿದ್ದಾರೆ. ಇದನ್ನು ನೋಡಿದ ಹೆಚ್ಚಿನವರು ಹೀಗೇ ಮಾಡ್ತಾ ಇದ್ರೆ, ಮೋದಿ ಶೀಘ್ರದಲ್ಲಿಯೇ ಇನ್ಸ್‌ಟಾಗ್ರಾಮ್‌ ಕೂಡ ಬ್ಯಾನ್‌ ಮಾಡ್ತಾರೆ ನೋಡ್ತಿರಿ ಎಂದು ತಮಾಷೆಯಾಗಿ ಎಚ್ಚರಿಸಿದ್ದಾರೆ.

ಯಾವೆಲ್ಲಾ ಹಾಡುಗಳು ವೈರಲ್‌: ಇನ್ನು ಈ ಟ್ರೆಂಡ್‌ನಲ್ಲಿ ಯಾವೆಲ್ಲಾ ಹಾಡುಗಳು ವೈರಲ್‌ ಆಗಿದೆ ಅನ್ನೋದು ನೋಡೋದಾದ್ರೆ ನೀಲಕಂಠ ಚಿತ್ರದ.. 'ಅಂದದ ಬೊಂಬೆಗೆ ಗಂಧದ ಶೃಂಗಾರ..', ರಾಟೆ ಚಿತ್ರದಲ್ಲಿ ಯೋಗರಾಜ್‌ ಭಟ್‌ ಬರೆದ, 'ನನ್ನ ಬೆನ್ನಲ್ಲಿನ..' ಗೀತೆಯೆ  'ಅನುರಾಗದ ಈ ನೋವಿಗೆ ಏನ್‌ ಹೆಸರಿಡಲಿ..' ಅನ್ನೋ ಸಾಲುಗಳ ಆಡಿಯೋ, ಗೋಲ್ಡನ್‌ ಸ್ಟಾರ್ ಗಣೇಶ್‌ ಅಭಿನಯದ ಬೊಂಬಾಟ್‌ ಚಿತ್ರದ 'ಮಾತಿನಲ್ಲಿ ಹೇಳಲಾರೆನು..' ಹಾಡಿನ 'ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ...' ಆಡಿಯೋಗಳು ವೈರಲ್‌ ಆಗಿವೆ. ಇದರ ನಡುವೆ ಪುಟ್ಟಗೌರಿ ಚಿತ್ರದ ಟೈಟಲ್‌ ಸಾಂಗ್‌, ತ್ರಿವಿಕ್ರಮ ಚಿತ್ರದ 'ನಿನ್ನೆ ತನಕ..' ಹಾಡು, ಗೂಗ್ಲಿ ಚಿತ್ರದ 'ಬಿಸಿಲು ಕುದುರೆಯೊಂದು..' ಗೀತೆ ಹೀಗೆ ಸಾಕಷ್ಟು ಕನ್ನಡ ಹಾಡುಗಳನ್ನು ಮೋದಿ ಬ್ರೇಕಪ್‌ ಸಾಂಗ್‌ ಎಂದುಕೊಂಡು ಪೋಸ್ಟ್‌ ಮಾಡಲಾಗುತ್ತಿದೆ.

ಮೋದಿ ಧ್ವನಿಯಲ್ಲಿ ಈ ಹಾಡು ಬಂದಿದ್ದೇಗೆ: ಇದು ಸಂಪೂರ್ಣವಾಗಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌. ಕವರ್ಸ್‌.ಎಐ (https://covers.ai/) ವೆಬ್‌ಸೈಟ್‌ ಮೂಲಕ ಇದನ್ನು ಮಾಡುತ್ತಾರೆ. ಇದರಲ್ಲಿ ಪ್ರಧಾನಿ ಮೋದಿ ಅವರ ವಾಯ್ಸ್‌ ಗೀತೆಯೇ ಟಾಪ್‌ ಟ್ರೆಂಡಿಂಗ್‌ನಲ್ಲಿದೆ. ವೆಬ್‌ಸೈಟ್‌ ಹೇಳುವಂತೆ, ಎಐ-ಧ್ವನಿಗಳೊಂದಿಗೆ ನಿಮ್ಮ ಹಾಡುಗಳ ಕವರ್‌ಗಳನ್ನು ರಚಿಸಲು covers.ai ನಿಮಗೆ ಅನುಮತಿ ನೀಡುತ್ತದೆ ಎಂದಿದೆ. ನರೇಂದ್ರ ಮೋದಿ ಮಾತ್ರವಲ್ಲ, ರಜನಿಕಾಂತ್‌, ನವಾಜುದ್ದೀನ್‌ ಸಿದ್ದಿಕಿ ಹೀಗೆ ಹಲವು ಖ್ಯಾತನಾಮರ ಎಐ ಧ್ವನಿಗಳ ಹಾಡುಗಳನ್ನು ಇದು ಕ್ರಿಯೇಟ್‌ ಮಾಡುತ್ತದೆ. 

ಭರ್ಜರಿಯಾಗಿ ಕಾಮೆಂಟ್ಸ್‌ಗಳು: ಇನ್ನು ಮೋದಿ ಎಐ ವಾಯ್ಸ್‌ನಲ್ಲಿ ಬಂದಿರುವ ಈ ಹಾಡುಗಳು ಸಾಕಷ್ಟು ವೈರಲ್‌ ಅಗಿದ್ದು, ಭರ್ಜರಿ ಕಾಮೆಂಟ್ಸ್‌ಗಳು ಬಂದಿವೆ. 'ಕೊನೆಗೂ ಇನ್ಸ್‌ಟಾಗ್ರಾಮ್‌ ಅಪಾಯದ ಮಟ್ಟಕ್ಕೆ ತಲುಪಿದೆ' ಎಂದು ಒಬ್ಬರು ಟ್ವೀಟ್‌ ಮಾಡಿದ್ದರೆ, 'ಫ್ರಿ ಇದ್ದಾಗ ಇನ್ಸ್ಟಾಗ್ರಾಮ್ ನೋಡ್ತಿದ್ದೆ ಅದ್ಕು ಕಲ್ಲು ಹಾಕ್ತಿರಿ ಆದ್ರೂ ಲಾಸ್ಟಲ್ಲಿ ಪುಟ್ ಗೌರಿ ಮದುವೆ ಸಖತ್‌ಆಗಿದೆ' ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ. ಮೋದಿ ಏನ್‌ ಮಾಡಿದ್ರೂ ಟ್ರೆಂಡಿಂಗ್‌ ಅನ್ನೋದು ಇದರಲ್ಲಿ ಗೊತ್ತಾಗ್ತಿದೆ ಎಂದು ಬರೆದಿದ್ದಾರೆ. 'ಯಾರೋ ಅದು ಮೋದಿ ತರ ಹಾಡೋದು ತುಂಬಾ ಟ್ರೋಲ್ ಆಗ್ತಾ ಇದೆ ಇನ್ನು ಇನ್ಸ್ಟಾಗ್ರಾಮ್ ಅಪಾಯದಲ್ಲಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. ಹೆಚ್ಚಿನವರು ದೇಶದ ಪ್ರಧಾನಿಯ ವಿಚಾರದಲ್ಲಿ ಇಂಥವೆಲ್ಲ ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಮೋದಿ ವಾಯ್ಸ್‌ಅಲ್ಲಿ ಎಷ್ಟು ಸಾಂಗ್ಸ್‌ ಅಂತಾ ಮಾಡ್ತೀರಾ, ಅವರಿಗೆ ಭಾಷೆ ಬರೊಲ್ಲ ಅಂದ್ಕೊಂಡು ಇಷ್ಟೆಲ್ಲಾ ಹಾಡು ಹಾಡ್ಸೋದಾ ಎಂದು ಟ್ವೀಟ್‌ ಮಾಡಿದ್ದಾರೆ. 

ಇಂಥ ಫಿಲ್ಮ್‌ಗಳಲ್ಲಿ ಇನ್ನು ನಟಿಸಲ್ವಂತೆ ಮಿಲ್ಕಿ ಬ್ಯೂಟಿ ತಮನ್ನಾ!

Latest Videos

ಅದರೊಂದಿಗೆ ಕೆಜಿಎಫ್‌ ಡೈಲಾಗ್‌ ಹೊಡೆದಿರುವ ವಿಡಿಯೋ ಕೂಡ ವೈರಲ್‌ ಆಗಿದೆ. 'ಹಿನ್ನೆಲೆ ಗಾಯಕ ನಿಗೆ ಆಸ್ಕರ್ ಅವಾರ್ಡ್ ಕೊಟ್ರುನು ಕಡಿಮೆನೇ..' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ನಮ್ಮ ಮೋದಿ ಸರ್ ಅವರ ಗಮನಕ್ಕೆ ಬಂದರೆ ಮೊದಲು ಬ್ಯಾನ್..' ಎಂದು ತಮಾಷೆಯಾಗಿ ಬರೆದಿದ್ದಾರೆ.

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

 

click me!