ಮದುವೆಗೆ ಶುಭಹಾರೈಸಿ, ಆದ್ರೆ ವಧುವಿನ ಮುಖ ನೋಡ್ಬೇಡಿ! ಹೀಗಿದೆ ಬಿಗ್​ಬಾಸ್​ ಅದ್ನಾನ್ ಆಮಂತ್ರಣ ಪತ್ರಿಕೆ...

By Suchethana D  |  First Published Sep 24, 2024, 5:05 PM IST

ಎರಡು ವರ್ಷಗಳ ಡೇಟಿಂಗ್​ ಬಳಿಕ ಬಿಗ್​ಬಾಸ್​ ಖ್ಯಾತಿಯ ಅದ್ನಾನ್ ಶೇಖ್ ಇಂದು ಮದುವೆಯಾಗಿದ್ದಾರೆ. ವಧುವಿನ ಫೋಟೋ ಕ್ಲಿಕ್​  ಮಾಡಲು ನಿಷೇಧ ಹೇರಲಾಗಿತ್ತು. ಹೀಗಿತ್ತು ನೋಡಿ ಇನ್​ವಿಟೇಷನ್​ ಕಾರ್ಡ್​.
 


 ಹಿಂದಿ ಬಿಗ್​ಬಾಸ್​ನ ಓಟಿಟಿ-03  ಖ್ಯಾತಿಯ ಅದ್ನಾನ್ ಶೇಖ್ ಅವರು ತಮ್ಮ ಬಹುಕಾಲದ ಗೆಳತಿ ಆಯೇಷಾ ಶೇಖ್ ಅವರ ಜೊತೆ  ಇಂದು ಮದುವೆಯಾಗಿದ್ದಾರೆ.  ಅವರು ನಿನ್ನೆ ಅಂದರೆ ಭಾನುವಾರ ಮದುವೆಯ ಸಂಗೀತ ಸಮಾರಂಭವನ್ನು ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಆಚರಿಸಿದರು. ಮದುವೆ ಸಮಾರಂಭಗಳು ಅದ್ಧೂರಿಯಾಗಿ ನಡೆದವು. ಅದ್ನಾನ್ ಶೇಖ್ ಅವರ ಹಲ್ದಿ ಮತ್ತು ಸಂಗೀತ ಸಮಾರಂಭದ ಆಚರಣೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಮದುವೆಯ ಫೋಟೋ, ವಿಡಿಯೋ ಜೊತೆ ಅವರ ಮದುವೆ ಇನ್​ವಿಟೇಷನ್​ ಕಾರ್ಡ್​ ವೈರಲ್​ ಆಗುತ್ತಿದೆ. ಇದು ಆಯೇಷಾ ಅವರ ಹೆಸರಿನಲ್ಲಿ ಇದೆಯಾದರೂ, ಇದನ್ನು ಬರೆಸಿದವರು ಅದ್ನಾನ್​ ಎನ್ನುತ್ತಿದ್ದಾರೆ ನೆಟ್ಟಿಗರು. ಇದರಲ್ಲಿ ಇರೋದು ಏನೆಂದರೆ, ಮದುವೆಯ ಸಂದರ್ಭದಲ್ಲಿ ವಧುವಿನ ಫೋಟೋ ಯಾರೂ ಸೆರೆ ಹಿಡಿಯಬಾರದು. ಇದು ತಮ್ಮ ಸಂಪ್ರದಾಯದ ಪ್ರಶ್ನೆ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದ್ನಾನ್​ ಕೂಡ ಇದನ್ನೇ ಹೇಳಿದ್ದಾರೆ, ಮದುವೆಗೆ ಆಹ್ವಾನ ನೀಡಿರುವ ಅವರು ಮದುಮಗಳ ಫೋಟೋ ಮಾತ್ರ ತೋರಿಸಬೇಡಿ ಎಂದಿದ್ದಾರೆ.

ಅದರಂತೆಯೇ ಮದುವೆಯ ಸಂಪೂರ್ಣ ಶಾಸ್ತ್ರಗಳು ನಡೆಯುವವರೂ ಮದುಮಗಳಿಗೆ ಮಾಸ್ಕ್​ ಹಾಕಿ ಇಡಲಾಗಿತ್ತು. ಇನ್ನು ಮದುವೆಯ ಸಂದರ್ಭದಲ್ಲಿ ಒಬ್ಬರದ್ದೇ ಫೋಟೋ ತೆಗೆಯಲು ಆಗಲ್ವಲ್ಲಾ? ಅದಕ್ಕಾಗಿಯೇ ಪಕ್ಕದಲ್ಲಿಯೇ ಇರುವ ಮದುಮಗಳ ಫೋಟೋ ತೆಗೆದಿದ್ದರೂ ಅದನ್ನು ಸೋಷಿಯಲ್​  ಮೀಡಿಯಾದಲ್ಲಿ ಅದನ್ನು ಲವ್​ ಮಾರ್ಕ್​ ಹಾಕಿ ಮುಚ್ಚಲಾಗಿದೆ. ಇನ್ನು ಸಂಗೀತ ಸಮಾರಂಭ ಭರ್ಜರಿಯಾಗಿ ನಡೆದಿದೆ.  ಅದ್ನಾನ್ ಬೆಳ್ಳಿಯ ಬಣ್ಣದ ಶೆರ್ವಾನಿ ಸೆಟ್ ಧರಿಸಿದ್ದರೆ, ವಧು ಚಿನ್ನದ ಅಲಂಕರಣದೊಂದಿಗೆ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಆದರೆ ಮುಖವನ್ನು ಮಾಸ್ಕ್​ನಿಂದ ಮುಚ್ಚಲಾಗಿತ್ತು. ಪ್ಯಾಪ್ ಮಾಡಿದಾಗ ದಂಪತಿಗಳು ಕೈ ಹಿಡಿದಿರುವುದು ಕಂಡುಬಂದಿದೆ. ಮದುವೆಯ ಸಂದರ್ಭದಲ್ಲಿ ಮುಖವನ್ನು ಮುಚ್ಚಿಕೊಳ್ಳುವ ಆಯೇಷಾ ನಿರ್ಧಾರವು ಅತಿಥಿಗಳು ಮತ್ತು ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕಿತು.

Tap to resize

Latest Videos

ಚೂಡಿದಾರ ಹಾಕ್ಕೊಂಡು, ಎಣ್ಣೆ ಹಚ್ಕೊತ್ತಿದ್ದೆ... ಅದ್ಯಾವಾಗ ಬಿಕಿನಿ ಧರಿಸಿದ್ನೋ... ಕಣ್ಣೀರಾದ 'ಕೂಲ್'​ ನಟಿ ಸನಾ!
 
ಅಂದಹಾಗೆ ಇವರಿಬ್ಬರೂ ಎರಡು ವರ್ಷಗಳ ಡೇಟಿಂಗ್​ನಲ್ಲಿ ಇದ್ದರು. ಈಗ ಮದುವೆಯಾಗಿದ್ದಾರೆ. ಈ ಶುಭ ಸಮಾರಂಭಕ್ಕೆ ಸಿನಿ ಜಗತ್ತಿನ ಸೆಲೆಬ್ರಿಟಿಗಳಾದ ವಿಷಯ್ ಪಾಂಡೆ, ಸನಾ ಮಕ್ಬುಲ್, ಫೈಸಲ್ ಶೇಖ್, ಅರ್ಮಾನ್ ಮಲಿಕ್ ಮತ್ತು ಶಿವಾನಿ ಕುಮಾರಿ ಸೇರಿದಂತೆ ಹಲವಾರು ಮಂದಿ ಆಗಮಿಸಿದ್ದಾರೆ. ದಂಪತಿ ನಾಳೆ ಅಂದ್ರೆ, ಸೆಪ್ಟೆಂಬರ್ 25 ರಂದು ತಮ್ಮ ವಲೀಮಾ ಅಥವಾ ಆರತಕ್ಷತೆಯನ್ನು ಆಚರಿಸಲಿದ್ದಾರೆ.

ಅಂದಹಾಗೆ, ಅದ್ನಾನ್ ಶೇಖ್ ಬಿಗ್ ಬಾಸ್ OTT 3 ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದರು. ಅವರು ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಅವರೊಂದಿಗೆ  ಪೈಪೋಟಿ ನೀಡಿದ್ದರು.  ಇಬ್ಬರೂ ಆಗಾಗ್ಗೆ ಮನೆಯೊಳಗೆ  ಕಚ್ಚಾಡುತ್ತಿದ್ದರು. ಇವರು ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಕೂಡ. ತಮ್ಮ ಚಮತ್ಕಾರಿ ಇನ್‌ಸ್ಟಾಗ್ರಾಮ್ ವೀಡಿಯೊಗಳು ಮತ್ತು ಟ್ರೆಂಡಿಂಗ್ ರೀಲ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು,  ಪ್ರಸಿದ್ಧ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ಗುಂಪು ತಂಡ 07 ರ ಭಾಗವಾಗಿದ್ದಾರೆ. ಇದರಲ್ಲಿ ಫೈಜು ಶೇಖ್, ಹಸ್ನೈನ್ ಖಾನ್, ಶಾದನ್ ಫಾರೂಕಿ ಮತ್ತು ಫೈಜ್ ಬಲೋಚ್ ಇತರರು ಸೇರಿದ್ದಾರೆ. ಏಸ್ ಆಫ್ ಸ್ಪೇಸ್ ಸೀಸನ್ 2 ರಿಯಾಲಿಟಿ ಷೋನಲ್ಲಿಯೂ ಇವರು  ಭಾಗವಹಿಸಿದ್ದರು.
 

ಬಿಕಿನಿ ಬಿಟ್ಟು ಇಸ್ಲಾಂ ಅಪ್ಪಿಕೊಂಡ ಕನ್ನಡದ 'ಕೂಲ್​' ನಟಿಯ ಮಗನ ಮುಖ ರಿವೀಲ್​: ಈಗ ಹೇಗಿದ್ದಾರೆ ಸನಾ?

click me!