ತಂತ್ರಜ್ಞಾನವನ್ನು ನಂಬಿಕೊಂಡ ಹೊಸ ಜನರೇಷನ್ನು ಕೇವಲ ತಮ್ಮ ಮೊಬೈಲ್,ಕ್ಯಾಮೆರಾ ಬಳಸಿಯೇ ಇಂಟರ್‌ನೆಟ್‌ನಲ್ಲಿ ಹಬ್ಬ ಮಾಡುತ್ತಿದ್ದರು. ಹೊಸ ಹೊಸ ರೀತಿಯ ಕನ್ನಡ ಕಂಟೆಂಟ್‌ಗಳನ್ನು ಸೃಷ್ಟಿ ಮಾಡಿ ಯೂಟ್ಯೂಬ್‌ನಲ್ಲಿಯೋ ಇನ್ ಸ್ಟಾಗ್ರಾಮ್‌ನಲ್ಲಿಯೋ ಪ್ರಸಾರ ಮಾಡಿ ಲಕ್ಷಾಂತರ ಮಂದಿಯಿಂದ ಸೈ ಅನ್ನಿಸಿಕೊಂಡಿದ್ದಾರೆ. ಅಂಥಾ ಪ್ರತಿಭೆಗಳು ತಾವು ತಂತ್ರಜ್ಞಾನ ಬಳಸಿಕೊಂಡು ಗೆದ್ದ ಕತೆಯನ್ನು ಹೇಳಿಕೊಂಡಿದ್ದಾರೆ. ಕೇಳಿಸಿಕೊಳ್ಳಿ.
ಕನ್ನಡದ ಕಾರ್ಯಕ್ರಮಗಳನ್ನು ಆಕರ್ಷಕವಾಗಿ ಪ್ರಸ್ತುತ ಪಡಿಸಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವವರು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯಂಗ್ ಜನರೇಷನ್‌ಗೆ ಹೊಸ ರೀತಿಯ ಕಂಟೆಂಟ್ ಕೊಟ್ಟು ತರುಣ, ತರುಣಿಯರ ಮನಸ್ಸು ಗೆದ್ದವರು.
ಒಳ್ಳೆಯ ನಟಿ ಅನ್ನಿಸಿಕೊಳ್ಳುವುದೇ ನನ್ ಕನಸು; ಮಿಂಚು ಕಂಗಳ ಮಿಲನ ನಾಗರಾಜ್
undefined
ಎಂಟರ್‌ಟೇನ್‌ಮಂಟ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದು ನನ್ನ ಆಸೆಯಾಗಿತ್ತು. ಆದರೆ ನೇರವಾಗಿ ಹೋದರೆ ಯಾರು ಸಿನಿಮಾ ಕ್ಷೇತ್ರಕ್ಕೆ ಬಿಟ್ಟುಕೊಳ್ಳುತ್ತಾರೆ. ಅದಕ್ಕೆ ಒಂದು ಐಡಿಯಾ ಮಾಡಿದೆ. ನನ್ನಷ್ಟಕ್ಕೆ ಒಂದು ಸ್ಕ್ರಿಪ್‌ಟ್ ಮಾಡಿ ಅದನ್ನು ಮೊಬೈಲಲ್ಲೇ ವಿಡಿಯೋ ಮತ್ತು ಎಡಿಟ್ ಮಾಡಿದೆ. ನಂತರ ಅದನ್ನು ನನ್ನ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಕಟ ಮಾಡತೊಡಗಿದೆ. ಆರಂಭದಲ್ಲಿ ಅಂಥಾ ಒಳ್ಳೆಯ ಪ್ರತಿಕ್ರಿಯೆ ಏನೂ ಸಿಗುತ್ತಿರಲಿಲ್ಲ. ಅನೇಕ ಪ್ರಯತ್ನ ಮಾಡಿದ ಮೇಲೆ ಜನ ಗುರುತಿಸತೊಡಗಿದರು.
ಈಗ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲದರಲ್ಲೂ ಆಯಾಯ ವೇದಿಕೆಗೆ ತಕ್ಕಂತೆ ಕಾರ್ಯಕ್ರಮಗಳನ್ನು ಹಾಕುತ್ತೇನೆ. ಜನ ಮೆಚ್ಚುತ್ತಾರೆ. ಸ್ವಲ್ಪ ವಿಭಿನ್ನವಾಗಿ ಕನ್ನಡದ ಕಂಟೆಂಟ್ ಗಳನ್ನು ಕೊಟ್ಟರೆ ಜನ ನಿಜಕ್ಕೂ ಮೆಚ್ಚಿಕೊಳ್ಳುತ್ತಾರೆ. ನಾನು ಈಗ ಸರಿಯಾಗಿ ಕಾರ್ಯಕ್ರಮಗಳನ್ನು ಮಾಡಿದರೆ ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡಿಕೊಳ್ಳಬಲ್ಲೆ. ನಾನು ಆಸಕ್ತರಿಗೆ ಯಾವಾಗಲೂ ಹೇಳುತ್ತೇನೆ. ನೀವು ಮೊದಲು ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು. ಇನ್‌ಸ್ಟಾಗೆ ಹೇಗೆ ಬೇಕು, ಯೂಟ್ಯೂಬ್ ಕಂಟೆಂಟ್ ಹೇಗಿರಬೇಕು ಎಂಬುದನ್ನು ಕಲಿತರೆ ಆಮೇಲೆ ಸುಲಭ.
ಹಾರ್ಡ್‌ವರ್ಕ್ ಗೆಲ್ಲಿಸುತ್ತ: ದಿಯಾ ಚಿತ್ರದ ನಾಯಕಿ ಖುಷಿ
ನನ್ನ ಬಳಿ ಮೊಬೈಲ್ ಮತ್ತು ಅದಕ್ಕೆ ಬೇಕಾದ ಟ್ರೈಪಾಡ್ ಬಿಟ್ಟರೆ ಬೇರೇನಿಲ್ಲ. ಮೊಬೈಲಲ್ಲಿ ವಿಡಿಯೋ ಮಾಡುವುದು, ಎಡಿಟ್ ಮಾಡುವುದು ಅಷ್ಟೇ. ಇದೇನೂ ಬ್ರಹ್ಮ ವಿದ್ಯೆಯಲ್ಲ, ಯಾರು ಬೇಕಾದರೂ ಕಲಿಯಬಹುದು. ನನ್ನ ಕಲಿಕೆಯಿಂದಲೇ ನನಗೆ ಈಗ ಸಿನಿಮಾ ಅವಕಾಶಗಳು ಬರುತ್ತಿವೆ. ನಾನು ಹ್ಯಾಪಿಯಾಗಿದ್ದೇನೆ.