ಕೋಟ್ಯಾಧಿಪತಿಯಾದ ಮಹಿಳಾ IPS ಅಧಿಕಾರಿ

By Suvarna News  |  First Published Nov 17, 2020, 9:41 AM IST

ಮಹಿಳಾ ಐಪಿಎಸ್ ಅಧಿಕಾರಿಯಾದ್ರು ಕೋಟ್ಯಾಧಿಪತಿ..! ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸೋ ಈ ಮಹಿಳಾ ಅಧಿಕಾರಿ ಬ್ರಿಲಿಯಂಟ್.. 


ಭಾರತದ ಪ್ರಸಿದ್ಧ ಕ್ವಿಝ್ ಶೋ ಕೌನ್ ಬನೇಗಾ ಕರೋಡ್ ಪತಿ(KBC)ಯಲ್ಲಿ ಎರಡನೇ ಕೋಟಿಪತಿಯಾಗಿ ಮಹಿಳಾ ಐಪಿಎಸ್ ಅಧಿಕಾರಿ ಹೊರಹೊಮ್ಮಿದ್ದಾರೆ. ಕೆಬಿಸಿಯ ಎರಡನೇ ಸೀಸನ್‌ನಲ್ಲಿ ಐಪಿಎಸ್ ಅಧಿಕಾರಿ ಸರಿಯಾದ ಉತ್ತರಗಳನ್ನು ನೀಡಿ ಕೋಟಿಪತಿಯಾಗಿದ್ದಾರೆ.

30 ವರ್ಷದ ಮೋಹಿತಾ ಶರ್ಮಾ ಹಿಮಾಚಲ ಪ್ರದೇಶದ ಕಾಂಗ್ರಾದವರು. ನಾಝಿಯಾ ನಝೀಂ ಕೋಟಿಪತಿಯಾದ ಒಂದೇ ವಾರಕ್ಕೆ ಮೋಹಿತಾ ಅವರೂ ಕೋಟ್ಯಾಧೀಶರಾಗಿ ಹೊರಹೊಮ್ಮಿದ್ದಾರೆ.

Tap to resize

Latest Videos

undefined

ಚಂದ್ರನಲ್ಲಿ ಜಾಗ ಖರೀದಿಸಿದ ಸುಶಾಂತ್ ಸಿಂಗ್ ಅಭಿಮಾನಿ..!

ಈ ಹಣಕ್ಕಿಂತಲೂ ಮುಖ್ಯವಾಗಿ ನಾನು ಮಲಗುವ ಹೊತ್ತಿಗೆ ನಾನು ಆಡಿದ ಆಟದ ಬಗ್ಗೆ ನನಗೆ ಫೀಲ್ ಆಗಬೇಕು ಎಂದಿದ್ದಾರೆ ಮೋಹಿತಾ. ಮೋಹಿತಾ ಅವರ ಗೆಲುವಿನ ಶೋ ನವೆಂಬರ್ 17 9 ಗಂಟೆಗೆ ಪ್ರಸಾರವಾಗಲಿದೆ.

18ರಂದು ಮೋಹಿತಾ ಅವರು  1 ಕೋಟಿ ಗೆಲ್ಲುವ ಥ್ರಿಲ್ಲಿಂಗ್ ಎಪಿಸೋಡ್‌ ಎಲ್ಲರೂ ವೀಕ್ಷಿಸಬಹುದು. ಸದ್ಯ ಮೋಹಿತಾ ಅವರು ಜಮ್ಮು ಕಾಶ್ಮೀರದ ಬರಿ ಬ್ರಹ್ಮಾದಲ್ಲಿ ಎಪಿಎಸ್‌ ಆಗಿ ನಿಯೋಜಿಸಲ್ಪಟ್ಟಿದ್ದಾರೆ. ಈ ಹಿಂದೆ 1 ಕೋಟಿ ಗೆದ್ದಿದ್ದ ನಾಝಿಯಾ ಅವರು ಬುದ್ಧಿ ಮತ್ತೆಯನ್ನು ಅಮಿತಾಭ್ ಅವರು ಮೆಚ್ಚಿ ಹೊಗಳಿದ್ದರು. 

click me!