500 ರೂ.ನಲ್ಲಿ ಇಡೀ ಜಯನಗರ ಸುತ್ತಿದ 'ಲಕ್ಷಣ' ಶ್ವೇತಾ- ನಕ್ಷತ್ರಾ; ಚೌಕಾಸಿ ಶಾಪಿಂಗ್ ಹೇಗ್ಮಾಡಿದ್ರು ನೋಡಿ!

Published : Feb 28, 2023, 12:44 PM ISTUpdated : Feb 28, 2023, 02:15 PM IST
500 ರೂ.ನಲ್ಲಿ ಇಡೀ ಜಯನಗರ ಸುತ್ತಿದ 'ಲಕ್ಷಣ' ಶ್ವೇತಾ- ನಕ್ಷತ್ರಾ; ಚೌಕಾಸಿ ಶಾಪಿಂಗ್ ಹೇಗ್ಮಾಡಿದ್ರು ನೋಡಿ!

ಸಾರಾಂಶ

ಲಕ್ಷಣ ಸೀರಿಯಲ್‌ನ ಹಾವು ಮುಂಗುಸಿಗಳು ನಕ್ಷತ್ರ ಮತ್ತು ಶ್ವೇತಾ. ಇವರಿಬ್ರೂ ರಿಯಲ್‌ ಲೈಫಲ್ಲಿ ಬೆಸ್ಟ್ ಫ್ರೆಂಡ್ಸ್. ಇದೀಗ ಐನೂರು ರುಪಾಯಿ ಹಿಡ್ಕೊಂಡು ಜಯನಗರದಲ್ಲಿ ಶಾಪಿಂಗ್ ಮಾಡಿ ಬಂದಿದ್ದಾರೆ. ಏನೆಲ್ಲ ಶಾಪಿಂಗ್ ಮಾಡಿದ್ರು? ಹೆಂಗೆ ಮಜಾ ಮಾಡಿದ್ರು?

ಲಕ್ಷಣ ಸೀರಿಯಲ್ ನೋಡ್ತಿದ್ರೆ ಅದರಲ್ಲಿ ನಕ್ಷತ್ರ ನಾಯಕಿ. ಶ್ವೇತಾ ವಿಲನ್‌. ಶುರುವಿಂದಲೇ ಇಬ್ಬರ ಸ್ವಭಾವ ತದ್ವಿರುದ್ಧ. ಶ್ವೇತಾ ಬೆಳ್ಳಗಿದ್ದು ಸಣ್ಣ ಬುದ್ಧಿ, ದುಷ್ಟ ಮನಸ್ಸಿಂದ ಮುಂದೆ ಹೋಗ್ತಿದ್ರೆ, ಕಪ್ಪು ಮೈ ಬಣ್ಣ ಸದ್ಗುಣವಿರುವ ನಕ್ಷತ್ರ ತನ್ನ ಒಳ್ಳೆತನದಿಂದಲೇ ಎಲ್ಲರ ಮನಸ್ಸು ಗೆದ್ದಾಕೆ. ಶ್ವೇತಾಗೂ ನಕ್ಷತ್ರಗೂ ತದ್ವಿರುದ್ಧ. ಒಬ್ಬರ ನೆರಳು ಕಂಡರೂ ಇನ್ನೊಬ್ಬರು ರೊಚ್ಚಿಗೇಳೋ ಲೆವೆಲ್‌ಗೆ ಇವರಿಬ್ಬರ ಪಾತ್ರಗಳು. ಸೀನ್ ಕಟ್ ಮಾಡಿದ್ರೆ ಈ ಜೋಡಿ ಕೈ ಕೈ ಹಿಡ್ಕೊಂಡು ಬೇಬಿ ಬೇಬಿ ಅಂದ್ಕೊಂಡು ಜಯನಗರ 4 ಬ್ಲಾಕ್‌ನಲ್ಲಿ ಶಾಪಿಂಗ್‌ಗೆ ಬಂದಿದ್ದಾರೆ. ಅದೂ ಕೈಯಲ್ಲಿ ಕೇವಲ ಐನೂರು ರು. ಹಿಡ್ಕೊಂಡು. ಹಾಗ್ ನೋಡಿದ್ರೆ ಸೀರಿಯಲ್‌ನಲ್ಲೂ ಇಂಥದ್ದೊಂದು ಸೀನ್ ಬಂದಿತ್ತು. ನಕ್ಷತ್ರಗೂ, ಶ್ವೇತಾಗೂ ಅತ್ತೆ ಶಕುಂತಳಾ ದೇವಿ ಒಂದು ಟಾಸ್ಕ್ ಕೊಟ್ಟಿದ್ರು. ಐನೂರು ರುಪಾಯಿಲಿ ಮನೆ ನಿಭಾಯಿಸೋ ಟಾಸ್ಕ್ ಅದು. ಅದರಲ್ಲಿ ಗೆದ್ದೋರನ್ನು ತನ್ನ ಸೊಸೆಯಾಗಿ ಸ್ವೀಕರಿಸ್ತೀನಿ ಅಂತ ಶಪಥ ಮಾಡಿದ್ರು. ಕೊನೆಗೆ ನುಡಿದ ಮಾತಿನಂತೆ ನಡೆದುಕೊಂಡರು ಕೂಡ.

ಅಂದಹಾಗೆ ಈಗ ಮ್ಯಾಟರ್‌ಗೆ ಬರೋಣ. ಒಂದು ವೀಕೆಂಡು. ಜಯನಗರ ಫೋರ್ತ್ ಬ್ಲಾಕ್‌ನ ಸ್ಟ್ರೀಟು. ಇಬ್ಬರು ಸ್ಮಾರ್ಟ್ ಗರ್ಲ್ಸ್ ಮಾಡರ್ನ್ ಡ್ರೆಸ್ ತೊಟ್ಕೊಂಡು ಶಾಪಿಂಗ್ ಮಾಡ್ತಿದ್ದಾರೆ. ಅವರ ಡ್ರೆಸ್, ಮಾತಾಡೋ ರೀತಿ, ಹಾವ ಭಾವ ಎಲ್ಲ ನೋಡಿ ದೊಡ್ಡ ಮಿಕ ಬಲೆಗೆ ಬಿತ್ತು, ಭರ್ಜರಿ ವ್ಯಾಪಾರ ಮಾಡ್ತಾರೆ ಅಂತ ವ್ಯಾಪಾರಿಗಳು ನೋಡ್ತಿದ್ರೆ ಈ ಇಬ್ಬರೂ ಐದ್ರುಪಾಯಿಗೆ, ಹತ್ರುಪಾಯಿಗೆ ಬಾರ್ಗೇನ್ ಮಾಡ್ತಿದ್ದಾರೆ. ಅರೆ, ನೋಡೋಕೆ ಹಿಂಗಿದ್ದಾರೆ, ಐದ್ರುಪಾಯಿ ಹತ್ರುಪಾಯಿನೂ ಬಿಡಲ್ಲ ಅಂತಿದ್ದಾರಲ್ಲ ಅಂತ ಆ ಶಾಪ್ ಕೀಪರ್ಸ್ ಮೈ ಮೈ ಪರಚಿಕೊಳ್ಳೋದೊಂದು ಬಾಕಿ.

ಮಂಗಳೂರಿನಲ್ಲಿ ದೀಪಿಕಾ ದಾಸ್‌ ಬೆಕ್ಕು ಪತ್ತೆ; 15 ಸಾವಿರ ಬಹುಮಾನ ಯಾರ ಕೈ ಸೇರಿತ್ತು?

ಅಂದಹಾಗೆ ರೋಡಿಗಿಳಿದ ರಾಧಿಕಾಗಳಾಗಿದ್ದು ರೀಲ್ ಎನಿಮೀಸ್, ರಿಯಲ್ ಫ್ರೆಂಡ್ಸ್ ಸುಕೃತಾ ಮತ್ತು ವಿಜಯಲಕ್ಷ್ಮೀ. ಇಬ್ಬರೂ ಬೆಸ್ಟಿಗಳು ಆ ವೀಕೆಂಡ್ ಶಾಪಿಂಗ್ ಗೆ ಬಂದಿದ್ರು. ಬರೀ ಶಾಪಿಂಗ್ ಆದ್ರೆ ಏನ್ ಮಜಾ. ಇದು ಡಿಫರೆಂಟಾದ ಶಾಪಿಂಗ್. ಇಬ್ಬರ ಕೈಯಲ್ಲೂ ಇದ್ದಿದ್ದು ಕೇವಲ ೫೦೦ ರು. ಅದರಲ್ಲಿ ಇಬ್ಬರೂ ಏನೆಲ್ಲ ಖರೀದಿ ಮಾಡ್ತಾರೆ ಅನ್ನೋದು ಟಾಸ್ಕ್. ಸೋ, ಕೈಯಲ್ಲಿ ಕಾಸು ಬಹಳ ಕಡಿಮೆ ಇರೋ ಕಾರಣ ಬಾರ್ಗೇನ್ ಮಾಡದೇ ವಿಧಿಯಿಲ್ಲ. ಯಾವತ್ತೂ ಕೇಳಿದಷ್ಟು ದುಡ್ಡು ಕೊಟ್ಟು ಶಾಪಿಂಗ್ ಮಾಡೋ ಶ್ವೇತಾ ಅವತ್ತು ಐದ್ರುಪಾಯಿ ಹತ್ರುಪಾಯಿಗೂ ಕಾಡಿ ಬೇಡಿ ಬಾರ್ಗೇನ್ ಮಾಡಿದ್ದು ಸಖತ್ ಮಜಾ ಇತ್ತು. ನೋಡೋರಿಗೆ ಮಾತ್ರ ಅಲ್ಲ, ಅದು ಅವ್ರಿಗೂ ಮಜಾ ಕೊಡ್ತು ಅಂತ ಅವ್ರೇ ಹೇಳಿದ್ರು.

ಹಾಗಂತ ಐನೂರು ರುಪಾಯಿಗೆ ವಿಜಯಲಕ್ಷ್ಮಿ ಸಖತ್ ಶಾರ್ಪ್ ಆಗಿ ಶಾಪಿಂಗ್ ಮಾಡಿದ್ರು. ಒಂದಿಷ್ಟು ಕ್ಲಿಪ್ಸ್, ಡಿಯೋಡ್ರೆಂಟ್, ವಾಟರ್ ಬಬಲ್, ಯಿಯರ್‌ ರಿಂಗ್‌ ಮೊದಲಾದ ಪುಟ್ಟ ಪುಟ್ಟ ಕ್ಯೂಟ್ ಐಟಂ ಖರೀದಿ ಮಾಡಿದ್ರು. ಪ್ರತೀ ವಸ್ತುವೂ ಸುಕೃತಾಗೆ ಉಪಯೋಗ ಆಗೋ ಥರನೇ ಇತ್ತು ಅನ್ನೋದು ಪ್ಲಸ್ ಪಾಯಿಂಟ್. ಅಂಗಡಿ ಅಂಗಡಿ ಅಲೆದು ಬಾರ್ಗೇನ್ ಮೇಲೆ ಬಾರ್ಗೇನ್ ಮಾಡಿ ಹತ್ತು ಶಾಪ್ ಓಡಾಡಿ ಒಂದು ಶಾಪಿಂಗ್ ಖರೀದಿ(Purchase) ಮಾಡಿದ ಖುಷೀಲಿ ಅವ್ರಿದ್ರು. ಇನ್ನು ಸುಕೃತಾ ವಿಜಿಗಾಗಿ ಚೆಂದದ ಹ್ಯಾಂಡ್ ಬ್ಯಾಗ್, ಹೆಡ್‌ ಬ್ಯಾಂಡ್, ಕ್ಲಿಪ್ಸ್ ಇತ್ಯಾದಿ ತಗೊಂಡ್ರು.

ಇದ್ರಿಂದ ಇಬ್ರೂ ಕಲಿತ ಪಾಠ ಅಂದ್ರೆ ಶಾಪಿಂಗ್(Shopping) ಮಾಡೋದಕ್ಕೂ ಸಾಕಷ್ಟು ಪೇಶನ್ಸ್ ಬೇಕು. ಹಣದ ಬೆಲೆ ಗೊತ್ತಿರಬೇಕು. ಹುಡುಕಿ ಹುಡುಕಿ ತಗೋಬೇಕು,, ಹೀಗೆ ಈ ಶಾಪಿಂಗ್‌ನಿಂದ ಕಲಿತ ಪಾಠಗಳನ್ನು ಇಬ್ರೂ ಗಿಳಿಪಾಠ ಒಪ್ಪಿಸಿದ್ರು. ಇನ್ನೊಂದು ಮಜಾ ಅಂದ್ರೆ ಗೆದ್ದೋರಿಂದ ಸೋತೋರಿಗೆ ಪಾನಿಪುರಿ ಟ್ರೀಟ್(Treat). ಯಾರು ಗೆದ್ದಿದ್ದು ಅನ್ನೋದನ್ನು ಡಿಸೈಡ್ ಮಾಡೋ ಚಾನ್ಸ್(Chance) ಸುಕೃತಾ ಯೂಟ್ಯೂಬ್ ಚಾನಲ್ ವೀಕ್ಷಕರಿಗೇ ಕೊಟ್ರು. ಎಷ್ಟಾದ್ರೂ ಜನ ಒಳ್ಳೆಯವ್ರಲ್ವಾ, ಇಬ್ರೂ ಗೆದ್ರಿ ಅಂತ ಇಬ್ಬರಿಗೂ ಬೆನ್ ತಟ್ಟಿ ಶಹಭಾಸ್ ಅನ್ನೋ ಅಲ್ಲಿಗೆ ಸುಂದ್ರಿಯರ ಶಾಪಿಂಗ್ ಆಟ ಮುಗೀತು.

ಸಾರಾ ಅಣ್ಣಯ್ಯ ಕಲರ್‌ಫುಲ್‌ ಲುಕ್‌; ಏನ್ರೀ ಹಾಟ್‌ ಡ್ರೆಸ್‌ ಹಾಕ್ತಾರೆ 'ಕನ್ನಡತಿ' ವರೂಧಿನಿ ಎಂದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…