
ಝೀ ಕನ್ನಡದಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಅದು ಸರಿಗಮಪ (Saregamapa reality show) ಎನ್ನುವ ಹಾಡಿನ ಕಾರ್ಯಕ್ರಮ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಅಂದ್ರೆ ವಿಜಯ್ ಪ್ರಕಾಶ್ ಅವರು. ಸರಿಗಮಪದ ಜಡ್ಜ್ ಹಾಗೂ ಕನ್ನಡಿಗರ ಫೇವರಿಟ್ ಕವಿತೆ ಮಾಸ್ಟರ್ ವಿಪಿ ಸರ್, ತಮ್ಮ 24ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ತಮ್ಮ ಪತ್ನಿಗೆ ಶುಭಾಷಯ ಕೋರಿ, ತಮ್ಮ ಹಳೆಯ ನೆನಪುಗಳನ್ನು ಗೀಚಿದ್ದಾರೆ, ಜೊತೆಗೆ ಪತ್ನಿ ಮಹತಿ ಜೊತೆಗಿನ ಹಳೆಯ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ.
ನನ್ನ ಬದುಕಿನಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದು ಮಡದಿ ಮಹತಿ: ವಿಜಯ್ ಪ್ರಕಾಶ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ವಿಜಯ ಪ್ರಕಾಶ್ (Singer Vijay Prakash) ಸರ್, ಪತ್ನಿ ಜೊತೆಗಿನ ತುಂಬಾನೆ ಹಳೆಯದಾದ ಸುಮಾರು 25 ವರ್ಷಕ್ಕೂ ಹಳೆಯ ಫೋಟೊ ಒಂದನ್ನು ಶೇರ್ ಮಾಡಿದ್ದು, ತಾವು ವೈವಾಹಿಕ ಜೀವನಕ್ಕೆ (wedding anniversary)ಕಾಲಿಟ್ಟು 24 ಸಂವತ್ಸರಗಳನ್ನು ಪೂರೈಸಿದ್ದು, ಇದೀಗ 25ನೇ ವರ್ಷಕ್ಕೆ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೇಳುವ ಮೂಲಕ, ತಾವು ಮಹತಿಯವರನ್ನು ಮೊದಲ ಬಾರಿ ಮುಂಬೈನಲ್ಲಿ ನೋಡಿದ ಆ ದಿನದಿಂದ ಹಿಡಿದು, ಮದುವೆಯಾಗಿ, ಇಂದಿನವರೆಗೂ ಜೊತೆಯಾಗಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಪದವಿ ಪಡೆದ ಮಗಳು.. ಸಾಧನೆಯನ್ನು ಮೆಚ್ಚಿ ಭಾವುಕ ಪತ್ರ ಬರೆದ ಗಾಯಕ ವಿಜಯ್ ಪ್ರಕಾಶ್
ವಿಜಯ್ ಪ್ರಕಾಶ್ ತಮ್ಮ ಪತ್ನಿ ಮಹತಿ (Mahathi Vijay Prakash) ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮಾಹಿತಿ ಹೀಗಿದೆ “29 ವರ್ಷಗಳ ಹಿಂದೆ, ಮುಂಬೈನಲ್ಲಿ ನನ್ನ ಹೋರಾಟದ ಆರಂಭಿಕ ದಿನಗಳಲ್ಲಿ ಮಹತಿಯನ್ನು ಮೊದಲ ಬಾರಿಗೆ ನೋಡಿದ್ದು ನನಗೆ ಇನ್ನೂ ನೆನಪಿದೆ. ಅವಳು 18 ವರ್ಷದ ಡಬ್ಬಿಂಗ್ ಕಲಾವಿದೆಯಾಗಿದ್ದು, ರಾಜಕುಮಾರಿಯಂತೆ ರೆಕಾರ್ಡಿಂಗ್ ಸ್ಟುಡಿಯೋಗೆ (Recording studio) ನಡೆದು, ಮೈಕ್ ಬಳಿ ಹೆಜ್ಜೆ ಹಾಕಿ, ಅಷ್ಟೇ ಸೊಗಸಾಗಿ ಹೊರಟುಹೋದಳು. ನಾನು ಅಲ್ಲಿಯೇ ನಿಂತು, ನೋಡುತ್ತಾ, ಈ ದೀವಾ ಯಾರು? (Who is this Diva) ಎಂದು ಯೋಚನೆ ಮಾಡುತ್ತಿದೆ. ಆ ದೀವಾ ಶೀಘ್ರದಲ್ಲೇ ನನ್ನ ಸ್ನೇಹಿತೆಯಾದಳು, ನಂತರ ಬೆಂಬಲದ ಆಧಾರಸ್ತಂಭವಾದಳು, ಭಾವನಾತ್ಮಕವಾಗಿ ಕನೆಕ್ಟ್ ಆದೆವು, ನನ್ನ ಗೆಳತಿಯಾದಳು ಮತ್ತು ಅಂತಿಮವಾಗಿ ನನ್ನ ಹೆಂಡತಿಯಾದಳು. ಇಷ್ಟು ವರ್ಷಗಳಲ್ಲಿ, ಅವಳು ನನ್ನ ಜೀವನ ಸಂಗಾತಿಗಿಂತ ಹೆಚ್ಚು ಅನ್ನೋದನ್ನು ನಾನು ನೋಡಿದ್ದೇನೆ.
ಒಂದು ಡಿಗ್ರಿ ಇರ್ಬೇಕು ಇಲ್ಲ ಮನೆ ಮಾಡ್ಬೇಕು; ಗಾಯಕ ವಿಜಯ್ ಪ್ರಕಾಶ್‌ಗೆ ಮಾವನಿಂದ ಎದುರಾದ ಸವಾಲ್!
ನನ್ನನ್ನು ಆಕರ್ಷಿಸಿದ ಆ ದೀವಾನಿಂದ ಹಿಡಿದು ನನ್ನನ್ನು ಪೂರ್ಣಗೊಳಿಸುವ ಹೆಂಡತಿಯವರೆಗೆ, ಅವಳು ನನ್ನ ಸಿಕ್ಕ ದೊಡ್ಡ ಬ್ಲೆಸಿಂಗ್ಸ್. ಇಂದು ನಾವು ವಿವಾಹದ 24 ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಒಟ್ಟಿಗೆ ಸುಂದರವಾದ ಪ್ರಯಾಣದ 25 ನೇ ವರ್ಷಕ್ಕೆ ಕಾಲಿಡುತ್ತೇವೆ. ಮಹತಿ, ನಾನು ಎತ್ತರವಾಗಿ ನಿಂತಾಗ ಹೆಮ್ಮೆಯಿಂದ ಮತ್ತು ನಾನು ಬಿದ್ದಾಗ ಎಚ್ಚರಿಕೆಯಿಂದ ಹಿಡಿದಿದ್ದಕ್ಕಾಗಿ ಧನ್ಯವಾದಗಳು. ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ಎಂದು ವಿಜಯ್ ಪ್ರಕಾಶ್ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.